ಆನ್‌ಲೈನ್‌ ಶಾಪಿಂಗ್‌ ಸೈಟ್‌ನಿಂದ ನೀವು ಸುಮಾರು ಎಲ್ಲ ವಸ್ತುಗಳನ್ನೂ ಖರೀದಿಸಬಹುದು. ಹಬ್ಬಗಳ ಸೀಸನ್‌ನಲ್ಲಿ ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಅಮೆಜಾನ್‌ನಂತಹ ವೆಬ್‌ಸೈಟ್‌ಗಳಲ್ಲಿ ಜನರಿಗೆ ಬಹಳಷ್ಟು ಆಫರ್‌ಗಳು ಸಿಗುತ್ತಿವೆ. ಉದಾ : ಕೆಲವು ವಸ್ತುಗಳನ್ನು ಖರೀದಿಸಿದರೆ ಬೋನಸ್‌ ಕೂಪನ್‌ ಕೊಡವುದು, ಡಿಸ್ಕೌಂಟ್‌ ಕೊಡುವುದು, ಕ್ಯಾಶ್‌ ಕೊಡುವುದು ಇತ್ಯಾದಿ.  ಇದರ ಜೊತೆಗೆ ರೀಪ್ಲೇಸ್‌ಮೆಂಟ್‌ ವಾರಂಟಿಯೂ ಗ್ರಾಹಕರಿಗೆ ಸಿಗುತ್ತದೆ. ಒಂದು ವೇಳೆ ವಸ್ತು ಹಾಳಾಗಿದ್ದರೆ ಅದನ್ನು ಹಿಂತಿರುಗಿಸಬಹುದು. ಈ ಕಾರಣದಿಂದಾಗಿ ಜನ ಮಾರುಕಟ್ಟೆಗಳ ಬದಲು ಆನ್‌ಲೈನ್‌ ಶಾಪಿಂಗ್‌ಗೆ ಮಹತ್ವ ನೀಡುತ್ತಿದ್ದಾರೆ. ಈಗಂತೂ ಹಬ್ಬ ಶುರುವಾಗಿದೆ. ಅದರೊಂದಿಗೆ ಆನ್‌ಲೈನ್‌ ಸೇಲ್ಸ್ ಸೀಸನ್‌ ಕೂಡ ಶುರುವಾಗಿದೆ.

ಇತ್ತೀಚೆಗೆ ಅಸೋಚಿವ್‌ ಮತ್ತು ಗ್ರಾಂಟ್‌ ಥೋರಂಟನ್‌ನ ಸಹಯೋಗದಲ್ಲಿ ಮಾಡಿದ ಅಧ್ಯಯನದಲ್ಲಿ ಭಾರತದಲ್ಲಿ 2013ರಲ್ಲಿ ಆನ್‌ಲೈನ್‌ ಖರೀದಿ ಮಾಡುವವರ ಸಂಖ್ಯೆ 2 ಕೋಟಿ ಇದ್ದದ್ದು 2016ರಲ್ಲಿ ಅವರ ಸಂಖ್ಯೆ 4 ಕೋಟಿ ತಲುಪುವ ಸಂಭಾವ್ಯತೆ ಇದೆ. ಏಕೆಂದರೆ ಅಷ್ಟರಲ್ಲಿ 2 ಕೋಟಿಗಿಂತಲೂ ಹೆಚ್ಚು  ಭಾರತೀಯರ ಬಳಿ ಇಂಟರ್‌ನೆಟ್‌ನ ಸೌಲಭ್ಯ ಇರುತ್ತದೆ. ಜೊತೆಗೆ ಭಾರತೀಯ ಇಕಾಮರ್ಸ್‌ ಮಾರುಕಟ್ಟೆಯೂ 2016ರಲ್ಲಿ ಹೆಚ್ಚಾಗಿ 8.5 ಬಿಲಿಯನ್‌ ಡಾಲರ್‌ ಆಗುತ್ತದೆ. ರಿಪೋರ್ಟ್‌ನ ಪ್ರಕಾರ 2015ರಲ್ಲಿ 40 ಮಿಲಿಯನ್‌ ಯೂಸರ್‌ಗಳು ಆನ್‌ಲೈನ್‌ ಶಾಪಿಂಗ್‌ ಮಾಡಿದ್ದಾರೆ. ಭಾರತದಲ್ಲಂತೂ ಆನ್‌ಲೈನ್‌ ಖರೀದಿ ಚೆನ್ನಾಗಿ ಆಗುತ್ತಿದೆ. ಆದರೆ ಆನ್‌ಲೈನ್‌ ಕಳ್ಳತನಗಳೂ ಹೆಚ್ಚಾಗುತ್ತಿವೆ. ಟ್ರ್ಯಾನ್ಸಾಕ್ಷನ್‌ನಿಂದ ಡೆಲಿವರಿವರೆಗೆ ಜನ ಮೋಸ ಹೋಗುತ್ತಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವ ವಿಷಯಗಳನ್ನು ಗಮನಿಸಬೇಕೆಂದು ಜನಕ್ಕೆ ಹೆಚ್ಚು ತಿಳಿದಿಲ್ಲ. ಆದ್ದರಿಂದ ಆನ್‌ಲೈನ್‌ ಶಾಪಿಂಗ್‌ಗೆ ಸಂಬಂಧಿಸಿದ ಮಹತ್ವಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಿ.

ಬೆಲೆ ಕಂಪೇರ್‌ ಮಾಡಿ : ಆನ್‌ಲೈನ್‌ ಶಾಪಿಂಗ್‌ನಲ್ಲಿ ಎಲ್ಲ ಸೈಟ್‌ಗಳಲ್ಲೂ  ಬೆಲೆ ಒಂದೇ ಸಮ ಇರುವುದಿಲ್ಲ. ಆದ್ದರಿಂದ ನೀವು ಯಾವ ಪ್ರಾಡಕ್ಟ್ಸ್ ಖರೀದಿಸಲು ಬಯಸುತ್ತೀರೋ ಅದನ್ನು ಖರೀದಿಸುವ ಮೊದಲು ಹಲವು ವೆಬ್‌ಸೈಟ್‌ಗಳಲ್ಲಿ ಅದರ ಬೆಲೆಯನ್ನು ಹೋಲಿಸಿ. ಇನ್ನೊಂದು ಸೈಟ್‌ನಲ್ಲಿ ಅದೇ ವಸ್ತುವಿನ ಬೆಲೆ ಕಡಿಮೆ ಇರಬಹುದು.

ಬ್ರೌಸರ್‌ ಎಕ್ಸ್ಟೆನ್ಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ : ಹಲವಾರು ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳನ್ನು ಒಮ್ಮೆಗೇ ಮ್ಯಾನುಯೆಲ್‌ ಆಗಿ ಕಂಪೇರ್‌ ಮಾಡುವುದು ಕಷ್ಟ. ಆದರೆ ಒಂದು ಬ್ರೌಸರ್‌ ಎಕ್ಸ್ಟೆನ್ಶನ್‌ ಎಲ್ಲ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಲೈವ್‌ ಕಂಪೇರ್‌ ಮಾಡಲು ಸೌಲಭ್ಯ ಒದಗಿಸುತ್ತದೆ.  ಈ ಎಕ್ಸ್ಟೆನ್ಶನ್‌ನ್ನು ನೀವು ಡೌನ್‌ಲೋಡ್‌ ಮಾಡಬಹುದು. ಈ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಎಲ್ಲ ಸೈಟ್‌ಗಳ ಡೀಲ್‌ನ್ನು ಲೈವ್‌ ತೋರಿಸುತ್ತದೆ. ಜೊತೆಗೆ ಯಾವ ವಸ್ತುವಿನ ಬೆಲೆ ಯಾವಾಗ ಕಡಿಮೆ ಇತ್ತು, ಯಾವಾಗ ಜಾಸ್ತಿಯಾಗಿತ್ತು ಎಂದೆಲ್ಲಾ ತಿಳಿಸುತ್ತದೆ. ಇದಲ್ಲದೆ ಹೋಲಿಸಿ ನೋಡಲು ಹಲವಾರು ಸೈಟ್‌ಗಳಿದ್ದು ಅವು ಬೆಲೆಯನ್ನು ಹೋಲಿಸಿ ತೋರಿಸುತ್ತವೆ.

ಆ್ಯಪ್ಸ್ ಯೂಸ್‌ ಮಾಡಿ : ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ದೊಡ್ಡ ದೊಡ್ಡ ವೆಬ್‌ಸ್ಟೋರ್‌ನ ಆ್ಯಪ್ಸ್ ಕೂಡ ಇದ್ದು ನೀವು ಒಳ್ಳೆಯ ಡೀಲ್ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕೆಲಮೊಮ್ಮೆ ಅವರ ಆ್ಯಪ್ಸ್ ಇನ್‌ಸ್ಟಾಲ್ ಮಾಡಿಕೊಂಡರೆ, ಅವರು ಕೆಲವು ಪ್ರಾಡಕ್ಟ್  ಗಳನ್ನು ಕಡಿಮೆ ಬೆಲೆ ಆಫರ್‌ ಕೊಡುತ್ತಾರೆ. ಜೊತೆಗೆ ಇನ್ನಷ್ಟು ಒಳ್ಳೆಯ ಡೀಲ್ಗಳನ್ನು ಕೊಡುತ್ತಾರೆ.

ಕೂಪನ್‌ಗಳು ಮತ್ತು ಪ್ರೈಸ್‌ ಅಪ್‌ಡೇಟ್‌ : ಆನ್‌ಲೈನ್‌ ಶಾಪಿಂಗ್‌ನಲ್ಲಿ ಬೆಸ್ಟ್ ಡೀಲ್‌ ಅಂದರೆ ಪ್ರಾಡಕ್ಟ್ ಈಗಿನ ಬೆಲೆಯ ಮೇಲೆ ನಿರ್ಧಾರಿತವಾಗುತ್ತವೆ. ಕೂಪನ್‌ಗಳು, ಡಿಸ್ಕೌಂಟ್‌ ಕೋಡ್ಸ್ ಅದಕ್ಕಾಗಿ ಉಪಯೋಗಿಸಲಾಗುತ್ತದೆ.

ಪ್ರೋಮೋ ಕೋಡ್‌ ಮತ್ತು ಕೂಪನ್‌ ಡಿಸ್ಕೌಂಟ್‌ : ಒಂದುವೇಳೆ ನೀವು ಸೈಟ್ಸ್ನಲ್ಲಿ ಅತ್ಯಂತ ಆಗ್ಗಾಗೆ ಡೀಲ್‌ ಹುಡುಕಲು ಬಯಸಿದರೆ ಅದಕ್ಕಾಗಿ ಪ್ರೋಮೋ ಕೋಡ್‌ ಮತ್ತು ಕೂಪನ್‌ ಡಿಸ್ಕೌಂಟ್‌ ಕೂಡ ಇದೆ. ಅದಲ್ಲದೆ  ಹಲವು ವೆಬ್‌ಸೈಟ್‌ಗಳು ಬೇರೆ ಬೇರೆ ಶಾಪಿಂಗ್‌ ವೆಬ್‌ಸೈಟ್‌ಗಳ ಮೂಲಕ ಕೊಡುತ್ತಿರುವ ಕ್ಯಾಶ್‌ ಬ್ಯಾಕ್‌ ಕೂಪನ್‌ ಅಥವಾ ಕೂಪನ್‌ ಕೋಡ್‌ನ ತುಲನಾತ್ಮಕ ಲಿಸ್ಟ್ ಕೊಡುತ್ತವೆ. ನೀವು ಈ ವೆಬ್‌ಸೈಟ್‌ಗಳೊಂದಿಗೆ  ಫ್ರೀಯಾಗಿ ರಿಜಿಸ್ಟರ್‌ ಕೂಡ ಮಾಡಬಹುದು. ಅವರ ಹೊಸ ಡೀಲ್‌ನ ಇಮೇಲ್‌ಗಳನ್ನು ನಿಮಗೆ ಕಳಿಸುತ್ತಿರುತ್ತಾರೆ. ಇದರಲ್ಲೂ ಬೆಸ್ಟ್ ಡೀಲ್‌ ಆರಿಸಿಕೊಳ್ಳಬಹುದು.

ಕೂಪನ್ಸ್ ಟ್ರೆಂಡ್‌ನ್ನೂ ತಿಳಿದುಕೊಳ್ಳಿ : ಒಂದು ಕೂಪನ್‌ ನಿಮಗೆ ವೆಬ್‌ಸೈಟ್‌ಗಳ ಮೂಲಕ ಕೆಲವು ಪ್ರಾಡಕ್ಟ್ ಗಳನ್ನು ಖರೀದಿಸಿದರೆ ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ನಿಮಗೆ ಇಷ್ಟವಾದ ವೆಬ್‌ಸೈಟ್‌ನಲ್ಲಿ ಕೂಪನ್‌ ಸಿಗದಿದ್ದರೆ ಗೂಗಲ್ ನಲ್ಲಿ ಹುಡುಕಿ. ಆದರೆ ನಿಮಗೆ ಪ್ರಾಡಕ್ಟ್ಸ್ ಖರೀದಿಸುವ ಅಗತ್ಯವಿದ್ದಾಗ ಮಾತ್ರ ಕೂಪನ್‌ ನಿಮ್ಮ ಹಣ ಉಳಿಸಲು ಸಹಾಯ ಮಾಡುತ್ತದೆ. ನಿಮ್ಮ ಬಳಿ ಕೂಪನ್‌ ಇದೆಯೆಂದು ಏನಾದರೂ ವಸ್ತು ಖರೀದಿಸಬೇಡಿ.

ಕ್ಯಾಶ್‌ಬ್ಯಾಕ್‌ ಲಾಯಲ್ಟಿ ಪ್ರೋಗ್ರಾಂ : ಒಂದುವೇಳೆ ನೀವು ನಿಯಮಿತವಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದರೆ ಅದು ಲಾಭದಾಯಕವಾಗಿರುತ್ತದೆ. `ಕ್ಯಾಶ್‌ ಇನ್‌,’ `ಪೆನ್ನಿ ಇನ್‌’ನಂತಹ ವೆಬ್‌ಸೈಟ್‌ಗಳು ನಿಮಗೆ ಹೆಲ್ತ್ ಮತ್ತು ಮೆಡಿಕಲ್ ಖರ್ಚಿನ ಲಾಭಗಳನ್ನು ಕೊಡುತ್ತವೆ.

ಕ್ಯಾಶ್‌ಬ್ಯಾಕ್‌ ಡಿಸ್ಕೌಂಟ್‌ : ನೀವು ಖರೀದಿಸುತ್ತಿರುವ ಪ್ರಾಡಕ್ಟ್ಸ್ ನಲ್ಲಿ ಡಿಸ್ಕೌಂಟ್‌ ಪ್ರಕಾರ ನಿಮ್ಮ ಪೇಡ್‌ ಅಮೌಂಟ್‌ಗೆ ರಿಯಾಯಿತಿ ಸಿಗುತ್ತದೆ. ಅದಲ್ಲದೆ ಹಲವು ಕ್ಯಾಶ್‌ಬ್ಯಾಕ್‌ನ ಮೆಂಬರ್‌ ವೆಬ್‌ಸೈಟ್‌ ಶಾಪಿಂಗ್‌ ಸೈಟ್‌ನಲ್ಲಿ ನಡೆಯುತ್ತಿರುವ ಕ್ಯಾಶ್‌ಬ್ಯಾಕ್‌ ಆಫರ್‌ಗಳ ವಿವರಗಳನ್ನು ಒಳಗೊಂಡಿದೆ. ಅದರಿಂದ ಒಳ್ಳೆಯ ಡೀಲ್‌ ಆಯ್ಕೆ ಮಾಡಬಹುದು.

ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳ ವಿವರ ಪಡೆಯಿರಿ : ಗ್ರಾಹಕರು ಕಡಿಮೆ ಬೆಲೆಯ ಆಸೆಗೆ ಯಾವುದೋ ತಿಳಿಯದ ಸೈಟ್‌ನಲ್ಲಿ ಶಾಪಿಂಗ್‌ ಮಾಡಬಾರದು. ಯಾವ ಸೈಟ್‌ನಲ್ಲಿ ಖರೀದಿ ಮಾಡಬೇಕೋ ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡೇ ಶಾಪಿಂಗ್‌ ಮಾಡಿ. ಸೈಟ್‌ನಲ್ಲಿ ಕೊಟ್ಟಿರುವ ಅಬೌಟ್‌ ಮತ್ತು ಎಫ್‌ಎಕ್ಯೂನಂತಹ ಪೇಜ್‌ನ್ನು ಅಗತ್ಯವಾಗಿ ವಿಸಿಟ್‌ ಮಾಡಿ. ಅಲ್ಲಿ ಸೈಟ್‌ಗೆ ಸಂಬಂಧಿಸಿದ ಮಾಹಿತಿ ಸಿಗುತ್ತದೆ. ಜೊತೆಗೆ ಸೈಟ್‌ನಲ್ಲಿ ಅಥವಾ ಪ್ರಾಡಕ್ಟ್ಸ್ ಪೇಜ್‌ನಲ್ಲಿ ಕೊಟ್ಟಿರುವ ರೀಡರ್ಸ್‌ ಕಮೆಂಟ್‌ಗಳನ್ನೂ ಚೆನ್ನಾಗಿ ಓದಿ. ಅದರಿಂದಲೂ ಸೈಟ್‌ನ ವಿಶ್ವಸನೀಯತೆ ಬಗ್ಗೆ ತಿಳಿಯುತ್ತದೆ.

ಸೈಟ್‌ನ ಸೆಕ್ಯುರಿಟಿ ಸಿಸ್ಟಂ ಚೆಕ್‌ ಮಾಡಿ : ಆನ್‌ಲೈನ್‌ ಶಾಪಿಂಗ್‌ನಲ್ಲಿ ಸುರಕ್ಷತೆಯ ದೃಷ್ಟಿಯಲ್ಲಿ ವೆಬ್‌ಸೈಟ್‌ ನಿಂದ ಆರಂಭವಾಗಿದೆಯೋ ಎಂದು ನೋಡಿ.

ಕಾಪಿರೈಟ್‌ ಮಾರ್ಕ್‌ ನೋಡಿ : ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಕಾಪಿರೈಟ್‌ ಮಾರ್ಕ್‌ನ್ನು ಅಗತ್ಯವಾಗಿ ನೋಡಿ. ಕಾಪಿರೈಟ್‌ ಆ ವರ್ಷ ಅಥವಾ 1 ವರ್ಷಕ್ಕಿಂತ ಹೆಚ್ಚು ಹಳೆಯದಾಗಿರಬಾರದು. ವೆಬ್‌ಸೈಟ್‌ನಲ್ಲಿ ಕಸ್ಟಮರ್‌ ಕೇರ್‌ನ ನಂಬರ್‌ ಕೊಟ್ಟಿದೆಯೋ ಇಲ್ಲವೋ ಪರೀಕ್ಷಿಸಿ.

ಶಿಪ್ಪಿಂಗ್‌ ಆಫರ್‌ : ಹಲವು ಸೈಟ್‌ಗಳು ನಿಮಗೆ ಪ್ರಾಡಕ್ಟ್ಸ್ ಖರೀದಿಸಿದ ನಂತರ ಫ್ರೀ ಶಿಪ್ಪಿಂಗ್‌ನ ಸೌಲಭ್ಯ ಕೊಡುತ್ತವೆ. ಅದರಿಂದ ಪ್ರಾಡಕ್ಟ್ಸ್ ನ ಬೆಲೆ ಇನ್ನಷ್ಟು ಕಡಿಮೆಯಾಗುತ್ತದೆ. ಒಂದುವೇಳೆ ಫ್ರೀ ಶಿಪ್ಪಿಂಗ್‌ ಇಲ್ಲದಿದ್ದರೆ ಯಾವಾಗಲೂ ಪ್ರಾಡಕ್ಟ್ಸ್ ನ ಬೆಲೆಯನ್ನು ಶಿಪ್ಪಿಂಗ್‌ ಚಾರ್ಜ್‌ ಸೇರಿಸಿ ನೋಡಿ. ಏಕೆಂದರೆ ಶಿಪ್ಪಿಂಗ್‌ ಖರ್ಚು ಕೂಡ ನೀವೇ ತೆರಬೇಕಾಗುತ್ತದೆ.

ಫೇಸ್‌ಬುಕ್‌ ಮೂಲಕ ಸೇರಿಕೊಳ್ಳಿ : ಹಲವು ವೆಬ್‌ಸೈಟ್‌ಗಳು ಫೇಸ್‌ಬುಕ್‌ನಲ್ಲಿ ತಮ್ಮ ಪೇಜ್‌ ಮಾಡಿಕೊಂಡಿದ್ದು ನೀವು ಆ ಪೇಜ್‌ನ್ನು ಲೈಕ್‌ ಮಾಡಿದರೆ ಆನ್‌ಲೈನ್‌ ಸೇಲ್‌ ಶುರು ಆಗಿದ್ದರೆ ಅಥವಾ ಆ ಸೈಟ್‌ಗಳಲ್ಲಿ ಯಾವುದಾದರೂ ಸ್ಪೆಶಲ್ ಆಫರ್‌ ಇದ್ದರೆ ಅವರು ತಮ್ಮ ಡೀಲ್ ಮಾಹಿತಿಯನ್ನು ನಿಮ್ಮ ಫೇಸ್‌ಬಕ್‌ ಅಕೌಂಟ್‌ನಲ್ಲಿ ಅಗತ್ಯವಾಗಿ ಕೊಡುತ್ತಾರೆ. ಆದ್ದರಿಂದ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಮೂಲಕ ಆಕರ್ಷಕ ಆಫರ್‌ ಹೊಂದಿ.

ಕ್ರೆಡಿಟ್‌ ಕಾರ್ಡ್‌ : ಹಲವಾರು ವೆಬ್‌ಸೈಟ್‌ಗಳು ವಿಶೇಷ ಕ್ರೆಡಿಟ್‌ ಕಾರ್ಡ್‌ ಖರೀದಿಸಿದಾಗ ಹೆಚ್ಚು ರಿಯಾಯಿತಿ ಅಥವಾ ಕ್ಯಾಶ್‌ಬ್ಯಾಕ್‌ನ ಆಫರ್‌ ಕೊಡುತ್ತವೆ. ಅದರ ಲಾಭ ಪಡೆಯಿರಿ.

ಆನ್‌ಲೈನ್‌ ಟ್ರ್ಯಾನ್ಸಾಕ್ಷನ್‌ : ಯಾವಾಗಲೂ ನಿಮ್ಮ ಶಾಪಿಂಗ್‌ನ್ನು ಹೊಸ  ಬ್ರೌಸರ್‌ ವಿಂಡೋನಲ್ಲೇ ಮಾಡಿ. ಹೀಗೆ ನಿಮ್ಮ ಆನ್‌ಲೈನ್‌ ಟ್ರಾನ್ಸಾಕ್ಷನ್‌ ಹೆಚ್ಚು ಸುರಕ್ಷಿತವಾಗಿರುತ್ತದೆ. ಆನ್‌ಲೈನ್‌ ಟ್ರಾನ್ಸಾಕ್ಷನ್‌ ಮಾಡುವ ಹಾಗಿದ್ದರೆ ನಿಮ್ಮ ಕ್ರೆಡಿಟ್‌ ಕಾರ್ಡ್‌ ಮತ್ತು ನೆಟ್‌ ಬ್ಯಾಂಕಿಂಗ್‌ನ ಪಾಸ್‌ವರ್ಡ್‌ನ್ನು ಆಗಾಗ್ಗೆ  ಬದಲಿಸುತ್ತಿರಿ.

ಹೊಸ ಇಮೇಲ್‌ ಅಡ್ರೆಸ್‌ ಮಾಡಿಕೊಳ್ಳಿ

ಅನೇಕ ಶಾಪಿಂಗ್‌ ವೆಬ್‌ಸೈಟ್‌ಗಳು ನಿಮಗೆ ತಮ್ಮ ದಿನನಿತ್ಯದ ಡೀಲ್‌ಗಳನ್ನು ಆಫರ್‌ ಮಾಡುತ್ತವೆ. ಅದಕ್ಕೆ ಇಮೇಲ್‌ ಮೂಲಕ ಅವುಗಳ ಸದಸ್ಯತ್ವ ಪಡೆಯಬೇಕು. ನಂತರ ಅವರು ದಿನ ನಿಮಗೆ ತಮ್ಮ ಬೆಸ್ಟ್ ಡೀಲ್‌ನೊಂದಿಗೆ ಪ್ರಮೋಶನ್‌ ಮೆಟೀರಿಯಲ್ ಕೂಡ ಕಳಿಸುತ್ತವೆ. ಅದರಿಂದ ನಿಮ್ಮ ಇಮೇಲ್ ಬಾಕ್ಸ್ ಪೂರ್ತಿ ತುಂಬಿಹೋಗುತ್ತದೆ. ಹೀಗಾಗಿ ಸದಸ್ಯತ್ವವನ್ನು ಬೇರೊಂದು ಹೊಸ ಮೇಲ್‌ನಲ್ಲಿ ತೆಗೆದುಕೊಳ್ಳಿ. ಏಕೆಂದರೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮೇಲ್ ಯಾವಾಗಲೂ ತುಂಬಿರಬಾರದು.

ಡೆಲಿವರಿ ಪಡೆಯುವಾಗ ಎಚ್ಚರದಿಂದಿರಿ :  ಇತ್ತೀಚೆಗೆ ನಡೆದ ಒಂದು ಘಟನೆಯಲ್ಲಿ ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಲಾಯಿತು. ಪಾರ್ಸೆಲ್‌ ತೆರೆದಾಗ ಅದರಲ್ಲಿ 2 ದೊಡ್ಡ ದೊಡ್ಡ ಕಲ್ಲುಗಳು ಇದ್ದವು. ಒಬ್ಬ ವ್ಯಕ್ತಿ ಶೂಸ್‌ಗೆ ಆರ್ಡರ್‌ ಮಾಡಿದ್ದರು. ಪಾರ್ಸೆಲ್‌ ಬಿಚ್ಚಿದಾಗ ಶೂಸ್‌ಗೆ ಮಣ್ಣು ಮೆತ್ತಿಕೊಂಡಿತ್ತು. ಅಂದರೆ  ಯೂಸ್‌ ಮಾಡಿದ ಶೂಸ್‌ ಕಳಿಸಲಾಗಿತ್ತು. ಆದ್ದರಿಂದ ಡೆಲಿವರಿ ಬಾಯ್‌ನನ್ನು ಕೂಡಲೇ ಕಳಿಸದೆ ಅವನ ಎದುರಿಗೇ ಪ್ಯಾಕೆಟ್‌ ಬಿಚ್ಚಿ ಪರೀಕ್ಷಿಸಿ. ಒಂದು ವೇಳೆ ಏನಾದರೂ ತೊಂದರೆ ಕಂಡುಬಂದರೆ ಆ ಡೆಲಿವರಿ ಬಾಯ್‌ ಎದುರಿಗೆ ಆ ವಸ್ತುವಿನ ಸ್ನ್ಯಾಪ್‌ಶಾಟ್‌ ತೆಗೆದು ವೀಡಿಯೋ ಮಾಡಿಕೊಳ್ಳಿ. ನೀವು ಆ ವಸ್ತುವಿನ ಕ್ಲೇಮ್ ಮಾಡುವಾಗ ನಿಮ್ಮ ಕೇಸ್‌ಗೆ ಶಕ್ತಿ ದೊರೆತಂತಾಗುತ್ತದೆ.

ಆನ್‌ಲೈನ್‌ ಅಭಿಪ್ರಾಯ ಓದಿ : ಯಾವುದೇ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಮಾಹಿತಿ ಕೊಡುವ ಮೊದಲು ಅದರ ಬಗ್ಗೆ ಜನರ ಅಭಿಪ್ರಾಯವನ್ನು ಅಗತ್ಯವಾಗಿ ಓದಿ.

ಕಂಪನಿಯ ಷರತ್ತುಗಳ ಬಗ್ಗೆ ಗಮನಿಸಿ : ಶಾಪಿಂಗ್‌ ವೆಬ್‌ಸೈಟ್‌ 500 ರೂ.ಗಿಂತ ಹೆಚ್ಚು ಖರೀದಿಗೆ ಫ್ರೀ ಡೆಲಿವರಿ ಕೊಡುತ್ತಾರೆ. ಅದನ್ನೂ ಕಸ್ಟಮರ್‌ ದೊಡ್ಡ ಸೌಲಭ್ಯದ ರೂಪದಲ್ಲಿ ನೋಡುತ್ತಾರೆ. ಆದರೆ ಒಮ್ಮೊಮ್ಮೆ ಫ್ರೀ ಡೆಲಿವರಿಯೊಂದಿಗೆ ಷರತ್ತುಗಳು ಬರೆಯಲ್ಪಟ್ಟಿರುತ್ತವೆ. ಅದಕ್ಕೆ ಗ್ರಾಹಕರು ಗಮನ ಕೊಡುವುದಿಲ್ಲ. ನೋಡಿದರೂ ಓದುವುದಿಲ್ಲ. ಅದರಿಂದಾಗಿ ಅನ್ಯಾಯವಾಗಿ ಹೆಚ್ಚು ಹಣ ತೆರಬೇಕಾಗುತ್ತದೆ. ಗ್ರಾಹಕರನ್ನು ಮರುಳು ಮಾಡಲು ಈ ದರಗಳ ಬಗ್ಗೆ ಮೊದಲು ಹೇಳಿರುವುದಿಲ್ಲ. ಕಂಪನಿಗಳು ವಾರಂಟಿ ಕೊಡುತ್ತಿದ್ದಾರೆಯೇ ಇಲ್ಲವೇ ಎಂದು ಸಹ ತಿಳಿದುಕೊಳ್ಳಿ.

– ಶೀಲಾ ಸಮರ್ಥ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ