ಹರ್ಬಲ್ ಕಾರ್ನ್
ಸಾಮಗ್ರಿ : 2 ಅಮೆರಿಕನ್ ಕಾರ್ನ್, 75 ಗ್ರಾಂ ಬೆಣ್ಣೆ, ಒಂದಿಷ್ಟು ಪಾರ್ಸ್ಲೆ, ಓರಿಗೆನೊ, ಬೆಸಿಲ್, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು.
ವಿಧಾನ : ಒಂದು ಬಟ್ಟಲಿಗೆ ಹೆಚ್ಚಿದ ಪಾರ್ಸ್ಲೆ, ಓರಿಗೆನೋ, ಬೆಸಿಲ್, ಉಪ್ಪು, ಮೆಣಸು ಸೇರಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕಾರ್ನ್ ಹಾಕಿ ಕೆದಕಬೇಕು. ಇದರ ಮೇಲೆ ರೆಡಿ ಇರುವ ಹರ್ಬ್ಸ್ ಹಾಕಿ, ಮಂದ ಉರಿಯಲ್ಲಿ ಕಾರ್ನ್ ಕೆದಕಬೇಕು. ಚಿತ್ರದಲ್ಲಿರುವಂತೆ ಅದರ ಮೇಲೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.
ಪೇರ್ ಪ್ಲೇಟ್
ಸಾಮಗ್ರಿ : 1 ಪೇರ್ ಹಣ್ಣು, ಅರ್ಧ ಕಪ್ ಮಿಕ್ಸ್ಡ್ ಫ್ರೂಟ್ ಜೂಸ್, 1 ಚಮಚ ನಿಂಬೆರಸ, 1 ಕಪ್ ಸೋಡ, ಅಗತ್ಯವಿದ್ದಷ್ಟು ಐಸ್‌ಕ್ಯೂಬ್ಸ್.
ವಿಧಾನ : ಪೇರ್ ಹಣ್ಣನ್ನು ತೆಳು ಸ್ಲೈಸ್ ಮಾಡಿ 5 ನಿಮಿಷ ಫ್ರೀಝರ್‌ನಲ್ಲಿಡಿ. ಒಂದು ಗ್ಲಾಸ್‌ಗೆ ಮೊದಲು ಮಿಕ್ಸ್ಡ್ ಫ್ರೂಟ್ ಜೂಸ್ ಹಾಕಿಡಿ. ನಂತರ ಇದನ್ನು ಐಸ್ ಕ್ಯೂಬ್ಸ್ ನಿಂದ ತುಂಬಿಸಿ. ಆಮೇಲೆ ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಪೇರ್ ಸ್ಲೈಸ್ ತೇಲಿಬಿಡಿ. ಸೋಡ ಬೆರೆಸಿ ಚಿಲ್ ಸರ್ವ್ ಮಾಡಿ.
ಬ್ರೌನಿ ಟ್ರಫ್
ಸಾಮಗ್ರಿ : 30 ಗ್ರಾಂ ಬ್ರೌನಿ ವಾಲ್‌ನಟ್, 10 ಗ್ರಾಂ ಚಾಕಲೇಟ್, 1 ಚಮಚ ಕ್ರೀಂ, 25 ಗ್ರಾಂ ವೆನಿಲಾ ಐಸ್ ಕ್ರೀಂ.
ವಿಧಾನ : ಚಾಕಲೇಟ್ ಕ್ರೀಂ ಬೆರೆಸಿ ಸ್ಮೂದ್ ಚಾಕಲೇಟ್ ಸಾಸ್ ತಯಾರಿಸಿ. ಬ್ರೌನಿ ವಾಲ್‌ನಟ್ ಸಣ್ಣದಾಗಿ ತುಂಡರಿಸಿ. ಒಂದು ಪುಡಿಂಗ್ ಗ್ಲಾಸ್‌ಗೆ ತುಸು ಬ್ರೌನಿ ತುಂಡು ಹಾಕಿಡಿ. ಇದರ ಮೇಲೆ ಒಂದು ಸ್ಕೂಪ್ ವೆನಿಲಾ ಐಸ್ ಕ್ರೀಂ ಹಾಕಿ, ಚಾಕಲೇಟ್ ಸಾಸ್‌ನಿಂದ ಟಾಪಿಂಗ್ ಮಾಡಿ. ಮತ್ತೊಮ್ಮೆ ಇದೇ ತರಹ ಪದರ ಬರುವಂತೆ ಮಾಡಿ, ಚಾಕಲೇಟ್ ಸಾಸ್‌ನಿಂದ ಕವರ್ ಮಾಡಿ ಸವಿಯಿರಿ.
ಬೆಲ್ಜಿಯಂ ವೇಫ್ಸ್
ಸಾಮಗ್ರಿ : 150 ಗ್ರಾಂ ಗೋಧಿಹಿಟ್ಟು, 50 ಗ್ರಾಂ ಮೈದಾ, 2 ಮೊಟ್ಟೆ, ಅರ್ಧ ಸಣ್ಣ ಚಮಚ ಬೇಕಿಂಗ್ ಪೌಡರ್, 1 ಕಪ್ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಉಪ್ಪು, ಎಸೆನ್ಸ್ ಅಗತ್ಯವಿದ್ದಷ್ಟು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಬೀಟ್ ಮಾಡಿಕೊಳ್ಳಿ. ಇದಕ್ಕೆ ಸಕ್ಕರೆ, ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು, ಮೈದಾ, ತುಸು ಎಣ್ಣೆ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ತುಸು ಹಾಲು, ವೆನಿಲಾ ಎಸೆನ್ಸ್ ಬೆರೆಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಈಗ ವೇಫ್ ಟ್ರೇಗೆ (ರೆಡಿಮೇಡ್ ಲಭ್ಯ) ಜಿಡ್ಡು ಸವರಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದನ್ನು ಹಿಟ್ಟಿಗೆ ಅದ್ದಿ, ಎಣ್ಣೆಯಲ್ಲಿ ಅದ್ದಬೇಕು. ಚಿತ್ರದಲ್ಲಿರುವಂತೆ ತಯಾರಾದ ವೇಫ್ಸ್ ಗೆ, ನಿಮ್ಮ ಇಷ್ಟದ ಐಸ್‌ಕ್ರೀಂ ಹಾಕಿ ಸವಿಯಲು ಕೊಡಿ.
ಸ್ಟ್ರಾಬೆರಿ ಲಾಲಾ ಕೇಕ್
ಸಾಮಗ್ರಿ : ಬೆಣ್ಣೆ ಸಕ್ಕರೆ (ಅರ್ಧರ್ಧ ಕಪ್), 3 ಮೊಟ್ಟೆ, ಅಗತ್ಯವಿದ್ದಷ್ಟು ಸ್ಟ್ರಾಬೆರಿ ಐಸ್‌ಕ್ರೀಂ, 100 ಗ್ರಾಂ ಮೈದಾ, 2-3 ಹನಿ ವೆನಿಲಾ ಎಸೆನ್ಸ್, 25 ಗ್ರಾಂ ಸ್ಟ್ರಾಬೆರಿ ಜ್ಯಾಂ, ತುಸು ಉಪ್ಪು.
ವಿಧಾನ : ಒಂದು ಬಟ್ಟಲಿಗೆ ಮೈದಾ, ಉಪ್ಪು ಸೇರಿಸಿ. ಇದಕ್ಕೆ ಒಡೆದು ಬೀಟ್ ಮಾಡಿದ ಮೊಟ್ಟೆ, ಸಕ್ಕರೆ, ಸ್ಟ್ರಾಬೆರಿ ಐಸ್‌ಕ್ರೀಂ ಹಾಕಿ ಚೆನ್ನಾಗಿ ಕ್ರೀಮೀ ಆಗುವಂತೆ ಗೊಟಾಯಿಸಿ. ನಂತರ ವೆನಿಲಾ ಎಸೆನ್ಸ್ ಬೆರೆಸಬೇಕು. ಕೇಕ್ ಟಿನ್‌ಗೆ ಜಿಡ್ಡು ಸವರಿ, ತಯಾರಾದ ಈ ಮಿಶ್ರಣ, ಮೇಲೆ ಸ್ಟ್ರಾಬೆರಿ ಜ್ಯಾಂ, ಅದರ ಮೇಲೆ ಉಳಿದ ಮಿಶ್ರಣ ಹಾಕಿ 180 ಡಿಗ್ರಿ ಶಾಖದಲ್ಲಿ ಪ್ರೀಹೀಟೆಡ್ ಓವನ್ನಿನಲ್ಲಿರಿಸಿ 10 ನಿಮಿಷ ಬೇಕ್ ಮಾಡಿ. ಇದನ್ನು ಹೊರತೆಗೆದು ಆರಿದ ನಂತರ, ಸ್ಟ್ರಾಬೆರಿ ಜ್ಯಾಮಿನಿಂದ ಗಾರ್ನಿಶ್ ಮಾಡಿ ಸವಿಯಲು ಕೊಡಿ.
ಪೀಚ್ ಜಿಂಜರ್ ಮೋಜಿಟೋ
ಸಾಮಗ್ರಿ : 1-1 ಚಮಚ ನಿಂಬೆ ಕುಸುಮೆ, ಕೆಸ್ಟರ್ ಶುಗರ್, ಒಂದಿಷ್ಟು ಹೆಚ್ಚಿನ ಪುದೀನಾ, ಶುಂಠಿ, 2 ಸಣ್ಣ ಚಮಚ ಶುಂಠಿರಸ, 100 ಗ್ರಾಂ ಪೀಚ್ ಹಣ್ಣಿನ ಚೂರು, 1 ಗ್ಲಾಸ್ ಸೋಡ, ಒಂದಿಷ್ಟು ಕ್ರಶ್ಡ್ ಐಸ್.
ವಿಧಾನ : ನಿಂಬೆ ಕುಸುಮೆ, ಪೀಚ್ ತುಂಡು, ಕೆಸ್ಟರ್ ಶುಗರ್ ಬೆರೆಸಿಕೊಂಡು 15 ನಿಮಿಷ ಫ್ರಿಜ್‌ನಲ್ಲಿರಿಸಿ. ನಂತರ ಇದನ್ನು ಹೊರತೆಗೆದು ಇದಕ್ಕೆ ಶುಂಠಿ ರಸ ಬೆರೆಸಿಡಿ. ಒಂದು ಗ್ಲಾಸಿಗೆ ತಯಾರಾದ ಈ ಮಿಶ್ರಣ, ಕ್ರಶ್ಡ್ ಐಸ್, ಪುದೀನಾ ಸೇರಿಸಿ. ನಂತರ ಸೋಡ ಬೆರೆಸಿ ತಕ್ಷಣ ಸವಿಯಲು ಕೊಡಿ.
ಮಿನಿ ಕ್ಯಾರಾಜೋನ್ಸ್
ಕಣಕದ ಸಾಮಗ್ರಿ : 300 ಗ್ರಾಂ ಮೈದಾ, ತುಸು ಯೀಸ್ಟ್, 2 ಚಮಚ ತುಪ್ಪ, ಅರ್ಧ ಕಪ್ ಮೊಸರು, ತುಸು ಬಿಸಿ ನೀರು, ಬೇಕಿಂಗ್ ಪೌಡರ್, ಉಪ್ಪು, ಸಕ್ಕರೆ.
ಹೂರಣದ ಸಾಮಗ್ರಿ : 1-2 ಈರುಳ್ಳಿ, ಟೊಮೇಟೊ, ಅಗತ್ಯವಿದ್ದಷ್ಟು ಬೆಸಿಲ್, ಓರಿಗೆನೊ, ಹಾಲು, ಎಣ್ಣೆ ಮಿಶ್ರಣ (ಬ್ರಶ್ಶಿಂಗ್‌ಗಾಗಿ), 100 ಗ್ರಾಂ ಮೊಜರೆಲಾ ಚೀಸ್.
ವಿಧಾನ : ಯೀಸ್ಟ್ ನ್ನು ಸ್ವಲ್ಪ ಹೊತ್ತು ಬಿಸಿ ನೀರಲ್ಲಿ ನೆನೆಹಾಕಿಡಿ. ಆಮೇಲೆ ಇದಕ್ಕೆ ಎಣ್ಣೆ, ಅರ್ಧದಷ್ಟು ಹಾಲು, ಮೊಸರು ಬೆರೆಸಿಕೊಳ್ಳಿ. ಒಂದು ಬಟ್ಟಲಿಗೆ ಮೈದಾ, ಉಪ್ಪು, ಬೇಕಿಂಗ್ ಪೌಡರ್ ಸೇರಿಸಿ. ಈ ಮಿಶ್ರಣಕ್ಕೆ ಉಳಿದ ಹಾಲು ಬೆರೆಸಿಕೊಳ್ಳಿ. ಇದನ್ನು 4 ತಾಸು ನೆನೆಹಾಕಿಡಿ. ನಂತರ ಹೂರಣದ ಸಾಮಗ್ರಿಯನ್ನು ಒಟ್ಟಿಗೆ ಕಲಸಿಕೊಳ್ಳಿ. ಆಮೇಲೆ ನೆನೆದ ಹಿಟ್ಟಿನಿಂದ ಸಣ್ಣ ಉಂಡೆ ಕಟ್ಟಿ, ಚಪಾತಿ ಲಟ್ಟಿಸಿ. ಅದರ ಮಧ್ಯೆ 2-3 ಚಮಚ ಹೂರಣ ತುಂಬಿಸಿ, ವಡೆಯ ತರಹ ತಟ್ಟಿಕೊಂಡು ಸೀಲ್ ಮಾಡಿ. ಇದನ್ನು 200 ಡಿಗ್ರಿ ಶಾಖದಲ್ಲಿ ಪ್ರೀಹೀಟೆಡ್ ಓವನ್ನಿನಲ್ಲಿ ಎಣ್ಣೆ, ಹಾಲಿನ ಬ್ರಶ್ಶಿಂಗ್ ಮಾಡಿದ ನಂತರ, ಹದನಾಗಿ ಬೇಕ್ ಮಾಡಿ. ಬಿಸಿಯಾಗಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಯಾನ್ ಬನ್
ಸಾಮಗ್ರಿ : 2-3 ಬನ್, 2 ಈರುಳ್ಳಿ, ಸಣ್ಣಗೆ ಹೆಚ್ಚಿದ ಇಟಾಲಿಯನ್ ಹರ್ಬ್ಸ್, 1-1 ಚಮಚ ತುರಿದ ಮೋಜರೆಲಾ ಚೀಸ್, ಪ್ಯಾರಮೀಶಿಯನ್ ಚೀಸ್, 2 ಚಮಚ ಕ್ರೀಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ಮಸ್ಟರ್ಡ್ ಸಾಸ್, ತುಸು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಮಿಕ್ಸ್ಡ್ ಹರ್ಬ್ಸ್, ಉಪ್ಪು, ಮೆಣಸು ಹಾಕಿ ಬಾಡಿಸಿ. ಬನ್ ಗುಂಡಗಿರುವಂತೆ 2 ಭಾಗ ಮಾಡಿ. ಒಂದರ ಒಳಭಾಗಕ್ಕೆ ಈ ಮಿಶ್ರಣ ಹರಡಿರಿ. ಇದರ ಮೇಲೆ ಟೊಮೇಟೊ ಸಾಸ್, ಮಸ್ಟರ್ಡ್ ಸಾಸ್ ಹಚ್ಚಿರಿ. ನಂತರ ಎರಡೂ ಬಗೆಯ ಚೀಸ್ ಉದುರಿಸಿ ಇದರ ಮೇಲೆ ಕ್ರೀಂ ಪದರ ಬರಲಿ. ಇದನ್ನು ಮತ್ತೊಂದು ಭಾಗದ ಬನ್‌ನಿಂದ ಕವರ್ ಮಾಡಿ, ಗ್ರಿಲ್ ಪ್ಯಾನ್‌ನಲ್ಲಿ ಚೀಸ್ ಕರಗುವವರೆಗೂ ಗ್ರಿಲ್ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.
ಸಿಹಿ ರವೆ ಪಡ್ಡು
ಸಾಮಗ್ರಿ : 1 ಕಪ್ ಸಣ್ಣ ರವೆ, ಅರ್ಧರ್ಧ ಕಪ್ ಸಕ್ಕರೆ, ಓಟ್ಸ್, ಮೊಸರು, 1 ಕಪ್ ಹಾಲು, 1 ಗಿಟುಕು ತೆಂಗಿನ ತುರಿ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು, ಬಿಳಿ ಎಳ್ಳು (ಒಟ್ಟಾಗಿ ಅರ್ಧ ಕಪ್), 4-5 ಚಮಚ ರೀಫೈಂಡ್ ಎಣ್ಣೆ, 1 ಸಣ್ಣ ಚಮಚ ಈನೋ ಫ್ರೂಟ್ ಸಾಲ್ಟ್.
ವಿಧಾನ : ರವೆಗೆ ಓಟ್ಸ್, ಮೊಸರು, ತೆಂಗಿನ ತುರಿ, ಹಾಲು, ಹುರಿದ ಎಳ್ಳು, ಈನೋಸಾಲ್ಟ್, ಡ್ರೈ ಫ್ರೂಟ್ಸ್, ಸಕ್ಕರೆ ಎಲ್ಲಾ ಸೇರಿಸಿ. ಇದನ್ನು ಅರ್ಧ ಗಂಟೆ ನೆನೆಯಲು ಬಿಡಿ. ಇದು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು. ಪಡ್ಡು ಪ್ಲೇಟ್‌ಗೆ ಎಣ್ಣೆ ಸವರಿ, ಎಲ್ಲದಕ್ಕೂ ಈ ಮಿಶ್ರಣವನ್ನು ಸಮನಾಗಿ ಹರಡಿರಿ. ಎಣ್ಣೆ ಅಥವಾ ತುಪ್ಪ ಹಾಕುತ್ತಾ ಈ ಪಡ್ಡುಗಳನ್ನು ಎರಡೂ ಬದಿ ಬೇಯಿಸಿ. ಇದೀಗ ಸಿಹಿ ರವೆ ಪಡ್ಡು ರೆಡಿ.
ಪನೀರ್ ಸಾಲ್ಸಾ ಕ್ರೋಸ್ಟಿನಿ
ಸಾಮಗ್ರಿ : 5-6 ಬ್ರೌನ್ ಬ್ರೆಡ್ ಸ್ಲೈಸ್, 250 ಗ್ರಾಂ ಪನೀರ್ ಸ್ಲೈಸ್, 150 ಗ್ರಾಂ ಹೆಚ್ಚಿದ ಟೊಮೇಟೊ, ಅಗತ್ಯವಿದ್ದಷ್ಟು ಬೆಣ್ಣೆ, ಟೊಮೇಟೊ ಸಾಸ್, ಹೆಚ್ಚಿದ ಪಾರ್ಸ್ಲೆ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು, ಖಾರ, ಸಕ್ಕರೆ.
ವಿಧಾನ : ಬ್ರೆಡ್ ಅಂಚು ಕತ್ತರಿಸಿ, ಬೆಣ್ಣೆ ಸವರಿ ಇದನ್ನು ಲಘುವಾಗಿ ಬಿಸಿ ಮಾಡಿ. ಬಾಕಿ ಉಳಿದ ಎಲ್ಲ ಪದಾರ್ಥ ಸೇರಿಸಿ ಬೇರೆಯಾಗಿ ಬಾಡಿಸಿ. ಕ್ಯಾಪ್ಸಿಕಂ, ಪಾರ್ಸ್ಲೆ, ಉಪ್ಪುಖಾರ, ಎಲ್ಲಾ ಹಾಕಿ ಕೆದಕಿ ಕೆಳಗಿಸಿ ಬ್ರೆಡ್ ಮೇಲೆ ಪನೀರ್ ಸ್ಲೈಸ್ ಬರಲಿ. ಅದರ ಮೇಲೆ ಈ ಮಿಶ್ರಣ ಹರಡಿ, ತಕ್ಷಣ ಸವಿಯಲು ಕೊಡಿ.
ಹರ್ಬ್ಡ್ ಸ್ಪೈಸ್ ಬೇಕ್ಡ್ ವೆಜೆಸ್
ಸಾಮಗ್ರಿ : 3-4 ಆಲೂಗಳ ಉದ್ದುದ್ದನೆ ಹೋಳು (ವೆಜೆಸ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಥೈಮ್, ಓರಿಗೆನೋ, ತುಸು ಪಾರ್ಸ್ಲೆ, ಆಲಿವೆ ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಆಲೂ ವೆಜೆಸ್ ಮತ್ತು ಉಳಿದ ಎಲ್ಲಾ ಪದಾರ್ಥ ಹಾಕಿ ಟಾಸ್ ಮಾಡಿ, ಚೆನ್ನಾಗಿ ನೆನೆಯಲು ಬಿಡಿ. ಜಿಡ್ಡು ಸವರಿದ ಬೇಕಿಂಗ್ ಟ್ರೇಗೆ ಇದನ್ನು ಜೋಡಿಸಿ, 180 ಡಿಗ್ರಿ ಪ್ರೀಹೀಟೆಡ್ ಓವನ್ನಿನಲ್ಲಿ ಬಿಸಿ ಮಾಡಿ. ಹೊರತೆಗೆದು ಪಾರ್ಸ್ಲೆಯಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.