– ಡಿ. ದಾಕ್ಷಾಯಣಿ 

ಬದುಕನ್ನು ಸ್ವರಗಳೊಂದಿಗೆ ಗುನುಗುಟ್ಟಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಸಂತಸಮಯವಾಗುತ್ತದೆ.

ಹಾಗಾದರೆ ಬರಲಿರುವ ಹೊಸ ವರ್ಷದಲ್ಲಿ ಸ್ವರಗಳನ್ನು ಗುರುತಿಸಲು ಹಾಗೂ ಸೌಂದರ್ಯ ಮತ್ತು ಪೂರ್ಣತೆಯೊಂದಿಗೆ ಬದುಕಲು ಕೆಳಗಿನ ಸಂಗತಿಗಳ್ನು ನೆನಪಿಟ್ಟುಕೊಳ್ಳಿ.

ಬ್ರೇಕಪ್‌ ಬ್ಲೂಸ್‌ಗೆ ಬೈ ಬೈ ಹೇಳಿ

ಬದುಕಿನಲ್ಲಿ ಪ್ರತಿಯೊಬ್ಬರಿಗೂ ಎಂದಾದರೂ ಅಗತ್ಯವಾಗಿ ಪ್ರೀತಿಯುಂಟಾಗುತ್ತದೆ. ಈ ಪ್ರೀತಿ ಬದುಕಿನಲ್ಲಿ ಶ್ರೇಷ್ಠತೆ ಹಾಗೂ ಪೂರ್ಣತೆ ಬಹಳ ಒಳ್ಳೆಯದು. ಆದರೆ ಇದು ಕಣ್ಣೀರಿಗೆ ಕಾರಣವಾದರೆ ಅದರಿಂದ ದೂರವಿರಬೇಕು. ಅನೇಕ ಬಾರಿ ಇಷ್ಟವಿಲ್ಲದಿದ್ದರೂ ಬ್ರೇಕಪ್‌ನ ನೋವು ಸಹಿಸಿಕೊಳ್ಳಬೇಕಾಗುತ್ತದೆ. ವಿಷಯ ಏನೇ ಇರಲಿ, ಈ ನೋವು ನಿಮ್ಮನ್ನು ಘಾಸಿಗೊಳಿಸದಿರಲಿ.

dena-seekhain

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ರಿಪೋರ್ಟ್‌ನ ಅನುಸಾರ ಭಾರತದಲ್ಲಿ ಶೇ.3.2 ರಷ್ಟು ಜನ ಪ್ರೀತಿಯಲ್ಲಿ ಅಸಫಲರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿಯಲ್ಲಿ ಅಸಫಲತೆ ಅಥವಾ ರಿಜೆಕ್ಷನ್‌, ಡಿಪ್ರೆಷನ್‌ಗೆ ಕಾರಣವಾಗುತ್ತದೆ.

ಗೋ ಅಹೆಡ್‌ : ನೀವು ಬಯಸಿದ ಹುಡುಗ ನಿಮಗೆ ಸಿಕ್ಕದಿದ್ದಾಗ ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಬದುಕು ಖಂಡಿತಾ ನಿಮಗೆ ಇನ್ನಷ್ಟು ಒಳ್ಳೆಯದ್ದನ್ನು ಯೋಚಿಸಿದೆ.

ಒಂದೇ ಹೊಡೆತದಲ್ಲಿ ಅವನನ್ನು ನಿಮ್ಮ ಬದುಕಿನಿಂದ ಹೊರಗೆ ಹಾಕಿಬಿಡಿ. ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ. ಅವನಿಗೆ ಸಂಬಂಧಿಸಿದ ಎಲ್ಲ ನೆನಪುಗಳನ್ನು ಕಿತ್ತುಹಾಕಲು ಪ್ರಯತ್ನಿಸಿ. ಅವನ ಫೋಟೋಗಳು, ಲೆಟರ್ಸ್‌, ಗಿಫ್ಟ್ ಗಳನ್ನು ಎಸೆಯಿರಿ ಅಥವಾ ಹಿಂದಿರುಗಿಸಿ. ಅಷ್ಟೇ ಅಲ್ಲ, ನಿಮ್ಮ ಗ್ಯಾಜೆಟ್ಸಿನಿಂದಲೂ ಸಂಪೂರ್ಣವಾಗಿ ಅವನ ಸಂಪರ್ಕಗಳನ್ನು ಕಿತ್ತುಹಾಕಿ.

ಈಗ ಇದಕ್ಕೆ ಸಹಯ ಮಾಡುವ ಆ್ಯಪ್‌ಗಳೂ ಲಭ್ಯವಿವೆ. ಇತ್ತೀಚೆಗೆ ಸೋಷಿಯಲ್ ನೆಟ್‌ ವರ್ಕಿಂಗ್‌ ವೆಬ್‌ಸೈಟ್‌, ಫೇಸ್‌ಬುಕ್‌ ಸಂಬಂಧಗಳಿಗೆ ಹುಳಿಯುಂಟಾಗುವುದು ಅಥವಾ ಹಾಳಾಗುವ ಸ್ಥಿತಿಯಲ್ಲಿ ನಿಮ್ಮ ನೋವು ಕಡಿಮೆ ಮಾಡಲು  ಹೊಸ ಟೂಲ್‌ ಹೊರತಂದಿದೆ.

breakup-bluse

ಫೇಸ್‌ಬುಕ್‌ನ ಈ ಹೊಸ ಬ್ರೇಕಪ್‌ ಟೂಲ್‌ನಿಂದ ಬ್ಲಾಕ್‌ ಮಾಡಿದ  ನಿಮ್ಮ ಎಕ್ಸ್ ನ ಯಾವುದಾದರೂ ಪೋಸ್ಟ್ ನ್ಯೂಸ್‌ ಫೀಡ್‌ ಮೇಲೆ ಕಾಣಿಸುವುದಿಲ್ಲ. ಹೊಸ ಮೆಸೇಜ್‌ ಬರುವ ಅಥವಾ ಫೋಟೋ ಪೋಸ್ಟ್  ಆದರೆ ಎಕ್ಸ್ ನ ಹೆಸರೂ ಕಾಣಿಸುವುದಿಲ್ಲ. ಅದರಿಂದ ನಿಮಗೆ ಅವನನ್ನು ಮರೆಯಲು ಸಾಧ್ಯವಾಗುತ್ತದೆ.

ನಿಜವಾದ ಪ್ರೀತಿಯನ್ನು ನಿರೀಕ್ಷಿಸಿ : ನಿಮ್ಮ ಬದುಕಿನಲ್ಲಿ ಬೇರೆಯವರು ಬರಲು ದಾರಿ ತೆರೆದಿಡಿ. ಪ್ರೀತಿಯು ಅನುಭವಗಳನ್ನು ಜೊತೆಗೆ ಕರೆದುಕೊಂಡು ಬರುತ್ತದೆ. ಬದುಕಿಗೆ ಹೊಂಬಣ್ಣ ತರುತ್ತದೆ. ಪ್ರೀತಿಯ ಕೊರತೆ ಮನುಷ್ಯನ ಮನಸ್ಸಿನಲ್ಲಿ ಶೂನ್ಯತೆ ತರುತ್ತದೆ. ಬದುಕಿನಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಅದರಿಂದ ನಿಮ್ಮನ್ನು ಕಾಪಾಡಿಕೊಳ್ಳಿ. ಯಾವುದೇ ಷರತ್ತುಗಳಿಲ್ಲದೇ ಪ್ರೀತಿ ಮಾಡಿ.

ಬದುಕನ್ನು ಆಲಂಗಿಸಿ : ನೀವು ನಗುನಗುತ್ತ ಬದುಕನ್ನು ಅಪ್ಪಿಕೊಂಡಾಗಲೇ ಬದುಕು ನಿಮ್ಮ ಸೆರಗಿನಲ್ಲಿ ಸಂತಸದ ಹೂಗಳನ್ನು ಚೆಲ್ಲುತ್ತದೆ.

ಮನದಲ್ಲಿ ಉತ್ಸಾಹ, ಸಕಾರಾತ್ಮಕತೆ ಮತ್ತು ಸ್ನೇಹದ ದೀಪ ಹಚ್ಚಿಡಿ. ಎಲ್ಲರೊಂದಿಗೆ ಮುಕ್ತವಾಗಿ ಓಡಾಡಿ. ನಿಮ್ಮ ಕಂಫರ್ಟ್‌ ಝೋನ್‌ನಿಂದ  ಹೊರಗೆ ಬನ್ನಿ. ಜೀವನಕ್ಕೆ ಹೊಸ ಉದ್ದೇಶ ಕೊಡಿ, ಒಳ್ಳೆಯ ಗೆಳೆಯರನ್ನು ಮಾಡಿಕೊಳ್ಳಿ. ನಂತರ ನೋಡಿ. ಬದುಕು ಹೇಗೆ ಜೊತೆಯಲ್ಲೇ ಹೆಜ್ಜೆ ಇರಿಸುತ್ತದೆಂದು ತಿಳಿಯತ್ತದೆ.

ಅಮೇರಿಕಾದ ಟಿ.ವಿ. ಆ್ಯಂಕರ್‌, ಆ್ಯಕ್ಟಿವಿಸ್ಟ್, ಬಿಳಿಯರಲ್ಲದ ಕೋಟ್ಯಧೀಶ ಓಪರಾ ವಿನ್‌ಫ್ರೇ ಮಾತುಗಳಂತೆ, “ನೀವು ನಿಮ್ಮ ಬದುಕನ್ನು ಎಷ್ಟು ಹೊಗಳುತ್ತೀರೋ, ಉತ್ಸವ ಆಚರಿಸುತ್ತೀರೋ ಅದಕ್ಕಿಂತ ಹೆಚ್ಚಾಗಿ ಬದುಕಿನಲ್ಲಿ ಉತ್ಸವಗಳನ್ನು ಆಚರಿಸುವ ಅವಕಾಶಗಳು ಬರುತ್ತವೆ.

”ಪ್ರಸಿದ್ಧ ಗ್ರೀಕ್‌ ದಾರ್ಶನಿಕ ಅರಿಸ್ಟಾಟಲ್ ಪ್ರಕಾರ, “ನಾವು ಬಯಸಿದಂತೆಯೇ ಎಲ್ಲ ಆಗಬೇಕೆಂದುಕೊಂಡರೆ ನಿಮ್ಮ ಆಲೋಚನೆ ಬದಲಿಸಿ, ಎಲ್ಲ ಬದಲಾಗುತ್ತದೆ.

”ನೆನಪಿರಲಿ. ನಿಮ್ಮ ಬಳಿ ಏನೇ ಇದ್ದರೂ ಬಹಳಷ್ಟಿದೆ. ದೈಹಿಕ ಅಂಗವಿಕಲತೆ, ಬಡತನ, ದೀನಸ್ಥಿತಿ ಇರುವವರೂ ಸಹ ಬದುಕಿನಲ್ಲಿ ಕೀರ್ತಿವಂತರಾಗಿದ್ದಾರೆ.

saving-plan

ಆರ್ಥಿಕ ಸಮಸ್ಯೆಯಿಂದ ಕಂಗಾಲಾಗಿದ್ದ ಧೀರೂಬಾಯಿ ಅಂಬಾನಿ ರಿಲಯೆನ್ಸ್ ಕಂಪನಿ ಸ್ಥಾಪಿಸಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು. ಲೇಖಕ ಮಿಲ್ಟನ್‌ ಮತ್ತು ಕವಿ ಸೂರ್ ದಾಸ್‌ ಕುರುಡರಾಗಿದ್ದರು. ಮ್ಯೂಸಿಕ್‌ ಕಂಪೋಸರ್‌ ಬೀಥೋವೆನ್‌ ಕಿವುಡರಾಗಿದ್ದರು. ಇಂಗ್ಲೆಂಡ್‌ ಪ್ರಧಾನಿಯಗಿದ್ದ ವಿನ್ಸೆಂಟ್ ಚರ್ಚಿಲ್‌ ಉಗ್ಗುತ್ತಿದ್ದರು. ದಾರ್ಶನಿಕ ಸಾಕ್ರಟೀಸ್‌ರ ಹೆಂಡತಿ ಅವರಿಗೆ ಆಜೀವಪರ್ಯಂತ ಪೀಡಿಸುತ್ತಿದ್ದಳು. ಒಂದು ವೇಳೆ ಅವರೆಲ್ಲರೂ ಬಯಸಿದ್ದರೆ, “ನಾವೇನೂ ಮಾಡೋಕಾಗಲ್ಲ….” ಎಂದು ರಾಗ ಎಳೆಯುತ್ತಿರಬಹುದಿತ್ತು.

ಬದುಕಿನ ಅಳತೆ ತಿಳಿದುಕೊಳ್ಳಿ : ಬದುಕು ಒಬ್ಬ ವ್ಯಕ್ತಿ ಅಥವಾ ಒಂದು ಸಂಬಂಧದ ಮೇಲೆ ಆಶ್ರಿತವಲ್ಲ. ಬದುಕು ಒಂದು ಉದ್ದೇಶಕ್ಕಾಗಿ ಇದೆ. ಅದನ್ನು ಮರೆಯಬಾರದು. ನಿಮ್ಮ ಬದುಕಿಗೆ ಒಂದು ಉದ್ದೇಶ ನಿರ್ಧರಿಸಿಕೊಳ್ಳಿ. ಅದನ್ನು ಸಾಧಿಸಲು ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಿ.

ಯೋಜನೆ

ಬದುಕಿನಲ್ಲಿ ಯೋಜನೆಗಳಿಗೆ ಬಹಳ ಮಹತ್ವ ಇದೆ. ಪ್ರತಿ ಕೆಲಸನ್ನೂ ಯೋಜನೆಗೆ ತಕ್ಕಂತೆ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಇರುತ್ತದೆ.

ಮಾನಸಿಕ ಯೋಜನಾಬದ್ಧತೆ : ಮನಸ್ಸನ್ನು ನಿಯಂತ್ರಿಸುವುದು, ಅದನ್ನು ನಿಶ್ಚಿತ ದಿಕ್ಕಿನಲ್ಲಿ ಪೂರ್ವಯೋಜನೆಗೆ ತಕ್ಕಂತೆ ಏಕಾಗ್ರಚಿತ್ತರಾಗಿಸುವುದು, ಸಕಾರಾತ್ಮಕ ಭಾವನೆಗಳೊಂದಿಗೆ ಪೋಷಿಸುವುದು, ಅಧಿಕ ಎನರ್ಜಿ ಉಪಯೋಗಿಸಲು ಸಿದ್ಧಪಡಿಸುವುದು ಇತ್ಯಾದಿ ಮಾನಸಿಕ ಯೋಜನಾಬದ್ಧತೆಯಡಿ ಬರುತ್ತವೆ.“ಯಾವುದೇ ವಸ್ತು ಒಳ್ಳೆಯದು ಅಥವಾ ಕೆಟ್ಟದ್ದು ಅಂತೇನಿಲ್ಲ. ನಮ್ಮ ಆಲೋಚನೆಯ ದೃಷ್ಟಿಯೇ ಅದನ್ನು ಒಳ್ಳೆಯದು ಅಥವಾ ಕೆಟ್ಟದ್ದು ಮಾಡುತ್ತದೆ,” ಎಂದು ವಿಲಿಯಂ ಶೇಕ್ಸ್ ಪಿಯರ್‌ ಹೇಳುತ್ತಾನೆ.

ಭಾವಿ ಜೀವನದ ಯೋಜನೆಗಳು : ಬದುಕಿನ ಪ್ರತಿ ಕ್ಷಣ ಮಹತ್ವದ್ದಾಗಿರುತ್ತದೆ. ಮುಂಬರುವ ಸಮಯ, ವರ್ತಮಾನದ ಹೊಸ್ತಿಲಿನಲ್ಲಿ ನಿಂತಿದೆ. ಆದ್ದರಿಂದ ಇಂದಿನಿಂದಲೇ ನಾಳೆಯನ್ನು ಸಂಭಾಳಿಸಲು ತೊಡಗಿಕೊಳ್ಳಿ. ನಿಮ್ಮ ಈ ಪ್ರಯತ್ನ ಮನಸ್ಸಿಗೆ ನೆಮ್ಮದಿ ಮತ್ತು ಬದುಕಿಗೆ ಸ್ಥಿರತೆ ಕೊಡುತ್ತದೆ.

ಹಣದ ಯೋಜನೆ : ಡಾ. ಹರ್ಷಾ ಚಾಂಡೋರ್‌ಕರ್‌, ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಸಿಬಿಲ್‌ ಪ್ರಕಾರ ಯಾವಾಗಲೂ ಸಾಲದ ಇಎಂಐಗಳನ್ನು ಸಕಾಲಕ್ಕೆ ಪಾವತಿಸಿ.

ನಿಮ್ಮ ಸಾಲದ ಎಲ್ಲ ಇಎಂಐ ಮತ್ತು ಕ್ರೆಡಿಟ್‌ ಕಾರ್ಡ್‌ ಖರ್ಚಿನ ಬಗ್ಗೆ ಗಮನಿಸಿ. ಸಾಲ ತೀರಿಸುವ ಮತ್ತು ಕ್ರೆಡಿಟ್‌ ಕಾರ್ಡ್‌ನ ಬಿಲ್‌ ಪಾವತಿಸಲು ಪ್ರತಿ ತಿಂಗಳೂ ಒಂದಷ್ಟು ಹಣವನ್ನು ಮುಂಗಡವಾಗಿ ತೆಗೆದಿಡಿ.

ನಿಮ್ಮ  ಕ್ರೆಡಿಟ್‌ಕಾರ್ಡ್‌ ಬಿಲ್‌ಗಳು ಮತ್ತು ಇಎಂಐನ್ನು ಪ್ರತಿ ತಿಂಗಳೂ ನಿರ್ಧರಿಸಿದ ತಾರೀಕಿಗೆ ಮೊದಲೇ ಪಾವತಿಸಿ.

ಭವಿಷ್ಯಕ್ಕಾಗಿ ಉಳಿತಾಯ : ಭವಿಷ್ಯದಲ್ಲಿ ನಿಮ್ಮ ಕನಸೇನಿದೆ? ನೀವು ಏನು ಮಾಡಲು ನಿರ್ಧರಿಸಿದ್ದೀರಿ? ಎಂಬುದರ ಬಗ್ಗೆ ಯೋಚಿಸಿ. ನಂತರ ನಿಮ್ಮ ಖರ್ಚುಗಳು ಮತ್ತು ಸಾಲ ತೀರಿಸುವುದನ್ನು ಎಚ್ಚರಿಕೆಯಿಂದ ಮಾಡಿ.

ಎಲ್ಲ ಕಡೆಯೂ ವ್ಯವಸ್ಥೆ ಅಗತ್ಯ : ಮನೆಯಾಗಲಿ, ಆಫೀಸಾಗಲಿ ಎಲ್ಲೇ ಆಗಲಿ ನಿಮ್ಮನ್ನು ಹಾಗೂ ನಿಮ್ಮ ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯವಾಗಿದೆ. ಅದರಿಂದ ನಿಮ್ಮ ಸಮಯ ಉಳಿಯುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.

ನಿಮ್ಮ ಪ್ರತಿ ವಸ್ತುವನ್ನೂ ಹೀಗೆ ವ್ಯವಸ್ಥಿತವಾಗಿಡಿ. ಅಗತ್ಯಬಿದ್ದಾಗ ಕೆಲವೇ ನಿಮಿಷಗಳಲ್ಲಿ ಕೈಗೆ ಸಿಗುವಂತಿರಬೇಕು. ಇಲ್ಲದಿದ್ದರೆ ಅದನ್ನು ಹುಡುಕುವುದಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ.

ಮೌಲ್ಯಮಾಪನ ಮಾಡಿಕೊಳ್ಳಿ

ಒಮ್ಮೊಮ್ಮೆ ನಾವು ಸಣ್ಣ ಸಣ್ಣ ವಿಷಯಗಳಿಗೆ ಕೆಲವರ ಮೇಲೆ ಕೋಪ ಮಾಡಿಕೊಳ್ಳುತ್ತೇವೆ. ಅವರು ನಮ್ಮೊಂದಿಗೆ ಯಾವ ರೀತಿ ದುರ್ವರ್ತನೆ ತೋರಿದ್ದರು ಎಂದು ಅಂದುಕೊಳ್ಳುತ್ತಿರುತ್ತೇವೆ. ಅಂತಹ ಸ್ಥಿತಿಯಲ್ಲಿ ನಮ್ಮನ್ನು ನಾವು ಮೊದಲು ವಿಮರ್ಶಿಸಿಕೊಳ್ಳಬೇಕು. ನಂತರ ಬೇರೆಯವರನ್ನು ವಿಮರ್ಶಿಸಬೇಕು.

ಕೂಲ್‌ ಆಗಿ ಯೋಚಿಸಿ : ಯಾರ ಮೇಲಾದರೂ ಕೋಪಿಸಿಕೊಳ್ಳುವುದು ಬಹಳ ಸುಲಭ. ನಮಗೆ ಯಾವ ವಿಷಯಕ್ಕಾದರೂ ಕೋಪ ಬಂದರೆ ನಮ್ಮ ಶರೀರದಲ್ಲಿ ಒಳಗಿನವರೆಗೆ ಕೋಲಾಹಲ ಉಂಟಾಗುತ್ತದೆ. ಕೋಪ ಚಿತೆಗೆ ಸಮಾನ. ಅದು ಶರೀರಕ್ಕೆ ಹಾನಿ ಉಂಟುಮಾಡುತ್ತದೆ. ಆದರೆ ಅದನ್ನು ನಾವು ಒಪ್ಪುವುದಿಲ್ಲ.

ನಾವು ಥಟ್ಟನೆ ಆವೇಶಕ್ಕೆ ಒಳಗಾಗುವ ಬದಲು ಕೂಲ್‌ ಆಗಿ ಯೋಚಿಸಬೇಕು. ವಾಸ್ತವ ಅರ್ಥವಾದಾಗ ಕಾರಣವಿಲ್ಲದೆ ನಾವು ಕೋಪಗೊಂಡಿದ್ದೇವೆ ಎಂದು ತಿಳಿಯುತ್ತದೆ. ಒಂದು ವೇಳೆ ಕೋಪಕ್ಕೆ ಕಾರಣವಿದ್ದರೂ ಅದಕ್ಕೆ ಕಾರಣರಾದವರನ್ನು ಬೇಗನೆ ಕ್ಷಮಿಸಿ ಕೋಪವನ್ನು  ತಣಿಸಬೇಕು. ನೀವು ಹೆಚ್ಚು ಹೊತ್ತು ಕೋಪಿಸಿಕೊಂಡಿದ್ದರೆ ಶರೀರಕ್ಕೆ ಅಷ್ಟೇ ಹೊತ್ತು ಹಾನಿಯಾಗುತ್ತದೆ.

ಉಪದೇಶ ಕೊಡುವ ಮೊದಲು ನೀವು ಅದನ್ನು ಪಾಲಿಸಿ : ಬದುಕಿನಲ್ಲಿ ಇತರರಿಗೆ ಉಪದೇಶ ಕೊಡುವುದು ಬಹಳ ಸುಲಭ. ಆದರೆ ನೀವು ಸ್ವತಃ ಅವುಗಳಲ್ಲಿ ಎಷ್ಟು ವಿಷಯವನ್ನು ಜಾರಿಗೊಳಿಸಿದ್ದೀರಾ ಎಂದ ಗಮನಿಸಿದ್ದೀರಾ?

ನಿಮ್ಮ ಮಕ್ಕಳಿಗೆ ಸುಳ್ಳು ಹೇಳುವುದು ತಪ್ಪು ಎಂದು ಹೇಳುತ್ತೀರಿ. ಆದರೆ ನೀವೇ ಸುಳ್ಳು ಹೇಳತ್ತಿರುತ್ತೀರಿ. ಆಗ ನಿಮ್ಮ ಮಕ್ಕಳು ನಿಮ್ಮ ಮಾತು ಕೇಳುತ್ತಾರೆಯೇ? ನೀವು ಮೊದಲು ಅದನ್ನು ಪಾಲಿಸದಿದ್ದರೆ ಅವರು ನಿಮ್ಮ ಮಾತು ಪಾಲಿಸುತ್ತಾರೆಂದು ಹೇಗೆ ನಿರೀಕ್ಷಿಸುತ್ತೀರಿ?

ಇನ್ನೊಬ್ಬರ ಮೇಲೆ ದೋಷ ಹೊರಿಸುವ ಪ್ರವೃತ್ತಿ ಬಿಡಿ : ನಮ್ಮಲ್ಲಿ ಹೆಚ್ಚಿನ ಜನರ ಅಭ್ಯಾಸವೇನೆಂದರೆ ಇನ್ನೊಬ್ಬರ ದುರ್ಗುಣಗಳನ್ನು ಉತ್ಪ್ರೇಕ್ಷಿಸಿ ತೋರಿಸುವುದು. ಅವರು ತಮ್ಮ ತಪ್ಪುಗಳನ್ನು ಗಮನಿಸುವುದಿಲ್ಲ. ಇಂಥಿಂಥಾ ವ್ಯಕ್ತಿಗಳು ನಮ್ಮೊಂದಿಗೆ ಸರಿಯಾಗಿ ವರ್ತಿಸಲಿಲ್ಲ, ಸುಳ್ಳು ಹೇಳಿದರು ಅಥವಾ ಸ್ವಾರ್ಥ ವರ್ತನೆ ತೋರಿದರು ಎಂದು ಯೋಚಿಸುತ್ತೇವೆ. ಆದರೆ ನಾವು ವೈಯಕ್ತಿಕ ಸ್ವಾರ್ಥ ತ್ಯಾಗ ಮಾಡಿ ಅವರಿಗೆ ಸಹಾಯ ಮಾಡಿದ್ದೀರಾ ಅಥವಾ ಅವರಿಗೆ ಜೊತೆ ನೀಡಿದ್ದೀರಾ ಎಂದು ಯೋಚಿಸಬೇಕು.

ವಿವಾದದ ಮೂಲದಲ್ಲಿ ನೀವಿದ್ದೀರಾ? : ನಿಮ್ಮ ಬದುಕಿನಲ್ಲಿ ಯಾರೊಂದಿಗಾದರೂ ವಿವಾದ ಉಂಟಾಗಿದೆಯೇ? ಅದರ ಮೂಲದಲ್ಲಿ ಯಾರಿದ್ದಾರೆ? ನೀವಂತೂ ಅಲ್ಲ ತಾನೇ? ಯಾರದ್ದಾದರೂ ತಪ್ಪು ಹುಡುಕುವುದು, ಕೆಟ್ಟದಾಗಿ ಮಾತಾಡುವುದು ಒಂದು ಕ್ಷಣದ ಕೆಲಸ. ಆದರೆ ತಮ್ಮ ತಪ್ಪು ಒಪ್ಪಿಕೊಳ್ಳುವುದು ಮತ್ತು ಕ್ಷಮೆ ಯಾಚಿಸುವುದು ಬಹಳ ಅಪರೂಪ.

ಕೊಡುವುದನ್ನು ಕಲಿಯಿರಿ : ಬದುಕಿನಲ್ಲಿ ನೀವು ಇತರರಿಂದ ಎಷ್ಟೋ ಪಡೆಯುತ್ತಿರುತ್ತೀರಿ. ಅಪ್ಪ, ಅಮ್ಮ, ನೆಂಟರಿಂದ ಪ್ರೀತಿ, ಸಮಯ, ಹಣ, ಭೋಜನ, ಬಟ್ಟೆಬರೆ, ಅಗತ್ಯ ಬಿದ್ದಾಗ ಸಹಾಯ ಮತ್ತು ಸುರಕ್ಷತೆ, ಸಮಾಜ ನಿಮಗೆ ಸುರಕ್ಷತೆಯ ವಾತಾವರಣ ಹಾಗೂ ವ್ಯವಸ್ಥೆ ಕೊಡುತ್ತದೆ. ಆದರೆ ಎಂದಾದರೂ ಅವರಿಗೆ ಏನಾದರೂ ಕೊಡುವ ಅವಕಾಶ ಬಂದಾಗ ನಾವು ಹಿಂದೇಟು ಹಾಕುತ್ತೇವೆ.

ಪ್ರೀತಿ ಮತ್ತು ಸಂತಸ ಹಂಚಿ : ನಾವು ಏನೂ ಯೋಚಿಸದೆ ಕಂಡವರು ಕೊಟ್ಟದ್ದನ್ನು ತೆಗೆದುಕೊಂಡಂತೆ ಅವರಿಗಾಗಿ ನಾವೇನಾದರೂ ಕೊಡಬೇಕೆಂದು ಯೋಚಿಸುವುದು ನಮ್ಮ ಕರ್ತವ್ಯವಲ್ಲವೇ? ಎಂದಾದರೂ ಯಾರಿಗಾದರೂ ನಿಸ್ವಾರ್ಥವಾಗಿ ಏನಾದರೂ ಕೊಟ್ಟು ನೋಡಿ. ನಿಮ್ಮ ಮನಸ್ಸಿನಲ್ಲಿ ಸಂತಸದ ಅನುಭವ ಉಂಟಾಗುತ್ತದೆ.

ಸಮಯವನ್ನೂ ಕೊಡಿ : ಒಬ್ಬ ವ್ಯಕ್ತಿಗೆ ಆರ್ಥಿಕ ಅಥವಾ ಶಾರೀರಿಕ ಸಹಾಯದೊಂದಿಗೆ ಮಾನಸಿಕ ಸಹಾಯ ಅತ್ಯಗತ್ಯ. ನೀವು ಒಬ್ಬ ವ್ಯಕ್ತಿಗೆ ಸದಾ ಅವನ ಜೊತೆಗಿರುತ್ತೇನೆ, ಭಾವನಾತ್ಮಕ ಸಪೋರ್ಟ್‌ ಕೊಡುತ್ತೇನೆ ಎಂಬ ಅನುಭವ ಉಂಟು ಮಾಡಿದಾಗ ಆ ವ್ಯಕ್ತಿಯೊಂದಿಗೆ ಉಂಟಾದ ಹೊಂದಾಣಿಕೆ ಎಂದೂ ಮುರಿಯುವುದಿಲ್ಲ. ಆ ವ್ಯಕ್ತಿ ಮುಂದೆ ನಿಮ್ಮ ಸಂತಸಕ್ಕೆ ಕಾರಣನಾಗುತ್ತಾನೆ. ನಿಮ್ಮ ಸರ್ಕಲ್ ದೊಡ್ಡದಾಗುತ್ತದೆ ಮತ್ತು ಜೀವನದಲ್ಲಿ ಎಂದೂ ಏಕಾಂಗಿಯಾಗಿರುವುದಿಲ್ಲ.

ಉಪಕಾರದ ಬಗ್ಗೆ ಹೇಳಿಕೊಳ್ಳಬೇಡಿ : ಯಾರಿಗಾದರೂ ಏನಾದರೂ ಕೊಟ್ಟರೆ, ಏನಾದರೂ ಸಹಾಯ ಮಾಡುತ್ತಿದ್ದರೆ ಎಂದಿಗೂ ಅದರ ಬಗ್ಗೆ ಹೇಳಿಕೊಳ್ಳಬೇಡಿ. ನೀವೆಷ್ಟು ಕೊಡುತ್ತಿದ್ದೀರಿ ಎನ್ನುವುದು ಮುಖ್ಯವಲ್ಲ. ನೀವೆಷ್ಟು ಪ್ರೀತಿಯಿಂದ ಮತ್ತು ಆತ್ಮೀಯತೆಯಿಂದ ಕೊಡುತ್ತಿದ್ದೀರಿ ಎನ್ನುವುದೇ ಮುಖ್ಯ.

ಏನನ್ನೂ ನಿರೀಕ್ಷಿಸಬೇಡಿ : ಯಾರಿಗಾದರೂ ಏನಾದರೂ ಕೊಡುತ್ತಿದ್ದರೆ ಅದರ ಬದಲು ಏನಾದರೂ ಪಡೆಯುವ ಇಚ್ಛೆ ಬೇಡ. ಅಂದಹಾಗೆ ನೀವು ಮನಸ್ಸಿನಲ್ಲಿ ಅಪೇಕ್ಷೆ ಇಟ್ಟಕೊಂಡು ಏನೋ ಕಾರಣದಿಂದ ಆ ವ್ಯಕ್ತಿ ಅದನ್ನು ಪೂರೈಸದಿದ್ದರೆ ನಿಮ್ಮ ಮನಸ್ಸಿಗೆ ಬಹಳ ದುಃಖವಾಗುತ್ತದೆ. ನೀವು ಏನೂ ಅಪೇಕ್ಷೆ ಇಟ್ಟುಕೊಳ್ಳದಿದ್ದರೆ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ