– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರಿನ ಗರುಡಾ ಮಾಲ್ ನಲ್ಲಿ ಮಾವು ಮೇಳ ಹಾಗೂ ಪುಸ್ತಕ ಮೇಳಕ್ಕೆ ಚಾಲನೆ ಕೊಡಲಾಗಿದೆ.
ಮಾವು ಹಾಗೂ ಪುಸ್ತಕ ಮೇಳಕ್ಕೆ ಖ್ಯಾತ ನಟ ಡಾಲಿ ಧನಂಜಯ ಚಾಲನೆ ನೀಡಿದ್ದಾರೆ.
ರೈತರಿಂದ ನೇರವಾಗಿ ಮಾವು ಖರೀದಿಸಲು ಇದೊಂದು ಉತ್ತಮ ಅವಕಾಶವಿದ್ದು ಈ ಮಾವು ಮೇಳ ಮೇ ೧೧ರವರೆಗೆ ಇದ್ದರೆ ಪುಸ್ತಕ ಮೇಳ ಮೇ ೧೮ರವರೆಗೆ ಇರಲಿದೆ.
ಮೇಳ ಉದ್ಘಾಟಿಸಿದ ನಟ ಡಾಲಿ ಧನಂಜಯ “ಮಕ್ಕಳಿಂದ ಮತ್ತು ಹಿರಿಯವರಗೆ ಅಕ್ಷರ ಜ್ಞಾನ ಸಂಪಾದನೆ 1ಲಕ್ಷ ಪುಸ್ತಕಗಳು ಇಲ್ಲಿ ಲಭ್ಯವಿದೆ ಮತ್ತು ರೈತರಿಂದ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ನೇರವಾಗಿ ಮಾವಿನ ಹಣ್ಣು ಮಾರಾಟ ಪ್ರದರ್ಶನದಿಂದ ರೈತರಿಗೆ ಉತ್ತಮ ವೇದಿಕೆಯಾಗಿದೆ. ಕನ್ನಡ ನಾಡು, ದೇಶಕ್ಕಾಗಿ ಪ್ರತಿಯೊಬ್ಬರು ಗಟ್ಟಿಯಾಗಿ ನಿಲ್ಲಬೇಕು, ಹಲಸಿನ ಹಣ್ಣು, ಮಾವಿನಹಣ್ಣು ನಾನು ಬಹಳ ಇಷ್ಟಪಡುವ ಹಣ್ಣು. ಪ್ರತಿಯೊಬ್ಬ ಹಣ್ಣುಗಳನ್ನು ತಿಂದು ಆರೋಗ್ಯವಂತರಾಗಿ ” ಎಂದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ “ದೇಶದಲ್ಲಿ ರೈತ ಮತ್ತು ಸೈನಿಕ ಎರಡು ಕಣ್ಣುಗಳು ಇದ್ದಂತೆ ನಮ್ಮ ಮಾವಿನ ಮೇಳದಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ, ಸಾರ್ವಜನಿಕರಿಗೆ ಉತ್ತಮ ಮಾವಿನ ಹಣ್ಣು ಸವಿಯುವ ಅವಕಾಶ ಸಿಗುತ್ತದೆ. ಅಕ್ಷರ ಜ್ಞಾನ ಎಂದು ಕಡಿಮೆಯಾಗಬಾರದು , ಪ್ರತಿದಿನ ಪುಸ್ತಕ ಓದುವುದರಿಂದ ಜ್ಞಾನ ಸಂಪಾದನೆ ಇನ್ನು ಹೆಚ್ಚಾಗುತ್ತದೆ ” ಎಂದು ತಿಳಿಸಿದರು.
ಮೇ 8ರಿಂದ ಮೇ 18ರವರೆಗೆ ಎಲ್ಲ ವಯಸ್ಸಿನ ಜನರಿಗೆ ಅನುಕೂಲವಾಗುವಂತೆ ಆಯ್ದ ಪುಸ್ತಕಗಳ ಪ್ರದರ್ಶನ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.