ಜಾಗೀರ್ದಾರ್*

ಕನ್ನಡದಲ್ಲಿ ಆಲ್ಬಂ ಸಾಂಗ್‌ಗಳ ಸಂಖ್ಯೆ ಕಮ್ಮಿ.‌ ಇದೀಗ ಇಲ್ಲಿಯೂ ನಿಧಾನವಾಗಿ ಆಲ್ಬಂ ಸಾಂಗ್ ಗಳ ಅಬ್ಬರ ಶುರುವಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಆಲ್ಬಂ ಸಾಂಗ್ ಮನದನಿ.

ಯುವ ಪ್ರತಿಭೆಗಳು ಸೇರಿಕೊಂಡು ಮಾಡಿರುವ ಮನದನಿ ಆಲ್ಬಂ ಸಾಂಗ್ ಕೇಳುಗರನ್ನು‌ ಇಂಪ್ರೆಸ್ ಮಾಡುತ್ತಿದೆ. ಅದ್ಭುತ ಸಾಲುಗಳಲ್ಲಿ ಆಲ್ಬಂ ಸಾಂಗ್‌ ಕಟ್ಟಿಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಅನುಭವಿರುವ ಶ್ರೀಕಾಂತ್ ಗಣೇಶ್ ಅವರ ಮತ್ತೊಂದು ಪ್ರಯತ್ನವೇ ಈ ಮನದನಿ.

manadani

ಶಿವಲಿಂಗ, ಟೆರೆರಿಸ್ಟ್ ಸಿನಿಮಾಗಳ ಜೊತೆಗೆ ಅಗ್ನಿ ಸಾಕ್ಷಿ ಹಾಗೂ ಗೃಹಲಕ್ಷ್ಮಿ ಸೀರಿಯಲ್ ಗಳಲ್ಲಿ‌ ಹಾಗೂ ಕಿರುಚಿತ್ರವೊಂದರಲ್ಲಿ ನಟಿಸಿರುವ, ಮಲಯಾಳಂ ಆಲ್ಬಂ ಗೀತೆ ನಿರ್ದೇಶಿಸಿರುವ ಅನುಭವವಿರುವ ಶ್ರೀಕಾಂತ್ ಗಣೇಶ್ ಮನದನಿ‌ ಹಾಡಿನ ಸಾರಥಿ.

ಮನದನಿ ಆಲ್ಬಂ ಹಾಡಿಗೆ ಶ್ರೀಕಾಂತ್, ನಿರ್ದೇಶನ ಮಾಡುವುದರ ಜೊತೆಗೆ ನಟಿಸಿ ತಾವೇ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೊಗಸಾದ ಮನದನಿ ಪ್ರೇಮಗೀತೆಯಲ್ಲಿ ಅವರಿಗೆ ಜೋಡಿಯಾಗಿ ಮಂಗಳೂರು ಮೂಲದ ಯುವ ನಟಿ ಶ್ರದ್ಧಾ ಗೌಡ ನಟಿಸಿದ್ದಾರೆ.

ಮನದನಿ ಹಾಡಿಗೆ ಪ್ರತಾಪ್ ಭಟ್ ಕ್ಯಾಚಿ ಮ್ಯಾಚಿ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ರಘೋತ್ತಮ ಎನ್ ಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವಶಂಕರ ನೂರಂಬಡ ಕ್ಯಾಮೆರಾ, ಸೃಜನ್ ಬೆಳ್ಳಿ ಸಂಕಲನ ಹಾಡಿಗಿದೆ. ಬೆಂಗಳೂರಿನ ಸುಂದರ ಜಾಗದಲ್ಲಿ ಮನದನಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಮಾಂಕ್ ಸ್ಟುಡಿಯೋ ಯೂಟ್ಯೂಬ್ ನಲ್ಲಿ ಮನದನಿ ಹಾಡು ವೀಕ್ಷಣೆಗೆ ಲಭ್ಯವಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ