– ಎನ್. ಅಂಕಿತಾ
ಹೊಸ ವರ್ಷ ಬಂದಿದೆ ಎಂದಾಗ ಹೊಸ ಕ್ಯಾಲೆಂಡರ್ ಖರೀದಿಸಿ ನೇತುಹಾಕಿದರೆ ಮುಗಿಯಲಿಲ್ಲ. ಬದಲಿಗೆ ಹೊಸ ಫ್ಯಾಷನ್, ಹೊಸ ಟ್ರೆಂಡ್ಸ್ ಕೂಡ ಬರುತ್ತವೆ. ಇವನ್ನು ಫಾಲೋ ಮಾಡಿ ನೀವು ಟ್ರೆಂಡಿ ಕ್ಯೂಟ್ ಎನಿಸಬಹುದು. ನಿಮಗೆ ಫ್ಯಾಷನೆಬಲ್ ಆಗಿರುವುದು ಸೊಗಸೆನಿಸಿದರೆ, ಈ ಹೊಸ ವರ್ಷ ನಿಮಗೆ ಸ್ಪೆಷಲ್ ಎನಿಸುತ್ತದೆ. ಏಕೆಂದರೆ ಈ ವರ್ಷ ಫ್ಯಾಷನ್ ಟ್ರೆಂಡ್ಸ್ ನಲ್ಲಿ ಹಲವು ಬಗೆಯ ಡ್ರೆಸೆಸ್, ಕಲರ್, ಪ್ಯಾಟರ್ನ್ಸ್ ಶಾಮೀಲಾಗುತ್ತಿವೆ. ಇವು ನಿಮ್ಮ ಪರ್ಸನಾಲಿಟಿಗೆ ಹೆಚ್ಚಿನ ಸ್ಮಾರ್ಟ್‌ನೆಸ್ ಕೊಡುತ್ತವೆ.
ಎಥ್ನಿಕ್ ಔಟ್‌ಫಿಟ್
– ಎಥ್ನಿಕ್ ವೇರ್ ತಜ್ಞರು ಹೇಳುವುದೆಂದರೆ, ಈ ಫ್ಯಾಷನೆಬಲ್ ಡ್ರೆಸ್ ಧರಿಸುವುದಕ್ಕಿಂತ ಹೆಚ್ಚಾಗಿ ನೀವು ಅದರಲ್ಲಿ ನಿಮ್ಮದೇ ಆದ ಸ್ಟೈಲ್ ಕ್ರಿಯೇಟ್ ಮಾಡಿ. ಫ್ಯಾಷನ್ ಟ್ರೆಂಡ್‌ಗೆ ತಕ್ಕಂತೆ ಎಲ್ಲರೂ ಹೊಸ ಬಟ್ಟೆಬರೆ ಧರಿಸುವುದು ಇದ್ದೇ ಇದೆ. ಆದರೆ ನಾಲ್ವರಲ್ಲಿ ಎದ್ದು ಕಾಣಬೇಕೆಂದರೆ ಆ ಗುಂಪಿನಲ್ಲಿ ನೀವು ಎಲ್ಲರಿಗಿಂತ ಡಿಫರೆಂಟ್ ಸ್ಟೈಲ್ ಹೊಂದಿರಬೇಕು.
– ಈ ಬಾರಿ ಎಥ್ನಿಕ್‌ನಲ್ಲಿ ಅನಾರ್ಕಲಿ ಸೂಟ್ ಔಟ್ ಆಫ್ ಫ್ಯಾಷನ್ ಎನಿಸಲಿದೆ. ಆದ್ದರಿಂದ ಈ ಬಾರಿಯೂ ನೀವು ನ್ಯೂ ಇಯರ್ ಪಾರ್ಟಿಗೆ ಅನಾರ್ಕಲಿ ಸೂಟ್ ಧರಿಸ ಬಯಸಿದ್ದರೆ, ಅದರಲ್ಲಿ ತುಸು ಮಾರ್ಪಾಡುಗಳನ್ನು ಮಾಡಿ ಇದರ ಫ್ಯಾಷನ್‌ನ್ನು ಉಳಿಸಿಕೊಳ್ಳಬಹುದು. ಇತ್ತೀಚೆಗೆ ಅನಾರ್ಕಲಿ ಜಾಗಕ್ಕೆ ಪ್ಲೇರ್ ಲೆಂಥ್ ಸೂಟ್ ಫ್ಯಾಷನ್‌ನಲ್ಲಿದೆ. ಇದನ್ನು ಗೌನ್ ಅಥವಾ ಸೂಟ್ ತರಹ ಧರಿಸಬಹುದು. ಸೂಟ್‌ನಲ್ಲಿ ಈ ಬಾರಿ ಸಲ್ವಾರ್ ಸೂಟ್, ಜ್ಯಾಕೆಟ್ ಸ್ಟೈಲ್ ಸೂಟ್ ಇನ್ ಆಗಲಿವೆ. ಚೂಡೀದಾರ್ ಮತ್ತು ಸಿಂಪಲ್ ಪಾಜಾಮಾ ಜಾಗದಲ್ಲಿ ಪ್ಲಾಜೋ, ಶರಾರಾ ಮತ್ತು ಪ್ಯಾಂಟ್‌ಗಳ ಫ್ಯಾಷನ್ ಹೆಚ್ಚಲಿದೆ.
– ಎಥ್ನಿಕ್ ವೇರ್‌ಗಳಲ್ಲಿ ಸದಾ ಡಾರ್ಕ್ ಕಲರ್ಸ್ ಫ್ಯಾಷನ್‌ನಲ್ಲಿದೆ. ಈ ಬಾರಿ ಪೀಚ್ ಕಲರ್ ಇನ್ ಆಗಿದೆ. ಪೀಚ್ ಕಲರ್‌ನಿಂದ ನೀವು ಸೋಬರ್ ಲುಕ್ ಪಡೆಯುವಿರಿ.
– ಇತ್ತೀಚೆಗೆ ಮಿಕ್ಸ್ ಮ್ಯಾಚ್ ಚಾಲನೆಯಲ್ಲಿದೆ. ನೀವು ಮಿಕ್ಸ್ ಮ್ಯಾಚ್ ಮಾಡುವುದಕ್ಕಾಗಿ ಕುರ್ತಿ ಜೊತೆ ಡೆನಿಮ್, ವೆಸ್ಟರ್ನ್ ಟಾಪ್ ಜೊತೆ ಏ ಲೈನ್ ಸ್ಕರ್ಟ್ ಅಥವಾ ಪ್ಲಾಜೋವನ್ನು ಟ್ರೈ ಮಾಡಿ ನೋಡಿ. ಇತ್ತೀಚೆಗೆ ಕುರ್ತಿ ಜೊತೆ ಸ್ಕರ್ಟ್ ಕೂಡ ಫ್ಯಾಷನ್‌ನಲ್ಲಿದೆ.
– ಎಥ್ನಿಕ್ ಡ್ರೆಸೆಸ್‌ನಲ್ಲಿ ಸದಾ ಅದರ ಫ್ಯಾಬ್ರಿಕ್ ಕಡೆ ಗಮನ ಕೊಡಿ. ಫ್ಯಾಬ್ರಿಕ್ಸ್ ನಿಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರಬೇಕು. ನೀವು ಎಥ್ನಿಕ್ ಡ್ರೆಸ್ ಧರಿಸಿದಾಗ, ನಿಮ್ಮ ಆ್ಯಕ್ಸೆಸರೀಸ್ ಮತ್ತು ಫುಟ್‌ವೇರ್ ಸಹ ಎಥ್ನಿಕ್ ಆಗಿರಬೇಕು. ನೀವು ಎಥ್ನಿಕ್ ಕುರ್ತಿ ಧರಿಸಿದಾಗ, ಅದರ ಜೊತೆ ಫಾರ್ಮಲ್ ಸ್ಯಾಂಡಲ್ಸ್ ಧರಿಸಿ. ಆಗ ನಿಮ್ಮ ಲುಕ್ಸ್ ಇನ್ನಷ್ಟು ಆಕರ್ಷಕ ಎನಿಸುತ್ತದೆ.
ವೆಸ್ಟರ್ನ್ ಔಟ್‌ಫಿಟ್
– ಫ್ಯಾಷನ್ ತಜ್ಞರ ಪ್ರಕಾರ, ವೆಸ್ಟರ್ನ್ ಔಟ್‌ಫಿಟ್ಸ್ ನಿಮ್ಮ ಮೊದಲ ಆಯ್ಕೆಯಾದರೆ, ಮಿಡಿ/ಮ್ಯಾಕ್ಸಿ ಸ್ಕರ್ಟ್ ಜೊತೆ ಟ್ಯೂನಿಕ್ ಟಾಪ್ ಧರಿಸಿ, ಈ ಸೀಸನ್‌ನಲ್ಲಿ ನೀವು ಹಾಟ್ ಆಗಿ ಕಾಣಬಹುದು.
– ಈ ವರ್ಷ ವೆಸ್ಟರ್ನ್ ಡ್ರೆಸೆಸ್‌ನಲ್ಲಿ ಒನ್‌ಪೀಸ್, ಮ್ಯಾಕ್ಸಿ ಹಾಗೂ ಲಾಂಗ್ ಗೌನ್ ಫ್ಯಾಷನ್‌ನಲ್ಲಿ ಇನ್ ಎನಿಸಿವೆ. ಜೊತೆಗೆ ಮೈಕ್ರೋ ಪ್ಲೀಟಿಂಗ್ ಸಹ ಟ್ರೆಂಡ್‌ನಲ್ಲಿದೆ.
– ವೆಸ್ಟರ್ನ್ ಫ್ಯಾಷನ್‌ನಲ್ಲಿ ಕಲರ್ ವಿಷಯ ಹೇಳುವುದಾದರೆ ಕೋರ್, ಪಿಂಕ್, ಆರ್ಕಿಡ್, ಆ್ಯಕ್ವಾ ಕಲರ್ ಇನ್ ಆಗಿದೆ. ಜೊತೆಗೆ ಎಂದಿನಂತೆ ಗ್ರೀನ್ ರೆಡ್ ಫ್ಯಾಷನ್ ಚಾಲ್ತಿಯಲ್ಲಿರುತ್ತದೆ. ಈ ವರ್ಷದ ಸ್ಪೆಷಲ್ ಅಂದ್ರೆ ಈ ಬಾರಿ ಹೊಸ ಬಣ್ಣವಾಗಿ ಡಾರ್ಕ್ ಬರ್ಗೆಂಡಿ ಶಾಮೀಲು ಆಗಲಿದೆ. ಈ ಬಣ್ಣದ ವೈಶಿಷ್ಟ್ಯ ಎಂದರೆ ಇದು ಪ್ರತಿ ಸ್ಕಿನ್‌ಟೋನ್‌ಗೂ ಮ್ಯಾಚ್ ಆಗುತ್ತದೆ.
ಸ್ಟೈಲ್‌ನಲ್ಲಿ ಫ್ರಂಟ್ ಝಿಪ್, ಹುಡ್ ಮತ್ತು ಪಾಕೆಟ್ ಸ್ಟೈಲ್ ಡ್ರೆಸೆಸ್ ಇನ್ ಆಗಿರುತ್ತವೆ. ಇಂಡೋವೆಸ್ಟರ್ನ್ ಸಹ ಫ್ಯಾಷನ್ ಟ್ರೆಂಡ್‌ನಲ್ಲಿ ಒಂದಾಗಲಿದೆ. ಇದರಲ್ಲಿ `ಏ’ ಲೈನ್ ಕುರ್ತಿ ಜೊತೆ ಪ್ಯಾಂಟ್‌ನ ಫ್ಯಾಷನ್ ಸ್ಪೆಷಲ್ ಎನಿಸಿದೆ.
– ನಿಮ್ಮ ಬಳಿ ಪ್ಲೇರ್ ಪ್ರಿಂಟ್‌ನ ಡ್ರೆಸೆಸ್ ಇದ್ದರೆ, ಟೆನ್ಶನ್ ಬಿಟ್ಟು ಈ ವರ್ಷ ಅವನ್ನು ಮುಂದುವರಿಸಿ, ಏಕೆಂದರೆ ಪ್ಲೇರ್ ಎವರ್‌ಗ್ರೀನ್ ಎನಿಸಿವೆ.
ಫಾರ್ಮಲ್ ಡ್ರೆಸಿಂಗ್
ಫ್ಯಾಷನ್ ತಜ್ಞರ ಪ್ರಕಾರ, ಫಾರ್ಮಲ್ ಡ್ರೆಸಿಂಗ್‌ನಲ್ಲಿ, ಫ್ಯಾಷನ್ ಸದಾ ಒಂದೇ ರೀತಿ ಇರುತ್ತದೆ, ಆದರೆ ಬ್ಲ್ಯಾಕ್ ಬ್ಲೂನ ಡಿಫರೆಂಟ್ ಶೇಡ್ಸ್ ಧರಿಸಬಹುದು. ಇಲ್ಲಿ ಗಮನಿಸತಕ್ಕ ವಿಷಯವೆಂದರೆ ಪ್ರಿಂಟ್ ಡಿಸೈನ್, ದೊಡ್ಡದು ಹಾಗೂ ಬೋಲ್ಡ್ ಆಗಿರಬಾರದು ಎಂಬುದು.
– ಈ ಸಲ ಪ್ಯಾಂಟ್ ಜೊತೆ ಬಾಟಮ್ ವೇರ್‌ನಲ್ಲಿ ಸ್ಕರ್ಟ್ ಮತ್ತು ಡ್ರೆಸೆಸ್‌ನ ಫ್ಯಾಷನ್ ಇನ್ ಆಗಿವೆ. ಫಾರ್ಮಲ್ ಲೆಕ್ಕದಲ್ಲಿ ನಿಮ್ಮ ಡ್ರೆಸ್ ಚಿಕ್ಕದೆನಿಸಿದರೆ ಟೈಟ್ಸ್ ಅಥವಾ ಲೆಗ್ಗಿಂಗ್ಸ್ ಜೊತೆ ಧರಿಸಿ, ಆಗ ನಿಮಗೆ ಸ್ಮಾರ್ಟ್ ಲುಕ್ಸ್ ಸಿಗುತ್ತದೆ.
– ಸ್ಕಿನ್ನಿ ಜೀನ್ಸ್ ನಿಮ್ಮ ಪರ್ಸನಾಲಿಟಿಗೆ ಚೆನ್ನಾಗಿ ಹೊಂದಬಹುದು. ಆದರೆ ಈಗ ವೈಡ್ ಲೆಗ್ ಟ್ರೌಸರ್ಸ್ ಮತ್ತು ಪ್ಲಾಜೋ ಪ್ಯಾಂಟ್ ಚಾಲ್ತಿಯಲ್ಲಿವೆ. ಇದು ನಿಮಗೆ ಹೆಚ್ಚಿನ ಸ್ಟೈಲಿಶ್ ಲುಕ್ಸ್ ಕೊಡುತ್ತವೆ. ಇದನ್ನು ಕ್ಯಾರಿ ಮಾಡುವುದೂ ಸುಲಭ.
ಆಫೀಸ್ ಡ್ರೆಸಿಂಗ್ಸ್
ಫಾರ್ಮಲ್ಸ್ ಜೊತೆ ಎಂದೂ ಹ್ಯಾಂಗಿಂಗ್ಸ್ ಕಲರ್ ಫುಲ್ ಇಯರ್‌ರಿಂಗ್ಸ್ ಧರಿಸದಿರಿ.
– ನೀವು ಆಫೀಸ್‌ನ ಗೆಟ್‌ಟುಗೆದರ್‌ಗಾಗಿ ಬ್ಯಾಕ್‌ಲೆಸ್ ಡ್ರೆಸ್ ಧರಿಸುವಿರಾದರೆ, ಅಗತ್ಯ ಟ್ರಾನ್ಸ್ ಪರೆಂಟ್ ಸ್ಟ್ರಾಪ್ಸ್ ಬ್ರಾ ಧರಿಸಿರಿ. ಬದಲಿಗೆ ಫ್ರಿಲ್‌ಯುಕ್ತ ಡ್ರೆಸ್ ಧರಿಸಿದರೆ, ಅವು ಚಿಕ್ಕದಾಗಿಯೇ ಇರಲಿ. ದೊಡ್ಡ ಗಾತ್ರದ ಫ್ರಿಲ್ಸ್ ಆಫೀಸಿಗೆ ಚೆನ್ನಾಗಿರುವುದಿಲ್ಲ.
– ಸಾಮಾನ್ಯವಾಗಿ ಮಹಿಳೆಯರು ಸದಾ ಒಂದೇ ತರಹದ ಬ್ರಾ ಕೊಳ್ಳುತ್ತಾರೆ. ಹಾಗೆ ಮಾಡಬೇಡಿ. ಪ್ರತಿ ಡ್ರೆಸ್‌ನ ಜೊತೆಗೆ ಒಂದೇ ತರಹದ ಬ್ರಾ ಧರಿಸಬೇಡಿ. ಕೆಲವೊಂದು ಬಗೆಯ ಡ್ರೆಸ್‌ಗಳಿಗೆ ಪ್ಯಾಡೆಡ್ ಬ್ರಾ ಮಾತ್ರ ಹೊಂದುತ್ತದೆ ಹಾಗೂ ಕೆಲವುಗಳ ಜೊತೆ ಬಿಕಿನಿ ಶೇಪ್‌ನದು. ಹೀಗಾಗಿ ಡ್ರೆಸ್ ಜೊತೆಗೆ ನಿಮ್ಮ ಬ್ರಾ ಆರಿಸುವಾಗಲೂ ಎಚ್ಚರಹಿಸಿ.