ಜಾಗೀರ್ದಾರ್*

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದ್ದು, 2024ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳಲ್ಲಿ 29 ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು ಈ ನಾಮ ನಿರ್ದೇಶನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ.

ಈ ವರ್ಷ ಪ್ರಶಸ್ತಿಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಚೊಚ್ಚಲ ಪ್ರಶಸ್ತಿಗಳು, ತಾಂತ್ರಿಕ ವಿಭಾಗ, ಸಂಗೀತ ವಿಭಾಗ ನಟನೆ ಮತ್ತು ಬರವಣಿಗೆ ಹಾಗೂ ತೀರ್ಪುಗಾರರ ಪ್ರಶಸ್ತಿಗಳನ್ನು ಒಳಗೊಂಡಿವೆ. ಮತ್ತೊಂದು ವಿಶೇಷ ಅಂದರೆ, ಈ ವರ್ಷದಿಂದ ಕನ್ನಡ ಸಿನಿಮಾ ರಂಗಕ್ಕೆ ಗಮನಾರ್ಹ ಕೊಡುಗೆ ನೀಡಿರುವವರಿಗೆ ಹಂಸಲೇಖ ಅವರ ಹೆಸರಿನಲ್ಲಿ ಜೀವಮಾನ ಸಾಧನೆ (ಚಿನ್ನದ ಪದಕ) ಗೌರವವನ್ನು ಪರಿಚಯಿಸಲಾಗುತ್ತಿದೆ.

ಭಾನುವಾರ ಸಂಜೆ ನಡೆದ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶನಗಳ ಘೋಷಣೆ ಸಮಾರಂಭಕ್ಕೆ ಖ್ಯಾತ ನಟ ಅಜಯ್ ರಾವ್ ಮತ್ತು ನಟಿ ಮೇಘನಾ ಗಾಂವ್ಕರ್ ಅತಿಥಿಯಾಗಿ ಆಗಮಿಸಿದ್ದರು. ಹೊಸದಾಗಿ ವಿನ್ಯಾಸಗೊಳಿಸಿದ್ದ ಆರನೇ ವರ್ಷದ ಟ್ರೋಫಿಯನ್ನು ಅನಾವರಣಗೊಳಿಸಿದರು. 2025ರ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಿದರು.

ಅತ್ಯುತ್ತಮ ನಟ ಪ್ರಶಸ್ತಿಗಾಗಿ ಶಿವರಾಜ್ ಕುಮಾರ್ (ಭೈರತಿ ರಣಗಲ್), ಕಿಚ್ಚ ಸುದೀಪ್ (ಮ್ಯಾಕ್ಸ್) ಗಣೇಶ್ (ಕೃಷ್ಣಂ ಪ್ರಣಯ ಸಖಿ), ಶ್ರೀಮುರಳಿ (ಭಗೀರ) ಮತ್ತು ದುನಿಯಾ ವಿಜಯ್ (ಭೀಮಾ) ನಾಮ ನಿರ್ದೇಶನಗೊಂಡಿದ್ದಾರೆ.

ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಬಿಂದು ಶಿವರಾಮ್ (ಕೆರೆಬೇಟೆ), ರೋಶನಿ ಪ್ರಕಾಶ್ (ಮರ್ಫಿ), ಚೈತ್ರಾ ಆಚಾರ್ (ಬ್ಲಿಂಕ್), ರುಕ್ಮಿಣಿ ವಸಂತ್ (ಬಘೀರ) ಮತ್ತು ನಿಶ್ವಿಕಾ ನಾಯ್ಡು (ಕರಟಕ ದಮನಕ) ಪಾತ್ರಗಳ ನಟನೆಗಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಭೀಮಾ ಹದಿನೇಳೆಂಟು, ಫೋಟೋ, ಮ್ಯಾಕ್ಸ್ ಮತ್ತು ಶಾಖಾಹಾರಿ ಚಿತ್ರಗಳು ನಾಮ ನಿರ್ದೇಶನಗೊಂಡಿವೆ.

ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಗಾಗಿ ಯುವರಾಜ್ ಕುಮಾರ್, ಸಮರ್ಜಿತ್ ಲಂಕೇಶ್, ಅಜಯ್ ಪೃಥ್ವಿ, ರೋಹಿತ್ ಮತ್ತು ರಾಕೇಶ್ ದಳವಾಯಿ ಪೈಪೋಟಿ ನಟಿಸಿದ್ದಾರೆ.

ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ), ಚರಣ್ ರಾಜ್ (ಭೀಮ), ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್), ವೀರ್ ಸಮರ್ಥ (ಒಂದು ಸರಳ ಪ್ರೇಮಕಥೆ) ಮತ್ತು ವಿ.ಹರಿಕೃಷ್ಣ (ಕರಟಕ ದಮನಕ) ನಾಮ ನಿರ್ದೇಶನಗೊಂಡಿದ್ದಾರೆ.

chandan 1

ಈ ಪ್ರಶಸ್ತಿ ಪ್ರದಾನ ಸಮಾರಂಭವು 11 ಮೇ 2025ರಂದು ಸಂಜೆ ನಡೆಯಲಿದ್ದು, ಸಿನಿಮಾ ರಂಗದ ಸಾಕಷ್ಟು ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ.

2025ನೇ ಸಾಲಿನ ಪ್ರಶಸ್ತಿ ಸಮಾರಂಭಕ್ಕೆ ಮುಖ್ಯ ಪ್ರಾಯೋಜಕರಾಗಿ ಯುಮಿ ವೆಂಚರ್ಸ್ಮ ಸಹ ಪ್ರಯೋಜಕರಾಗಿ ಟರ್ಬೋಸ್ಟಿಲ್ ಮತ್ತು ಕಾವೇರಿ ಹಾಸ್ಪಿಟಲ್ ಜೊತೆಯಾಗಿದ್ದಾರೆ. ಕಾರ್ಯಕ್ರಮದ ಯಶಸ್ಸಿ ಸಹಕರಿಸಿದ ಪ್ರಾಯೋಜಕರು, ಮಾಧ್ಯಮದ ಸ್ನೇಹಿತರು ಮತ್ತು ಚಿತ್ರೋದ್ಯಮದ ನಿರಂತರ ಬೆಂಬಲಕ್ಕೆ ಅಕಾಡೆಮಿ ಋಣಿಯಾಗಿದೆ.

 

*ಚಂದವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪರವಾಗಿ*

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ