ಪಾರ್ಟಿಗೆ ಹೋಗುವ ಮೊದಲು ನಾವು ನಮ್ಮ ಡ್ರೆಸ್‌ ಮತ್ತು ಮೇಕಪ್‌ಗೆ ಸಂಬಂಧಿಸಿದಂತೆ ಸಣ್ಣಪುಟ್ಟ ವಿಷಯಗಳಿಗೂ ಗಮನ ಕೊಡುತ್ತೇವೆ. ಆದರೆ ಆ್ಯಕ್ಸೆಸರೀಸ್‌ನ್ನು ಹೆಚ್ಚು ಗಮನಿಸುವುದಿಲ್ಲ. ಎಲ್ಲ ಕಡೆ ಒಂದೇ ರೀತಿಯ ಫುಟ್‌ವೇರ್‌ ಮತ್ತು ಹ್ಯಾಂಡ್‌ ಬ್ಯಾಗ್ ತೆಗೆದುಕೊಂಡು ಹೋಗುತ್ತೇವೆ. ಇನ್ನೇನು ಬದಲಾಯಿಸುವುದು, ಇನ್ನು ಯಾರು ನೋಡುತ್ತಾರೆ ಎಂದು ಯೋಚಿಸುತ್ತೇವೆ. ಪಾರ್ಟಿಗಳಲ್ಲಿ ಪ್ರತಿಯೊಬ್ಬರ ಗಮನ ಡ್ರೆಸ್‌ ಮತ್ತು ಮೇಕಪ್‌ ಮೇಲಿರುತ್ತದೆ. ಆದರೆ ನಮ್ಮ ಪರ್ಸನಾಲಿಟಿಯಲ್ಲಿ ಹ್ಯಾಂಡ್‌ ಬ್ಯಾಗ್‌ಮತ್ತು ಫುಟ್‌ವೇರ್‌ ಬಹಳ ಮಹತ್ವಪೂರ್ಣವಾಗಿರುತ್ತವೆ ಎಂದು ನಿಮಗೆ ಗೊತ್ತೆ? ಅವುಗಳಿಂದ ನಮ್ಮ ಪರ್ಸನಾಲಿಟಿ ಆಕರ್ಷಕವಾಗಿರುತ್ತದೆ. ಕೆಲವು ಭಾರಿ ಇವುಗಳ ಆಯ್ಕೆಯಲ್ಲಿ ನಾವು ಸಣ್ಣಪುಟ್ಟ ತಪ್ಪು ಮಾಡಿಬಿಡುತ್ತೇವೆ. ಕಿಟಿ ಪಾರ್ಟಿಗಳಿಗೆ ಫಾರ್ಮಲ್ ಹ್ಯಾಂಡ್‌ ಬ್ಯಾಗ್‌ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಯಾರಾದರೂ, “ನಿನ್ನನ್ನು ನೋಡಿದ್ರೆ ಆಫೀಸಿನ ಪಾರ್ಟಿಗೆ ಬಂದಹಾಗೆ ಬಂದಿದ್ದೀಯ,” ಎಂದು ಕಾಮೆಂಟ್‌ ಮಾಡುತ್ತಾರೆ.

ಹೀಗೆಯೇ ಯಾವುದಾದರೂ ಪೂಲ್ ‌ಪಾರ್ಟಿಗೆ ಹೈಹೀಲ್ಡ್ ಲೆದರ್‌ ಫುಟ್‌ವೇರ್‌ ಧರಿಸಿ ಹೋದರೆ ಅಲ್ಲಿ ಪ್ರತಿಯೊಬ್ಬರೂ ಪೂಲ್ ಪಾರ್ಟಿಗೆ ಹೈಹೀಲ್ಡ್ ಏಕೆ ಧರಿಸಿದೆ ಎಂದು ಕೇಳುತ್ತಾರೆ. ಆಗ ನಮ್ಮ ಫುಟ್‌ವೇರ್‌ ಬಗ್ಗೆ ಕೊಂಚ ಗಮನ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸುತ್ತದೆ. ನಿಮಗೆ ಹೀಗೆ ಆಗದಿರಲು ಡ್ರೆಸ್‌ ಮತ್ತು ಮೇಕಪ್‌ನೊಂದಿಗೆ ಹ್ಯಾಂಡ್‌ ಬ್ಯಾಗ್‌ ಮತ್ತು ಫುಟ್‌ವೇರ್‌ನ ಆಯ್ಕೆಗೆ ಸಂಪೂರ್ಣ ಗಮನಕೊಡಿ.

ನಿಮ್ಮ ಹ್ಯಾಂಡ್ಬ್ಯಾಗ್ಹೇಗಿರಬೇಕು?

ಮಹಿಳೆಯರು ಆಫೀಸ್‌ ಬ್ಯಾಗ್‌ನ್ನೇ ಪಾರ್ಟಿ ಮತ್ತು ಶಾಪಿಂಗ್‌ಗೆ ತೆಗೆದುಕೊಂಡು ಹೋಗುತ್ತಾರೆ. ಮಹಿಳೆಯರು ಹ್ಯಾಂಡ್‌ ಬ್ಯಾಗ್‌ನಲ್ಲಿ ಎಷ್ಟು ವಸ್ತುಗಳನ್ನು ತುರುಕುತ್ತಾರೆಂದರೆ ಬ್ಯಾಗು ಹರಿಯತೊಡಗುತ್ತದೆ. ಇದು ಒಂದು ಫ್ಯಾಷನ್‌ ಆ್ಯಕ್ಸೆಸರೀಸ್‌ ಆಗಿದ್ದು ಅದನ್ನು ಸ್ಟೈಲ್ ‌ಸ್ಟೇಟ್‌ಮೆಂಟ್‌ನಂತೆ ಉಪಯೋಗಿಸಿ. ಇದನ್ನು ಆಯ್ಕೆ ಮಾಡುವಾಗ ನೀವು ಯಾವ ಸಂದರ್ಭಕ್ಕೆ ಹೋಗುತ್ತಿದ್ದೀರಿ, ನೀವು ಯಾವ ಡ್ರೆಸ್‌ ಧರಿಸುತ್ತೀರಿ ಎಂದು ಅಗತ್ಯವಾಗಿ ಗಮನ ಕೊಡಿ. ಇಂದು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಹ್ಯಾಂಡ್ ಬ್ಯಾಗ್‌ಗಳು ಮತ್ತು ಪರ್ಸ್‌ಗಳು ಲಭ್ಯವಿವೆ. ಅವನ್ನು ವಿಭಿನ್ನ ಸಂದರ್ಭಗಳಿಗೆ ತೆಗೆದುಕೊಂಡು ಹೋದಾಗ ಡಿಫರೆಂಟ್‌ ಮತ್ತು ಸ್ಟೈಲಿಶ್‌ ಲುಕ್‌ ಪಡೆಯಬಹುದು.

ಪೋಟಲಿ ಬ್ಯಾಗ್‌ : ಪಾರ್ಟಿಗೆ ಹೋಗಲು ಸೀರೆ ಅಥವಾ ಅನಾರ್ಕಲಿ ಸೂಟ್‌ ಧರಿಸುತ್ತಿದ್ದರೆ ನಿಮ್ಮ ಪರ್ಸನಾಲಿಟಿಗೆ ಪರ್ಫೆಕ್ಟ್ ಲುಕ್ ಕೊಡಲು ಪೋಟಲಿಯಂತಹ ಪರ್ಸ್‌ ತೆಗೆದುಕೊಳ್ಳಿ. ಈ ಪರ್ಸ್‌ ಮದುವೆ ಅಥವಾ ನಿಶ್ಚಿತಾರ್ಥದಂತಹ ಸಂದರ್ಭಗಳಲ್ಲಿ ಬಹಳ ಚೆನ್ನಾಗಿರುತ್ತದೆ. ಈ ಬ್ಯಾಗ್‌ನಲ್ಲಿ ಒಂದು ಸ್ಟ್ರಿಂಗ್‌ ಇದ್ದು ಅದನ್ನು ನಿಮ್ಮ ಲಹಂಗದ ಒಳಗೆ ಟಕ್‌ ಮಾಡಿಕೊಳ್ಳಬಹುದು. ಇದು ಸಾಕಷ್ಟು ಒಳ್ಳೆಯ ಲುಕ್‌ ಕೊಡುತ್ತದೆ. ಒಂದುವೇಳೆ ನೀವು ಅನಾರ್ಕಲಿ ಸೂಟ್‌ ಧರಿಸಿದ್ದರೆ ಮುಂಗೈಗೂ ಸಿಕ್ಕಿಸಿಕೊಳ್ಳಬಹುದು. ಇದರಲ್ಲಿ ಎಷ್ಟು ಸ್ಪೇಸ್‌ ಇರುತ್ತದೆಂದರೆ ಲಿಪ್‌ಸ್ಟಿಕ್‌, ಕಾಂಪ್ಯಾಕ್ಟ್, ಬೀಸಣಿಗೆ, ಕಾಜಲ್‌ನಂತಹ ಮೇಕಪ್‌ ಸಾಮಾನುಗಳನ್ನು ಇಟ್ಟುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಈ ಪೋಟಲಿ ಬ್ಯಾಗ್‌ 250 ರೂ.ಗಳಿಂದ 550 ರೂ.ಗಳವರೆಗೆ ಬೇರೆ ಬೇರೆ ಡಿಸೈನ್‌ಗಳಲ್ಲಿ ಲಭ್ಯವಿದೆ.

ಕ್ಲಚ್‌ : ಈ ಬ್ಯಾಗ್‌ ಸಾಕಷ್ಟು ಸ್ಟೈಲಿಶ್‌ ಆಗಿರುತ್ತದೆ. ಇದನ್ನು ಸೀರೆ, ಲಹಂಗ, ಗೌನ್‌ ಅಥವಾ ಒನ್‌ಪೀಸ್‌ನೊಂದಿಗೆ ಕ್ಯಾರಿ ಮಾಡಬಹುದು. ಇದು ಚಿಕ್ಕ ಸೈಜ್‌ನಲ್ಲಿದ್ದು ತೂಕ ಕಡಿಮೆ ಇರುತ್ತದೆ. ಆದರೂ ಇದರಲ್ಲಿ ಮೇಕಪ್‌ನ ಅಗತ್ಯದ ವಸ್ತುಗಳನ್ನು ಸುಲಭವಾಗಿ ಇಡಬಹುದು. ಗೋಲ್ಡನ್‌, ಸ್ಯಾಟಿನ್‌, ವೆಲ್ವೆಟ್‌, ಜ್ಯೂಟ್‌ನಿಂದ ತಯಾರಿಸಿದ ಈ ಬ್ಯಾಗ್‌ಗಳು ಬೇರೆ ಬೇರೆ ವೆರೈಟಿಗಳಲ್ಲಿ 300 ರೂ.ಗಳಿಂದ 500 ರೂ.ಗಳರೆಗೆ ಸಿಗುತ್ತದೆ.

ಹೋಬೋ ಬ್ಯಾಗ್‌: ಈ ಬ್ಯಾಗ್‌ ಕ್ಲ್ಯಾಸಿಕ್‌ ಕಲೆಕ್ಷನ್‌ನಲ್ಲಿ ಬರುತ್ತದೆ. ಇದು ಔಟಿಂಗ್‌ಗೆ ಚೆನ್ನಾಗಿರುತ್ತದೆ. ಇದರಲ್ಲಿ ಅಗತ್ಯದ ವಸ್ತುಗಳನ್ನು ಸುಲಭವಾಗಿ ಇಡಬಹುದು. ಇದು ಫ್ರೆಂಡ್ಸ್ ಮತ್ತು ಫ್ಯಾಮಿಲಿಯ ಜೊತೆ ವೀಕೆಂಡ್‌ನಲ್ಲಿ ಕ್ಯಾರಿ ಮಾಡಲು ಬೆಸ್ಟ್. 600 ರೂ.ಗಳಲ್ಲಿ ಒಳ್ಳೆಯ ಕ್ವಾಲಿಟಿಯ ಬ್ಯಾಗ್‌ ಸಿಗುತ್ತದೆ.

ಈವ್ನಿಂಗ್ಬ್ಯಾಗ್‌ : ಇದು ಫಾರ್ಮಲ್ ಈವೆಂಟ್‌ಗೆ ಚೆನ್ನಾಗಿರುತ್ತದೆ. ನೀವು ಆ್ಯನಿರ್ಸರಿ ಪಾರ್ಟಿಗೆ ಅಥವಾ ಡಿನ್ನರ್‌ ಪಾರ್ಟಿಗೆ ಹೋಗುತ್ತಿದ್ದರೆ ಇದನ್ನು ತೆಗೆದುಕೊಂಡು ಹೋಗಬಹುದು. ಮಾರುಕಟ್ಟೆಯಲ್ಲಿ ಇದು 400 ರೂ.ಗೆ ಸಿಗುತ್ತದೆ.

ಟೋಟಲ್ ಬ್ಯಾಗ್‌ : ಪಾರ್ಟಿಗೆ ಸೀರೆಯುಟ್ಟು ಕೊಂಚ ಗ್ಲಾಮರಸ್‌ ಮತ್ತು ಕೊಂಚ ಟ್ರೆಡಿಶನ್‌ ಲುಕ್‌ ಪಡೆಯಬೇಕೆಂದಿದ್ದು, ಜೊತೆಗೆ ಕಂಫರ್ಟೆಬಲ್ ಆಗಿಯೂ ಇರಬೇಕೆಂದಿದ್ದರ ಬೀಡ್ಸ್ ಇರುವ ಈ ಟೋಟಲ್ ಬ್ಯಾಗ್‌ ತೆಗೆದುಕೊಂದು ಹೋಗಿ. ಇದು ನಿಮಗೆ ಡಿಫರೆಂಟ್‌ ಲುಕ್‌ ಕೊಡುತ್ತದೆ. ಇದರ ರೇಂಜ್‌ 600 ರೂ.ಗಳಿಂದ ಶುರುವಾಗುತ್ತದೆ.

ಸ್ಲಿಂಗಲ್ ಬ್ಯಾಗ್‌ : ಈ ಬ್ಯಾಗ್‌ ಸಾಕಷ್ಟು ಕಂಫರ್ಟೆಬಲ್ ಆಗಿರುತ್ತದೆ. ಇದನ್ನು ನೀವು ಸೈಡ್‌ನಲ್ಲಿ ಅಥವಾ ಕ್ರಿಸ್‌ ಕ್ರಾಸ್‌ ಆಗಿಯೂ ಕ್ಯಾರಿ ಮಾಡಬಹುದು. ನೀವು ಪಾರ್ಟಿಗೆ ಫಂಕಿ ಡ್ರೆಸ್‌ ಧರಿಸುವುದಾದರೆ ಸ್ಲಿಂಗಲ್ ಬ್ಯಾಗ್‌ ಕ್ಯಾರಿ ಮಾಡಿ. ಸ್ಲಿಂಗಲ್ ಬ್ಯಾಗ್‌ನ್ನು ರೇನ್‌ ಪಾರ್ಟಿ ಮತ್ತು ಪೂಲ್ ‌ಪಾರ್ಟಿಗಳಿಗೂ ಕ್ಯಾರಿ ಮಾಡಬಹುದು.

ಇಂಡೋವೆಸ್ಟರ್ನ್ಪರ್ಸ್‌ : ಕಾಕ್‌ಟೇಲ್ ‌ಪಾರ್ಟಿಗೆ ಹೋಗುತ್ತಿದ್ದರೆ ಗ್ಲಾಮರಸ್‌ ಆಗಿ ಕಾಣಲು ಇಂಡೋವೆಸ್ಟರ್ನ್‌ ಪರ್ಸ್‌ ಕ್ಯಾರಿ ಮಾಡಿ. ಇದನ್ನು ನೀವು ಗೌನ್‌, ಸೀರೆ ಇತ್ಯಾದಿ ಡ್ರೆಸ್‌ನೊಂದಿಗೆ ಕ್ಯಾರಿ ಮಾಡಬಹುದು. ಈ ದಿನಗಳಲ್ಲಿ ಿ್ ‌ಶೇಪ್ಡ್ ಪರ್ಸ್‌ಗಳೂ ಟ್ರೆಂಡ್‌ನಲ್ಲಿವೆ. ಅ ಎಲ್ಲ ಬಣ್ಣಗಳಲ್ಲಿ ಲಭ್ಯವಿವೆ.

ವಿಭಿನ್ನ ಸಂದರ್ಭಗಳಲ್ಲಿ ಫುಟ್ವೇರ್ಹೇಗಿರಬೇಕು?

ಈವ್ನಿಂಗ್ಪಾರ್ಟಿ : ಈವ್ನಿಂಗ್‌ ಪಾರ್ಟಿ ಮತ್ತು ವಿಶೇಷ ಸಂದರ್ಭಗಳಲ್ಲಿ ಫ್ಲ್ಯಾಟ್‌ ಅಥವಾ ತೆಳುವಾದ ಹೀಲ್‌ನ ಸ್ಯಾಂಡಲ್ ಧರಿಸಿ. ಅಗಲವಾದ ಹೀಲ್‌‌ನ ಸ್ಯಾಂಡಲ್ ಕೂಡ ಸಾಕಷ್ಟು ಆರಾಮದಾಯಕವಾಗಿರುತ್ತದೆ. ಅವು ಕಾಲುಗಳಿಗೆ ವಿಶ್ರಾಂತಿ ಕೊಡುತ್ತದೆ. ಅವನ್ನು ಧರಿಸಿ ನಡೆಯುವುದೂ ಸುಲಭ. ನೀವು ಪಾರ್ಟಿಯಲ್ಲಿ ಬಹಳ ನಡೆಯಬೇಕಾಗಿದ್ದಲ್ಲಿ ಅಗಲ ಹೀಲ್‌‌ನ ಫುಟ್‌ವೇರ್‌ ಧರಿಸಿ ಬಹಳ ಹೊತ್ತು ನಡೆಯಲಾಗುವುದಿಲ್ಲ. ನೀವು ಕಂಫರ್ಟೆಬಲ್ ಫುಟ್‌ವೇರ್‌  ಬಯಸಿದ್ದರೆ ಕಾಬ್ಸ್‌ನ ಫುಟ್‌ವೇರ್‌ನಲ್ಲಿ ಸಾಕಷ್ಟು ವೆರೈಟಿ ಲಭ್ಯವಿವೆ, ಈವ್ನಿಂಗ್‌ ಪಾರ್ಟಿಗಳಿಗೆ ಇವನ್ನೇ ಆರಿಸಿ.

ನೈಟ್ಪಾರ್ಟಿ : ನೈಟ್‌ ಪಾರ್ಟಿಗಳಲ್ಲಿ ನೀವು ಡ್ಯಾನ್ಸ್ ಮಾಡುತ್ತೀರಿ. ಆದ್ದರಿಂದ ಸರಿಯಾದ ಫುಟ್‌ವೇರ್‌ ಆರಿಸಬೇಕು. ನಿಮಗೆ ಕಂಫರ್ಟೆಬಲ್ ಅನ್ನಿಸುವವರೆಗೆ ನೀವು ಡ್ಯಾನ್ಸ್ ನ ಮಜಾ ಪಡೆಯಲಾಗುವುದಿಲ್ಲ. ನೈಟ್‌ ಪಾರ್ಟಿಗಳಲ್ಲಿ ಿಜ್‌ ಹೀಲ್ಸ್ ಅತ್ಯಂತ ಆರಾಮದಾಯಕ. ಅದರಲ್ಲಿ ನೀವು ಬಹಳ ಸುಲಭವಾಗಿ ಓಡಾಡಬಹುದು, ನರ್ತಿಸಬಹುದು. ಇಂತಹ ಹೀಲ್ಸ್ ಕಾಲುಗಳಿಗೆ ಸಂಪೂರ್ಣ ಸಪೋರ್ಟ್‌ ನೀಡುತ್ತದೆ. ನಿಮಗೆ ಕೊಂಚ ಅಸಹಜತೆ ಅನ್ನಿಸುವುದಿಲ್ಲ. ನೈಟ್‌ ಪಾರ್ಟಿಗೆ ಧರಿಸುವ ಫುಟ್‌ವೇರ್‌ಗಳಲ್ಲಿ ಹೆಚ್ಚು ಮುತ್ತುಗಳಿರದಂತೆ ಗಮನಿಸಿ.

ಔಟಿಂಗ್‌ : ಗೆಳತಿಯರೊಂದಿಗೆ ಔಟಿಂಗ್‌ಗೆ ಹೋಗುತ್ತಿದ್ದರೆ ಫ್ಲ್ಯಾಟ್‌ ಬೆಲಿ ಧರಿಸುವುದು ಒಳ್ಳೆಯದು. ನಿಮ್ಮ ಡ್ರೆಸ್‌ನೊಂದಿಗೆ ಬೆಲಿ ಮ್ಯಾಚ್‌ ಆಗದಿದ್ದರೆ ಶೂಸ್‌ ಕೂಡ ಧರಿಸಬಹುದು.

ಕಿಟಿ ಪಾರ್ಟಿ : ಕಿಟಿ ಪಾರ್ಟಿಗಳಲ್ಲಿ ನೀವು ನಿಮ್ಮ ಫ್ಯಾಷನ್‌ ತೋರಿಸಬಹುದು. ನಿಮ್ಮ ಡ್ರೆಸ್‌ಗೆ ತಕ್ಕಂತೆ ಫುಟ್‌ವೇರ್‌ ಆರಿಸಿ. ನೀವು ಸಿಂಪಲ್ ಹಾಗೂ ಸೋಬರ್‌ ಡ್ರೆಸ್‌ ಧರಿಸಿದ್ದರೆ ಫುಟ್‌ವೇರ್‌ ಫಾರ್ಮಲ್ ಆಗಿರಲಿ. ಕಿಟಿ ಪಾರ್ಟಿಗೆ ಕಿಟನ್‌ ಹೀಲ್ಸ್ ನ ಫುಟ್‌ವೇರ್ ಆರಿಸಿ. ಅದು ಆರಾಮದಾಯಕ ಅಲ್ಲದೆ, ಕ್ಯಾರಿ ಮಾಡಲೂ ಸುಲಭ. ಎಲ್ಲ ರೀತಿಯ ಔಟ್‌ಫಿಟ್‌ ಜೊತೆ ಚೆನ್ನಾಗಿರುತ್ತದೆ. ವಿಶೇಷವೆಂದರೆ ಕಿಟನ್‌ ಹೀಲ್ಸ್ ಎಂದಿಗೂ ಔಟ್‌ಆಫ್‌ ಫ್ಯಾಷನ್‌ ಆಗುವುದಿಲ್ಲ.

ಮ್ಯಾರೇಜ್ಪಾರ್ಟಿ : ಮದುವೆ ಅಥವಾ ನಿಶ್ಚಿತಾರ್ಥದಂತಹ ಸಂದರ್ಭಗಳಲ್ಲಿ ಯಾವಾಗಲೂ ಹೈಹೀಲ್ಸ್ ಧರಿಸಿ. ಅದು ನಿಮ್ಮ ಫಿಗರ್‌ಗೆ ಒಳ್ಳೆಯ ಲುಕ್‌ ಕೊಡುತ್ತದೆ. ಆದರೆ ಡ್ರೆಸ್‌ಗೆ ಮ್ಯಾಚಿಂಗ್‌ ಆಗಬೇಕು. ಅಲ್ಲಿ ಸ್ಟೆಲಿಯೊ ಸಹ ಧರಿಸಬಹುದು. ಅಂತಹ ಸಂದರ್ಭದಲ್ಲಿ ಸ್ಟೋನ್‌ ಮತ್ತು ಮುತ್ತುಗಳನ್ನು ಅಳವಡಿಸಿದ ಫುಟ್‌ವೇರ್‌ ಧರಿಸಿ. ಅದು ಸೆಕ್ಸಿ ಲುಕ್‌ ಕೊಡುತ್ತದೆ.

ಟ್ರೆಂಡಿ ಫುಟ್ವೇರ್‌ : ಟ್ರೆಂಡಿ ಫುಟ್‌ವೇರ್‌ನಲ್ಲಿ ಈಗ ಕೊಲ್ಹಾಪುರಿ ಚಪ್ಪಲಿಗಳು ಹಾಗೂ ಮೋಜರಿ ಫ್ಯಾಷನ್‌ನಲ್ಲಿ ಇವೆ. ಇವನ್ನು ನಿಮ್ಮ ಡ್ರೆಸ್‌ನೊಂದಿಗೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬೇರಾವುದೇ ಡ್ರೆಸ್‌ನೊಂದಿಗೆ ಧರಿಸಬಹುದು. ಇವು ಬೇರೆ ಬೇರೆ ಡಿಸೈನ್‌ಗಳು ಮತ್ತು ಬಣ್ಣಗಳಲ್ಲಿ ಲಭ್ಯವಿದ್ದು ನಿಮಗೆ ಟ್ರೆಡಿಶನ್‌ ಲುಕ್‌ ಕೊಡುತ್ತದೆ.

ಎಂ. ಜಾನಕಿ

Tags:
COMMENT