*ಅಡುಗೆಮನೆ ಕೆಲ್ಸಾನಾ…*
_*ಅಡುಗೆಮನೆ ಕೆಲ್ಸ ಅಂದ್ರೆ….*
_…. *ಬೇಯ್ಸೋದಷ್ಟೇ ಅಲ್ಲ!*
*ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ, ನಿಂಬೇಹಣ್ಣು, ಶುಂಠಿ ಕೆಡದೇ ಇರೋ ಹಾಗೆ ಮ್ಯಾನೇಜ್ ಮಾಡೋ ಕಲೆ ಇರಬೇಕು.*
*ಯಾವ್ಯಾವ ತರಕಾರಿ ಎಷ್ಟು ದಿನ ಫ್ರೆಷ್ ಇರುತ್ತೆ, ಯಾವುದು ಬೇಗ ಹಾಳಾಗುತ್ತೆ, ಅನ್ನೋದು ಗೊತ್ತಿರ್ಬೇಕು.*
*ಗೊತ್ತಿದ್ದರಷ್ಟೇ ಸಾಲದು; ದಿನಾ ಒಂದೇ ತರ ಅಡುಗೆ ಮಾಡದೆ ವಿಧ ವಿಧವಾದ ಅಡುಗೆ ರುಚಿ ರುಚಿಯಾಗಿ ತಯಾರಿಸಿ ಅಡುಗೆ ಮನೆ ನಿಭಾಯಿಸೋ ಕಲೆ ಇರಬೇಕು.*
*ಯಾವಯಾವ ದಿನಸಿ, ಎಷ್ಟೆಷ್ಟು ಬೇಕು, ಎಂಬ ಲೆಕ್ಕಾಚಾರ ಗೊತ್ತಿರಬೇಕು. ತಂದ ದಿನಸಿಯನ್ನು ಹಾಳಾಗದಂತೆ ಕಾಪಾಡುವ ಸ್ಟೋರ್ಸ್ ಮ್ಯಾನಾಜ್‌ಮೆಂಟ್ ಗೊತ್ತಿರಬೇಕು.*
*ಊಟ ಮಾಡುವ ಆಸಾಮಿಗಳ ಇಷ್ಟಾನಿಷ್ಟಗಳು, ತಿನ್ನೋ ಸಾಮರ್ಥ್ಯ ತಿಳಿದಿರಬೇಕು. ಅದಕ್ಕೆ ತಕ್ಕಂತೆ ದಿನಸಿ ಇತ್ಯಾದಿ ಅಳತೆ ಅಂದಾಜು ಮಾಡ್ಕೋಬೇಕು. ಆಮೇಲೆ ಪಾತ್ರೆ ಆರಿಸ್ಕೊಬೇಕು.*
*ಬೇಯಿಸಬೇಕು, ರುಬ್ಬಬೇಕು, ಹುರಿಯಬೇಕು, ಪುಡಿಮಾಡಬೇಕು, ಶ್ಯಾಲೋ-ಫ್ರೈ ಡೀಪ್-ಫ್ರೈ ಮಾಡಬೇಕು, ಸ್ಟೀಮ್‌ಕುಕ್ ಮಾಡಬೇಕು, ಕುಕ್ಕರ್ ಕೂಗಿಸಬೇಕು; ಆದರೆ ಕೂಗಾಡಬಾರದು.*
*ತೊಳೀಬೇಕು, ಬಳೀಬೇಕು, ಸಾರಿಸಬೇಕು, ಒಪ್ಪಓರಣ ಮಾಡಬೇಕು, ಅಚ್ಚುಕಟ್ಟು ಮಾಡಬೇಕು.*
*ಹಳೆ ಹಾಲು – ಹೊಸ ಹಾಲು, ಹಳೆ ಡಿಕಾಕ್ಷನ್ನು – ಹೊಸಾ ಡಿಕಾಕ್ಷನ್ನು ವ್ಯತ್ಯಾಸ ಗೊತ್ತಿರಬೇಕು. ಕಾಫಿಪುಡಿ-ಟೀಪುಡಿ ವ್ಯತ್ಯಾಸ ಗೊತ್ತಿರಬೇಕು.*
*ಒಂದು ದೋಸೆ ತಟ್ಟೇಲಿದ್ರೆ, ಇನ್ನೊಂದನ್ನ ಕಾವಲಿಯಲ್ಲಿ, ಮತ್ತೊಂದನ್ನ ಹಾಟ್‌ಕೇಸಲ್ಲಿ ಕೂರಿಸೋ ಸ್ಕಿಲ್ ಮ್ಯಾನೇಜ್‌ಮೆಂಟ್ ಗೊತ್ತಿರಬೇಕು.*
*ಎರಡು-ಮೂರು ಬರ್ನರುಗಳಲ್ಲಿ ಒಟ್ಟೊಟ್ಟಿಗೆ ಬೇರೆ ಬೇರೆ ವೆರೈಟಿ ಅಡುಗೆ ಮಾಡೋ ಟೈಮ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*
*ಬಡಿಸೋಕ್ಕೆ ಗೊತ್ತಿರಬೇಕು. ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೇದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*
*ಸುಮ್ನೆ ಒಂದ್ ರಾಶಿ ಪಾತ್ರೆ ಗುಡ್ಡೆ ಹಾಕದೇ ಕನಿಷ್ಠ ಪಾತ್ರೆಗಳಲ್ಲೇ ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*
*’ಅಮ್ಮಾ’ ಅಂತ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆಯದಕ್ಕೆ ಕರೆಯುತ್ತಾರೆ. ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ-ಟಾಸ್ಕಿಂಗ್ ಎಬಿಲಿಟಿ ಇರಬೇಕು.*
*ಸಣ್ಣ ಪುಟ್ಟ ಅವಘಡಗಳಾದಾಗ (ಕಟ್ಸು, ಬರ್ನ್ಸು) ಧೃತಿಗೆಡದೆ ಗಾಬರಿಯಾಗದೆ ನಿಭಾಯಿಸೋ ಅಷ್ಟು ಸೈನ್ಸು, ಸಮಯಪ್ರಜ್ಞೆ, ಕಾಮನ್‌ಸೆನ್ಸು ಇರಬೇಕು.*
*ಇಷ್ಟನ್ನೂ ಯಾವುದೇ ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ ಗೌರವ ಕೊಡೋ ದೊಡ್ಡಮನಸ್ಸಿರಬೇಕು.*
*”ಅಡುಗೆಮನೆ ಕೆಲ್ಸಾನಾ? ಅದೇನ್ ಮಹಾ!” ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕೆಪ್ಯಾಸಿಟಿ ನಿಮಗಿದ್ಯಾ ಅಂತ ಯೋಚಿಸಿ.*
*ಅಡುಗೆ ಮನೆ ಎಲ್ಲರ ಅವಶ್ಯಕತೆ. ಅಡುಗೆ ಎಲ್ಲರ ಜೀವನಾಧಾರ.*
*ಅಡುಗೆ ಮನೆ ಕೆಲಸ…..*
*…ಅದೊಂದು ಧ್ಯಾನ,*
*…ಅದೊಂದು ಭಕ್ತಿ,*
*…ಅದೊಂದು ದಿನಚರಿ,*
*…ಅದೊಂದು ಕಲೆ,*
*…ಅದೊಂದು ವಿಜ್ಞಾನ,*
*…ಅದೊಂದು ಅನುಭೂತಿ,*
*…ಅದೊಂದು ಸೇವೆ,*
*…ಅದೊಂದು ಪ್ರೀತಿ,*
*…ಅದೊಂದು ಗೌರವ,*
*…ಅದೊಂದು ಮೌಲ್ಯ.*
*ಅದರ ಬಗ್ಗೆ ತಾತ್ಸಾರ ಬೇಡ.*
*ಎಲ್ಲಾ ಅಡುಗೆ ಮನೆ ಕಲಾವಿದರಿಗೂ ಒಂದು ದೊಡ್ಡ ನಮಸ್ಕಾರ.*