ಇಂದಿನ ವ್ಯಸ್ತ ದಿನಚರಿಯಲ್ಲಿ ಪ್ರತಿಯೊಬ್ಬರು ಸಾಧ್ಯವಿದ್ದಷ್ಟು ಮಟ್ಟಿಗೆ ಆಧುನಿಕ ಸುಖಸೌಲಭ್ಯಗಳನ್ನು ಬಳಸಲು ಇಚ್ಛಿಸುತ್ತಾರೆ. ಅದರಲ್ಲೊಂದು ಮುಖ್ಯ ಸೌಲಭ್ಯವೆಂದರೆ ಎಟಿಎಂ ಕಮ್ ಡೆಬಿಟ್ ಕಾರ್ಡ್. ಅದರಿಂದ ವಿತ್ತ ಕ್ಷೇತ್ರದ ನಕ್ಷೆಯೇ ಬದಲಾಗಿಬಿಟ್ಟಿದೆ. ಈಗ ಪ್ರತಿಯೊಬ್ಬ ವ್ಯಕ್ತಿಯೂ ತಮಗೆ ಬೇಕೆಂದಾಗ ತಮ್ಮ ಅಗತ್ಯಕ್ಕನುಗುಣವಾಗಿ ಹಣ ತೆಗೆಯುತ್ತಿರುತ್ತಾರೆ.
ಎ.ಟಿ.ಎಂ. ಕಮ್ ಡೆಬಿಟ್ ಕಾರ್ಡ್‌ನಿಂದ ನಿಮಗೆ ಬೇಕೆಂದಾಗ ಆನ್‌ಲಾನ್ ಶಾಪಿಂಗ್ ಕೂಡ ಮಾಡಬಹುದು. ನಿಮ್ಮ ಪ್ರವಾಸದ ಟಿಕೆಟ್ ಬುಕ್ ಮಾಡಿಸಬಹುದು, ಶಾಪಿಂಗ್ ಮಾಲ್‌ನಲ್ಲಿ ಶಾಪಿಂಗ್ ಮಾಡಬಹುದು, ಹೋಟೆಲ್‌ನ ಊಟತಿಂಡಿಯ ಬಿಲ್ ಪಾತಿಸಬಹುದು.
ಒಟ್ಟಾರೆ ಹೇಳಬೇಕೆಂದರೆ, ಇಂದು ಎಟಿಎಂ ಜನಸಾಮಾನ್ಯರ ದಿನಚರಿಯ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಎ.ಟಿ.ಎಂ. ಕಾರ್ಡ್‌ನಿಂದ ನಿಮಗೆ ಯಾವುದೇ ರೀತಿಯ ಹಾನಿಯುಂಟಾಗದಿರಲು ಕೆಳಕಂಡ ಸಂಗತಿಗಳನ್ನೊಮ್ಮೆ ಅವಶ್ಯವಾಗಿ ಓದಿ.
ಶಾಪಿಂಗ್ ಮಾಡುವ ಸಂದರ್ಭದಲ್ಲಿ ಎ.ಟಿ.ಎಂ. ಕಾರ್ಡ್‌ನಿಂದ 2 ಸಲ ಸ್ವೈಪ್ ಮಾಡದಂತೆ ಎಚ್ಚರಿಕೆ ವಹಿಸಿ. ಒಂದು ವೇಳೆ ಆ ರೀತಿ ಮಾಡಿದ್ದರೆ ಆ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಮತ್ತು ಶಾಪಿಂಗ್‌ನ ರಸೀದಿಯನ್ನು ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಎ.ಟಿ.ಎಂ. ಕಾರ್ಡ್‌ನ ಹಿಂಭಾಗದಲ್ಲಿ ಬರೆದ ಸಿ.ವಿ.ವಿ. (ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ) ನಂಬರ್‌ನ್ನು ಎಲ್ಲಿಯಾದರೂ ಸುರಕ್ಷಿತ ಸ್ಥಳದಲ್ಲಿ ನಮೂದಿಸಿ ಇಡಿ. ಇಲ್ಲದಿದ್ದರೆ ನಂಬರ್‌ನ ನೆರವಿನಿಂದ ನಿಮ್ಮ ಮಾಹಿತಿ ಹಾಗೂ ಕಾರ್ಡ್ ಇಲ್ಲದೆಯೂ ಯಾರೇ ಆಗಲಿ ಇಂಟರ್‌ನೆಟ್‌ನಲ್ಲಿ ಶಾಪಿಂಗ್ ಮಾಡಬಹುದು.
ಶಾಪಿಂಗ್ ಮಾಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡಿನ ಸುರಕ್ಷಿತ ಬಳಕೆಗಾಗಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಟ್ರಾನ್ಸಾಕ್ಷನ್ ಯಾವಾಗಲೂ ನಿಮ್ಮ ಉಪಸ್ಥಿತಿಯಲ್ಲಿಯೇ ಆಗಬೇಕು.
ಶಾಪಿಂಗ್ ಮಾಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಕೊಟ್ಟ ಯಾವುದೇ ಸರ್ವೆ ಫಾರ್ಮ್ ನಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಕೊಡಬೇಡಿ.
ಇಂಟರ್‌ನೆಟ್‌ನಲ್ಲಿ ಶಾಪಿಂಗ್ ಮಾಡಲಾಗುವ ಟ್ರಾನ್ಸಾಕ್ಷನ್‌ಗಾಗಿ ಸದಾ ಸುರಕ್ಷಿತ ಹಾಗೂ ಮಾನ್ಯತೆ ಹೊಂದಿರುವ ವೆಬ್‌ಸೈಟ್‌ನ್ನೇ ಉಪಯೋಗಿಸಿ.
ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಿಂದ ಶಾಪಿಂಗ್ ಮಾಡಿದ ಬಳಿಕ ಲಾಗ್ ಆಫ್ ಮಾಡಿ ಹಾಗೂ ಬ್ರೌಸರ್ ಕುಕೀಸ್‌ನ್ನು ಸದಾ ಡಿಲೀಟ್ ಮಾಡಿ.
ನಿಮಗೆ ಬಂದ ಇಮೇಲ್ ಸಂದೇಶಗಳನ್ನು ಗಮನವಿಟ್ಟು ಓದಿ. ನಿಮ್ಮ ಬ್ಯಾಂಕ್ ವಿವರ ಹಾಗೂ ಖಾಸಗಿ ಮಾಹಿತಿ ಕೇಳಿದ ವಿವರಗಳುಳ್ಳ ಮೇಲ್‌ಗಳಿಗೆ ಉತ್ತರ ಕೊಡಲು ಹೋಗಲೇಬೇಡಿ. ಸಾಮಾನ್ಯವಾಗಿ ಯಾವುದೇ ಒಂದು ಬ್ಯಾಂಕ್ ಈ ರೀತಿಯ ವಿವರಗಳನ್ನು ಕೇಳುವುದಿಲ್ಲ.
ಪೇಮೆಂಟ್ ಮಾಹಿತಿಯನ್ನು ಇಮೇಲ್ ಮೂಲಕ ಕಳಿಸಬೇಡಿ. ಏಕೆಂದರೆ ಇದನ್ನು ಯಾರೇ ಆಗಲಿ ಓದಬಹುದು.
ಕೆಲವು ಆನ್‌ಲೈನ್ ಸ್ಟೋರ್‌ಗಳು ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಜೊತೆಗೆ ರಿಜಿಸ್ಟರ್ಡ್ ಮಾಡಲು ಬೇಡಿಕೆ ಇಡುತ್ತಾರೆ. ನೀವು ಯಾವಾಗಲೂ ನಿಮ್ಮ ಪಾಸ್‌ವರ್ಡ್‌ನ್ನು ಗೌಪ್ಯವಾಗಿಡಿ.
ನೆಟ್ ವರ್ಕಿಂಗ್‌ಗಾಗಿ ಸದಾ ವರ್ಚುವಲ್ ಕೀಬೋರ್ಡ್‌ನ್ನೇ ಉಪಯೋಗಿಸಿ.
ಎಚ್ಚರಿಕೆ
ಎಟಿಎಂ ಯಂತ್ರವನ್ನು ಬಳಸುವ ಸಂದರ್ಭದಲ್ಲಿ ಆತುರ ತೋರಿಸಬೇಡಿ. ಹಣ ತೆಗೆದು, ರಸೀದಿ ಪಡೆದ ಬಳಿಕ ಕ್ಯಾನ್ಸಲ್ ಬಟನ್‌ಒತ್ತಲು ಮರೆಯಬೇಡಿ.
ಒಂದುವೇಳೆ ಎಟಿಎಂ ಯಂತ್ರ ಹ್ಯಾಂಗ್ ಆದರೆ ಆ ಯಂತ್ರವನ್ನು ಬಿಟ್ಟು ಮತ್ತೊಂದು ಎಟಿಎಂಗೆ ಹೋಗಿ. ಎಟಿಎಂಗಾಗಿ ಇರುವ ಹೆಲ್ಪ್ ಲೈನ್‌ಗೆ ಮಾಹಿತಿ ಕೊಡಿ ಅಥವಾ ಅಲ್ಲಿರುವ ಸೆಕ್ಯುರಿಟಿ ಗಾರ್ಡ್‌ಗೆ ಈ ಬಗ್ಗೆ ತಿಳಿಸಿ.