ಜೊತೆ ಜೊತೆಯಲ್ಲಿ ಸೀರಿಯಲ್ ನ ಮೇಘಶೆಟ್ಟಿ ಈಗ ತಮಿಳಿಗೆ ಹಾರಿದ್ದಾರೆ. ಜೊತೆ ಜೊತೆಯಲ್ಲಿ ಸೀರಿಯಲ್‌ ನ ನಂತರ 3 ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೇಘಶೆಟ್ಟಿ ತಮಿಳಿನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ.

Megha shetty (7)

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಸೀರಿಯಲ್​​ನಲ್ಲಿ ಖ್ಯಾತ ನಟ ಅನಿರುದ್ಧ ಜೋಡಿಯಾಗಿ ನಟಿಸಿ ಬಹುಬೇಗನೇ ಮನೆ ಮಾತಾದ ನಟಿ ಮೇಘಾ ಶೆಟ್ಟಿ, ಸೀರಿಯಲ್‌ ಮುಕ್ತಾಯ ಆಗೋಕು ಮೊದಲೇ ಸಾಕಷ್ಟು ಸಿನಿಮಾಗಳ ಆಫರ್‌ ಬಾಚಿಕೊಂಡಿದ್ರು,

ಬ್ಯಾಕ್‌ ಟು ಬ್ಯಾಕ್‌ 3 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ರು ಮೇಘ ಶೆಟ್ಟಿ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಮಲ್ಟಿಸ್ಟಾರರ್‌ ತ್ರಿಬಲ್‌ ರೈಡಿಂಗ್‌ ಸಿನಿಮಾದಲ್ಲಿ ಹೀರೋಯಿನ್‌ ಆಗಿ ನಟಿಸಿದ ಮೇಘ ಶೆಟ್ಟಿ ಅಷ್ಟೇನು ಗಮನ ಸೆಳೆಯಲಿಲ್ಲ. ಇದಾದ ನಂತರ ತುಸು ಹೆಚ್ಚೆ ಗ್ಲಾಮರಸ್ ಆಗಿದ್ದ ಪಾತ್ರದಲ್ಲಿ ಮೇಘ ಶೆಟ್ಟಿ ಮಿಂಚಿದ ಸಿನಿಮಾ ‘ದಿಲ್‌ ಪಸಂದ್‌’.

ಡಾರ್ಲಿಂಗ್‌ ಕೃಷ್ಣ ಹಾಗು ನಿಶ್ವಿಕಾ ನಾಯ್ಡು ನಟಿಸಿದ್ದ ಈ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾದಲ್ಲಿ ಸೆಕೆಂಡ್‌ ಹೀರೋಯಿನ್ ಆಗಿ ಮೇಘ ಶೆಟ್ಟಿ ನಟಿಸಿದ್ದರು. ಇದಾದ ಬಳಿಕ ಒಂದು ಪಿರಿಯಾಡಿಕ್‌ ಡ್ರಾಮಾ, ಧನ್ವೀರ್‌ ಲೀಡ್‌ ರೋಲ್‌ನಲ್ಲಿ ನಟಿಸಿದ್ದ ‘ಕೈವ’ ಸಿನಿಮಾದಲ್ಲಿ ನಾಯಕ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಜಯತೀರ್ಥ ನಿರ್ದೇಶನದ 80ರ ರೆಟ್ರೋ ಕಥೆಯ ‘ಕೈವ’ ಸಿನಿಮಾದ ಸಲ್ಮಾ ಅನ್ನೋ ಪಾತ್ರದಲ್ಲಿ ನಟಿಸಿದ್ದ ಮೇಘ ಶೆಟ್ಟಿ ಈ ಪಾತ್ರದ ಮೂಲಕ ತಮ್ಮಲ್ಲಿರೋ ಅದ್ಬುತ ನಟಿಯನ್ನ ಜಗತ್ತಿಗೆ ಪರಿಚಯಿಸಿದ್ರು.

Megha shetty (6)

ಈ ಸಿನಿಮಾಗಳೆಲ್ಲಾ ಅಂದುಕೊಂಡಷ್ಟು ಸಕ್ಸಸ್‌ ಕಾಣದೇ ಹೋದ್ರು ಮೇಘ ಶೆಟ್ಟಿಗೆ ಡಿಮ್ಯಾಂಡ್‌ ಕಮ್ಮಿಯಾಗಿಲ್ಲ, ಈಗಲೂ ಮೇಘ ಕೈಯಲ್ಲಿ ಇನ್ನೂ 3 ಕನ್ನಡ ಸಿನಿಮಾಗಳಿವೆ. ವಿನಯ್‌ ರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಗ್ರಾಮಾಯಣ’ ಸಿನಿಮಾಕ್ಕೆ ಮೇಘ ಶೆಟ್ಟಿ ಹೀರೋಯಿನ್‌. ಇನ್ನೂ ಕನ್ನಡ ಹಾಗು ಮರಾಠಿಯಲ್ಲಿ ಏಕ ಕಾಲಕ್ಕೆ ನಿರ್ಮಾಣವಾಗ್ತಾ ಇರೋ ‘ಆಫ್ಟರ್ ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾದಲ್ಲೂ ಮೇಘ ಶೆಟ್ಟಿ ನಟಿಸ್ತಾ ಇದ್ದಾರೆ.

Megha shetty (9)

ಈ ಮೂಲಕ ಮರಾಠಿ ಸಿನಿಮಾಕ್ಕೂ ಮೇಘ ಶೆಟ್ಟಿ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ ಚೀತಾ ಸಿನಿಮಾಕ್ಕೂ ಮೇಘ ಶೆಟ್ಟಿ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಇಷ್ಟೊಂದು ಬ್ಯುಸಿಯಾಗಿರೋ ಮೇಘ ಶೆಟ್ಟಿ ಕಾಲಿವುಡ್‌ಗೂ ಎಂಟ್ರಿ ಕೊಟಿದ್ದಾರೆ. ಹೊಸ ಸಿನಿಮಾ ಒಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿನಿಮಾದ ಮುಹೂರ್ತ ಕೂಡ ಆಗಿದೆ.

Megha shetty (3)

ತಮಿಳಿನ ಸ್ಟಾರ್‌ ನಟರಾದ ಸಸಿಕುಮಾರ್‌ ಹಾಗೂ ಭರತ್‌ ಶ್ರೀನಿವಾಸ್ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ತಾ ಇರೋ ‘ಕಾಳೈಯನ್‌’ ಸಿನಿಮಾ ದಲ್ಲಿ ಮೇಘಶೆಟ್ಟಿ ನಟಿಸ್ತಾ ಇದ್ದಾರೆ. ಎಂ. ಗುರು ಅನ್ನೋ ನವ ನಿರ್ದೇಶಕನ ಈ ಸಿನಿಮಾಕ್ಕೆ ಜಂಬಾರಾ ಎಂಟರ್‌ಟೈನರ್ಸ್‌ ಹಣ ಹಾಕ್ತಾ ಇದೆ.

Megha shetty (5)

ಈ ಸಿನಿಮಾದ ಕುರಿತು ಖುಷ್‌ ಆಗಿರೋ ಮೇಘ ಶೆಟ್ಟಿ ಭರತ್, ಸಸಿಕುಮಾರ್‌, ಸತ್ಯ ರಾಜ್‌ರಾಂಥಾ ದಿಗ್ಗಜ ನಟರ ಜೊತೆ ತಮಿಳು ಸಿನಿಮಾ ಡೆಬ್ಯು ಮಾಡ್ತಿರೋದು ನನ್ನ ಅದೃಷ್ಟ ಅಂತ ಹೇಳಿಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ