ಬಿಝಿ ಶೆಡ್ಯೂಲ್ ಇರುವಂಥ ಉದ್ಯೋಗಸ್ಥ ವನಿತೆ ಇರಲಿ ಅಥವಾ ಫೆಸ್ಟಿವ್ ಸೀಸನ್‌ನಲ್ಲಿ ಬಹಳ ಬಿಝಿಯಾದ ಗೃಹಿಣಿ ಇರಲಿ, ಅವರುಗಳ ಬಳಿ ಫೌಂಡೇಶನ್‌ನಿಂದ ಮೇಕಪ್ ಶುರು ಮಾಡಿ ಸೆಟಿಂಗ್ ಪೌಡರ್‌ನಿಂದ ಮೇಕಪ್ ಕಂಪ್ಲೀಟ್ ಮಾಡಿಕೊಳ್ಳುವಷ್ಟು ಸಮಯ ಖಂಡಿತಾ ಇರುವುದಿಲ್ಲ. ಆದರೂ ಇವರುಗಳೂ ಸಹ ಪ್ರೆಸೆಂಟೆಬಲ್ ಲುಕ್ಸ್ ಹೊಂದಲು ಮೇಕಪ್ ಮಾಡಿಕೊಳ್ಳಬಹುದು. ಅದು ಹೇಗೆ? ಯಾವ ಟಿಪ್ಸ್ ಇಂಥವರಿಗೆ ಆಗ ನೆರವಾಗುತ್ತದೆ?
BB ಅಥವಾ CC ಕ್ರೀಂ ಬಳಸಿಕೊಳ್ಳಿ : ಮೇಕಪ್ ಬೇಸ್ ಚೆನ್ನಾಗಿ ಮೂಡಿ ಬಂದಾಗ ಮಾತ್ರ ಓವರ್‌ಆಲ್ ಮೇಕಪ್ ಕ್ಯೂಟ್ ಆಗಿರಲು ಸಾಧ್ಯ. ಹೀಗಾಗಿ ಹೆಚ್ಚಿನ ಮಹಿಳೆಯರು ಮಾಯಿಶ್ಚರೈಸರ್, ಪ್ರೈಮರ್, ಕನ್ಸೀಲರ್ ಇತ್ಯಾದಿಗಳನ್ನು ಬೇಸ್ ಮೇಕಪ್‌ಗಾಗಿ ಬಳಸುತ್ತಾರೆ. ಇದರಿಂದಾಗಿ ಇವರಿಗೆ ಸಾಕಷ್ಟು ಸಮಯವನ್ನು ಬೇಸ್ ಮೇಕಪ್‌ಗೇ ಮೀಸಲಿಡಬೇಕಾಗುತ್ತದೆ. ಇಂಥವರು ಸಮಯದ ಉಳಿತಾಯಕ್ಕಾಗಿ BB ಅಥವಾ CC ಕ್ರೀಮ್ ನ್ನು ಬೇಸ್ ಮೇಕಪ್‌ಗಾಗಿ ಮಾಡಬೇಕು. ಇಂಥ ಕ್ರೀಮುಗಳು ಮಲ್ಟಿಟಾಸ್ಕಿಂಗ್ ಆಗಿರುತ್ತವೆ. ಇವು ಫೌಂಡೇಶನ್, ಪ್ರೈಮರ್, ಮಾಯಿಶ್ಚರೈಸರ್ ಮಾಡುವ ಕೆಲಸನ್ನೂ ಒಟ್ಟಿಗೆ ಮಾಡುತ್ತವೆ.
ಫ್ಲಾಟ್ ಟಿಪ್ ಐಲೈನರ್ ಬಳಸಿ : ಐ ಲೈನರ್ ಬಳಸದೆ ಐ ಮೇಕಪ್ ಕಂಪ್ಲೀಟ್ ಎನಿಸುವುದಿಲ್ಲ. ಆದರೆ ಐ ಶ್ಯಾಡೋ, ಮಸ್ಕರಾ ಹಚ್ಚಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೋ ಅದಕ್ಕಿಂತಲೂ ಎರಡರಷ್ಟು ಸಮಯ ಐ ಲೈನರ್ ಹಚ್ಚುವುದಕ್ಕೆ ಹಿಡಿಯುತ್ತದೆ ಎಂಬುದು ನಿಜ. ಹೀಗಾಗಿ ನೀವು ನಿಮ್ಮ ಸಮಯ ಉಳಿಸ ಬಯಸಿದರೆ ಪೆನ್ಸಿಲ್ ಯಾ ಬ್ರಶ್‌ನಿಂದ ಲಿಕ್ವಿಡ್ ಐ ಲೈನರ್ ಹಚ್ಚಿಕೊಳ್ಳುವ ಬದಲು ಫ್ಲಾಟ್ ಟಿಪ್ ಐ ಲೈನರ್ (ಪೆನ್ಸಿಲ್‌ನಂಥ ಐ ಲೈನರ್) ಬಳಸಿರಿ. ಇದರಿಂದ ಎಳೆದ ಕೇವಲ ಒಂದು ಲೈನ್ ಐ ಮೇಕಪ್‌ಗೆ ಸಾಕಾಗುತ್ತದೆ.
ಚೀಕ್ ಬೋನ್ ಹೈಲೈಟ್ ಮಾಡಿ : ಚೀಕ್ ಬೋನ್ ಹೈಲೈಟ್ ಮಾಡಲು ನೀವು ಸಹ ಬ್ರಶ್‌ನಿಂದ ಬ್ಲಶ್‌ಆನ್ ಯಾ ಬ್ಲಶರ್ ಹಚ್ಚುವುದರಿಂದ, ಈಗ ನಿಮ್ಮ ವ್ಯಾನಿಟಿಯಲ್ಲಿ ಇದರ ಜಾಗದಲ್ಲಿ ಚೀಕ್ ಸ್ಟೇನ್ ಇರಿಸಿ. ಇದನ್ನು ಒಂದು ಸಲ ಕೆನ್ನೆಗಳ ಮೇಲೆ ಟಚ್ ಮಾಡಿ, ನಂತರ ಬೆರಳುಗಳಿಂದ ಚೀಕ್ ಬೋನ್ಸ್ ಮೇಲೆ ಹರಡಿರಿ.
ಮಲ್ಟಿಪಲ್ ಮೇಕಪ್ ಪ್ರಾಡಕ್ಟ್ : ಎಷ್ಟು ಸಮಯ ಮುಖದ ಮೇಕಪ್ ಮಾಡಲು ಹಿಡಿಸುತ್ತದೋ, ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಿನ ಸಮಯ ವಿಭಿನ್ನ ಪ್ರಾಡಕ್ಟ್ಸ್ ನ್ನು ತೆರೆದು ಬಳಸಿದ ನಂತರ ಮುಚ್ಚಿಡುವುದರಲ್ಲಿ ಆಗಿಹೋಗುತ್ತದೆ. ಆದ್ದರಿಂದ ತರತರಹದ ಪ್ರಾಡಕ್ಟ್ಸ್ ಬಳಸುವ ಬದಲು ಮಲ್ಟಿಪಲ್ ಪ್ರಾಡಕ್ಟ್ಸ್ ನ್ನು ನಿಮ್ಮ ವ್ಯಾನಿಟಿಯಲ್ಲಿ ಇರಿಸಿಕೊಳ್ಳಿ.
– ಮಾಯಿಶ್ಚರೈಸರ್ + ಸನ್‌ಸ್ಕ್ರೀನ್ ಕೊಳ್ಳುವ ಬದಲು ಸನ್‌ಸ್ಕ್ರೀನ್‌ಯುಕ್ತ ಮಾಯಿಶ್ಚರೈಸರ್ ಕೊಳ್ಳಿರಿ.
– ಎಂಥ ಪೆನ್ಸಿಲ್ ಐ ಲೈನರ್ ಕೊಳ್ಳಬೇಕೆಂದರೆ ಅದು ಕಾಜಲ್ + ಐ ಲೈನರ್ ಎರಡರ ಕೆಲಸ ಮಾಡುವಂತಿರಬೇಕು. ಹೀಗೆ ಮಾಡುವುದರಿಂದ ಸಮಯದ ಜೊತೆ ಹಣ ಉಳಿತಾಯವಾಗುತ್ತದೆ.
– ಇದೀಗ ಮಾರುಕಟ್ಟೆಯಲ್ಲಿ 3 ಇನ್ 1 ಪ್ರಾಡಕ್ಟ್ಸ್ ಲಭ್ಯವಿವೆ. ಅವನ್ನು ಕೊಂಡು ನಿಮ್ಮ ವ್ಯಾನಿಟಿಗೆ ಸೇರಿಸಿ. ಹೇಗೆ ಅಂತೀರಾ? ಇವು ಚೀಕ್ ಮೇಲೆ ಬ್ಲಶರ್, ಐ ಲಿಡ್ ಮೇಲೆ ಐ ಶ್ಯಾಡೋ ಮತ್ತು ತುಟಿಗಳಿಗೆ ಲಿಪ್‌ಸ್ಟಿಕ್ ಸಹ ಬಳಿಯಬಲ್ಲವು.
– ಲಿಪ್‌ಸ್ಟಿಕ್ ನಂತರ ಲಿಪ್‌ಗ್ಲಾಸ್ ಹಚ್ಚುತ್ತಾ ನಿಮ್ಮ ಅಮೂಲ್ಯ ಸಮಯ ಹಾಳು ಮಾಡುವ ಬದಲು, ಲಿಪ್‌ಸ್ಟಿಕ್ ವಿತ್ ಲಿಪ್‌ಗ್ಲಾಸ್ ಕೊಳ್ಳಿರಿ.
ಸ್ಟೈಲಿಶ್ ಹೇರ್‌ಕಟ್ ಇರಲಿ : ನಿಮ್ಮ ಬಳಿ ಬೆಳಗಿನ ಹೊತ್ತು ಪ್ರತಿದಿನದ ಮೇಕಪ್‌ಗಾಗಿ ಹೆಚ್ಚು ಸಮಯ ಇಲ್ಲ ಅಂತಿರುವಾಗ, ಅದಕ್ಕಾಗಿ ಯಾವುದಾದರೂ ಸ್ಟೈಲಿಶ್ ಲುಕ್ಸ್ ಗಾಗಿ ನಿಮ್ಮ ಫೇಸ್‌ಕಟ್‌ಗೆ ಹೊಂದುವಂಥ ಉತ್ತಮ ಹೇರ್‌ಕಟ್ ಆರಿಸಿಕೊಳ್ಳಿ. ಒಂದು ಉತ್ತಮ ಹೇರ್‌ಸ್ಟೈಲ್ ನಿಮ್ಮ ಇಡೀ ಪರ್ಸನಾಲಿಟಿಯನ್ನೇ ಬದಲಿಸಬಲ್ಲದು. ಇದೇ ತರಹ ನಿಮ್ಮ ಬಳಿ ತಲೆಗೆ ಸ್ನಾನ ಮಾಡಲು ಸಮಯ ಇಲ್ಲದಿದ್ದರೆ, ನೀವು ಡ್ರೈ ಶ್ಯಾಂಪೂ ಬಳಸಬಹುದು. ಇದನ್ನು ತಲೆಗೂದಲಿಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ 3-4 ನಿಮಿಷ ಹಾಗೇ ಬಿಟ್ಟುಬಿಡಿ. ಇದರ ಬಳಕೆಯಿಂದ ಕೂದಲಿನ ವಾಲ್ಯೂಂ ಹೆಚ್ಚುತ್ತದೆ, ಕೂದಲು ದಟ್ಟವಾಗುತ್ತದೆ. ಅದನ್ನು ಮ್ಯಾನೇಜ್ ಮಾಡುವುದೂ ಸುಲಭ.
ಬ್ಯೂಟಿ ಟ್ರೀಟ್‌ಮೆಂಟ್ ಕೂಡ ಅಗತ್ಯ : ನಿಮ್ಮ ಬಳಿ ದಿನನಿತ್ಯ ಮೇಕಪ್ ಮಾಡಿಕೊಳ್ಳಲು ಪುರಸತ್ತಿಲ್ಲ, ನಿಜ. ಆದರೆ ತಿಂಗಳಲ್ಲಿ 1 ಸಲ ನೀವು ಬ್ಯೂಟಿ ಟ್ರೀಟ್‌ಮೆಂಟ್‌ಗಾಗಿ ಸಮಯ ಮಾಡಿಕೊಳ್ಳಲೇಬೇಕು. ಅಂದ್ರೆ ಐ ಬ್ರೋಸ್, ಬ್ಲೀಚ್, ಫೇಶಿಯಲ್ ಇತ್ಯಾದಿ. ನಿಮ್ಮ ಐ ಬ್ರೋಸ್ ಸೂಕ್ತ ಶೇಪ್‌ನಲ್ಲಿದ್ದರೆ, ಅಪ್ಪರ್ ಲಿಪ್ ಕ್ಲೀನ್ ಹಾಗೂ ಮುಖದಲ್ಲಿನ ಸಣ್ಣಪುಟ್ಟ ರೋಮಗಳು ಬೂದು ಬಣ್ಣದ್ದಾಗಿದ್ದರೆ, ಸಹಜವಾಗಿಯೇ ನಿಮ್ಮ ಮುಖ ಸುಂದರವಾಗಿ ಕಾಣಿಸುತ್ತದೆ. ಹೀಗಾಗಿ ನೀವು ಮೇಕಪ್‌ಗಾಗಿ ಹಚ್ಚು ಸಮಯ ವ್ಯಯಿಸಬೇಕಾದುದಿಲ್ಲ.
ಚರ್ಮದ ಆಂತರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಿ : ಚರ್ಮ ಎಷ್ಟು ಒರಟಾಗಿ ಅಥವಾ ಬಾಡಿಹೋದಂತೆ ಅನಿಸುತ್ತದೋ ಅದನ್ನು ಮೇಕಪ್‌ನಿಂದ ಸರಿಪಡಿಸಲು ಅಷ್ಟೇ ಹೆಚ್ಚಿನ ಸಮಯ ಹಿಡಿಯುತ್ತದೆ. ಆದ್ದರಿಂದ ನಿಮ್ಮ ಚರ್ಮವನ್ನು ವಿಶೇಷವಾಗಿ ನೋಡಿಕೊಳ್ಳಿ. ಉತ್ತಮ ಚರ್ಮಕ್ಕಾಗಿ ಹೆಲ್ದಿ ಡಯೆಟ್ ಸೇವಿಸಿ. ಧಾರಾಳವಾಗಿ ನೀರು ಕುಡಿಯಿರಿ ಹಾಗೂ ರಾತ್ರಿ ಪೂರ್ತಿ ನೆಮ್ಮದಿಯಾಗಿ ನಿದ್ದೆ ಮಾಡಿ. ರಾತ್ರಿ ಮಲಗುವ ಮುನ್ನ ಹಿಂದಿನ ದಿನದ ಮೇಕಪ್ ಕಳಚಲು ಮರೆಯದಿರಿ. ಮೇಕಪ್ ಕಳಚಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಚರ್ಮಕ್ಕೆ ಸ್ಲೀಪಿಂಗ್ ಸೀರಮ್ ಬಳಸಿ ಮಾಯಿಶ್ಚರೈಸರ್ ಹಚ್ಚಿರಿ. ನೀವು ರಾತ್ರಿ ಹೊತ್ತು ಕ್ಲೀನಿಂಗ್, ಮಾಯಿಶ್ಚರೈಸಿಂಗ್ ಮಾಡಿಕೊಂಡರೆ, ಮಾರನೇ ಬೆಳಗ್ಗೆ ನಿಮ್ಮ ಮುಖ ಸಾಕಷ್ಟು ಫ್ರೆಶ್ ಆಗಿರುತ್ತದೆ. ಆಗ ಮೇಕಪ್‌ನ ಹೆಚ್ಚು ಪದರಗಳನ್ನು ಮೆತ್ತುವ ಅಗತ್ಯವೇನಿಲ್ಲ.
ಉತ್ತಮ ರೀತಿಯ ವ್ಯವಸ್ಥೆ : ಎಷ್ಟೋ ಸಲ ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದಕ್ಕಿಂತ ಅದರ ಪ್ರಾಡಕ್ಟ್ಸ್ ನ್ನು ಹುಡುಕುವುದರಲ್ಲೇ ಹೆಚ್ಚಿನ ಸಮಯ ಹೋಗಿಬಿಡುತ್ತದೆ. ಹೀಗಾಗಿ ನಿಮ್ಮ ಅಮೂಲ್ಯ ಸಮಯ ಕಾಪಾಡಿಕೊಳ್ಳಲು, ನಿಮ್ಮ ವ್ಯಾನಿಟಿ ಬ್ಯಾಕ್ಸ್ ನಲ್ಲಿ ಎಲ್ಲಾ ಪ್ರಾಡಕ್ಟ್ಸ್ ನೀಟಾಗಿ ಜೋಡಿಸಿ ಇರಿಸಿಕೊಳ್ಳಿ. ಬಳಸಿದ ನಂತರ ಇವನ್ನು ಸ್ವಸ್ಥಾನ ಸೇರಿಸಲು ಮರೆಯಬೇಡಿ. ಆದ್ದರಿಂದ ಮುಂದಿನ ಸಲ ಬಳಸುವಾಗ ಇವನ್ನು ಹುಡುಕಬೇಕಾದ ಪ್ರಮೇಯವಿಲ್ಲ. ಇದೇ ತರಹ ಹಳೆಯದಾದ ಮತ್ತು ಖಾಲಿ ಆಗಿರುವಂಥ ಬ್ಯೂಟಿ ಪ್ರಾಡಕ್ಟ್ಸ್ ನ್ನು ನಿಮ್ಮ ವ್ಯಾನಿಟಿ ಬಾಕ್ಸ್ ನಿಂದ ತೆಗೆದುಬಿಡಿ.
– ಕೆ. ಪೂರ್ಣಿಮಾ