ಕೇರಳದ ಸುಂದರಿ ಅನ್ವಿತಾ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವಂಥ ತಾರೆ. ಅನ್ವಿತಾಳಿಗೆ `ಪ್ರೀತಿಯಲ್ಲಿ ಸಹಜ' ಕನ್ನಡದ ಮೊದಲ ಚಿತ್ರವಾಗಲಿದೆ. ಉತ್ತರ ಉನ್ನಿ ಎನ್ನುವ ಹೆಸರಿನ ಮಲಯಾಳಂ ಹುಡುಗಿಯಾಗಿ ಈ ಚಿತ್ರದಲ್ಲಿ ರಘು ಮುಖರ್ಜಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.  ತನ್ನ ಮೊದಲ ಕನ್ನಡ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡುವ ಅನ್ವಿತಾ, ``ಕನ್ನಡ ಚಿತ್ರಗಳ ಬಗ್ಗೆ ತುಂಬಾನೆ ಆಸಕ್ತಿ ಇತ್ತು. ರತ್ನಜ ಅವರು ನನಗೊಂದು ಒಳ್ಳೆ ಅವಕಾಶ ಕೊಟ್ಟಾಗ ನಿಜಕ್ಕೂ ಧನ್ಯಳಾದೆ. ನಿಜಕ್ಕೂ ಇದೊಂದು ಒಳ್ಳೆ ಅನುಭವ. ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಸುಹಾಸಿನಿ ಮೇಡಂ, ದೇವರಾಜ್ ಸಾರ್‌ ಇವರ ಜೊತೆ ನಟಿಸುವುದೇ ಒಂದು ಚಾಲೆಂಜ್‌.

``ನಾನು ಕನ್ನಡ ಕಲಿತುಕೊಳ್ಳುವುದರ ಜೊತೆಗೆ ಡೈಲಾಗನ್ನು ಬಾಯಿ ಪಾಠ ಮಾಡಿ ಯಾವುದೇ ಪ್ರಾಮ್ಟಿಂಗ್‌ ಇಲ್ಲದೇ ಒಪ್ಪಿಸುತ್ತಿದ್ದೆ. ಇದರಿಂದ ಎಕ್ಸ್ ಪ್ರೆಶನ್‌ ಕೊಡುವುದಕ್ಕೆ ಸಹಾಯವಾಗುತಿತ್ತು.

anvitha-1

``ರಘು ಮುಖರ್ಜಿ ಕೂಡಾ ತುಂಬಾನೇ ಹೆಲ್ಪ್ ಮಾಡಿದ್ದಾನೆ. ಲೊಕೇಶನ್‌ಗಳೂ ಸುಂದರವಾಗಿರುತ್ತಿತ್ತು. ಅದರ ಜೊತೆಗೆ ರಘು, ಕಲಾವಿದರು, ಇಡೀ ತಂಡ ನನ್ನನ್ನು ಹೊಸಬಳಂತೆ ಇರಲು ಬಿಡುತ್ತಿರಲಿಲ್ಲ, ನಾನೂ ಕೂಡ ಕನ್ನಡದ ಹುಡುಗಿ ಎನ್ನುವಷ್ಟು ಸಂತಸದ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ನನ್ನನ್ನು ಇಡೀ ತಂಡ ಚೆನ್ನಾಗಿ ನೋಡಿಕೊಂಡಿದೆ,''  ಎಂದು ಹೇಳುವ ಅನ್ವಿತಾ, 2011ರಲ್ಲಿ `ಮಿಸ್‌ ಮಲಬಾರ್‌' ಸುಂದರಿಯಾಗಿ ಗೆದ್ದಿದ್ದಳಂತೆ.

``ಖ್ಯಾತ ಕೊರಿಯಾಗ್ರಾಫರ್‌ ಸರೋಜ್‌ ಖಾನ್‌ ಅವರ ಜೊತೆ ಒಂದೇ ವೇದಿಕೆ ಹಂಚಿಕೊಂಡು ಜಡ್ಜ್ ಆಗಿ ಕಾರ್ಯಕ್ರಮ ವೀಕ್ಷಿಸಿದ್ದೀನಿ. ನಿಜಕ್ಕೂ ಹೆಮ್ಮೆಯಾಗುತ್ತೆ,'' ಎನ್ನುತ್ತಾಳೆ ಅನ್ವಿತಾ.

ಅನ್ವಿತಾ ಕನ್ನಡ, ಮಲಯಾಳಂ ಚಿತ್ರಗಳಲ್ಲದೇ ಇದೀಗ ಹಿಂದಿ ಚಿತ್ರವೊಂದರಲ್ಲೂ ನಟಿಸಲಿದ್ದಾಳೆ. ``ಹೌದು, ನಾನೊಂದು ಹಿಂದಿ ಚಿತ್ರ ಕೂಡ ಒಪ್ಪಿಕೊಂಡಿದ್ದೇನೆ. ಜನಪ್ರಿಯ ತಾರೆಯರಿದ್ದಾರೆ. ಸಮಗ್ರ ಗಣೇಶ್‌ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಈಗಾಗಲೇ ಸಾಕಷ್ಟು ಕೆಲಸ ಶುರುವಾಗಿದೆ. ಇದೊಂದು ನೈಜ ಕಥೆಯಾಧಾರಿತ ಚಿತ್ರ. ನಾನು ಚಿತ್ರದ ನಾಯಕಿ, ಪ್ರಮುಖ ಪಾತ್ರವಿದು. ಮೊದಲ ಬಾರಿಗೆ ಇಂಥದ್ದೊಂದು ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಮನಾಲಿ, ಲಖ್ನೌದಂಥ ಸುಂದರ ತಾಣಗಳಲ್ಲಿ ಶೂಟಿಂಗ್‌ ನಡೆಯಲಿದೆ,'' ಎಂದು ಹೇಳುತ್ತಾಳೆ ಅನ್ವಿತಾ.

anvitha-2

ಅನ್ವಿತಾ ಮಲಯಾಳಂ ಚಿತ್ರಗಳ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಒಳ್ಳೆ ಹೆಸರು ಮಾಡಬೇಕೆಂದು ಆಸೆ ಪಡುತ್ತಾಳೆ. ತನ್ನ ಮೊದಲ ಕನ್ನಡ ಚಿತ್ರ ನೋಡಿ ಜನ ಹೇಗೆ ಪ್ರತಿಕ್ರಿಯಿಸುತ್ತಾರೋ ಎನ್ನುವ ಕುತೂಹಲವನ್ನೂ ಇಟ್ಟುಕೊಂಡಿದ್ದಾಳೆ. ಪ್ರತಿಭೆ ಇದ್ದು ಜನ ಮೆಚ್ಚಿಕೊಂಡರೆ ಖಂಡಿತ ಅನ್ವಿತಾಳಿಗೆ ಒಳ್ಳೆ ಅವಕಾಶಗಳು ಸಿಗಬಹುದು ಅನ್ಸುತ್ತೆ.

ಸಿನಿಮಾ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಅನ್ವಿತಾ ಎಲ್ಲ ಭಾಷೆಯ ಚಿತ್ರಗಳನ್ನೂ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಒಳ್ಳೆ ಚಿತ್ರಗಳನ್ನು ನೋಡುವುದರ ಮೂಲಕ ಅದರಲ್ಲಿ ಪಾತ್ರವಹಿಸಿರುವ ಕಲಾವಿದರನ್ನು ಗಮನಿಸಿ ಅವರಿಂದ ಕಲಿತುಕೊಳ್ಳುತ್ತಾಳಂತೆ. ಮಾಡೆಲಿಂಗ್‌ ದುನಿಯಾದಲ್ಲಿ ಅನುಭವ ಹೊಂದಿರುವ ಅನ್ವಿತಾ ಫ್ಯಾಷನ್‌ ಬಗ್ಗೆ ತನ್ನದೇ ಆದ ಸ್ವಂತಿಕೆಯನ್ನು ರೂಢಿಸಿಕೊಂಡಿದ್ದಾಳಂತೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ ತೊಡುವ ಅನ್ವಿತಾ `ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ರತ್ನಜ ಅವರಿಗಿರುವ ಅಭಿರುಚಿಯನ್ನು ಇಷ್ಟಪಡುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ