ಈಗಿನ ಕಾಲದ ಹುಡುಗಿಯರು ಎಲ್ಲಾ ವಿಷಯದಲ್ಲೂ ಸ್ಮಾರ್ಟ್‌. ವಿದ್ಯಾಭ್ಯಾಸ ಮುಗಿದ ನಂತರವೇ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಅದರಲ್ಲೂ ಸಿನಿಮಾರಂಗಕ್ಕೆ ಬರುವುದಕ್ಕೆ ಮೊದಲು ಎಜುಕೇಶನ್‌ ಕಂಪ್ಲೀಟ್‌ ಆಗಿರಬೇಕೆಂದು ಅವರ ಮನೆಯವರು ಸ್ಟ್ರಿಕ್ಟ್ ಮಾಡಿರುತ್ತಾರೆ.

ರಕ್ಷಾ ಸೋಮಶೇಖರ್‌`ಮೇ 1′ ಚಿತ್ರದ ನಾಯಕಿ. ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದಿ, ಕಾಲೇಜು ಮೆಟ್ಟಿಲು ಹತ್ತಿ ಕಂಪ್ಲೀಟ್‌ ಮಾಡಿದ್ದಲ್ಲದೆ, ಒಂದಷ್ಟು ದಿನ ಜಾಬ್‌ ಕೂಡಾ ಮಾಡಿದ್ದಾಳೆ. ಕೈಯಲ್ಲೀಗ ನಾಲ್ಕೈದು ಚಿತ್ರಗಳಿವೆ. ಒಂದು ತಮಿಳು ಚಿತ್ರ ಸೇರಿ, ರಕ್ಷಾ ಏನು ಹೇಳುತ್ತಾಳೆ ಕೇಳಿ.

ನಟನೆಯನ್ನು ಆಯ್ಕೆ ಮಾಡಿಕೊಂಡದ್ದೇಕೆ?

ನನಗೆ ಐದು ವರ್ಷವಿದ್ದಾಗಲೇ ಒಂದು ಆ್ಯಡ್‌ನಲ್ಲಿ ನಟಿಸಿದ್ದೆ. ಮಾಡೆಲಿಂಗ್‌ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ. ಮೊದಲಿನಿಂದಲೂ ನಟಿ ಆಗಬೇಕೆಂದು ಆಸೆಪಡುತ್ತಿದ್ದೆ. ನನ್ನ ಮನೆಯಲ್ಲಿ ಮೊದಲು ಎಜುಕೇಶನ್‌ ಆಮೇಲೆ ಮಿಕ್ಕಿದ್ದು  ಎಂದು ಹೇಳಿದ್ದರಿಂದ  ಅವರ ಮಾತನ್ನು ಮೀರಲಿಲ್ಲ. ಸಿನಿಮಾ ರಂಗ ಹೊಸದು, ನಮ್ಮ ಕುಟುಂಬದಲ್ಲಿ ನಾನೇ ಮೊದಲಿಗಳು. ಇದೆಲ್ಲ ನೋಡ್ತಿರೋದು ಆಶ್ಚರ್ಯಕರವಾಗಿದೆ. ಕನ್ನಡ ಇಂಡಸ್ಟ್ರೀ ನಿಜಕ್ಕೂ ವಂಡರ್‌ಫುಲ್ ಫ್ಲೇಸ್‌! ನನಗೆ ನನ್ನ ಕೆಲಸ ಮುಖ್ಯ. ಅವರಿವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಒಂದು ವಿಷಯದಲ್ಲಿ ನಾನು ತುಂಬಾನೆ ಲಕ್ಕಿ. ಅಪ್ಪ ಅಮ್ಮ ಇಬ್ಬರೂ ನನ್ನನ್ನು ತುಂಬಾ ಎನ್‌ಕರೇಜ್‌ ಮಾಡ್ತಾರೆ.

ಈಗ ಎಷ್ಟು ಚಿತ್ರಗಳಲ್ಲಿ ಆ್ಯಕ್ಟ್ ಮಾಡುತ್ತಿದ್ದೀಯಾ?

ಕನ್ನಡದಲ್ಲಿ ನಾಲ್ಕು ಚಿತ್ರಗಳಿವೆ. ಒಂದು ತಮಿಳು. `ಗೋದ್ರಾ’ ಚಿತ್ರದಲ್ಲೂ ನನ್ನದು ಮುಖ್ಯ ಪಾತ್ರ. ವಶಿಷ್ಟ ಸಿಂಹನಿಗೆ ಜೋಡಿಯಾಗಿದ್ದೇನೆ. ರಾಕ್‌ಲೈನ್‌ ಬ್ಯಾನರ್‌ನ `ಜೈ’ ಚಿತ್ರದಲ್ಲೂ ನಾಯಕಿ.

ಮತ್ತೆ ನಿನ್ನ ಮೊದಲ ಚಿತ್ರ……?

`ಮೇ 1′ ಬಿಡುಗಡೆಯಾಗಲಿರುವ ನನ್ನ ಮೊದಲ ಚಿತ್ರ. ಇದರಲ್ಲಿ ಜೆ.ಕೆ. ಅವರ ಪತ್ನಿ ಪಾತ್ರ. ಇನ್ನೋಸೆಂಟ್‌ ಹೌಸ್‌ ವೈಫ್ ಆಗಿ ಕಾಣಿಸಿಕೊಳ್ಳುತ್ತೇನೆ.

ನಿನ್ನ ಹಾಬೀಸ್‌ ಬಗ್ಗೆ ಹೇಳು?

ನಾನು ತುಂಬಾ ಪುಸ್ತಕಗಳನ್ನು ಓದುತ್ತೇನೆ. ಹೆಚ್ಚಾಗಿ ಕವನ ಬರೆಯುವುದರ ಜೊತೆಗೆ ಬೇರೆ ಹವ್ಯಾಸ ಇದೆ. ಅಡುಗೆ ಮಾಡುವುದೆಂದರೆ ತುಂಬಾನೆ ಇಷ್ಟ. ಕನ್ನಡ ಓದುವುದನ್ನು ಅಜ್ಜಿ ತಾತಾ ಮನೆಯಲ್ಲಿ ಕಲಿತಿದ್ದೇನೆ. ಈಗ ಓದಿ, ಬರೆದು ಮಾಡುತ್ತೇನೆ. ಮಾತನಾಡಲೂ ಬರುತ್ತದೆ.

ಹೀಗೆ ಹೇಳುವ ರಕ್ಷಾ ಸೋಮಶೇಖರ್‌ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಚ್ಚ ಕನ್ನಡತಿ. ಕಲಾ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಬೇಕೆಂದು ಬಯಸುವ ಈ ನಟಿಯ ಕನಸು ನನಸಾಗಲಿ.

– ಸರಸ್ವತಿ

Tags:
COMMENT