ಸಂಜೆಯ ಪಾರ್ಟಿ ಇರಲಿ, ಫ್ರೆಂಡ್ಸ್ ಜೊತೆ ಹೊರಗಿನ ಸುತ್ತಾಟವಿರಲಿ, ಸನ್ಶೈನ್ ಮೇಕಪ್ ಎಲ್ಲ ಸಂದರ್ಭಕ್ಕೂ ಫಿಟ್. ಈ ಲುಕ್ಸ್ ಶಿಮರಿ ಆಗಿದ್ದರೂ ಸಾಕಷ್ಟು ಸಮ್ಮರಿ ಅಂದ್ರೆ ಕೂಲ್ ಆಗಿರುತ್ತದೆ. ಹಾಗಿದ್ದರೆ ಇನ್ನೇಕೆ ತಡ? ಓಲ್ಡ್ ಲುಕ್ಸ್ ಗೆ ಬೈ ಬೈ ಹೇಳಿ, ಸನ್ ಶೇಡ್ಸ್ ಜೊತೆ ಲುಕ್ಸ್ ನಲ್ಲಿ ಪ್ರಯೋಗ ಮಾಡಲು, ಬೇಸಿಗೆಗೆ ಹಾಯ್ ಹೇಳಿ, ದೋಸ್ತಿ ಮಾಡಿಕೊಳ್ಳಿ.
ಎಲ್ಲಕ್ಕೂ ಮೊದಲು ಬೇಸ್ನಿಂದ ಶುರು ಮಾಡಿ. ಈ ಸೀಸನ್ನಲ್ಲಿ ಕೇವಲ ಪೌಡರ್ ಬೇಸ್ಡ್ ಬೇಸ್ನಷ್ಟೇ ಬಳಸಬೇಕು. ಹಾಗೆ ಮಾಡುವುದರಿಂದ ಬೆವರು ಕಡಿಮೆ ಆಗುತ್ತದೆ. ಮೇಕಪ್ ಬಹಳ ಕಾಲ ಉಳಿಯುತ್ತದೆ. ಇದಕ್ಕಾಗಿ ನೀವು ಗೋಲ್ಡನ್ ಟಿಂಟ್ಯುಕ್ತ ಶಿಮರಿ ಪ್ಯಾನ್ ಕೇಕ್ನ್ನು ಬಳಸಬೇಕು. ಇದರಿಂದ ಮುಖದ ಮೇಲೆ ಮ್ಯಾಟ್ ಶಿಮರಿ ಲುಕ್ಸ್ ಕಂಡುಬರುತ್ತದೆ.
ಸಮ್ಮರ್ನಲ್ಲಿ ಹೀಟ್ ಸ್ವೆಟ್ ಕಾರಣ, ಇಡೀ ದಿನ ನಾವೆಲ್ಲರೂ ಸಿಂಪಲ್ ನೋ ಮೇಕಪ್ ಲುಕ್ಸ್ ನಲ್ಲಿ ಇರಬಯಸುತ್ತೇವೆ. ಹಾಗಿರುವಾಗ ಸಂಜೆ ನಂತರ ಆಕರ್ಷಕ ಶೈನ್ ಬರುವಂತೆ ಮೇಕಪ್ ಮಾಡಬಾರದೇಕೆ?
ಮೇಕಪ್ ಹೆಚ್ಚು ಹೊತ್ತು ಉಳಿಯಲು ಐ ಮೇಕಪ್ಗಾಗಿ ಯೆಲ್ಲೋ ಕಲರ್ನ ಶೈನಿ ಐ ಶ್ಯಾಡೋವನ್ನು ಕಂಗಳ ಒಳ ಭಾಗದಲ್ಲಿ ಹಚ್ಚಬೇಕು. ಮಧ್ಯದ ಮತ್ತು ಹೊರಭಾಗಗಳಿಗೆ ಜೂಸಿ ಗ್ಲಾಸಿ ಆರೆಂಜ್ ಶೇಡ್ನಿಂದ ಫಿಲ್ ಮಾಡಿ. ಐ ಮೇಕಪ್ಗೆ ಲಾಂಗ್ ಲಾಸ್ಟಿಂಗ್ ಎಫೆಕ್ಟ್ ನೀಡಲು ಐ ಶ್ಯಾಡೋ ಹಚ್ಚುವ ಮೊದಲು ಕಂಗಳ ಮೇಲೆ ಐ ಪ್ರೈಮರ್ ಸಹ ಹಚ್ಚಬಹುದು. ಇದರ ನೆರವಿನಿಂದ ಮೇಕಪ್ ಬಹಳ ಹೊತ್ತು ಉಳಿಯುತ್ತದೆ ಮತ್ತು ಐ ಶ್ಯಾಡೋ ಕಲರ್ಸ್ ಸಹ ಇಂಟೆನ್ಸ್ ಆಗಿರುತ್ತದೆ.
ಈಗ ಐ ಡೂಗೆ ಪರ್ಫೆಕ್ಟ್ ಫಿನಿಶ್ ನೀಡಲು ಐಲಿಡ್ ಮೇಲೆ ತೆಳು ಲೈನರ್ ಎಳೆಯಿರಿ ಮತ್ತು ಹುಬ್ಬುಗಳನ್ನು ಮಸ್ಕರಾದ ಕೋಟ್ಸ್ ನಿಂದ ಮರ್ಜ್ ಮಾಡಿ. ತುಟಿಗಳಿಗೆ ಸನ್ ಎಫೆಕ್ಟ್ ನೀಡಲು ಅವನ್ನು ಆರೆಂಜ್ ಲಿಪ್ಶೇಡ್ಸ್ ನಿಂದ ಸೀಲ್ ಮಾಡಿಬಿಡಿ.
ಖಂಡಿತಾ ಇದು ಸನ್ಸೆಟ್ ಲುಕ್ ನೀಡುತ್ತದೆ, ಆದರೆ ಇದರ ಹೊರತಾಗಿಯೂ ಸಮ್ಮರ್ನಲ್ಲಿ ಮುಖದಲ್ಲಿ ಬೆವರುವಿಕೆ ಸಾಧಾರಣ ವಿಷಯವಾಗಿದೆ. ಇದರಿಂದ ಪಾರಾಗಲು ಕೇವಲ ವಾಟರ್ಪ್ರೂಫ್ ವಾಟರ್ ರೆಸಿಸ್ಟಿಂಗ್ ಪ್ರಾಡಕ್ಟ್ಸ್ ನ್ನೇ ಬಳಸಬೇಕು.
ಇಷ್ಟು ಮಾತ್ರವಲ್ಲದೆ ವಾರದಲ್ಲಿ 2 ಸಲ ಸ್ಕ್ರಬ್ ಮಾಡಿಸಬೇಕು. ಇದಕ್ಕಾಗಿ ತರಿತರಿಯಾಗಿ ರುಬ್ಬಿಕೊಂಡ ಮಸೂರ್ದಾಲ್, ಆರೆಂಜ್ ಪೀಲ್ ಪೌಡರ್, ಮುಲ್ತಾನಿ ಮಿಟ್ಟಿ, ಜವೆಗೋಧಿಯ ಹಿಟ್ಟುಗಳನ್ನು ಕಾಯಿಸದ ಹಸುವಿನ ಹಾಲಿನಲ್ಲಿ ಬೆರೆಸಿ ಅಗತ್ಯವಿರುವ ಕಡೆ ಮೈಕೈಗೆ ಹಚ್ಚಬೇಕು. ಇದು ಚೆನ್ನಾಗಿ ಒಣಗಿದ ನಂತರ, ತಣ್ಣೀರಿನಲ್ಲಿ ತೊಳೆಯಿರಿ. ಈ ಹರ್ಬ್ ಸ್ಕ್ರಬ್ನಲ್ಲಿ ಆರೆಂಜ್ ಪೀಲ್ ಬದಲು ಮೂಸಂಬಿ, ನಿಂಬೆ ಸಿಪ್ಪೆಯ ಪುಡಿ ಸಹ ಬಳಸಬಹುದು.
ಇಷ್ಟಾದರೂ ಬೆವರು ಹೆಚ್ಚಿದ್ದರೆ, ಟಚ್ಅಪ್ಗಾಗಿ ಕರ್ಚೀಫ್ ಅಥವಾ ಟಿಶ್ಯು ಪೇಪರ್ನಿಂದ ಥಪಥಪನೆ ತಟ್ಟಿ ಒಣಗಿಸಿ. ಜೊತೆಗೆ ಟೂವೇ ಕೇಕ್ನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಅಗತ್ಯ ಬಂದಾಗ ಇದರಿಂದ ಟಚ್ಅಪ್ ನೀಡುತ್ತಿರಿ. ಇತ್ತೀಚೆಗೆ ಮಾರ್ಕೆಟ್ನಲ್ಲಿ ಹಲವು ಬಗೆಯ ರೀಫ್ರೆಶಿಂಗ್ ಸ್ಪ್ರೇ ಲಭ್ಯವಿವೆ. ಇವು ಒಂದು ಕ್ಷಣದಲ್ಲಿ ನಿಮ್ಮ ಆಯಾಸ ದೂರ ಮಾಡಿ, ನಿಮ್ಮನ್ನು ತಕ್ಷಣ ರೀಫ್ರೆಶ್ ಮಾಡುತ್ತವೆ. ನೀವು ವಾಟರ್ಪ್ರೂಫ್ ಮೇಕಪ್ ಮಾಡಿದ್ದರೆ, ದೂರದಿಂದ ಈ ಸ್ಪ್ರೇ ಸಿಂಪಡಿಸಿ, ಒಣಗಲು ಬಿಡಿ. ಇದರಿಂದ ನೀವು ಸಾಕಷ್ಟು ಕೂಲ್ ರೀಫ್ರೆಶ್ ಆಗಿ ಕಂಗೊಳಿಸುವಿರಿ.
ಸಮ್ಮರ್ ಸ್ಕಿನ್ ಕೇರ್ ಟಿಪ್ಸ್
ಸನ್ಶೈನ್ ಮೇಕಪ್ ಟಿಪ್ಸ್ ಅನುಸರಿಸಿ ನೀವು ಸಮ್ಮರ್ ದೀವಾ ಆಗುವಿರಿ, ಸರಿ. ಆದರೆ ಈ ಉರಿಬಿಸಿಲಲ್ಲಿ ತೊಟ್ಟಿಕ್ಕುವ ಬೆವರಿನಿಂದ ಮೇಕಪ್ ರಕ್ಷಿಸಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಇಲ್ಲಿ ಕೆಲವು ಸಲಹೆಗಳನ್ನು ಕೊಡಲಾಗಿದೆ. ಅದರ ನೆರವಿನಿಂದ ನಿಮ್ಮ ಮೇಕಪ್ ಸುದೀರ್ಘ ಬಾಳಿಕೆ ಬರುತ್ತದೆ :
– ಬೇಸಿಗೆಯಲ್ಲಿ ಫೇಸ್ ಕ್ಲೀನಿಂಗ್ಗಾಗಿ ಡೀಪ್ ಪೋರ್ ಫೇಸ್ ವಾಶ್ ಬಳಸಬೇಕು, ಆಗ ಮಾತ್ರ ಸ್ಕಿನ್ ಡೀಪ್ ಕ್ಲೀನ್ ಆಗುತ್ತದೆ.
– ಸೆಕೆಂಡ್ ಸ್ಟೆಪ್ ಅಂದ್ರೆ ಟೋನಿಂಗ್ನಿಂದ ಪೋರ್ಸ್ ಬಂದ್ ಆಗುತ್ತವೆ. ಆಗ ಅದರಿಂದ ಬೆವರು ಬರುವುದಿಲ್ಲ. ಟೋನಿಂಗ್ಗಾಗಿ ಆ್ಯಸ್ಟ್ರಿಂಜೆಂಟ್ ಬಳಸುವುದು ಲೇಸು. ಆಲ್ಕೋಹಾಲ್ ಯುಕ್ತ ಈ ಪ್ರಾಡಕ್ಟ್ ಮುಖಕ್ಕೆ ಹೆಚ್ಚಿನ ಕೂಲ್ ರೀಫ್ರೆಶಿಂಗ್ ಅನುಭವ ನೀಡುತ್ತದೆ. ಜೊತೆಗೆ ತ್ವಚೆಯಿಂದ ಅಧಿಕ ತೈಲಾಂಶವಿದ್ದರೆ, ಅದನ್ನೂ ಕಡಿಮೆ ಮಾಡುತ್ತದೆ. ಪೋರ್ಸ್ನ್ನು ಮಿನಿಮೈಸ್ ಮಾಡಲು, ನೀವು ಮುಖಕ್ಕೆ ಕೋಲ್ಡ್ ಕಂಪ್ರೆಶನ್ ನೀಡಬಹುದು. ಇದಕ್ಕಾಗಿ ಸಾಫ್ಟ್ ಮಖಮಲ್ ಬಟ್ಟೆಯಲ್ಲಿ ಐಸ್ ತುಂಡನ್ನು ಸುತ್ತಿಕೊಂಡು ಫೇಸ್ಗೆ ಮಸಾಜ್ ನೀಡಬೇಕು. ಹೀಗೆ ಮಾಡುವುದರಿಂದಲೂ ಪೋರ್ಸ್ ಕ್ಲೋಸ್ ಆಗುತ್ತವೆ.
– ಸಮ್ಮರ್ನಲ್ಲಿ ತ್ವಚೆಯಿಂದ ತೈಲಾಂಶ ತೊಟ್ಟಿಕ್ಕುತ್ತದೆ, ಎಂಬುದರ ಕುರಿತಾಗಿಯೇ ಚಿಂತಿಸುತ್ತಾ ಎಷ್ಟೋ ಮಹಿಳೆಯರು ತ್ವಚೆಗೆ ಮಾಯಿಶ್ಚರೈಸರ್ ಬಳಸುವುದೇ ಇಲ್ಲ. ಚರ್ಮಕ್ಕೆ ಈ ತೈಲ ಮಾತ್ರವಲ್ಲದೆ, ಆರ್ದ್ರತೆಯ ಅಗತ್ಯ ಇದೆ. ಹೀಗಾಗಿ ಈ ಕೊರತೆಯನ್ನು ನೀಗಿಸಲು ಮುಖಕ್ಕೆ ಜೆಲ್ ಬೇಸ್ಡ್ ಮಾಯಿಶ್ಚರೈಸರ್ ಹಚ್ಚಬೇಕು. ಅಷ್ಟು ಮಾತ್ರವಲ್ಲದೆ ಸ್ಕಿನ್ನ್ನು ಹೈಡ್ರೇಟ್ಗೊಳಿಸಲು ಆ್ಯಲೋವೆರಾ ಜೆಲ್ ಸಹ ಹಚ್ಚಬಹುದು. ಇದು ಚರ್ಮವನ್ನು ಬಹಳ ಫ್ರೆಶ್ಗೊಳಿಸಿ, ಮುಖಕ್ಕೆ ಫೇರ್ನೆಸ್ ಬ್ರೈಟ್ನೆಸ್ ತರುತ್ತದೆ. ಜೊತೆಗೆ ಚರ್ಮದ ಮೇಲೆ ಸನ್ ಪ್ರೊಟೆಕ್ಷನ್ನ ಕೆಲಸವನ್ನೂ ಮಾಡುತ್ತದೆ.
ಸನ್ಸ್ಕ್ರೀನ್ ಬಳಸುವ ಸರಿಯಾ ದ ವಿಧಾನ
– ಬೇಸಿಗೆ, ಮಳೆಗಾಲ ಏನೇ ಇರಲಿ…. ನೀವು ಬಿಸಿಲಲ್ಲಿ ಕಾಲಿಟ್ಟ ತಕ್ಷಣ ಸೂರ್ಯನ ಹಾನಿಕಾರಕ ಕಿರಣಗಳು ತ್ವಚೆಗೆ ಹಾನಿ ಮಾಡದೆ ಇರದು. ಹೀಗಾಗಿ ಚರ್ಮವನ್ನು ರಕ್ಷಿಸಿಕೊಳ್ಳಲು SPF ಈ PH ಫ್ಯಾಕ್ಚರ್ಯುಕ್ತ ಸನ್ಸ್ಕ್ರೀನ್ ಲೋಶನ್ ಬಳಸಲೇಬೇಕು. ಇದು ಸೂರ್ಯನ ಎರಡೂ ಬಗೆಯ ಕಿರಣಗಳಿಂದ ರಕ್ಷಿಸುತ್ತದೆ. ಮೇಕಪ್ ಮಾಡಿಕೊಳ್ಳುವ 10 ನಿಮಿಷದ ಮೊದಲು ಅಗತ್ಯಾಗಿ ಸನ್ಸ್ಕ್ರೀನ್ ಚರ್ಮದಲ್ಲಿ ವಿಲೀನಗೊಳ್ಳುತ್ತದೆ.
ಮುಖದಿಂದ ಹೆಚ್ಚುವರಿ ತೈಲಾಂಶ ಹೊರತೆಗೆಯಲು ಫೇಸ್ಪ್ಯಾಕ್ ಬಳಸಬಹುದು. ಇದಕ್ಕಾಗಿ ಅರ್ಧ ಚಮಚ ಚಂದನ ಪುಡಿ, ಅರ್ಧ ಚಮಚ ಕ್ಯಾಲಮೈನ್ ಪೌಡರ್ಗೆ ಟೊಮೇಟೊ ಪೇಸ್ಟ್, ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ಹಚ್ಚುವುದರಿಂದ ಪೋರ್ಸ್ ಕ್ಲೋಸ್ ಆಗುತ್ತವೆ ಹಾಗೂ ಬೆವರು ಸಹ ಬರುದಿಲ್ಲ.
– ಗಿರಿಜಾ ಗೌಡ