ಯಾವುದೇ ಸಂಬಂಧದ ಕುರಿತಾಗಿ ಸ್ಪಷ್ಟ ಹೇಳಿಬಿಡುವುದೇ ಸದಾ ಒಳ್ಳೆಯದು. ಇದರಿಂದ ನಿಮ್ಮ ಎದುರಿಗಿರುವವರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಎನಿಸುತ್ತದೆ......''

ಮಾಡೆಲಿಂಗ್‌ ಮತ್ತು ತೆಲುಗು ಚಿತ್ರಗಳಿಂದ ತನ್ನ ಕೆರಿಯರ್‌ ಆರಂಭಿಸಿದ ಬ್ಯೂಟಿಫುಲ್ ನಟಿ ಇಲಿಯಾನಾ ಡೀಕ್ರೂಸ್‌, ಕಡಿಮೆ ಅವಧಿಯಲ್ಲೇ ವೀಕ್ಷಕರ ಮನಗೆದ್ದಳು. 2006ರಲ್ಲಿ ಈಕೆಗೆ ತೆಲಗಿನ `ದೇವದಾಸು' ಚಿತ್ರದಿಂದ ಮೊದಲ ಬ್ರೇಕ್‌ ಸಿಕ್ಕಿತು. ಚಿತ್ರ ಗೆಲ್ಲದಿದ್ದರೂ ವಿಮರ್ಶಕರ ಪ್ರಶಂಸೆ ಪಡೆದ ಇಲಿಯಾನಾ, ದಕ್ಷಿಣದ ಬೆಸ್ಟ್ ಫೀಮೇಲ್ ಡೆಬ್ಯು ಅವಾರ್ಡ್‌ ಗಿಟ್ಟಿಸಿಕೊಂಡಳು.

ಈಕೆಗೆ ಬಾಲಿವುಡ್‌ನಲ್ಲಿ 2012ರಲ್ಲಿ ಮೊದಲ ಬ್ರೇಕ್‌ ಅನುರಾಗ್‌ ಬಸುರವರ `ಬರ್ಫಿ' ಚಿತ್ರದ ಮೂಲಕ ಸಿಕ್ಕಿತು. ಚಿತ್ರ ಹಿಟ್‌ ಆಯ್ತು. ಆಕೆಯ ಮುಗ್ಧತೆ ಎಲ್ಲರಿಗೂ ಇಷ್ಟವಾಯ್ತು. ಇಲ್ಲೂ ಇವಳಿಗೆ ಅಂಥದೇ ಅವಾರ್ಡ್‌ ಸಿಕ್ಕಿತು. ಇದಾದ ನಂತರ ಹಲವು ಚಿತ್ರಗಳಲ್ಲಿ ನಟಿಸಿದ ಇಲಿಯಾನಾಳ `ರುಸ್ತುಂ, ರೆಡ್‌' ಚಿತ್ರಗಳು ಯಶಸ್ವೀ ಎನಿಸಿದವು.

ತಾಯಿಯೇ ನನ್ನ ಆದರ್ಶ

ಇಲಿಯಾನಾಳಿಗೆ 10 ವರ್ಷ. ಅವರ ಕುಟುಂಬ ಮುಂಬೈನಿಂದ ಗೋವಾಗೆ ಶಿಫ್ಟ್ ಆಯಿತು. ಆಕೆ ಬಾಲ್ಯ ಕಳೆದದ್ದೆಲ್ಲ ಗೋವಾದಲ್ಲೇ. ಹೀಗಾಗಿ ಬಿಡುವಾದಾಗ ಗೋವಾಗೆ ಹೋಗಬಯಸುತ್ತಾಳೆ. ತಾಯಿಯೇ ಇವಳ ಆದರ್ಶ. ಮಾಧುರಿ, ಕಾಜೋಲ್‌ರ ನಟನೆಯಿಂದ ಬಹಳ ಪ್ರಭಾವಿತಳು.

ಬಹಳ ವರ್ಷಗಳಿಂದ ಇಲಿಯಾನಾ ಲಿವ್ ‌ಇನ್‌ ರಿಲೇಶನ್‌ ಶಿಪ್‌ನಲ್ಲಿದ್ದಾಳೆ. ಅದರ ಬಗ್ಗೆ ಓಪನ್‌ ಮೈಂಡೆಡ್‌ ಆಗಿ ಹೇಳುತ್ತಾಳೆ, ``ಯಾವುದೇ ಸಂಬಂಧದ ಬಗ್ಗೆ ಸ್ಪಷ್ಟ ತಿಳಿಸುವುದು ಒಳ್ಳೆಯದು. ಇದರಿಂದ ತಪ್ಪು ತಿಳಿವಳಿಕೆ ಆಗುವುದಿಲ್ಲ. ಆಸ್ಟ್ರೇಲಿಯನ್

ಫೋಟೋಗ್ರಾಫರ್‌ ಆ್ಯಂಡ್ರೂ ನೀಬೋನ್‌ ನನ್ನ ಬಾಯ್‌ಫ್ರೆಂಡ್‌. ಅವನೊಂದಿಗೆ ನನ್ನ ಟ್ಯೂನಿಂಗ್‌ ಉತ್ತಮವಾಗಿದೆ.''

ಬಾಯ್‌ಫ್ರೆಂಡ್‌ಗೆ ಹತ್ತಿರ

``ಸಂಬಂಧಗಳ ಬಗ್ಗೆ ಮಾತನಾಡುವುದಾದರೆ, ಪ್ರತಿ ರಿಲೇಶನ್‌ ಶಿಪ್‌ ಭಿನ್ನವಾಗುತ್ತದೆ. ನನ್ನ ತಾಯಿ ತಂದೆಯರ ಸಂಬಂಧದಿಂದ ನಾನು ಹೆಚ್ಚು ಪ್ರಭಾವಿತೆ. ಆದರೆ ಆ್ಯಂಡ್ರೂ ಜೊತೆ ನನ್ನದು ಬೇರೆ ಸಂಬಂಧ. ನೀವು ಯಾವುದೇ ಸಂಬಂಧವನ್ನು ಹೀಗೆ ಎಂದು ಪ್ರೆಡಿಕ್ಟ್ ಮಾಡಲಾಗದು. ಕಾಲ ಸರಿದಂತೆ ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಆ್ಯಂಡ್ರೂ ಬಹಳ ರೊಮ್ಯಾಂಟಿಕ್‌ ವ್ಯಕ್ತಿ. ಅವನೊಂದಿಗೆ ನನಗೆ ಕೆಲಸ ಮಾಡುವ ಅವಕಾಶ ಸಿಕ್ಕಿದರೆ ಬಹಳ ಖುಷಿ ಅನ್ಸುತ್ತೆ. ನನ್ನ ಲೈಫ್‌ ಈಗ ಸರಾಗವಾಗಿ ನಡೀತಿದೆ!''

ಯಾವುದೇ ಚಿತ್ರವಾದರೂ ಎರಡು ಸಲ ಯೋಚಿಸಿ ಒಪ್ಪಿಕೊಳ್ಳುತ್ತಾಳಂತೆ.

``ನನಗೆ ಬೇಗ ಬೇಗ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಬೇಕು ಅಂತೇನಿಲ್ಲ. ಪ್ರಭಾವಶಾಲಿಯಾದ ಸಬ್ಜೆಕ್ಟ್ ಸಿಗಬೇಕು ಅನ್ನೋದೇ ಮುಖ್ಯ.

``ರೆಡ್‌ ಚಿತ್ರ ತಂಡದ ಜೊತೆಗೂ ಹೀಗೆ ಆಯ್ತು. ಅಜಯ್‌ ದೇವಗನ್‌ ಜೊತೆ `ಬಾದ್‌ಶಾಹ್' ಚಿತ್ರದ ಶೂಟಿಂಗ್‌ನಲ್ಲಿದ್ದಾಗ `ರೆಡ್‌' ಬಗ್ಗೆ ಗೊತ್ತಾಯ್ತು. ಕಥೆ ನನಗೆ ಬಹಳ ಹಿಡಿಸಿತು. ಇದು 80ರ ದಶಕದ ಒಂದು ಗಟ್ಟಿಕಥೆ. ಆ ಕಾಲದ ಮಹಿಳೆ ಸಹ ದೃಢ ನಿರ್ಧಾರ ಕೈಗೊಳ್ಳಬಲ್ಲಳು ಎಂಬ ಕಥಾವಸ್ತು ಇರುವ ಚಿತ್ರ. ಆದರೆ ಇಂದಿನವರು ಆ ಕಾಲದ ಮಹಿಳೆ ಇನ್ನೂ ಅಬಲೆ ಎಂದೇ ತಿಳಿಯುತ್ತಾರೆ, ಆದರೆ ವಾಸ್ತವ ಹಾಗಲ್ಲ. ಆ ಕಾಲದಲ್ಲಿ ಗಂಡಸು ಕೆಲಸದ ಮೇಲೆ ಹೊರಗೆ ಹೊರಟರೆ ಯಾವಾಗ ಮರಳಿ ಬರುತ್ತಾನೋ ತಿಳಿಯದೆ ಹೆಂಗಸು ಅವನಿಗಾಗಿ ಕಾಯುತ್ತಿದ್ದಳು. ಅಂಥ ಪರಿಸ್ಥಿತಿಗಳಲ್ಲೂ ಅವಳು ಮನಸ್ಸಿನ ಸಮತೋಲನ ಕಳೆದುಕೊಳ್ಳುತ್ತಿರಲಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ