ಈಗೆಲ್ಲ ನಮ್ಮ ಲೈಫ್‌ ಬಹಳ ಅವ್ಯವಸ್ಥಿತಗೊಂಡಿದೆ. ಹೀಗಿರುವಾಗ ನೀವು ಹರ್ಬಲ್ ಬಾಥ್‌ ಅಥವಾ ರಾಯಲ್ ಬಾಥ್‌ಗೆ ತೊಡಗಿದಾಗ ಮಾತ್ರ ನಿಮಗೆ ಅದ್ಭುತ ತಾಜಾತನದ ಅನುಭವ ಸಿಗಲು ಸಾಧ್ಯ. ಹೀಗಾಗಿ ಇಂಥ ಲಕ್ಷುರಿ ಬಾಥ್‌ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ?

ಕ್ಲಿಯೋಪಾತ್ರಾ ಬಾಡಿ ಪಾಲಿಶಿಂಗ್

ಇತಿಹಾಸದ ಅತಿ ಸುಂದರ ಮಹಿಳೆಯರಲ್ಲಿ ಈಜಿಪ್ಟ್ ನ ಮಹಾರಾಣಿ ಕ್ಲಿಯೋಪಾತ್ರಾ ತನ್ನ ಸೌಂದರ್ಯ ಉಳಿಸಿಕೊಳ್ಳಲು ಶುದ್ಧ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ! ತುರ್ಕಿಯ ಅಧ್ಯಯನಗಳ ಪ್ರಕಾರ ಈ ಮಹಾರಾಣಿ ತನ್ನ ಚಿರಯೌವನ ಉಳಿಸಿಕೊಳ್ಳಲೆಂದು ಕತ್ತೆ ಹಾಲಿನಲ್ಲೇ ಸ್ನಾನ ಮಾಡುತ್ತಿದ್ದಳಂತೆ. ಹೀಗೆ ತಮ್ಮ ಸೌಂದರ್ಯ ಸಂವರ್ಧನೆಗಾಗಿ ವಿಚಿತ್ರ ಹವ್ಯಾಸ ಬೆಳೆಸಿಕೊಂಡರಲ್ಲಿ ಈಕೆ ಒಬ್ಬಳೇ ಅಲ್ಲ. ಇದರಿಂದ ತಿಳಿದುಬರುವ ಅಂಶವೆಂದರೆ, ಹಸುವಿನ ಹಾಲಿಗಿಂತ ಕತ್ತೆಯ ಹಾಲಿನಲ್ಲಿ ಜಿಡ್ಡಿನಂಶ ಕಡಿಮೆ ಎಂಬುದು ಖಾತ್ರಿಯಾಯ್ತು.

ನೀವು ಸಹ ನಿಮ್ಮ ಸೌಂದರ್ಯ ಉಳಿಸಿಕೊಳ್ಳಲು ಹಾಲಿನ ಸ್ನಾನ ಮಾಡಲು ಬಯಸುವಿರಾ? `ಕ್ಲಿಯೋಪಾತ್ರಾ ಬಾಡಿ ಮಸಾಜ್‌' ಎಂದರೆ ಬಾಡಿ ಪಾಲಿಶಿಂಗ್‌ ಎಂದರ್ಥ, ಇಲ್ಲಿ ಕ್ಷೀರಾಭಿಷೇಕವೇ ಪ್ರಧಾನ.

ಇದಕ್ಕಾಗಿ ಸೌಂದರ್ಯ ತಜ್ಞೆಯರು ಮೊದಲು ಮಖಮಲ್ ಬಟ್ಟೆಯಲ್ಲಿ ಹಲವಾರು ಬಗೆಯ ಗಿಡಮೂಲಿಕೆ ಬೆರೆಸಿ ಮಿಶ್ರಣ ತಯಾರಿಸಿಕೊಂಡು, ಆ ಗಂಟನ್ನು ಬೆಚ್ಚಗಿನ ಹಾಲಿನಲ್ಲಿ ಅದ್ದಿ, ರಾಯಲ್ ಬಾಥ್‌ಗಾಗಿ ಬಂದವರ ದೇಹದ ಮೇಲೆ ಉಜ್ಜಿ ಮಸಾಜ್‌ಮಾಡುತ್ತಾರೆ. ಈ ರೀತಿ 10 ನಿಮಿಷ ಸತತ ಮಸಾಜ್‌ ಮಾಡಿದ ನಂತರ, ತಮ್ಮ ಕೈಗಳಿಂದ ಅದುಮುತ್ತಾ ಮಸಾಜ್‌ ಮಾಡುತ್ತಾರೆ. ಇಂಥ ಮಸಾಜ್‌ನಿಂದ ಬಾಡಿಯ ಡೆಡ್‌ ಸ್ಕಿನ್‌ತೊಲಗಿಹೋಗುತ್ತದೆ ಹಾಗೂ ಟ್ಯಾನಿಂಗ್‌ ಸಹ ದೂರಾಗುತ್ತದೆ. ಈ ಗಂಟಿನಲ್ಲಿನ ಮಿಶ್ರಣವನ್ನು (ಸ್ಕ್ರಬ್‌) ನೈಸರ್ಗಿಕವಾಗಿ ತಯಾರಿಸಲಾಗಿದೆ. ಇದು ಒಂದು ಪ್ರಾಕೃತಿಕ ಚಿಕಿತ್ಸೆಯಾಗಿದೆ. ಇದಕ್ಕೆ ಯಾವುದೇ ಸೈಡ್‌ ಎಫೆಕ್ಟ್ಸ್ ಇರುವುದಿಲ್ಲ. ಈ ನ್ಯಾಚುರಲ್ ಮಸಾಜ್‌ ಆದ 1-2 ವಾರ, ಕೆಮಿಕಲ್ ಮಸಾಜ್‌ಮಾಡಿಸಬಾರದೆಂಬುದನ್ನು ಗಮನಿಸಿ. ಈ ಮಿಲ್ಕ್ ಮಸಾಜ್‌ನ ಮುಖ್ಯ ಲಾಭ ಎಂದರೆ, ಇದು ತ್ವಚೆಯ ಡೆಡ್‌ ಸ್ಕಿನ್‌ನ್ನು ಬೇಗ ತೊಲಗಿಸುತ್ತದೆ ಹಾಗೂ ಟ್ಯಾನಿಂಗ್‌ ಕೊನೆಗೊಳಿಸುತ್ತದೆ. ಇದರಿಂದ ಚರ್ಮ ಅತಿ ಮೃದುವಾಗುತ್ತದೆ.

ಈ ಮಿಶ್ರಣದಲ್ಲಿ ಬೆರೆತ ಹರ್ಬಲ್ ಅಂಶಗಳಲ್ಲೇ ಚರ್ಮವನ್ನು ಶುದ್ಧೀಕರಿಸಿ ಕಾಂತಿ ಹೆಚ್ಚಿಸುವ ಅಂಶ ಬೆರೆತಿರುತ್ತದೆ. ಇದನ್ನು ಹಾಲಿನಲ್ಲಿ ಮತ್ತೆ ಮತ್ತೆ ಅದ್ದಿ ಮಸಾಜ್‌ ಮಾಡುವುದರಿಂದ ಚರ್ಮಕ್ಕೆ ಕೋಮಲತೆ, ಸೌಂದರ್ಯ ತಂತಾನೇ ಒದಗುತ್ತದೆ. ಹಾಲಿನ ಮಸಾಜ್‌ನಿಂದ ಚರ್ಮ ಅಂಟಂಟಾಗುವುದಿಲ್ಲ. ಈ ಮಿಶ್ರಣದಲ್ಲೇ ಅಂಥ ಉನ್ನತ ಅಂಶಗಳು ಅಡಗಿದ್ದು, ಚರ್ಮವನ್ನು ಎಲ್ಲಾ ವಿಧದಲ್ಲೂ ಕಾಪಾಡುತ್ತದೆ.

ಬಿಸಿ ನೀರು ಅಥವಾ ಬೆಚ್ಚಗಿನ ಹಾಲಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಮಾಂಸಖಂಡಗಳಿಗೆ ಎಷ್ಟೋ ಹಿತವೆನಿಸುತ್ತದೆ. ಅಷ್ಟು ಮಾತ್ರವಲ್ಲದೆ, ಚರ್ಮದ ರೋಮರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ಹೊರಗಿನ ಗಾಳಿ ಒಳಹೊಕ್ಕು, ಒಳಗಿನ ಬೆವರು ಹೊರಬಂದು, ದೇಹದ ತಾಪಮಾನ ಬ್ಯಾಲೆನ್ಸ್ ಆಗುತ್ತದೆ. ಬಾಥ್‌ ಟಬ್‌ನಲ್ಲಿ ತುಂಬಿರುವ ಬಿಸಿ ನೀರಲ್ಲಿ ದೇಹವನ್ನು ಮುಳುಗಿಸಿ ಸ್ನಾನ ಮಾಡುವುದರಿಂದ ದೇಹದ ಪ್ರತಿ ಭಾಗಕ್ಕೂ ಹಿತವೆನಿಸುತ್ತದೆ. ಆದರೆ ನೀರು ಹೆಚ್ಚು ಬಿಸಿ ಆಗಿರಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ