ಆರ್ಡಿನರಿ ಅಲ್ಲ ವೆರಿ ಸ್ಪೆಷಲ್

`ಗ್ಯಾಂಗ್ಸ್ ಆಫ್‌ ವಾಸಿಪುರ್‌’ ಚಿತ್ರವನ್ನು ತನ್ನ ಕೆರಿಯರ್‌ನ ಟರ್ನಿಂಗ್‌ ಪಾಯಿಂಟ್‌ ಎಂದೇ ನಂಬಿರುವ ರಿಚಾ ಚಡ್ಡಾ, ಈಗ ನಟನೆಯ ಅಖಾಡಾದಲ್ಲಿ ದಿಲ್ ದಾರ್‌ ಆಗಿ ಇಳಿದಿದ್ದಾಳೆ. ಕಳೆದ ವರ್ಷ `ಪಕ್ರೇ’ ಚಿತ್ರದ ಯಶಸ್ಸಿನ ನಂತರ ರಿಚಾ ತನ್ನ ಮಹತ್ವಾಕಾಂಕ್ಷೆಯ `ರಾಮ್ ಲೀಲಾ’ ಚಿತ್ರದಲ್ಲಿ ಗುಜರಾತಿ ಸೊಸೆಯ ಪಾತ್ರದಲ್ಲಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾಳೆ. ಸಂಜಯ್ ಲೀಲಾ ಬನ್ಸಾಲಿ ಬಳಿ ಕೆಲಸ ಮಾಡಿದ ತಾನೀಗ ಆರ್ಡಿನರಿ ನಟಿಯಲ್ಲ ಬಿಗ್‌ ಸೆಲೆಬ್ರಿಟಿ ಎನ್ನುತ್ತಾಳೆ ರಿಚಾ. ತನ್ನ ಮುಂದಿನ ಚಿತ್ರಗಳಾದ ಜಿಯಾ ಔರ್‌ ಜಿಯಾ, ಇಶ್ಕೇರಿಯಾ ಚಿತ್ರಗಳಲ್ಲಿ ಬಿಝಿ ಆಗಿರುವ ರಿಚಾ, ಹೀಗೆ ತನ್ನ ಪ್ರಚಾರ ತಾನೇ ಮಾಡಿಕೊಳ್ಳುವುದೇ?

ಸೋಹಾಳ ಸೆಕ್ಸಿ ಬಿಕಿನಿ

ಇತ್ತೀಚೆಗೆ ಬಿಡುಗಡೆಯಾದ ಸೋಹಾ ಅರ್ಶದ್‌ ವಾರ್ಸಿಯ `ಮಿ.ಜೋ.ಬಿ.ಕರ್’ ಅಂಥ ಯಶಸ್ಸನ್ನೇನೂ ಕಾಣದಿದ್ದರೂ, ಈ ಚಿತ್ರದಲ್ಲಿ ಸೋಹಾಳ ಸೆಕ್ಸಿ ಬಿಕಿನಿ ಸಾಕಷ್ಟು ಚರ್ಚೆಯಾಯಿತು. ತನ್ನ 9 ವರ್ಷಗಳ ಕೆರಿಯರ್‌ನಲ್ಲಿ ಮೊದಲ ಬಾರಿಗೆ ಹೀಗೆ ಕನಿಷ್ಠ ಉಡುಗೆಯಲ್ಲಿ ಕಾಣಿಸಿಕೊಂಡ ಸೋಹಾ, ತನ್ನ ತಾಯಿ ಶರ್ಮಿಳಾ ಟ್ಯಾಗೋರ್‌ 60ರ ದಶಕದಲ್ಲೇ ಅಂಥ ಬೋಲ್ಡ್ ದೃಶ್ಯಗಳಲ್ಲಿ ಮಿಂಚಿದ್ದನ್ನು ಸ್ಛೂರ್ತಿಯಾಗಿ ನೆನೆಯುತ್ತಿದ್ದಾಳೆ. ಅವಳ ಬಾಯ್‌ ಫ್ರೆಂಡ್‌ ಕುಣಾಲ್ ‌ಖೇಮುಗೆ ಈಕೆ ಇಷ್ಟೊಂದು ಧಾರಾಳವಾಗಿ ಅಂಗಾಂಗ ಪ್ರದರ್ಶಿಸುತ್ತಿರುವುದು ಇಷ್ಟವಿಲ್ಲವಂತೆ. ಇದಕ್ಕಾಗಿ ಆತ ಹಲವಾರು ಸಲ ಜಗಳವಾಡಿದ್ದಾನೆ. ಇದೆಲ್ಲ ಲವ್ ನಲ್ಲಿ ಸಹಜ ಎಂದು ನಸುನಗುತ್ತಾಳೆ ಸೋಹಾ.

ಅಭಿಷೇಕ್ಗೇ ಆಘಾತ

`ದೋಸ್ತಾನಾ-1′ ಹಾಗೂ `ಬೋಲ್ ‌ಬಚ್ಚನ್‌’ ಚಿತ್ರಗಳಲ್ಲಿ ಗೇ ಆಗಿ ಮಿಂಚಿದ ಅಭಿಷೇಕ್‌ ಬಚ್ಚನ್‌ ಬಳಿ ಒಂದು ಡಿಯೋಡರೆಂಟ್‌ ಕಂಪನಿ, ತನ್ನ ಬ್ರಾಂಡ್‌ ಅಂಬ್ಯಾಸ್‌ಡರ್‌ ಆಗುವಂತೆ ಕೋರಿದಾಗ ಆತ ಬಿಲ್‌ಕುಲ್ ನಿರಾಕರಿಸಿದನಂತೆ. ಕಾರಣ ಈ ಆ್ಯಡ್‌ನಲ್ಲೂ ಆತನಿಗೆ ಗೇ ಪಾತ್ರವಂತೆ! ಇದಕ್ಕಾಗಿ ಆ ಕಂಪನಿ ಕೇಳಿದಷ್ಟು ಸಂಭಾವನೆ ಕೊಡಲು ರೆಡಿ ಆಗಿತ್ತು. ಆದರೂ ಆತ ನಾ ಒಲ್ಲೆ ಎಂದ. ಯಾಕಪ್ಪ, ಇದೇ ತರಹ ಪಾತ್ರವನ್ನು `ದೋಸ್ತಾನಾ-2’ನಲ್ಲೂ ಮಾಡ್ತಿದ್ದೀಯಲ್ಲ ಎಂದು ಅವರು ಕುಟುಕಿದಾಗ, ಒಂದೇ ತರಹ ಪಾತ್ರ ಮಾಡಿ ಮಾಡಿ ಇಂಡಸ್ಟ್ರಿ ತನಗೆ ಖಾಯಂ `ಗೇ’ ಪಟ್ಟ ಕಟ್ಟಿಬಿಟ್ಟರೆ ಎಂದು ಆತನಿಗೆ ಅಳುಕಂತೆ. ಅಯ್ಯೋ ಪಾಪ, ವಿಶ್ವ ಸುಂದರಿಯ ವಲ್ಲಭನಿಗೆ ಈ ಗತಿಯೇ?

184987-01-02-actress-Kangna-Ranaut

`ಡಿಶ್ಶುಂ!’ ಎನ್ನಲಿರುವ ಶಿಲ್ಪಾ

ಬಾಲಿವುಡ್‌ನಲ್ಲಿ ಕಳೆದ 20 ವರ್ಷಗಳಿಂದ ಮೆರೆಯುತ್ತಿರುವ ಶಿಲ್ಪಾ ಮದುವೆ, ಮಗು ಆದ ನಂತರ ತೆರೆಮರೆಗೆ ಸರಿದಿದ್ದು ನಿಜ. ಇದೀಗ ಒಂದು ಆ್ಯಕ್ಷನ್‌ ಚಿತ್ರದ ಮೂಲಕ ಬೆಳ್ಳಿತೆರೆಗೆ ವಾಪಸ್ಸು ಬರಲಿರುವ ಶಿಲ್ಪಾ, ಅದಕ್ಕೆ ತಾನೇ ನಿರ್ಮಾಪಕಿಯೂ ಹೌದು. ಗೃಹಿಣಿಯಾದ ಮೇಲೆ ತನ್ನ ಗಮನ ಕುಟುಂಬದ ಕಡೆ ಹೆಚ್ಚಿದೆಯಾದ್ದರಿಂದ ಟಿ 20 ಕ್ರಿಕೆಟ್‌ ಸರಣಿ ಜೊತೆಗೆ ಫಿಲ್ಮಿ ಪ್ರೊಡ್ಯೂಸರ್ ಆಗಿಯೇ ಹೆಚ್ಚು ಉಳಿದುಬಿಟ್ಟೆ ಎನ್ನುತ್ತಾಳೆ. ಹರ್ಮನ್‌ ಬೀಜಾ ಸನ್ನಿ ಡಿಯೋಲ್ ‌ಜೊತೆ `ಡಿಚ್‌ ಕ್ಯಾಂ’ ಚಿತ್ರದಲ್ಲಿ ಬರೋಬ್ಬರಿ 3 ವರ್ಷಗಳ ನಂತರ ಕ್ಯಾಮೆರಾ ಎದುರಿಸಲಿದ್ದಾಳೆ. ಅಂದಹಾಗೆ ಈ ಬಾರಿ ನಾನು ಬಾಂಡ್‌ ಗರ್ಲ್ ಗೊತ್ತಾ? ಎಂದು ಕಣ್ಣಲ್ಲೇ ಗುಂಡು ಹಾರಿಸುತ್ತಾಳೆ ಶಿಲ್ಪಾ.

173967-01-02-Bollywood-actress-Shilpa-Shetty

ಬಲ್ ಸೋಕಾಗಿ ಸೋಬ್ನ ಆಗೋಯ್ತು!

ತನ್ನ ಎಂಗೇಜ್‌ಮೆಂಟ್‌ನ ಸುಮಾರು 1 ವರ್ಷದ ಬಳಿಕ ಜಾನ್‌ ಅಬ್ರಹಾಂ ಜನವರಿ 1 ರಂದು, ತಾನು ಪ್ರಿಯಾ ರೂಂಚಾಲ್‌ಳನ್ನು ಮದುವೆಯಾಗಿದ್ದಾಗಿ ತನ್ನ ಅಭಿಮಾನಿಗಳು ಹಾಗೂ ಮೀಡಿಯಾಗೆ ಜಾನ್‌ ಟ್ವೀಟ್‌ ಮೂಲಕ ತಿಳಿಸಿದ್ದಾನೆ. ಅಭಿಮಾನಿಗಳೆಲ್ಲರದೂ ಒಂದೇ ಪ್ರಶ್ನೆ, ಜಾನ್‌ ಅವಸರವಸರದಲ್ಲಿ ಗುಟ್ಟಾಗಿ ಮದುವೆ ಆಗಿದ್ದೇಕೆ? ಪ್ರಿಯಾ ಜಾನ್‌ ಮೇಲೆ ಒತ್ತಡ ಹೇರಿದಳೇ ಅಥವಾ ಬೇರೇನಾದರೂ ಕಾರಣವೇ? ಅವರಿಬ್ಬರೂ ಒಟ್ಟೊಟ್ಟಿಗೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾಗ ಆ ಸಂಬಂಧಕ್ಕೆ ಒಂದು ಹೆಸರು ಅಗತ್ಯವಾಗಿತ್ತು. ಜಾನ್‌ ಭಾವಾವೇಶದಲ್ಲಿ ಈ ಅವಸರದ ನಿರ್ಣಯ ಕೈಗೊಂಡನೇ ಎಂಬುದು ಹಲವರ ಸಂದೇಹ. ಅವನು ಬಹಳ ವರ್ಷ ಹಳೆಯ ಗರ್ಲ್ ಫ್ರೆಂಡ್‌ ಬಿಪಾಶಾಳೊಂದಿಗೆ ಸುತ್ತಾಡಿ ಕೊನೆಗೆ ಏನಾಯಿತು ಎಂಬುದು ಪ್ರಿಯಾಳಿಗೂ ಗೊತ್ತು. ಅದಕ್ಕೆ ಈ ನಿರ್ಧಾರ ಇರಬಹುದೇ?

john-with-priya

ಶ್ರದ್ಧಾಳಿಗೆ `ಬಬ್ಬರ್‌’ ಇಷ್ಟವಿಲ್ಲ

ಶ್ರದ್ಧಾ ತಾನು `ಬಬ್ಬರ್‌’ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದೇ ಸಂಜಯ್‌ ಲೀಲಾ ಬನ್ಸಾಲಿ ಹಾಗೂ ತೆಲುಗು ನಿರ್ದೇಶಕರ ಕ್ರಿಶ್‌ ಇಬ್ಬರನ್ನೂ ಆತಂಕಕ್ಕೆ ಈಡು ಮಾಡಿದೆ. ಅತ್ತ ಹೀರೋ ಅಕ್ಷಯ್‌ ಕುಮಾರ್‌ ಮೊದಲೇ ಡೇಟ್ಸ್ ಕೊಟ್ಟಿದ್ದರಿಂದ ಶೂಟಿಂಗ್‌ ಬೇಗ ಶುರುವಾಗಲಿದೆ. ಇಂಥ ಸಂದರ್ಭದಲ್ಲಿ ಶ್ರದ್ಧಾ ಬೇಕೆಂದೇ ನಖರಾ ತೋರುತ್ತಿರುವುದು ಎಲ್ಲರಿಗೂ ಇರಿಸುಮುರಿಸಾಗಿದೆ. ಇವರು ಅಲ್ಪಾವಧಿಯಲ್ಲಿ ಯಾವ ಇನ್ನೊಬ್ಬ ತಾರೆಯ ಡೇಟ್ಸ್ ಹೊಂದಿಸಿ ಚಿತ್ರೀಕರಣ ಶುರು ಮಾಡುವುದೆಂಬುದೇ ಫಜೀತಿ. ಇದು ತಮಿಳಿನ ಸೂಪರ್‌ ಹಿಟ್‌ `ರಮಣ’ ಚಿತ್ರದ ರೀಮೇಕ್‌ ಆಗಿದ್ದು, ಈ ಚಿತ್ರದ ತಾರಾಗಣ ಘೋಷಿಸಿದಾಗಿನಿಂದ ಹೀರೋಯಿನ್‌ ಒಂದಿಲ್ಲೊಂದು ತಕರಾರು ಮಾಡಿದ್ದೇ ಮಾಡಿದ್ದು.

174060-01-02-Bollywood-actress-Shraddha-Kapoor

ನಾನೇನೂ ಸೈಡ್ಸ್ಟಾರ್ಅಲ್ಲ

ರಣದೀಪ್‌ ಹೂಡಾ ಜೊತೆ ಇಮ್ತಿಯಾಜ್‌ ಆಲಿಯ `ಹೈವೇ’ ಚಿತ್ರದಲ್ಲಿ ಹಾಟ್‌ ಹಾಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಾಗಿನಿಂದ ಆಲಿಯಾ ಎಲ್ಲೆಲ್ಲೂ ಚರ್ಚೆಯಲ್ಲಿದ್ದಾಳೆ. ಇದೆಲ್ಲದರ ಕುರಿತು ಒಂದಿಷ್ಟೂ ತಲೆಕೆಡಿಸಿಕೊಳ್ಳದ ಆಲಿಯಾ, ನಾನು ಕಥೆಯ ಅಗತ್ಯಕ್ಕೆ ತಕ್ಕಂತೆ ನಟಿಸಿದ್ದೇನೆ. ಬೆಡ್‌ ರೂಮ್ ಸೀನ್ಸ್ ಎಂದಾಕ್ಷಣ ಹೆದರಲಿಕ್ಕೆ ನಾನೇನೂ 80ರ ದಶಕದ ಮಡಿವಂತ ನಟಿಯಲ್ಲ. ಯಾವುದು ಸರಿ ಯಾವುದು ತಪ್ಪು ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ ಎಂದೆಲ್ಲ ಭಾಷಣ ಬಿಗಿಯುತ್ತಾಳೆ. ಏನಮ್ಮ, ಅರ್ಜುನ್‌ಕಪೂರ್‌ ಜೊತೆ ಡೇಟಿಂಗ್‌ ಜೋರಂತೆ ಎಂದರೆ, ಈ ಮೀಡಿಯಾದವರಿಗೆ ಬೇರೆ ಕೆಲಸವಿಲ್ಲ. ಒಮ್ಮೆ ವರುಣ್‌, ಇನ್ನೊಮ್ಮೆ ಸಿದ್ಧಾರ್ಥ್‌ ಜೊತೆ ನನ್ನ ಹೆಸರು ಬೆರೆಸುತ್ತಾರೆ, ಹಾಗೇ ಈಗ ಅರ್ಜುನ್‌ ಸರದಿ. ಆದರೆ ಇವರೆಲ್ಲ ನಿಜಕ್ಕೂ ನನ್ನ ಬೆಸ್ಟ್ ಫ್ರೆಂಡ್ಸ್ ಎನ್ನುತ್ತಾಳೆ. ಅತಿ ಎಕ್ಸ್ ಪೋಶರ್‌ನಿಂದ ಎಂಥ ರಿಸ್ಕ್ ಎಂಬುದನ್ನು ಈಕೆ ತನ್ನಕ್ಕಾ ಪೂಜಾಳಿಂದ ತಿಳಿಯುವುದೊಳ್ಳೆಯದು.

180867-01-02-Bollywood-actress-Alia-Bhatt - Copy

ಐಶ್ ತವರು ಛತ್ತೀಸ್ಗಢವೇ

ಇದುವರೆಗೂ ಎಲ್ಲರೂ ಐಶ್‌ಳ ತವರು ಮಂಗಳೂರು ಎಂದೇ ತಿಳಿದಿದ್ದರು ಹಾಗೂ ಈಗ ಐಶ್ವರ್ಯಾ ರೈ ಬಚ್ಚನ್‌ ಆಗಿ ಆಕೆ ಮುಂಬೈನಲ್ಲಿ ನೆಲೆಸಿದ್ದಾಳೆ ಎಂಬುದೂ ಗೊತ್ತು. ಆದರೆ ಇತ್ತೀಚಿನ ಹೊಸ ಸುದ್ದಿ ಎಂದರೆ ಈಕೆ ಛತ್ತೀಸ್‌ಗರ್ ರಾಜ್ಯದ ಜಶ್‌ ಪುರ್‌ಜಿಲ್ಲೆಯ ಘುಘರಿ ಹಳ್ಳಿಯ ಮತದಾರಳಂತೆ! ಇದೆಂಥ ಮಾತು ಅಂತೀರಾ? ಇದು ವೇಟರ್‌ ಲಿಸ್ಟ್ ತಯಾರಿಸುವವರ ಘನಕಾರ್ಯ ಆಗಿದೆ. ಆ ವಿಭಾಗದ ಪ್ರಕಾರ, ಈಕೆಯ ಹೆಸರು, ವಿಳಾಸ, ಫೋಟೋ, ತಂದೆಯ ಹೆಸರಿನೊಂದಿಗೆ ದಾಖಲಾಗಿದೆ. ಇದೆಂಥ ವಿಪರ್ಯಾಸ….? ಅಂತೂ ಆ ವಿಭಾಗ ಈಗ ಎಚ್ಚೆತ್ತು ಪರಿಶೀಲನೆ ಆರಂಭಿಸಿದೆಯಂತೆ. ಬೆಟರ್‌ ಲೇಟ್‌ ದ್ಯಾನ್‌ ನೆವರ್‌!

ಒಂದು ದಕ್ಕುವ ಬದಲು 2 ಹೋಯ್ತು

ಒಂದನ್ನು ಪಡೆಯಲು ಒಂದನ್ನು ಕಳೆದುಕೊಳ್ಳಬೇಕಾಗುತ್ತದೆಯಂತೆ, ಈ ಮಾತು ನಟ ಅರ್ಜುನ್‌ ಕಪೂರ್‌ಗೆ ಚೆನ್ನಾಗಿ ಒಪ್ಪುತ್ತದೆ. ಆತ ಒಂದು ಚಿತ್ರ ಗಿಟ್ಟಿಸಿಕೊಳ್ಳಲು ಹೋಗಿ 2 ಚಿತ್ರ ಕಳೆದುಕೊಂಡಿದ್ದಾನೆ. ನಿರ್ದೇಶಕ ಹೋಮಿ ಅಡ್ಜಾನಿಯಾರ `ಅನಾವ್‌’ ಚಿತ್ರದಲ್ಲಿ ದೀಪಿಕಾ ಜೊತೆ ನಟಿಸುತ್ತಿದ್ದಾನೆ. ಈತನ ಬಳಿ `ವೆಲ್‌‌ಕಂ ಬ್ಯಾಕ್‌’ ಹಾಗೂ `ಮಿಲನ್‌ ಟಾಕೀಸ್‌’ ಚಿತ್ರಗಳ ಆಫರ್‌ಗಳೂ ಬಂದವು. ಆದರೆ ಇವೆರಡರ ಡೇಟ್ಸ್ ದೀಪಿಕಾಳ ಜೊತೆಗಿನ ಚಿತ್ರಕ್ಕೆ ಕ್ಲಾಶ್‌ ಆಗುತ್ತಿದ್ದ. ಹೀಗಾಗಿ ಅರ್ಜುನ್‌ ಅನಿವಾರ್ಯವಾಗಿ ಅವೆರಡಕ್ಕೂ ಬೈಬೈ ಹೇಳಬೇಕಾಯ್ತು. ದೀಪಿಕಾಳಂಥ ಸುಂದರಿಗೆ ಹೀರೋ ಆಗಬೇಕೂಂದ್ರೆ ಏನನ್ನಾದರೂ ಕಳೆದುಕೊಳ್ಳಬೇಕಲ್ಲವೇ?

3eeznavwyk13p47a.D.0.Arjun-Kapoor-at-film-AURANGZEB-press-conference-at-Indiabulls-Sky-Forest-in-Mumbai--11-

ರಿಚ್ಗ್ರಾಂಡ್ಸವಾರಿ

100 ಕೋಟಿಯ ಚಿತ್ರ, ಭರ್ಜರಿ ಬಂಗಲೆ, ಜೊತೆಗೊಂದು ಅತಿ ದುಬಾರಿ ಕಾರು…. ಇಷ್ಟಿದ್ದುಬಿಟ್ಟರೆ ಇನ್ನೇನು? ಬಾಲಿವುಡ್‌ನ ಎಲ್ಲಾ ನಟನಟಿಯರಿಗೂ ಈ ಕನಸನ್ನು ನನಸಾಗಿಸುವುದೇ ಗುರಿ. ಇದರಲ್ಲಿ ಕೆಲವು ನಟಿಯರಂತೂ ಭಾರಿ ಪೈಪೋಟಿಗಿಳಿದು ಮಹಾನ್ ಘಟಾನುಘಟಿಗಳಿಗೆ ಢೀ ಕೊಟ್ಟಿದ್ದಾರೆ. ಪ್ರಿಯಾಂಕಾ ಚೋಪ್ರಾ ಈ ಸರಣಿಯ ಮೊದಲ ನಟಿ ಎನಿಸಿದ್ದಾಳೆ, ಅದೂ ಸ್ವಂತ ಸಂಪಾದನೆಯಲ್ಲಿ ರೋಲ್ಸ್ ರಾಯ್‌ ಕಾರು ಖರೀದಿಸಿ! ಇದಂತೂ ಕೆಲವೇ ನಟರ ಸ್ವತ್ತೆನಿಸಿತ್ತು. ಈಕೆಯನ್ನು ಇಟ್ಟರೆ ಕತ್ರೀನಾ ಕೈಫ್‌ ಬಳಿ ಆಡಿಕ್ಯೂ 7 (ಸುಮಾರು 80 ಲಕ್ಷ), ಕರೀನಾ ಬಳಿ ಬಿಎಂಡಬ್ಲ್ಯೂ 7 (ಸುಮಾರು 96 ಲಕ್ಷ), ದೀಪಿಕಾ ಬಳಿ ಆಡಿ ಎ 8 (ಸುಮಾರು 1.7 ಕೋಟಿ), ರಾಣಿ ಮುಖರ್ಜಿ ಮರ್ಸಿಡಿಸ್‌ ಬೆಂಝ್ ಕ್ಲಾಸ್‌ (ಸುಮಾರು 44 ಲಕ್ಷ), ಬಿಪಾಶಾಳ ಬಳಿ ಪಾರ್ಶ್‌ ಸಿಯಾನ್‌ (ಸುಮಾರು 1.4 ಕೋಟಿ) ಕಾರಿದೆ.

Dhoom-3-Katrina-Kaif-and-Aamir-Khan-Wallpaper

 

183892-01-02-actress-Bipasha-Basu - Copy

 

1316688847206780

 

priyanka-chopra-and-salman-khan-on-the-sets-of-bigg-boss-7th-6

ಹೋಗಿ ಬಾ ಗೆಳೆಯ…..

`ಗರಂ ಹವಾ’ದ ಸಿಕಂದರ್‌ ಮಿರ್ಜಾ ಪಾತ್ರದಿಂದ `ಕ್ಲಬ್‌’ಯ ಡಾ. ತಾರೀಕ್‌ ವರೆಗಿನ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ ಮೇರುನಟ ಫಾರೂಖ್‌ ಶೇಖ್‌ ಅತ್ಯಂತ ಅದ್ಭುತ ನಟನಾಶಕ್ತಿಯುಳ್ಳ, ಅಭಿನಯವನ್ನೇ ಬದುಕಾಗಿಸಿಕೊಂಡು ಬಾಳಿದ ಅಪರೂಪದ ಕಲಾವಿದರೆನಿಸಿದ್ದಾರೆ. ಹೀಗಾಗಿಯೇ ಈತನ ನಟನೆ ಕ್ಲಾಸ್‌ ಚಿತ್ರಗಳಿಗಷ್ಟೇ ಮೀಸಲಾದ ವೀಕ್ಷಕರ ನೆನಪಿನಲ್ಲಿ ಈಗಲೂ ಅಚ್ಚೊತ್ತಿದೆ. ಅತಿ ಸಹಜ ನಟನೆಯ, ಅತಿ ವಿನಮ್ರ ವ್ಯಕ್ತಿ ಎನಿಸಿದ್ದ ಫಾರೂಖ್‌ 1948ರಲ್ಲಿ ಗುಜರಾತ್‌ನ ಅಮರೋಲಿ ಜಿಲ್ಲೆಯ ಜಮೀನುದಾರ ವಂಶದಲ್ಲಿ ಹುಟ್ಟಿದರು. ಪಂಚಪಾಂಡವರೆನಿಸಿದ ಒಡಹುಟ್ಟಿದವರಲ್ಲಿ ಇವರೇ ಹಿರಿಯರು. ಈತ ತನ್ನ ನಟನಾ ಕೆರಿಯರ್‌ ಆರಂಭಿಸಿದ್ದು ವೃತ್ತಿ ರಂಗಭೂಮಿಯಿಂದ, ಸಾಗರ್‌ ಸರ್‌ ಹದಿ ಜೊತೆ. 1973ರಲ್ಲಿ ತೆರೆಕಂಡ `ಗರಂ ಹವಾ’ ಇವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಸತ್ಯಜಿತ್‌ ರೇ ಈ ಚಿತ್ರ ಮೆಚ್ಚಿಕೊಂಡು ಇವರಿಗೆ ತಮ್ಮ `ಶತರಂಜ್‌ ಕೆ ಖಿಲಾಡಿ’ ಚಿತ್ರದಲ್ಲಿ ಮುಖ್ಯ ಪಾತ್ರ ನೀಡಿದರು. ನಂತರ ಮುಜಫ್ಛರ್‌ ಅಲಿಯ `ಗಮನ್‌’ ಚಿತ್ರದಲ್ಲಿ ಗುಲಾಂ ಹಸನ್‌ ಆಗಿ ನಟಿಸಿದರು. ಆದರೆ ನಮ್ಮ ಮಧ್ಯಮ ವರ್ಗದ ಫೇವರಿಟ್‌ ಹಿಟ್‌ ಚಿತ್ರ `ಚಶ್ಮೆ ಬದ್ದೂರ್‌’ ಮೂಲಕ ಎವರ್‌ ಗ್ರೀನ್‌ ಎನಿಸಿದರು. ಇದಕ್ಕೂ ಮೊದಲೇ ಯಶ್‌ ರಾಜ್‌ರ `ನೂರಿ’ಯಲ್ಲಿ ಮಿಂಚಿದ್ದರು. ಪೂನಂ ಧಿಲ್ಲಾನ್‌ ಜೊತೆ ಇವರನ್ನು ವೀಕ್ಷಕರು ತುಂಬಾ ಮೆಚ್ಚಿದ್ದರು. ಮನಮೋಹನ್‌ಕೃಷ್ಣಾರ ಈ ಚಿತ್ರದ ನಂತರ ಇವರಿಗೆ ಸತತ 40 ಚಿತ್ರಗಳ ಆಫರ್‌ ಬಂತು. `ಜೀನಾ ಇಸೀ ಕಾ ನಾಮ್’ ಎಂಬ ಟಿ.ವಿ. ಶೋ ಕೂಡ ಮಾಡಿದರು.

B_Id_452784_Farooq_Sheikh

ಕಳೆದ ವರ್ಷ ಇವರ 3 ಚಿತ್ರಗಳು ತೆರೆಕಂಡವು. `ಲಿಸ್‌್ನ ಅಮಾಯಾ’ ಚಿತ್ರದಲ್ಲಿ ತಮ್ಮ ಜನಪ್ರಿಯ ಪಾರ್ಟ್‌ನರ್‌ ದೀಪ್ತಿ ನಾಲ್ ಜೊತೆ 25 ವರ್ಷಗಳ ನಂತರ ಕಾಣಿಸಿಕೊಂಡಿದ್ದರು. `ಎ ಜಾನಿ ಹೈ ದಿವಾನಿ’ ಚಿತ್ರದಲ್ಲಿ ರಣಬೀರ್‌ ಕಪೂರ್‌ಗೆ ತಂದೆ ಆಗಿದ್ದರೆ, `ಕ್ಲಬ್‌’ ಚಿತ್ರದಲ್ಲಿ ಪುತ್ರಶೋಕದಿಂದ ನರಳುವ ತಂದೆಯ ಪಾತ್ರ ವಹಿಸಿದ್ದರು. ಅದು ಅವರ ಕಡೆಯ ಚಿತ್ರವಾಯಿತು. ಕಳೆದ ಡಿಸೆಂಬರ್‌ನಲ್ಲಿ ದುಬೈನಲ್ಲಿ ತೀರಿಕೊಂಡ ಈ ಮಹಾನ್‌ ಚೇತನಕ್ಕೆ ಚಿತ್ರಶೋಭಾಳ ಭಾವಪೂರ್ಣ ಶ್ರದ್ಧಾಂಜಲಿ……

ಒಂದೇ ಕಲ್ಲಿಗೆ 2 ಹಕ್ಕಿ

ಒಂದು ಹಿಟ್‌ ಚಿತ್ರ ಹಾಗೂ ಗರ್ಲ್ ಫ್ರೆಂಡ್‌ನ ಸತತ ಅನ್ವೇಷಣೆಯಲ್ಲಿರುವ ಶಾಹೀದ್‌ ಕಪೂರ್‌ಗೆ (ಕರಮ್ ಚಂದ್‌ ಖ್ಯಾತಿಯ ಪಂಕಜ್‌ ಕಪೂರ್‌ ಮಗ) ಇವೆರಡೂ ಒಟ್ಟಿಗೇ ಸಿಕ್ಕ ಹಾಗಿದೆ! ಪ್ರಭುದೇವ್ ನಿರ್ದೇಶನದ `ಆರ್‌. ರಾಜ್‌ ಕುಮಾರ್‌’ ಮುಳುಗುತ್ತಿರುವ ಶಾಹೀದ್‌ನ ದೋಣಿಯನ್ನು ದಡ ಸೇರಿಸಿದೆ. ಈ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ (ಶತ್ರುಘ್ನ ಸಿನ್ಹಾರ ಮಗಳು) ಜೊತೆ ಗೆಳೆತನ ಶುರುವಾಗಿ, ಅದು ಪರಸ್ಪರ ಅರಿತುಕೊಳ್ಳುವ `ಲವ್ವಿಡವ್ವಿ’ವರೆಗೂ ತಲುಪಿದೆಯಂತೆ. ಇಬ್ಬರೂ ಇದನ್ನು ಅಧಿಕೃತವಾಗಿ ಕನ್‌ಫರ್ಮ್ ಮಾಡಿಲ್ಲ, ಆದರೆ ನಿಕಟವರ್ತಿಗಳು ಇದನ್ನೇ ಪುಷ್ಟೀಕರಿಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಇವರಿಬ್ಬರ ದೋಸ್ತಿ ಎಲ್ಲೆಲ್ಲೂ ಮಿಂಚುತ್ತಿದೆ, ಪರಸ್ಪರ ಓಲೈಸುವಿಕೆಯೂ ನಡೆಯುತ್ತಿದೆ. ಈಗಲೇ ಈ ಸಂಬಂಧದ ಭರತವಾಕ್ಯ ನುಡಿಯುವುದು ಕಷ್ಟಕರವೇ ಸರಿ.

174200-01-02-actress-Sonakshi-Sinha

ಅರ್ಮಾನ್ನನ್ನ ಬೆಸ್ಟ್ ಫ್ರೆಂಡ್ಅಷ್ಟೆ!

ಜನಪ್ರಿಯ ನಟಿ ಕಾಜೋಲ್‌ಳ ತಂಗಿ ತನೀಷಾ ಈಗಾಗಲೇ ಬಿ ಟೌನ್‌ ಚಿತ್ರದಲ್ಲಿ ಮಿಂಚಿದ್ದರೂ, ಅವಳಿಗೆ ಐಡೆಂಟಿಟಿ ಸಿಕ್ಕಿದ್ದು `ಬಿಗ್‌ ಬಾಸ್‌’ ಶೋನಿಂದ. ಈ ಸೀಸನ್‌ನಲ್ಲಿ ತನೀಷಾ ಅರ್ಮಾನ್‌ರ ಜೋಡಿ ಮಿಂಚಿದ್ದೂ ಮಿಂಚಿದ್ದೇ! ಒಮ್ಮೆ ಇವರಿಬ್ಬರ ಇಂಟಿಮೇಟ್‌ ಸೀನ್ಸ್ ಸುದ್ದಿ ಮಾಡಿದರೆ, ಇನ್ನೊಮ್ಮೆ ಇತರ ಅಭ್ಯರ್ಥಿಗಳೊಂದಿಗೆ ಅರ್ಮಾನ್‌ ಇವಳಿಗಾಗಿ ಹೋರಾಡುತ್ತಿದ್ದುದನ್ನು ಗಮನಿಸಿ ವೀಕ್ಷಕರಂತೂ ಶೋ ಮುಗಿದ ತಕ್ಷಣವೇ ಇವರ ಮದುವೆ ಎಂದುಕೊಂಡುಬಿಟ್ಟಿದ್ದರು. ಆದರೆ ಹೊರಬಂದ ನಂತರ ಮೇಡಂ ತನೀಷಾ, ನಮ್ಮದು ಕೇವಲ ಬೆಸ್ಟ್ ಫ್ರೆಂಡ್‌ಶಿಪ್‌ ಅಷ್ಟೆ, ಎಂದು ತಿಪ್ಪೆಸಾರಿಸಿಬಿಟ್ಟರು. ತನೀಷಾಳ ಕುಟುಂಬದವರು ಫ್ಲಾಪ್ ಹೀರೋ, ರೌಡಿ ಇಮೇಜ್‌ನ ಅರ್ಮಾನ್‌ನನ್ನು ಅಳಿಯನನ್ನಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ.

139

ವಾಹ್‌….. ಸೆಕ್ಸೀ ಸಮವಸ್ತ್ರ

ಸಬ್‌ ಟಿ.ವಿ.ಯ ಜನಪ್ರಿಯ ಧಾರಾವಾಹಿ `ಲೌ..’ ನಲ್ಲಿ ಸೆಕ್ಸೀ ಗೆಟಪ್‌ನ ಇನ್‌ಸ್ಪೆಕ್ಟರ್‌ ಚಂದ್ರಮುಖಿ ಚೌಟಾಲಾ ಅಂದರೆ ಕವಿತಾ ಕೌಶಿಕ್‌ ಈಗ ಅದೇ ಹೆಸರಿನಿಂದ ಮನೆಮನೆಯಲ್ಲೂ ಜನಪ್ರಿಯತೆ ಗಿಟ್ಟಿಸಿದ್ದಾಳೆ. 2013ರಲ್ಲಿ ಕಿರುತೆರೆಯ ಹಿರಿಯ ಅವಾರ್ಡ್‌ ಗಿಟ್ಟಿಸಿದ ಕವಿತಾ, 1998ರಲ್ಲಿ `ಶಕ್ತಿಮಾನ್‌’ ಮಕ್ಕಳ ಧಾರಾವಾಹಿಯಿಂದ ಕೆರಿಯರ್‌ ಆರಂಭಿಸಿದಳು. ಧಾರಾವಾಹಿಗಳು ಮಾತ್ರವಲ್ಲದೆ ಈಕೆ ಹಲವಾರು ಚಿತ್ರಗಳಲ್ಲೂ ನಟಿಸಿದ್ದಿದೆ. ಆದರೆ  `ಲೌ..’ ನ ಚಂದ್ರಮುಖಿ ಪಾತ್ರದಿಂದ ಈಕೆ ಅನೇಕ ವರ್ಷಗಳ ಧಾರಾವಾಹಿಯ ನಾಯಕಿ ಎಂದು ಶೈನ್‌ ಆಗಿದ್ದಾನೆ. ಈ ಕುರಿತಾಗಿ ಆಕೆ ಹೇಳುವುದೆಂದರೆ, ಈ ಪಾತ್ರದಲ್ಲಿ ನಾನು ಎಷ್ಟು ವಿಲೀನಳಾಗಿದ್ದೇನೆ ಎಂದರೆ, ಇದು ನನಗಾಗಿಯೇ ಸೃಷ್ಟಿಸಿದ ಪಾತ್ರದಂತಿದೆ. ಶೂಟಿಂಗ್‌ ವಾತಾವರಣದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಜನ ನನ್ನನ್ನು `ಚಂದ್ರಮುಖಿ’ ಎಂದೇ ಕರೆಯುತ್ತಾರೆ. ಫಟಾಫಟ್‌ ಡೈಲಾಗ್‌ ಡೆಲಿವರಿ ನನಗೀಗ ಸರಾಗವೆನಿಸಿದೆ, ಹರಿಯಾಣ್ವಿ ಭಾಷೆ ಹಿಂದಿಯಷ್ಟೇ ಸಲೀಸಾಗಿದೆ. `ಲೌ..’ ಧಾರಾವಾಹಿ ಇನ್ನಷ್ಟು ವರ್ಷ ಮುಂದುವರಿಯಲಿ ಎಂದೇ ವೀಕ್ಷಕರು ಮತ್ತೆ ಮತ್ತೆ ಒತ್ತಾಯಿಸುತ್ತಿದ್ದಾರೆ, ನಾನು ಅವರೆಲ್ಲರಿಗೂ ಕೃತಜ್ಞಳು, ಎನ್ನುತ್ತಾಳೆ ಕವಿತಾ.

Kavita-Kaushik

ಆದರ್ಶ ಸೊಸೆಯ ಹೊಸ ಅವತಾರ

ಸ್ಟಾರ್‌ ಪ್ಲಸ್‌ನ ಗೋಪಿ ಬಹೂ ಎಲ್ಲರಿಗೂ ಆದರ್ಶ ಸೊಸೆಯಾಗಿ ಮಾತ್ರವೇ ಪರಿಚಿತಳು. ಈ ಪಾತ್ರ ನಿರ್ವಹಿಸಿದ ದೇೀಲೀನಾ ಭಟ್ಟಾಚಾರ್ಯ ಇತ್ತೀಚೆಗೆ ಬ್ಲ್ಯಾಕ್‌ ಸ್ಲೀವ್ ಲೆಸ್ ಲೆಹಂಗಾದಲ್ಲಿ ಈ ರೀತಿ ಸೆಕ್ಸಿ ಗೆಟಪ್‌ ನೀಡಿ ಹಾಟ್‌ ಫೋಟೋ ಶೂಟ್‌ನಡೆಸಿದಾಗ, ಯೂ ಟ್ಯೂಬ್‌ನಲ್ಲಿ ತಮ್ಮ ನೆಚ್ಚಿನ ಆದರ್ಶ ಸೊಸೆಯ ಹೊಸ ಅವತಾರ ಕಂಡು ಜನ ಗಾಬರಿಗೊಂಡರು. ಸದಾ ಗೌರಮ್ಮನಾಗಿದ್ದ ದೇೀಲೀನಾ `ಡರ್ಟಿ ಪಿಕ್ಚರ್‌’ನ ವಿದ್ಯಾಳನ್ನೂ ನಾಚಿಸುವಂತೆ ಪೋಸ್‌ ನೀಡಿರುವುದು ಅವಳ ಮುಂದಿನ ಗ್ಲಾಮರಸ್‌ ಚಿತ್ರದ ಹೊಸ ಎಂಟ್ರಿಯ ಸೂಚನೆಯಲ್ಲದೆ ಮತ್ತೇನು? ಆಲ್ ದಿ ಬೆಸ್ಟ್ ದೇೀ! ಸಲ್ಮಾನ್‌ನ ಹೊಸ ಟಿ.ವಿ. ಶೋ ಇತ್ತೀಚೆಗೆ `ಬಿಗ್‌ ಬಾಸ್‌’ ಮುಗಿಸಿದ ಸಲ್ಮಾನ್‌ ಖಾನ್‌ ತನ್ನ ಅಭಿಮಾನಿಗಳಿಗೆಂದೇ ಮತ್ತೆ ಕಿರುತೆರೆಯ ಹೊಸ ಶೋನಲ್ಲಿ ಕಾಣಿಸಲಿದ್ದಾನೆ. ಇದರ ನಾಮಕರಣ ಇನ್ನೂ ಆಗಿಲ್ಲವಂತೆ. ಆದರೆ ಇದು ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದೆ. `ಬಿಗ್‌ ಬಾಸ್‌’ ನಿಂದ ಸಾಕಷ್ಟು ತಲೆನೋವು ಅನುಭವಿಸಿದ್ದ ಸಲ್ಮಾನ್‌ `ದಸ್‌ ಕಾ ಧಮ್’ ರಿಯಾಲಿಟಿ ಶೋ ಮೂಲಕ ಮತ್ತೆ ಬರುವುದು ಹಳೆಯ ಸುದ್ದಿಯಾದರೆ, ಈ ಸಾಮಾಜಿಕ ಸಮಸ್ಯೆಗಳ ಶೋ ಹೊಚ್ಚ ಹೊಸತು.

29-salman-khan-hd-picture

 

Hot-sexy-Jiaa-Manek-Gopi-photos-pics

ನಾನಂತೂ ಸದಾ ಕೂಲ್ ಕೂಲ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಸುಸಂಸ್ಕೃತ ಬಾಬೂಜಿಯಾಗಿಯೇ ಗುರುತಿಸಿಕೊಂಡಿರುವ ಮಾಸ್ಟರ್‌ ಜಿ ಅಲೋಕ್‌ ನಾಥ್ ಎಲ್ಲೆಡೆ ಮೋಡಿ ಮಾಡಿದ್ದಾರೆ. ಅವರ ಸುಸಂಸ್ಕೃತ ಪಾತ್ರಗಳ ಕುರಿತಾಗಿ ವಾಟ್ಸ್ಅಪ್‌, ಟ್ವೀಟರ್‌, ಫೇಸ್‌ ಬುಕ್‌ಗಳಲ್ಲಿ ಸಾಕಷ್ಟು ಹಾಸ್ಯ ಚಟಾಕಿಗಳು ಹರಿದಾಡುತ್ತಿವೆ. ಇದರ ಕುರಿತಾಗಿ ಇವರು ಹೇಳುವುದೆಂದರೆ, ನಾನಂತೂ ನಿಜ ಜೀವನದಲ್ಲಿ ಬಿಂದಾಸ್‌ ಮಸ್ತ್ ಆಗಿದ್ದೇನೆ. ನನ್ನ ಕುರಿತಾಗಿ ಇಷ್ಟೊಂದು ಜೋಕ್ಸ್ ಹರಿದಾಡುತ್ತಿವೆ ಎಂದು ನನ್ನ ಮಕ್ಕಳು ಹೇಳಿದಾಗ, ನನ್ನ ಪಾತ್ರದ ಕುರಿತು ಚಿಂತಿಸಲು ಜನರ ಬಳಿ ಇಷ್ಟೊಂದು ಪುರಸತ್ತಿದೆಯೇ ಎಂದು ನೆನೆದು ಆಶ್ಚರ್ಯವಾಯಿತು. `ಬುನಿಯಾದ್‌’ ಖ್ಯಾತಿಯ ಅಲೋಕ್‌ ನಾಥ್‌ ಕುರಿತ ಜೋಕ್‌ನ ಒಂದು ಸ್ಯಾಂಪಲ್ ಇರುವ ಹುಟ್ಟಿದ ತಕ್ಷಣ ಡಾಕ್ಟರ್‌ ಗಂಡು ಮಗು ಎನ್ನುವ ಬದಲು, ಕಂಗ್ರಾಟ್ಸ್, ಬಾಬೂಜಿ ಹುಟ್ಟಿದ್ದಾರೆ ಅಂದರಂತೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ