`ಮಧುಬಾಲಾ' ಧಾರಾವಾಹಿಯಿಂದ ಪ್ರಸಿದ್ಧರಾದ 28 ವರ್ಷದ ದೃಷ್ಟಿಧಾಮಿ ಚಾರ್ಮಿಂಗ್ ಫೇಸ್ ಹೊಂದಿದ್ದು ಸ್ಪಷ್ಟವಾಗಿ ಮಾತನಾಡುತ್ತಾರೆ. ಮುಂಬೈನ ಗುಜರಾತಿ ಕುಟುಂಬದ ದೃಷ್ಟಿಗೆ ಕಾಲೇಜ್ ಮುಗಿದ ನಂತರ ಹೊಸದೇನಾದರೂ ಮಾಡುವ ಇಚ್ಛೆ ಇತ್ತು. ಒಂದು ದಿನ ಅವರ ಗೆಳತಿಯೊಬ್ಬಳು ಆಡಿಷನ್‌ಗೆ ಹೋಗುತ್ತಿದ್ದಳು. ದೃಷ್ಟಿಯೂ ಅವಳೊಡನೆ ಹೋದರು. ಅಲ್ಲಿ ಒಂದು ಕ್ಯಾಂಪೇನ್‌ಗಾಗಿ ಆಡಿಷನ್ ಮಾಡಲು ದೃಷ್ಟಿಗೆ ಹೇಳಿದಾಗ ಅವರು ಇಷ್ಟವಿಲ್ಲದಿದ್ದರೂ ಆಡಿಷನ್ ಕೊಟ್ಟರು ಮತ್ತು ಆಯ್ಕೆಯೂ ಆದರು.
ಅಲ್ಲಿಂದಲೇ ಅವರ ಅಭಿನಯದ ಕೆರಿಯರ್ ಶುರುವಾಯಿತು. ಅವರು ಅನೇಕ ಜಾಹೀರಾತುಗಳಲ್ಲಿ ಮಾಡೆಲಿಂಗ್ ಮಾಡಿದರು ಮತ್ತು ಸಂಗೀತದ ವೀಡಿಯೋಗಳಲ್ಲೂ ಕೆಲಸ ಮಾಡಿದರು. ನಂತರ `ದಿಲ್ ಮಿಲ್ ಗಯೆ' ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಈಗ ಅವರು ಅತ್ಯಂತ ಪಾಪ್ಯುಲರ್ ಶೋ?
`ಮಧುಬಾಲಾ'ದ ಮಧುಬಾಲಾ ಆಗಿದ್ದಾರೆ. ಮಧುಬಾಲಾ ಸೆಟ್‌ನಲ್ಲಿ ಅವರೊಡನೆ ನಡೆಸಿದ ಮಾತುಕಥೆಗಳ ಪ್ರಮುಖ ಅಂಶಗಳು :
ನಾನೆಂದೂ ಯಶಸ್ಸಿನ ಬಗ್ಗೆ ಯೋಚಿಸಲಿಲ್ಲ. ಸಿಕ್ಕ ಕೆಲಸಕ್ಕೆ ಸಂಪೂರ್ಣ ಸಮಯ ನೀಡುತ್ತಿದ್ದೆ ಹಾಗೂ ಕಠಿಣ ಪರಿಶ್ರಮ ಪಡುತ್ತಿದ್ದೆ. ನಾನು ಎಲ್ಲೂ ಅವಕಾಶಗಳನ್ನು ಕೇಳಲು ಹೋಗಲಿಲ್ಲ. ಅವಕಾಶಗಳು ತಾವಾಗಿ ನನ್ನ ಬಳಿ ಬಂದವು. ಮುಂಬೈನ ಗ್ಲಾಮರ್ ವರ್ಲ್ಡ್ ನಲ್ಲಿ ಬಾಳುವುದು ಸುಲಭವಲ್ಲ. ಅಲ್ಲಿ ಡೆಪಾಲ್ ತಿಂದು ಬದುಕುತ್ತಾರೆ ಎಂದು ಜನ ಹೇಳುತ್ತಾರೆ. ಆದರೆ ನನಗೆ ಹೀಗಾಗಲಿಲ್ಲ. ನಾನು ಆರಂಭದಲ್ಲಿ ಆಡಿಷನ್‌ಗಾಗಿ ಲೋಕಲ್ ಟ್ರೇನ್‌ನಲ್ಲಿ ಪ್ರಯಾಣಿಸಿದೆ. ಆದರೆ ಅದೇನೂ ಹೋರಾಟವಲ್ಲ. ಗಾಡ್ ಫಾದರ್ ಇಲ್ಲದಿದ್ದರೆ ಇಷ್ಟನ್ನು ಅಗತ್ಯವಾಗಿ ಮಾಡಲೇಬೇಕು.
ನನ್ನ ಸೌಂದರ್ಯ ಉಳಿಸಿಕೊಳ್ಳಲು ನಾನು ವಿಶೇಷವಾಗಿ ಏನೂ ಮಾಡುವುದಿಲ್ಲ. ಆದರೆ ಕೊಂಚ ವೆಯ್ಟ್ ಹೆಚ್ಚಾದರೂ ಅಗತ್ಯವಾಗಿ ಚಿಂತೆ ಮಾಡುತ್ತೇನೆ. ಯಾವಾಗಲೂ ಮನೆಯ ಊಟ ಮಾಡುತ್ತೇನೆ. ಹೊರಗೆ ತಿನ್ನುವುದು ಕಡಿಮೆ. ಪ್ರತಿ ದಿನ ರಾತ್ರಿ ನನ್ನ ಮೇಕಪ್ ತೆಗೆದು ಮಾಯಿಶ್ಚರೈಸರ್ ಹಚ್ಚುತ್ತೇನೆ. ನೀರನ್ನು ಹೆಚ್ಚು ಕುಡಿಯುತ್ತೇನೆ. ವರ್ಕ್ ಔಟ್ ಕಡಿಮೆ ಮಾಡುತ್ತೇನೆ.
ನನಗೆ ಡ್ಯಾನ್ಸ್ ಇಷ್ಟ. ಮೊದಲು ಗೆಳತಿಯರ ಬರ್ಥ್‌ಡೇ ಪಾರ್ಟಿ ಅಥವಾ ನೆಂಟರ ಮದುವೆಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಆದರೆ `ಝಲಕ್ ದಿಕ್ ಲಾಜಾ'ದ 6ನೇ ಸೀಸನ್‌ನಲ್ಲಿ ಆಯ್ಕೆಯಾದಾಗ ನಾನು ಚೆನ್ನಾಗಿ ಡ್ಯಾನ್ಸ್ ಮಾಡುತ್ತೇನೆ ಎನಿಸಿತು. ಆದರೆ ಸ್ಟೇಜ್‌ಗೆ ಹೋದಾಗ ನನಗೆ ಬಹಳ ಕಡಿಮೆ ತಿಳಿದಿದೆ ಎಂದು ತಿಳಿಯಿತು. ಆಗ ಕೊರಿಯೋಗ್ರಾಫರ್ ಸಲ್ಮಾನ್ ಮತ್ತು ಅವರ ಟೀಂನವರು ನನ್ನೊಂದಿಗೆ ಬಹಳ ಪರಿಶ್ರಮಪಟ್ಟರು. ನನಗೆ ಧೈರ್ಯದಿಂದ ಕಲಿಸಿದರು ಮತ್ತು ನಾನು ಗೆದ್ದುಬಿಟ್ಟೆ!
ಅನೇಕ ಚಿತ್ರಗಳಲ್ಲಿ ನಟಿಸುವುದಾಗಿ ನನ್ನ ಹೆಸರನ್ನು ಹಾರಿಬಿಡಲಾಗಿದೆ. ಆದರೆ ಇದುವರೆಗೆ ನನಗೆ ಯಾವುದೇ ಆಫರ್ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕರೆ ಅಗತ್ಯವಾಗಿ ಮಾಡುತ್ತೇನೆ.
ಒತ್ತಡ ಉಂಟಾದರೆ ಮಲಗಿ ಬಿಡುತ್ತೇನೆ ಅಥವಾ ನನ್ನ ಗೆಳತಿಯರೊಂದಿಗೆ ಕಳೆಯುತ್ತೇನೆ. ಅದರಿಂದ ನನ್ನ ಸ್ಟ್ರೆಸ್ ದೂರಾಗುತ್ತದೆ.
ಸಂಬಂಧಗಳಲ್ಲಿ ನಂಬಿಕೆ ಹಾಗೂ ಸ್ಪೇಸ್ ಇರುವುದು ಅಗತ್ಯ. ಪರಸ್ಪರರ ಬಗ್ಗೆ ಪ್ರಾಮಾಣಿಕರಾಗಿರುವುದು ಅಗತ್ಯ.