`ದೇವದಾಸ್‌' ಅಂದಾಕ್ಷಣ ಹಳೆಯ ಚಿತ್ರಗಳು ನೆನಪಿಗೆ ಬರುತ್ತವೆ. ಕೆ.ಎಲ್. ಸೈಗಲ್  ನಿಂದ ಹಿಡಿದು ನಾಗೇಶ್ವರ್‌ ರಾವ್‌, ದಿಲೀಪ್‌ಕುಮಾರ್‌ ಇತ್ತೀಚಿನ ಶಾರೂಖ್‌ ಖಾನ್‌ ವರೆಗೂ ಹೀರೋಗಳು ದೇವದಾಸ್‌ ಆಗಿ ತೆರೆಮೇಲೆ ವಿಜೃಂಭಿಸಿದ್ದಾರೆ. `ದೇವದಾಸ್‌' ಅಟ್ರಾಕ್ಟಿವ್ ಟೈಟ್‌. ಬಹಳ ಹಿಂದೆ ಕನ್ನಡದಲ್ಲೂ ಉಪೇಂದ್ರ ದೇವದಾಸ್‌ ಆಗಿ ನಟಿಸಲಿದ್ದಾರೆಂಬ ಸುದ್ದಿ ಇತ್ತು. ಒಟ್ಟಿನಲ್ಲಿ ಸಿನಿಮಾರಂಗದಲ್ಲಿ `ದೇವದಾಸ್‌'ನ ಕಥೆ ಯಾವತ್ತಿದ್ದರೂ ಎವರ್‌ ಗ್ರೀನ್‌. ಈಗ ಕನ್ನಡದಲ್ಲೂ `ದೇವದಾಸ್‌'ನ ಕಥೆ ರೆಡಿಯಾಗುತ್ತಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಶ್ರೀನಗರ ಕಿಟ್ಟಿ ನಾಯಕ. ನಾಯಕಿಯಾಗಿ ಹಿರಿಯ ತಾರೆ ಜಯಮಾಲಾ ಅವರ ಪುತ್ರಿ ಸೌಂದರ್ಯಾ ನಟಿಸುತ್ತಿದ್ದಾಳೆ. ಟೈಟಲ್ ಕೊಂಚ ಡಿಫರೆಂಟ್‌. ದೇವದಾಸ್‌ ನ ಜೊತೆ ಪಾರೂ ಹೆಸರು ಕೂಡಾ ಸೇರಿಕೊಂಡಿದೆ. ಟೈಟಲ್ ಬಂದು `ಪಾರೂ V/S ದೇವದಾಸ್‌' ಅಂತಿದೆ. ಹೀಗೊಂದು ಹೆಸರಿನ ಚಿತ್ರ ಮಾಡುವುದಾಗಿ ಬಹಳ ಹಿಂದೆಯೇ ನಿರ್ದೇಶಕರು ಪ್ಲಾನ್‌ ಮಾಡಿದ್ದರು.

ಅಂದಹಾಗೆ ಈ ಚಿತ್ರವನ್ನು `ಪಯಣ' ಚಿತ್ರ ನಿರ್ದೇಶಿಸಿದ್ದ ಕಿರಣ್‌ ಗೋವಿ ನಿರ್ದೇಶಿಸುತ್ತಿದ್ದಾರೆ. ಕಿರಣ್‌ ಗೋವಿ ಮೊದಲಿನಿಂದಲೂ ಏನಾದರೊಂದು ಹೊಸದನ್ನು ಕೊಡುವುದಕ್ಕಾಗಿ ಪ್ರಯತ್ನ ಪಡುತ್ತಿರುವಂಥ ನಿರ್ದೇಶಕ, ಕಥೆ ಹೇಳುವುದರಲ್ಲಿ ನಿಪುಣರು. ಕಣ್ಣಿಗೆ ಕಟ್ಟುವ ಹಾಗೆ ಕಥೆ ಹೇಳುತ್ತಾರೆ. ಬಹಳ ವರ್ಷಗಳ ಹಿಂದೆಯೇ ಕಿರಣ್‌ ದೇವದಾಸ್‌ ಚಿತ್ರದ ಕಥೆ ರೆಡಿ ಮಾಡಿಟ್ಟಿದ್ದರು. 2013ರಲ್ಲಿ ಅದು ಸೆಟ್ಟೇರಿತು.`ಪಾರೂ V/S ದೇವದಾಸ್‌' ಚಿತ್ರದ ಬಗ್ಗೆ ಸೌಂದರ್ಯಾ ಜಯಮಾಲಾಗೂ ಸಾಕಷ್ಟು ನಿರೀಕ್ಷೆ ಇದೆ. ಪಾರೂ ಪಾತ್ರಕ್ಕಾಗಿ ಪೂರ್ಣ ತಯಾರಿ ಮಾಡಿಕೊಂಡಿದ್ದಾಳೆ. `ಗಾಡ್‌ ಫಾದರ್‌' ಚಿತ್ರದಲ್ಲಿ ಉಪೇಂದ್ರರ ಜೊತೆಯಲ್ಲಿ ನಟಿಸಿದ್ದ ಸೌಂದರ್ಯಾ ಒಬ್ಬ ನಾಯಕಿಯಾಗಿ ತೆರೆ ಮೇಲೆ ಬರಲು ಎಲ್ಲ ರೀತಿ ಶ್ರಮ ವಹಿಸುತ್ತಿದ್ದಾಳೆ. ಎತ್ತರ ನಿಲುವಿನ ಈ ಚೆಲುವೆ ಪಾರೂ ಆಗಿ ಕಾಣಿಸಿಕೊಳ್ಳಲಿದ್ದಾಳೆ. `ಪಾರೂ V/S ದೇವದಾಸ್‌' ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ ಎಂದು ನಿರ್ದೇಶಕ ಕಿರಣ್ ಗೋವಿ ಹೇಳುತ್ತಾರೆ. ನಾಯಕಿ ಪ್ರಧಾನ ಚಿತ್ರವೊಂದು ಹೇಳಬಹುದು.

ಚಿತ್ರದ ಕಥಾನಾಯಕಿ ಕಥಕ್‌ ನೃತ್ಯ ಕಲಾವಿದೆ. ಮುಗ್ಧ ನಾಟ್ಯ ಕಲಾವಿದೆ, ಜೊತೆಗೆ ಜರ್ನಲಿಸ್ಟ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾಳಂತೆ. `ಗಾಡ್‌ ಫಾದರ್‌' ಚಿತ್ರದ ನಂತರ ನಟಿಸಲು ಬೇಕಾದಷ್ಟು ಅವಕಾಶಗಳು ಬಂದರೂ ಸೌಂದರ್ಯಾ ಎಲ್ಲವನ್ನು ಒಪ್ಪಿಕೊಳ್ಳಲಿಲ್ಲ. ಜನರ ಮನಸ್ಸಿನಲ್ಲಿ ನಿಲ್ಲುವಂಥ ಪಾತ್ರ ಮಾಡಬೇಕೆಂದು ಒಳ್ಳೆ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದಳು. `ಪಾರೂ V/S ದೇವದಾಸ್‌' ಚಿತ್ರದ ಕಥೆ ಮುಖ್ಯವಾಗಿ ಮೂರು ಪಾತ್ರಗಳ ಸುತ್ತ ಸಾಗುತ್ತದಂತೆ. ನಾಯಕ ಕಿಟ್ಟಿ ಕೂಡಾ ಈ ಚಿತ್ರದ ಕಥೆಗೆ ಬೋಲ್ಡ್ ಆಗಿದ್ದಾರಂತೆ. ಸಿನಿ ನಾಯಕನಾಗಿ ಬೆಳೆಯುವ ಆಸೆ ಹೊತ್ತಿರುವಂಥ ಶ್ರೀಮಂಥ ಹುಡುಗನ ಪಾತ್ರ.

ಈ ಚಿತ್ರದ ಸ್ಟಿಲ್ಸ್ ನೋಡುವಾಗ ಸೌಂದರ್ಯಾ ಬಹಳ ವಿಭಿನ್ನವವಾಗಿ ತನ್ನ ಕಾಸ್ಟ್ಯೂಮ್ ನ್ನು ಡಿಸೈನ್‌ ಮಾಡಿಕೊಂಡಿದ್ದಾಳೆ ಅನಿಸುತ್ತೆ. ಹಾಡುಗಳ ಚಿತ್ರೀಕರಣ ಸೆಟ್‌ ಗಳಲ್ಲಿಯೇ ನಡೆಯುತ್ತಿರೋದು ಈ ಚಿತ್ರದ ವಿಶೇಷ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ