ಲೇಡಿ ಡಾಕ್ಟರ್‌ : ಎಲ್ಲಿ ಮರಿ…. ಸ್ವಲ್ಪ ಆಳವಾಗಿ ಉಸಿರು ಎಳೆದುಕೋ… ಏನಾದರೂ ಫೀಲ್‌ ಮಾಡು.

ಹುಡುಗ : ಓ.ಕೆ. ಡಾಕ್ಟರ್‌

ಡಾಕ್ಟರ್‌ : ಏನಾದ್ರೂ ಫೀಲ್ ಆಯಿತೇ?

ಹುಡುಗ : ನಿಮ್ಮ ಡಿಯೋ ಸುವಾಸನೆ ಬಲು ಬೊಂಬಾಟ್‌ ಆಗಿದೆ ಮೇಡಂ!

ಯಾಕಾದರೂ ಅಂದು ಸ್ಲೀವ್ ಲೆ‌ಸ್‌ ಬ್ಲೌಸ್‌ ಧರಿಸಿ ಬಂದೆನೋ ಎಂದು ಡಾಕ್ಟರ್‌ ತಲೆ ಚಚ್ಚಿಕೊಂಡರಂತೆ!

ಆ ದಿನ ಗುಂಡ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಫೋನ್‌ ರಿಂಗಾಯಿತು. ಹೆಂಡತಿ ಫೋನ್‌ ಮಾಡಿದ್ದಳು. ಅವನಿಗೆ ಸಾರಿ ಹೇಳಿದಳು. ಬಹಳ ಬಿಕ್ಕಳಿಸುತ್ತಾ ಇದನ್ನು ಹೇಳಿದಳು, “ಇನ್ನು ಮುಂದೆ ನಿಮ್ಮೊಂದಿಗೆ ಎಂದೂ ಜಗಳ ಆಡುವುದಿಲ್ಲ. ನೀವು ಹೇಳಿದ ಎಲ್ಲಾ ಕೆಲಸವನ್ನೂ ಚಾಚೂ ತಪ್ಪದೆ ಮಾಡ್ತೀನಿ…. ಒಳ್ಳೆಯವಳಾಗಿ ಇರ್ತೀನಿ….”

ಇದನ್ನೆಲ್ಲ ಕೇಳಿ ಗುಂಡನಿಗೆ ಹೃದಯ ತುಂಬಿ ಬಂದಂತಾಯಿತು. ಆಮೇಲೆ ನೋಡುತ್ತಾನೆ…. ಅದು ಅವನ ಹೆಂಡತಿಯ ನಂಬರ್‌ ಅಲ್ಲ… ಧ್ವನಿಯಲ್ಲಿ ಎಂದೂ ಇಷ್ಟು ಸೌಮ್ಯತೆ ಇರಲಿಲ್ಲ… ಯಾರ ಹೆಂಡತಿಯೋ ಏನೋ? ರಾಂಗ್‌ ನಂಬರ್‌ ಇರಬೇಕು. ಆದರೆ ಅದನ್ನು ಕೇಳಿಸಿಕೊಂಡು ಅವನಿಗೆ ಬಹಳ ಖುಷಿ ಆಗಿದ್ದಂತೂ ನಿಜ!

ಅಮಿತ್‌ : ಗಂಡಸರ ಹೆಸರಿನ ಹಿಂದೆ ಚಿ. ಎಂದೇಕೆ ನಮೂದಿಸುತ್ತಾರೆ?

ಸುಮಿತ್‌ : ಏಕೆಂದರೆ ಆತ ಸದಾ ಚಿಂತಾಗ್ರಸ್ತ.

ಅಮಿತ್‌ : ಹೆಣ್ಣಿನ ಹೆಸರಿನ ಹಿಂದೆ ಅ.ಸೌ. ಎಂದೇಕೆ ನಮೂದಿಸುತ್ತಾರೆ?

ಸುಮಿತ್‌ : ಕೆಲವರು ಅದನ್ನು ಅಖಂಡ ಸೌಭಾಗ್ಯವತಿ ಎನ್ನುತ್ತಾರಾದರೂ ಅಷ್ಟಿಷ್ಟು ಸೌಜನ್ಯ ರೂಢಿಸಿಕೊಳ್ಳಲಿ ಎಂಬುದೇ ಒಳಾರ್ಥ!

ಒಮ್ಮೆ ಗುಂಡನ ಮನೆಗೆ ರಾತ್ರಿ ಕಳ್ಳ ಹೇಗೋ ನುಗ್ಗಿ ಬಂದಿದ್ದ. ದಢೂತಿ ಹೆಂಡತಿ ಗುಂಡಿಯ ನೆರವಿನಿಂದ ಗುಂಡ ಅವನನ್ನು ಸೆರೆಹಿಡಿದ. ಅವನು ತಪ್ಪಿಸಿಕೊಳ್ಳಬಾರದೆಂದು ಕಳ್ಳನ ಮೇಲೆ ಎಗರಿ ಕುಳಿತ ಗುಂಡಿ, “ಹೋಗ್ರಿ…. ಬೇಗ ಹೋಗಿ ಪೊಲೀಸರನ್ನು ಕರೆತನ್ನಿ!” ಎಂದಳು.

ಅದನ್ನು ಕೇಳಿಸಿಕೊಂಡು ಗುಂಡ ಅಲ್ಲಿ ಇಲ್ಲಿ ಹುಡುಕಾಡ ತೊಡಗಿದ.

ಗುಂಡಿ : ಏನ್ರಿ ಹುಡುಕ್ತಿದ್ದೀರಿ…. ಬೇಗ ಹೋಗಿ ಪೊಲೀಸರನ್ನು ಕರೆತನ್ನಿ!

ಗುಂಡ : ನನ್ನ ಹೊಸ ಚಪ್ಪಲಿ ಎಲ್ಲೋ ಕಾಣಿಸ್ತಾ ಇಲ್ಲ……

ಕಳ್ಳ : ಅಯ್ಯೋ! ನನ್ನದೇ ಹಾಕ್ಕೊಂಡು ಹೋಗ್ರಿ…. ನೀವು ಪೊಲೀಸರನ್ನು ಬೇಗ ಕರೆತರದಿದ್ರೆ ನಾನು ಉಸಿರುಗಟ್ಟಿ ಇಲ್ಲೇ ಸತ್ತು ಹೋಗ್ತೀನಷ್ಟೆ…….

ಮಗ : ಅಮ್ಮ, `ಲವ್ ಮ್ಯಾರೇಜ್‌’ ಆಗುವುದರಿಂದ ಮನೆಯವರೆಲ್ಲರೂ ತಿರುಗಿ ಬೀಳುವರೇ?

ತಾಯಿ : ಅಯ್ಯೋ…. ಅಷ್ಟಲ್ಲದೆ ಇನ್ನೇನಪ್ಪ? ನೀನು ಯಾರೋ ಸರಿಯಾದ ಲಂಕಿಣಿಯ ಮೋಹಜಾಲಕ್ಕೆ ಸಿಕ್ಕಿಬಿದ್ದಿರುವೆ ಅನ್ಸುತ್ತೆ. ಇದನ್ನೆಲ್ಲ ಅವಳೇ ಹೇಳಿಕೊಟ್ಟು, ಮನೆ ಆಸ್ತಿ ನಿನ್ನ ಹೆಸರಿಗೆ ಮಾಡಿಸಿಕೊಂಡು ಆ ಮನೆ ಬಿಟ್ಟು ಬಾ ಅಂದಿರಬೇಕಲ್ಲವೇ? ಈ ಮಾಡರ್ನ್‌ ಕಾಲದಲ್ಲಿ ಇಂಥ ತಾಟಕಿಯರಿಗೆ ಏನೇನೂ ಕಮ್ಮಿ ಇಲ್ಲ ಬಿಡು. ಬಂಗಾರದಂಥ ಮಗ ನೀನು, ನಿನ್ನ ಮೇಲೆ ಮಂಕುಬೂದಿ ಎರಚಿ ವಶೀಕರಣ ಮಾಡಿಕೊಂಡಿದ್ದಾಳಾ ಆ ಮಿಟಕಲಾಡಿ? ನೋಡಪ್ಪ… ಇಂಥ ಮಾಯಾಂಗನೆಯರ ಸಹವಾಸಕ್ಕೆ ಹೋಗದೆ ದೂರ ಇದ್ದುಬಿಡು. ನಿನ್ನ ಆಫೀಸಿನಲ್ಲೂ ಸ್ಟೆನೋ, ಟೈಪಿಸ್ಟು ಅಂತ ಇರ್ತಾರಲ್ಲ…ಅವರನ್ನು ಮಾತನಾಡಿಸಲೇ ಬೇಡ…. ಅವರ ಮನೆತನ ಎಂಥ ಹಾಳಾದ್ದು ಅಂತ ಗೊತ್ತಾಗುತ್ತೆ ನೋಡು…

ಮಗ : ಅಯ್ಯೋ….! ಸ್ವಲ್ಪ ನಿಲ್ಸಮ್ಮ. ಅದೆಲ್ಲ ಏನೂ ಇಲ್ಲ. ಅಪ್ಪ ನಿಮ್ಮಿಬ್ಬರದ್ದೂ ಲವ್ ಮ್ಯಾರೇಜ್‌ ಅಂತ ಹೇಳ್ತಿದ್ದರು….

ಪತಿ ಒಳ್ಳೆಯ ಮೂಡ್‌ನಲ್ಲಿದ್ದ. ಪ್ರೇಮದಿಂದ ಹೆಂಡತಿಗೆ ಹೇಳತೊಡಗಿದ, “ಡಾರ್ಲಿಂಗ್‌, ನಿನಗೆ ನೆನಪಿದೆಯೇ? 25 ವರ್ಷಗಳ ಹಿಂದೆ ನಾವು ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ, ಒಂದೇ ಸೀಲಿಂಗ್‌ ಫ್ಯಾನ್‌, ಬ್ಲ್ಯಾಕ್‌ ಅಂಡ್ ವೈಟ್‌ ಟಿ.ವಿ. ನೋಡುತ್ತಾ ಸುಖವಾಗಿದ್ದೆ. ಆಗ ನಾನು ಸೈಕಲ್‌ನಲ್ಲೇ ದಿನ ಕೆಲಸಕ್ಕೆ ಹೋಗುತ್ತಿದ್ದೆ. ಆಗ ನನ್ನ ಬಳಿ 25 ವರ್ಷದ ಸುಂದರ ತರುಣಿ ಇದ್ದಳು.

“ಆದರೆ ಈಗ ನೋಡು. ನಮ್ಮ ಬಳಿ ಎ.ಸಿ. ಇದೆ, ಕಾರು, ಫ್ರಿಜ್ಜು, ಎಲ್ಇಡಿ ಕಲರ್‌ ಟಿ.ವಿ. ಎಲ್ಲ ಇದೆ. ಜೊತೆಗೆ 50ರ ಹರೆಯದ ಮುದುಕಿ ಜೊತೆಯಾಗಿದ್ದಾಳೆ. ಏನು ಮಾಡಲಿ?”

ಅದಕ್ಕೆ ಪತ್ನಿ ಶಾಂತಳಾಗಿ, “ಡೋಂಟ್‌ ವರಿ ಡಿಯರ್‌. ನಿಮಗಾಗಿ ಈಗಲೂ 25ರ ಹರೆಯದ ಒಬ್ಬ ಚೆಲುವೆಯನ್ನು ಆರಿಸಿ. ಇಲ್ಲಿನದ್ದೆಲ್ಲ ನನಗೆ ಸೆಟ್‌ ಮಾಡಿ, ಮತ್ತೆ ಅವಳ ಜೊತೆ ಒಂಟಿ ಕೋಣೆ ಸಂಸಾರ, ಸೈಕಲ್ ಸಮೇತ ಪುಟ್ಟ ಟಿ.ವಿ. ಇರಿಸಿಕೊಳ್ಳಿ. ನನ್ನದೇನೂ ಅಭ್ಯಂತರವಿಲ್ಲ….” ಎನ್ನುವುದೇ?

ಪ್ರಕಾಶ್‌ : ಅಲ್ಲಯ್ಯ, ನಿನ್ನ ಹೆಂಡತಿ ಸತ್ತ ಮೇಲೆ ನೀನು ಹೋಗಿ ಹೋಗಿ ಅವಳ ತಂಗಿಯನ್ನೇ ಮತ್ತೆ ಮದುವೆ ಆಗುವುದೇ?

ವಿನೋದ್‌ : ಇನ್ನೇನು ಮಾಡಲಿ? ಮತ್ತೊಬ್ಬ ಹೊಸ ಅತ್ತೆಯ ಕಾಟ ಸಹಿಸುವುದು ಬಹಳ ಕಷ್ಟ ಬಿಡು.

ಜಲಜಾಕ್ಷಿ ತನಗೆ ವಿಚ್ಛೇದನ ಕೊಡಿಸಿದ ಅದೇ ವಕೀಲರನ್ನು ಹುಡುಕಿಕೊಂಡು ಹೋದಳು.

ಜಲಜಾಕ್ಷಿ : ನೋಡಿ, ಹೇಗಾದ್ರೂ ಮಾಡಿ ನೀವು ನನಗೆ ಈಗ ಅದೇ ಮಾಜಿ ಗಂಡನ ಜೊತೆ ಮತ್ತೆ ಮದುವೆ ಮಾಡಿಸಲೇಬೇಕು.

ವಕೀಲ : ಅಯ್ಯೋ! ಕಳೆದ 3 ತಿಂಗಳ ಹಿಂದೆ ತಾನೇ ನಾನೇ ಅಷ್ಟೆಲ್ಲ ಓಡಾಡಿ ನಿಮ್ಮಿಬ್ಬರಿಗೂ ಡೈವೋರ್ಸ್‌ ಕೊಡಿಸಿದ್ದೇನೆ. ಮತ್ತೆ ಇದೇನಮ್ಮ. ಹೊಸದಾಗಿ…..

ಜಲಜಾಕ್ಷಿ : ಹೌದು, ಡೈವೋರ್ಸ್‌ ನಂತರ ಅವರು ಬಹಳ ಸುಖವಾಗಿ ಓಡಾಡಿಕೊಂಡಿದ್ದಾರೆ ಅಂತ ಗೊತ್ತಾಯ್ತು. ಅಷ್ಟಕ್ಕೆ ಅವರನ್ನು ಸುಮ್ಮನೆ ಬಿಡಬಾರದು ಅಂತಲೇ ಈ ಮರುಮದುವೆ….

ತಮಗೆ ವಿಚ್ಛೇದನ ಬೇಕೆಂದು ಮುದಿ ಜೋಡಿಯೊಂದು ಕೋರ್ಟಿನ ಕಟಕಟೆ ಹತ್ತಿತು.

ಜಡ್ಜ್ : ಈ ವಯಸ್ಸಿನಲ್ಲಿ ಇದೇನಮ್ಮ, ಕೋರ್ಟು ಕಾನೂನು ವಾಯಿದೆ ವಿಚ್ಛೇದನ ಅಂತೆಲ್ಲ…. ಸ್ವಲ್ಪ ದಿನ ಹಾಗೇ ಇದ್ದರೆ ತಾನಾಗೇ ಮೇಲೆ ಹೋಗುತ್ತಿದ್ದಿರಿ ಇಬ್ಬರೂ…..

ಪ್ರೌಢ ಮಹಿಳೆ : ಇವರ ಕಾಟ ಸಹಿಸಿ ನನಗೆ ಸಾಕಾಗಿದೆ. ಇವರ ಮಾನಸಿಕ ಶೋಷಣೆಯನ್ನು ನಾನು ತಾಳಲಾರೆ!

ಜಡ್ಜ್ : ಅದೆಂಥ ಮಾನಸಿಕ ಶೋಷಣೆ?

ಪ್ರೌಢ ಮಹಿಳೆ : ತಾವು ನನ್ನನ್ನು ಬೈಯುವಾಗ ಘಂಟಾಘೋಷಾಗಿ ಬೀದಿಗೆಲ್ಲ ಕೇಳುವಂತೆ ಧಾರಾಳ ಬೈಯುತ್ತಾರೆ…..

ಜಡ್ಜ್ : ಅದಕ್ಕೆ ನೀವು ಅವರನ್ನು ಬೈದುಬಿಡಿ!

ಪ್ರೌಢ ಮಹಿಳೆ : ಅದಕ್ಕೆ ಎಲ್ಲಿದೆ ಅವಕಾಶ? ನಾನು ಬೈಯಲು ಬಾಯಿ ತೆರೆಯುತ್ತಿದ್ದಂತೆ ಇವರು ತಮ್ಮ ಕಿವಿಯಿಂದ ಆ ಮೆಶೀನ್‌ ತೆಗೆದುಬಿಡುತ್ತಾರೆ. ನಾನು ಎಷ್ಟು ಬಡಕೊಂಡ್ರೂ ಲಾಭ ಇಲ್ಲ!

12 ವರ್ಷಗಳ ನಂತರ ಆತ ಜೇಲಿನಿಂದ ಬಿಡುಗಡೆಯಾಗಿದ್ದ. ಕೊಳಕು ಬಟ್ಟೆಗಳೊಡನೆ ಅವನು ಬಹಳ ಸುಸ್ತಾಗಿ ಮನೆ ಸೇರಿಕೊಂಡ.

ಮನೆಗೆ ಬರುತ್ತಲೇ ಹೆಂಡತಿ ಶುರು ಮಾಡಿದಳು, “ಎಲ್ಲಿ ಹಾಳಾಗಿ ಹೋಗಿದ್ರಿ ಇಷ್ಟು ಹೊತ್ತು? ನಿಮಗೆ 2 ಗಂಟೆ ಕಾಲ ಹಿಂದೆಯೇ ಬಿಡುಗಡೆ ಆಗಿತ್ತಂತಲ್ಲ?’

‘ಆತ ಏನೂ ಮಾತನಾಡದೆ ವಾಪಸ್ಸು ಹೋಗಿ ಅದೇ ಜೇಲನ್ನು ಸೇರಿಕೊಂಡ.

ನಮ್ಮ ಮೋದಿಜೀ ಗೃಹಸ್ಥರಾಗಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು…. ದೇಶ ನಡೆಸುವುದು ಸುಲಭ….. ಸಂಸಾರ ನಡೆಸುವುದು ಕಷ್ಟ ಅಂತ…..ದುಬಾರಿ ಬೆಲೆಗಳು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ