ಐಸ್ ಪೈಸ್
ಹೌದು, ಈ ಹೆಸರಿನ ಒಂದು ಹೊಸ ಕನ್ನಡ ಚಿತ್ರ ಸೆಟ್ಟೇರಿದೆ. ಶಿವಸಾಯಿ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಸುರೇಶ್ ಮುತ್ತಪ್ಪ ನಿರ್ಮಿಸುತ್ತಿದ್ದಾರೆ. ಪತ್ರಕರ್ತ ಮಂಜುನಾಥ್ ಕಾರ್ಯಕಾರಿ ನಿರ್ಮಾಪಕ. ನೀತೂ ಮುಖ್ಯ ಪಾತ್ರ ಮಾಡುತ್ತಿದ್ದು, ರಂಗಾಯಣ ರಘು ಜೊತೆಯಲ್ಲಿ ಸ್ಟೆಪ್ ಹಾಕಿದ್ದಾರೆ. ಹಾಗಂದ ಮಾತ್ರಕ್ಕೆ ಇವರದು ಪ್ರೇಮಿಗಳ ಜೋಡಿಯಲ್ಲ. ರಂಗಾಯಣ ರಘು, ನೀತೂ ಜೊತೆ ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿ ಅಭಿನಯಿಸಿದ್ದಾರಂತೆ. ಚಿತ್ರಕ್ಕೆ ನೀತೂ ಬಂದ ಮೇಲೆ ಹೊಸ ತಿರುವು ತೆಗೆದುಕೊಂಡಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ನಾನು ಕುಣಿಯುವುದಕ್ಕಷ್ಟೇ ಬಂದಿಲ್ಲ, ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಹೇಗೆ ಕಥೆ ಹೇಳಿದರೋ ಅದೇ ರೀತಿ ನೀಟಾಗಿ ನಿರೂಪಣೆ ಮಾಡಿದ್ದಾರೆ. ರಘು ಅವರಂಥ ಪ್ರತಿಭಾವಂತ ನಟರ ಜೊತೆ ನಟಿಸುವುದಕ್ಕೆ ಖುಷಿ ಇದೆ ಎನ್ನುತ್ತಾಳೆ ನೀತು. ಚಿತ್ರತಂಡದ ಪ್ರಕಾರ ಎಲ್ಲ ವರ್ಗದ ಪ್ರೇಕ್ಷಕರೂ ನೋಡುವ ಸಿನಿಮಾ ಇದು ಎನ್ನಲಾಗಿದೆ.
ವಿಷಲ್ ಮೊಳಗುತ್ತಿದೆ
ಪ್ರಶಾಂತ್ ಒಂಥರಾ ಸ್ಟೈಲಿಶ್ ನಿರ್ದೇಶಕ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಇವರ ಚಿತ್ರವೆಂದರೆ ಬಲು ಪ್ರೀತಿ. ಇವರ ಇತ್ತೀಚಿನ `ವಿಷಲ್' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ಹಾಗಾಗಿ ಎಲ್ಲ ಗೊಂದಲಗಳನ್ನು ನಿವಾರಿಸಲು ಪ್ರಶಾಂತ್ ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸುತ್ತಿದ್ದಾರಂತೆ. `ವಿಷಲ್' ಅದೇ ಆದರೂ ಕ್ಲೈಮ್ಯಾಕ್ಸ್ ಹೊಸದಾಗಿರುತ್ತದೆ. ಮೊದಲೇ ಅಂಥವೊಂದು ಕ್ಲೈಮ್ಯಾಕ್ಸ್ ನ್ನು ಚಿತ್ರೀಕರಿಸಿ ಇಟ್ಟುಕೊಂಡಿದ್ದರಿಂದ ಪ್ರಶಾಂತ್ ಯಾವುದೇ ತೊಂದರೆ ಇಲ್ಲದೆ, ಕೊನೆಯ ದೃಶ್ಯವನ್ನು ಕಟ್ ಮಾಡಿ ಮೊದಲೇ ಸಿದ್ಧಪಡಿಸಿದ್ದ ಕ್ಲೈಮ್ಯಾಕ್ಸ್ ನ್ನು ಸೇರಿಸಿದ್ದಾರೆ. ಇವರ ಈ ಸೂಪರ್ ಐಡಿಯಾಗೆ ನಿಜಕ್ಕೂ `ವಿಷಲ್' ಹಾಕಲೇಬೇಕು ಅಲ್ಲವೇ? ವಿಭಿನ್ನವಾದ ಪ್ರಯತ್ನಕ್ಕೆ ಎಲ್ಲರಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ ಪ್ರಶಾಂತ್.
ಅರ್ಜುನ್ ರ `ಅಭಿಮನ್ಯು'
ಅರ್ಜುನ್ ಸರ್ಜಾ ಕನ್ನಡದ ಹುಡುಗ, ಆದರೆ ಮಿಂಚಿದ್ದು ಪಕ್ಕದ ರಾಜ್ಯದಲ್ಲಿ. ತಮಿಳು ಚಿತ್ರರಂಗದ `ಜಂಟಲ್ ಮ್ಯಾನ್' ಆಗಿರುವ ಅರ್ಜುನ್ ತಮ್ಮ ಸಂಸಾರದ ಜೊತೆ ಬಹಳ ವರ್ಷಗಳಿಂದ ಚೆನ್ನೈನಲ್ಲಿ ವಾಸವಾಗಿದ್ದರೂ, ಬೆಂಗಳೂರು ಅವರ ತವರೂರಾಗಿದೆ. ಇತ್ತೀಚೆಗೆ ಕನ್ನಡ ಚಿತ್ರವೊಂದನ್ನು ಶುರು ಮಾಡಿರು ಅರ್ಜುನ್ ಸರ್ಜಾರ ಚಿತ್ರಕ್ಕೆ `ಅಭಿಮನ್ಯು' ಎಂದು ಹೆಸರಿಡಲಾಗಿದೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡು ಮೈಸೂರಿನಿಂದ ಹೈದರಾಬಾದ್ ಗೆ ಚಿತ್ರತಂಡ ಶಿಫ್ಟ್ ಆಗಲಿದೆ. ಅರ್ಜುನ್ ಸರ್ಜಾ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೇಣು ಛಾಯಾಗ್ರಹಣ, ಹರಿಕೃಷ್ಣ ಅವರ ಸಂಗೀತವಿದೆ. ಅರ್ಜುನ್ ಗೆ ಜೋಡಿಯಾಗಿ ಸುರ್ವಿನ್ ಚಾವ್ಲಾ ನಟಿಸುತ್ತಿದ್ದು ರವಿ ಕಾಳೆ, ಸಿಮ್ರಾನ್ ಕಪೂರ್, ರಾಹುಲ್ ದೇವ್, ಬಿರಾದಾರ್, ವಿನಯಾ ಪ್ರಕಾಶ್ ಮುಂತಾದವರ ತಾರಾಗಣವಿದೆ. ಕನ್ನಡದ ಹುಡುಗನಾಗಿ ಕನ್ನಡ ಚಿತ್ರವನ್ನು ಬಹಳ ಪ್ರೀತಿಯಿಂದ ಮಾಡುತ್ತಿರುವ ಅರ್ಜುನ್ ಸರ್ಜಾಗೆ ತಮಿಳಿನಲ್ಲಿ ಸಿಕ್ಕಂತೆ ಇಲ್ಲಿಯೂ ಯಶಸ್ಸು ಸಿಗಲಿ.
ಪ್ರೇಮ್ ರಾಗ
ಸಿನಿಮಾರಂಗಕ್ಕೆ ಬಂದು ಹನ್ನೊಂದು ವರ್ಷಗಳಾಗಿವೆ. ನಮ್ಮ ಪ್ರೇಮ್ ಹೇಗಿದ್ದ ಹೇಗಾದ ಗೊತ್ತಾ ಎಂದು ಆತ್ಮೀಯರು ಸಂತೋಷಪಡುತ್ತಾರೆ. ಕನ್ನಡದ ರೊಮ್ಯಾಂಟಿಕ್ ಹೀರೋ ಎಂದೇ ಜನಪ್ರಿಯರಾಗಿರುವ ಪ್ರೇಮ್ ಮಾತ್ರ ಇತ್ತೀಚೆಗೆ ಪತ್ರಕರ್ತರನ್ನೆಲ್ಲ ಕರೆದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ.....