ಜಾಗೀರ್ದಾರ್*

2014ರಲ್ಲಿ ಎಂ. ಎಸ್. ರಾಮಯ್ಯ ಯೂನಿವರ್ಸಿಟಿ ಆವರಣದಲ್ಲಿ ರಾಮ್ ರವರಿಂದ ಸ್ಥಾಪನೆಯಾಗಿ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಮತ್ತು ಹಿನ್ನಲೆ ಗಾಯಕಿ ಡಾ ಪ್ರಿಯದರ್ಶಿನಿ ಯವರ ಸಾರಥ್ಯದಲ್ಲಿ ನಡೆಸುತ್ತಿರುವ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೊಸ್ ಮತ್ತು ಪ್ರಿಸಮ್ ಫೌಂಡೇಶನ್ ಸಂಸ್ಥೆ ಸಿನಿಮಾ ಕ್ಷೇತ್ರಕ್ಕೆ ಸ್ಟುಡಿಯೋ ಸೇವೆಗಳನ್ನು ಒದಗಿಸುವ ಹಾಗೂ ಕ್ರಮಬದ್ಧವಾಗಿ ಸಂಗೀತ ಕಲಿಯಲು ಬಯಸುವವರಿಗೆ ಸಂಗೀತ ಶಿಕ್ಷಣ ನೀಡುತ್ತಾ ನಗರದಲ್ಲಿ ಅಗ್ರಸ್ಥಾನದಲ್ಲಿದೆ. ಇದೇರೀತಿ ಸಂಗೀತ ನಿರ್ಮಾಣ, ಡಿಜಿಟಲ್ ಮತ್ತು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಂಗೀತ ವಿತರಣೆಯಗಾಗಿಯೇ 2014 ರಲ್ಲಿ ಮಹೇಶ್ ಮಹದೇವ್ ರಿಂದ ಸ್ಥಾಪನೆಯಾದ ಪಿಎಂ ಆಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ಇಂದು ಭಕ್ತಿಕನ್ನಡ, ಭಕ್ತಿ ತಮಿಳ್, ಭಕ್ತಿ ಹಿಂದಿ, ಭಕ್ತಿ ತೆಲುಗು, ಭಕ್ತಿ ಮಲಯಾಳಂ ಮತ್ತು ಇತರರು ಚಾನೆಲ್ ಗಳ ಮೂಲಕ ಹೆಸರುಮಾಡಿರು ಸಂಸ್ಥೆಗೆ ಈಗ ದಶಕದ ಸಂಭ್ರಮ.
foundation

ಇದೀಗ ಮುರೂ ಸಂಸ್ಥೆಗಳು ಒಂದೇ ಸೂರಿನಡಿ ಸುಸರ್ಜಿತ ಬಹುಮಹಡಿ ಕಟ್ಟಡದೊಂದಿಗೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಲೋಕಾರ್ಪಣೆಗೊಂಡಿದೆ ‌.

ಗುರುವಾರ ಸಂಜೆ ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋ, ಪ್ರಿಸಮ್ ಫೌಂಡೇಶನ್ - ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಮತ್ತು ಪಿ ಎಂ ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್ ನ ಕೇಂದ್ರ ಕಚೇರಿಯನ್ನು ಮಾಜಿ ಉಪ ಮುಖ್ಯಮಂತ್ರಿ , ಶಾಸಕ ಡಾ. ಸಿ ಎನ್. ಅಶ್ವಥ್ ನಾರಾಯಣ್ ಅವರು ಉಧ್ಘಟಿಸಿದರು . ನಂತರ ಮಾತನಾಡಿದ ಶಾಸಕರು, ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲು ಪ್ರಿಸಂ ಫೌಂಡೇಷನ್ ಆರಂಭವಾಗಿದ್ದು, ಸಂಗೀತ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತದೆ. ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಅದಕ್ಕೆ ಯಾವುದೇ ಭಾಷೆಯ ಮಿತಿ, ಗಡಿ ಇಲ್ಲ. ಕೆಲವು ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ಕೊಡಬಹುದಾಗಿದೆ. ಸಂಗೀತ ಕೇಳಿಸಿಕೊಂಡು ಅರವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಷ್ಟ, ಸುಖ, ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಂಗೀತವು ಪೂರಕವಾಗಿದೆ.‌ ನಿಮ್ಮ ಹಾಗೆಯೇ ಸಾಧನೆ ಮಾಡುವಂಥ ನೂರಾರು ಪ್ರತಿಭೆಗಳನ್ನು ಹುಟ್ಟುಹಾಕಿ ಎಂದು ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಅವರಿಗೆ ಸಲಹೆ ನೀಡಿದರು.

foundation 1

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಧರ್ಮ ಮಾತನಾಡಿ ಮಹೇಶ್, ಪ್ರಿಯದರ್ಶಿನಿ ಅವರು ಅವರು ಸಂಗೀತದಲ್ಲಿ ಒಂದಲ್ಲ ಒಂದು ರೀತಿ ಸಾಧನೆ ಮಾಡಿಕೊಂಡೇ ಬಂದಿದ್ದಾರೆ. ಇದೀಗ ಅಚ್ಚುಕಟ್ಟಾಗಿ ಇನ್ನೊಂದು ಹೊಸ ಸ್ಟುಡಿಯೋ ಕೂಡ ಮಾಡಿದ್ದಾರೆ. ಚಿತ್ರರಂಗ ಇದರ ಸದುಪಯೋಗ ಮಾಡಿಕೊಳ್ಳಬೇಕು‌. ನಮ್ಮ ಒಂದು ಚಿತ್ರದ ರೆಕಾರ್ಡಿಂಗ್ ಇದೇ ಸ್ಟುಡಿಯೋದಲ್ಲೇ ನಡೆದಿದೆ ಎಂದು ಹೇಳಿದರು. ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ‌ ಅದ ಸಾಧನೆಗೈದಿದ್ದಾರೆ.‌ ಮಹೇಶ್ ಮಹದೇವ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಉರ್ದು ಸೇರಿದಂತೆ 19 ಭಾಷೆಗಳ ನೂರಾರು ಗೀತೆಗಳಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದು ಪ್ರಸಕ್ತ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿದ್ದರೆ. ಇತ್ತೀಚಿಗೆ ಅಮೇರಿಕಾದ ಅಟ್ಲಾಂಟದಿಂದ ತಮ್ಮ ಆಲ್ಬಮ್ ಗೆ ಅಂತರರಾಷ್ಟ್ರೀಯ ಪ್ರಶಸ್ತಿ, ಭಾರತ ಸೇವಾರತ್ನ ಪ್ರಶಸ್ತಿಯೂ ಪಡೆದಿದ್ದರೆ. ಅಲ್ಲದೆ ಡಾ‌.ಪ್ರಿಯದರ್ಶಿನಿ ಅವರೂ ಬಹುಭಾಷಾ ಹಿನ್ನೆಲೆಗಾಯಕಿಯಾಗಿದ್ದು ಖ್ಯಾತ ನಟ ಯಶ್ ಅಭಿನಯದ ಕನ್ನಡ ಚಿತ್ರ ‘ರಾಕಿ’ಗೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಬಿ.ಬಾಲಸುಬ್ರಮಣ್ಯಂ ಅವರೊಂದಿಗೆ ‘ಸ್ನೇಹದ ಚಿಗುರು’ ಹಾಡನ್ನು ಹಾಡಿದ್ದು ಹಾಡಿದ್ದಾರೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ