ಸರಸ್ವತಿ ಜಾಗೀರ್ದಾರ್*
ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುತ್ತಾರೆ ಆದರೆ ಅದು ಚಿಗುರೊಡೆದಿದ್ದು ನಲವತ್ತರ ನಂತರ ಮನೆ,ಸಂಸಾರ,ಮಗಳ ಲಾಲನೆ ಪಾಲನೆ,ಅವಳ ವಿದ್ಯಾಭ್ಯಾಸ..ಎಲ್ಲದರ ಜವಾಬ್ದಾರಿ ಒಬ್ಬ ಮಹಿಳೆ ಮಾತ್ರ ಇದೆಲ್ಲಾ ನಿಭಾಯಿಸುವ, ಯೋಚಿಸುವ ಶಕ್ತಿ ಹೊಂದಿರಬಲ್ಲಳು ಎಂಬುದಕ್ಕೆ ಫ್ಯಾಷನ್ ವಿನ್ಯಾಸಕಿ ರೇಖಾ ಕಟ್ಟಿಯೇ ಉತ್ತಮ ನಿದರ್ಶನ. ಆದರ್ಶ, ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ರೇಖಾ ತನ್ನ ಅಭಿಲಾಷೆಗೆ ನೀರೆರದಿದ್ದು ಮದುವೆಯ ನಂತರ, ನಲವತ್ತರ ರೇಖಾ ಫ್ಯಾಷನ್ ಡಿಸೈನ್ ಕಾಲೇಜು ಸೇರಿದಾಗ ಸಹ ಪಾಟಿಗಳೆಲ್ಲರೂ ಕಾಲೇಜು ತರುಣಿಯರಂತೆ.. ಕ್ರಮೇಣ ಅವರೇ ಸಹಪಾಟಿಗಳಾದರು ಎಂದು ನಗುತ್ತಾ ಹೇಳುವ ರೇಖಾ ಸಾಕಷ್ಟು ಫ್ಯಾಷನ್ ಇವೆಂಟ್ಸ್ ಗಳಲ್ಲಿ ಪಾಲ್ಗೊಂಡು ಗಮನ ಸೆಳೆದದ್ದು ತಾವು ಸೃಷ್ಟಿಸಿದ ನವ್ಯತಾ ಫ್ಯಾಷನ್ಸ್ ದೇಸಿ ವಿನ್ಯಾಸದ ಮೂಲಕ..
ಗುಳೇದಗುಡ್ಡ ಖಣ ಬಹಳ ಜನರಿಗೆ ಗೊತ್ತಾಗುವಂತೆ ಮಾಡಿದ್ದು ಇವರ ವಿನ್ಯಾಸದಿಂದ ಎಂದೇ ಹೇಳಬಹುದು.ಮಾರುಕಟ್ಟೆಗೆ ತರಬೇಕೆನ್ನುವ ಸಮಯದಲ್ಲಿ ಸರಿಯಾಗಿ ಕೋವಿಡ್ ಲಾಕ್ ಡೌನ್..ಆದರೂ ಸಹ ಗುಳೇದಗುಡ್ಡ ನೇಯ್ಕಾರರನ್ನು ಸಂಪರ್ಕಿಸಿ ಆ ಸಮಯದಲ್ಲೂ ನೇಯ್ಗೆ ಕೆಲಸ ಕೊಟ್ಟು ಅವರಿಗೂ ಒಂದು ರೀತಿಯಲ್ಲಿ ನೆರವಾಗಿದ್ದಾರೆ.
ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ ಶ್ರೀಮತಿ ಸುಧಾಮೂರ್ತಿ ಅವರಿಂದಲೂ ಅವಾರ್ಡ್ ಪಡೆದು ಹೊಗಳಿಕೆ ಗಿಟ್ಟಿಸಿಕೊಂಡಿರುವ ರೇಖಾ ಮೋದಿ ಕೋಟ್ ಡಿಸೈನ್ ಮಾಡಿ ಅವರಿಗೂ ತಲುಪಿಸುವಂತೆ ಮಾಡಿದ್ದಾರೆ. ಫ್ಯಾಷನ್ ಲೋಕದಲ್ಲಿ ಸಾಕಷ್ಟು ಫ್ಯಾಬ್ರಿಕ್ ಇರಬಹುದು ಆದರೆ ದೇಸಿತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ದೇಶ ವಿದೇಗಳಿಂದಲೂ ಬೇಡಿಕೆ ಇವರ ದೇಸಿ ಫ್ಯಾಷನ್ ಪಡೆದುಕೊಂಡಿದೆ. ಇಂತಹ ಆಶಾವಾದಿ ಮಹಿಳೆಯರೆಲ್ಲರಿಗೂ ಮಹಿಳಾ ದಿನಾಚರಣೆ ಶುಭಾಶಯಗಳು.