ಅಪರೂಪದ ಅಪೂರ್ವಾ

ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರದೇ ದರ್ಬಾರು. ಹೊಸ ತಂಡಗಳು ಏನಾದರೊಂದು ಹೊಸ ರೀತಿ ಸಿನಿಮಾ ಮಾಡಬೇಕು. ಬದುಕಿಗೆ ಹತ್ತಿರವಾಗುವಂಥ ಸಿನಿಮಾ ನೀಡಬೇಕು ಎಂದು ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಿವೆ. `ಅಯನ' ಎನ್ನುವ ಹೊಸ ಚಿತ್ರ ಈಗಾಗಲೇ ತನ್ನ ಟೀಸರ್‌ಗಳ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿರುವ ಅಪೂರ್ವಾ ಸೋಮ ಸಾಕಷ್ಟು ಗಮನ ಸೆಳೆಯುತ್ತಿದ್ದಾಳೆ.  ಎಂಜಿನಿಯರಿಂಗ್‌ ಮಾಡಿ ಕಂಪನಿಯಲ್ಲಿ  ಉದ್ಯೋಗವಿದ್ದರೂ ತನ್ನ ಜಾಬ್‌ಗೆ ಗುಡ್‌ಬೈ ಹೇಳಿ. `ಅಯನ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ನೈಜತೆಗೆ ಹತ್ತಿರವಾಗಿರುವಂಥ ಪಾತ್ರಗಳತ್ತ ಹೆಚ್ಚು ಆಕರ್ಷಿತಗಳಾಗಿದ್ದಾಳೆ ಈ ಅಪರೂಪದ ಅಪೂರ್ವಾ.

ಮಮ್ಮಿ ಆದ್ಲು ಶ್ವೇತಾ

ಸಿಂಪಲ್ ತಾರೆ ಶ್ವೇತಾ ಶ್ರೀವಾಸ್ತವ್ ತಾನು ಅಮ್ಮನಾಗುತ್ತಿದ್ದೇನೆಂದು ತಿಳಿದ ದಿನದಿಂದ ಸಂಭ್ರಮ ಆಚರಿಸುತ್ತಲೇ ಇದ್ದಾಳೆ. ತನ್ನ ಪ್ರೆಗ್ನೆನ್ಸಿ ದಿನಗಳನ್ನು ರಂಗು ರಂಗಾಗಿ ಸಂಭ್ರಮಿಸಿದಂಥ ತಾರೆ ಈಕೆ, ಹೆಣ್ಣು ತಾಯಿಯಾದಾಗ ಪರಿಪೂರ್ಣ ಮಹಿಳೆಯಾಗೋದು ಎಂದು ನಂಬಿರುವ ಶ್ರೇತಾ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಗಣೇಶನ ಹಬ್ಬದ ಸಂಭ್ರಮದಂದು ಈ ಪುಟ್ಟ ಗೌರಿಯನ್ನು ಬರ ಮಾಡಿಕೊಂಡ  ಶ್ರೀವಾಸ್ತವ್ ದಂಪತಿಗೆ ಎಲ್ಲಿಲ್ಲದ ಸಂತೋಷ! ತನ್ನ ಮಗುವಿನ ಸಂತಸದ ಕ್ಷಣಗಳನ್ನು ಪ್ರತಿನಿತ್ಯ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಶ್ವೇತಾಳಿಗೀಗ ಮಗಳೇ ಸರ್ವಸ್ವ, ತನ್ನ ವೃತ್ತಿಯತ್ತ ಗಮನ ಕೊಡುವುದನ್ನು ಮರೆತಿಲ್ಲ. ಮನೆ, ಮಗಳು, ಪರಿಸರ, ಎಲ್ಲದರ ಜೊತೆಗೆ ಒಂದಷ್ಟು ಒಳ್ಳೆಯ ಚಿತ್ರಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾಳೆ.

ಸಕಲಕಲಾ ವಲ್ಲಭ ದೀಪಕ್

ಕಲೆ ಎಲ್ಲರಿಗೂ ಅಷ್ಟು ಸುಲಭವಾಗಿ ಒಲಿದು ಬರೋದಿಲ್ಲ. ಅದಕ್ಕೆ ಅದನ್ನು ಗಾಡ್‌ ಗಿಫ್ಟ್ ಅಂತಾರೆ. ಅಂಥವೊಂದು ಗಿಫ್ಟ್ ನ್ನು ಪಡೆದಿರೋದು ಈ ದೀಪಕ್‌. ರಂಗಭೂಮಿ  ಹಿನ್ನೆಲೆಯಿಂದ ಬಂದಿರುವಂಥ ಸಿನಿಮಾ ನಟ. `ಅಯನ' ಚಿತ್ರದ ಮೂಲಕ `ಶುದ್ಧಿ' ಚಿತ್ರದಲ್ಲೂ ನಟಿಸಿದ್ದರು. ದೀಪಕ್‌ ಎಲ್ಲ ವಿಭಾಗಗಳಲ್ಲೂ  ಕೆಲಸ ಮಾಡಿರುವಂಥ ತರುಣ. ಜಾಹೀರಾತು ಸಂಸ್ಥೆ, ಕಿರುಚಿತ್ರ, ಸಾಕ್ಷ್ಯ ಚಿತ್ರ, ಹೀಗೆ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿರುವ ದೀಪಕ್‌ ಮಕ್ಕಳಿಗಾಗಿ ರಂಗ ಶಿಬಿರ ಕೂಡ ನಡೆಸುತ್ತಾರೆ. ಹಲವು ಎನ್‌.ಜಿ.ಓ ಸಂಸ್ಥೆಗಳಿಗೂ ಕೆಲಸ ಮಾಡುತ್ತಿರುವುದರ ಜೊತೆಗೆ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರವೀಣ್‌ ಗೋಡ್ಕಿಂಡಿ ಅವರ ಬಳಿ ಕೊಳಲು ವಾದನ ಕಲಿತಿರುವ ದೀಪಕ್‌ ಎಂಜಿನಿಯರ್‌ ಡಿಗ್ರಿ ಹೋಲ್ಡರ್‌. `ಅಯನ' ಚಿತ್ರದ ಬಗ್ಗೆ ತುಂಬಾ ಹೋಪ್ಸ್ ಇಟ್ಟುಕೊಂಡಿರುವ ದೀಪಕ್‌ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡ್ತಾರೋ.... ಕಾದು ನೋಡೋಣ.

ಇವನು ಕಿಡ್‌ ಸ್ಟಾರ್‌

ಸೋಷಿಯಲ್ ಮೀಡಿಯಾ, ಪತ್ರಿಕೆಗಳು, ಟಿ.ವಿ. ಚಾನೆಲ್‌ಗಳು ಎಲ್ಲದರಲ್ಲೂ ಕಾಣಿಸಿಕೊಳ್ಳುವ `ಓಂ' ಎನ್ನುವ ಲಿಟಲ್ ಸ್ಟಾರ್‌ ಸಖತ್ತಾಗಿ ಮಿಂಚುತ್ತಿರುವಂಥ ಒಂಬತ್ತು ವರ್ಷದ ಪೋರ. ಜನರ ಜೊತೆ ಈಸಿಯಾಗಿ ಮಿಕ್ಸ್ ಆಗಿಬಿಡುವ `ಓಂ' ಸಿನಿಮಾ ರಂಗದಲ್ಲಿನ ಮಾಸ್ಟರ್‌ ಓಂ. ಆಚಾರ್ಯ ಪಬ್ಲಿಕ್‌ ಸ್ಕೂಲ್‌‌ನಲ್ಲಿ ಐದನೇ ಕ್ಲಾಸ್‌ನಲ್ಲಿ ಓದುತ್ತಿರುವ ಓಂ ಕ್ಯಾಮೆರಾ, ಲೈಟ್ಸ್, ಆ್ಯಕ್ಷನ್‌, ಕಟ್‌ ಜೊತೆಯಲ್ಲೇ ಬೆಳೆದು ಬಂದಿದ್ದಾನೆ. ಪುಟ್ಟ ಹುಡುಗನಿದ್ದಾಗಲೇ ಜಾಹೀರಾತು ಚಿತ್ರಗಳಲ್ಲಿ ನಟಿಸಿದ. ಆನಂತರ `ಮದುವೆಯ ಮಮತೆಯ ಕರೆಯೋಲೆ' 'ಲೀ' ಇದೀಗ `ಫಸ್ಟ್ ಲವ್' ಚಿತ್ರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸುಮಾರು ಹನ್ನೆರಡಕ್ಕಿಂತ ಹೆಚ್ಚು ಆ್ಯಡ್‌ ಫಿಲಂನಲ್ಲಿ ನಟಿಸಿರೋದು. ಹಾಗೆಯೇ 2017ರ ಫ್ರೆಶ್‌ಫೇಸ್‌ ಇನ್‌ ಸೋಷಿಯಲ್ ಮೀಡಿಯಾ ಮಕ್ಕಳ ವಿಭಾಗ ಸ್ಪರ್ಧೆಯಲ್ಲಿ ಟೈಟಲ್ ಗೆದ್ದಿದ್ದಾನೆ. ಯಶಸ್ವಿ ಮರಿ ಮಾಡೆಲ್‌ ಕೂಡಾ ಆಗಿದ್ದಾನೆ. ಡ್ಯಾನ್ಸ್ ಮಾಡೋದು ಇವನ ಹಾಬಿ. ದೊಡ್ಡವನಾದ ಮೇಲೆ ಏನಾಗ್ತಿಯಾ ಅಂತ ಕೇಳಿದ್ರೆ.... ಸೂಪರ್‌ ಸ್ಟಾರ್‌ ಅಂತಾನೆ ಈ ಮರಿ ಸ್ಟಾರ್‌!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ