ರಾಧಿಕಾಳ ದಿಲ್ ವಾಲಾ.....

`ದಿಲ್ ‌ವಾಲಾ' ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುವ ರಾಧಿಕಾ ಪಂಡಿತ್‌ ಕನ್ನಡದ ಟಾಪ್‌ ಹೀರೋಯಿನ್‌. ರಮ್ಯಾ ರಾಜಕೀಯ ಸೇರಿದಾಗಿನಿಂದ ರಾಧಿಕಾಳ ಪಾಲಿಗೆ ಎಲ್ಲ ಚಿತ್ರಗಳು ದಕ್ಕುತ್ತಿವೆ. ಹೊಸಬರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಏನು ಹೇಳ್ತಾಳೆ ಗೊತ್ತಾ? ಹೊಸ ಹೀರೋ ಜೊತೆ ನಟಿಸಿದ `ಅದ್ಧೂರಿ' ಚಿತ್ರ ಗೆದ್ದಿದೆ. `ದಿಲ್ ವಾಲಾ' ಕೂಡಾ ಖಂಡಿತಾ ಗೆಲ್ಲುತ್ತೆ ಎನ್ನುವ ವಿಶ್ವಾಸವಿತ್ತು, ಹೊಸಬರ ಜೊತೆ ನಟಿಸುವಾಗ ನನ್ನ ಜವಾಬ್ದಾರಿ ಜಾಸ್ತಿ. ಹೀಗಂತ ನನಗೇನು ಕಷ್ಟ ಅನಿಸೋದಿಲ್ಲ ಒಂಥರಾ ಖುಷಿ ಆಗುತ್ತೆ. ಸಿನಿಮಾ ಹೊಸಬರದಿರಲಿ, ಹಳಬರದಿರಲಿ ನಾನು ಇವರಿಬ್ಬರಿಂದಲೂ ಪ್ರತಿಸಲ ಏನಾದರೂ ಹೊಸದನ್ನು ಕಲಿಯುತ್ತೇನೆ. `ದಿಲ್ ‌ವಾಲಾ' ಸಿನಿಮಾದ ಯಶಸ್ಸಿಗಾಗಿ ನಾನು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ರಾಧಿಕಾ ತನ್ನ ಉತ್ಸಾಹವನ್ನು ಹಂಚಿಕೊಳ್ಳುತ್ತಾಳೆ.

ರಾಣಿ ಕನಸು

ಬದುಕಿದರೆ ರಾಣಿ ತರಹ ಬದುಕಬೇಕು ಎಂದು ಬಹಳ ವರ್ಷಗಳಿಂದ ಆಸೆಪಡುತ್ತಿದ್ದ ರಾಧಿಕಾ ಅರಮನೆಯಂಥ ಬಂಗಲೆ, ಶ್ರೀಮಂತ ರಾಜಕುಮಾರ, ಆಳು ಕಾಳು, ಬೇಕಾದ್ದನ್ನೆಲ್ಲ ಪಡೆಯುವ ಯೋಗ ಎನ್ನುವಂಥ ಫೇರಿಟೇಲ್ ‌ಕಥೆಗಳನ್ನು ಹೇಳುತ್ತಲೇ ಇದ್ದಳು. ಇದೆಲ್ಲ ನಿಜವೇ....? ಸಾಧಾರಣ ಹುಡುಗಿಯೊಬ್ಬಳ ಬದುಕಿನಲ್ಲಿ ಇಂಥ ತಿರುವು ಬರಲು ಸಾಧ್ಯವೇ? ರಾಧಿಕಾ ಬದುಕಿನಲ್ಲಿ ಇವೆಲ್ಲ ನಿಜವಾಗಿದೆ. ತಾನು ಆಸೆಪಟ್ಟಿದ್ದನ್ನೆಲ್ಲ ಪಡೆದಿದ್ದಾಳೆ. ಸಿನಿಮಾರಂಗಕ್ಕೆ ಸೇರಿಕೊಂಡಾಗಲೂ ಸಹ ಸಾಕಷ್ಟು ಕನಸು ಕಾಣುತ್ತಿದ್ದಳಂತೆ. ತನಗಿಷ್ಟವಾದ ಉಡುಗೆ ತೊಡುಗೆ, ಪಾತ್ರ ಇವೆಲ್ಲ ಈಗ ನನಸಾಗಿದೆ. `ಸ್ವೀಟಿ' ಚಿತ್ರದಲ್ಲಿ ತನಗಿಷ್ಟವಾದ ಕಾಸ್ಟ್ಯೂಮ್ಸ್ ಮತ್ತು ತಾನು ಇಷ್ಟಪಡುತ್ತಿದ್ದಂಥ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾಳೆ. ಈ ಸ್ವೀಟಿ ನಿಜಕ್ಕೂ ಸ್ವೀಟಾಗಿಯೇ ತನ್ನ ಬದುಕಿನಲ್ಲಿ ಸಿಹಿ ತುಂಬುತ್ತಿದ್ದಾಳೆ.

ಉಪ್ಪಿ -2

ಉಪೇಂದ್ರ ಯಾವಾಗಲೂ ಸ್ಪೆಷಲ್. ಅವರು ಮಾಡುವುದೆಲ್ಲ ಸ್ಪೆಷಲ್ಲಾಗೇ ಇರುತ್ತೆ. ಈ ಬಾರಿ ಅವರು `ಉಪ್ಪಿ-2' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಉಪೇಂದ್ರ ಭಾಗ-2 ಅಂತನಾದ್ರೂ ತಿಳಿದುಕೊಳ್ಳಬಹುದು. ಈ ಚಿತ್ರ ಅವರ ಹುಟ್ಟುಹಬ್ಬದ ದಿನದಂದೇ ಸೆಟ್ಟೇರಿದ್ದು ವಿಶೇಷ. ಬಹಳ ವರ್ಷಗಳ ನಂತರ ಉಪೇಂದ್ರ ಗುರುಕಿರಣ್‌ ಕಾಂಬಿನೇಶನ್‌ ನಲ್ಲಿ ಬರುತ್ತಿರುವ ಚಿತ್ರವಿದು. ಈ ಚಿತ್ರವನ್ನು ಉಪ್ಪಿ ಪತ್ನಿ ಪ್ರಿಯಾಂಕಾ ಮತ್ತು ಮನೋಹರ್‌ (ನಿರ್ಮಾಪಕರು) ಸೇರಿ ನಿರ್ಮಿಸುತ್ತಿದ್ದಾರೆ. ಪ್ರಿಯಾಂಕಾ ಬಹಳ ಆಸಕ್ತಿ ವಹಿಸಿ `ಉಪ್ಪಿ-2' ಚಿತ್ರದ ಮುಹೂರ್ತ ಬಹಳ ವಿಭಿನ್ನವಾಗಿ, ಅದ್ಧೂರಿಯಾಗಿ ಮೂಡಿಬರಬೇಕೆಂದು ಖುದ್ದಾಗಿ ಕುಳಿತು ಪ್ಲಾನ್ ಮಾಡಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಸಾಂಪ್ರದಾಯಿಕವಾಗಿ ಮುಹೂರ್ತಕ್ಕೆ ಚಾಲನೆ ಸಿಕ್ಕರೆ, ಸಂಜೆ ಬಹಳ ಗ್ರಾಂಡಾಗಿ ಅರಮನೆ ಅವರಣದಲ್ಲಿ ಸಂಗೀತಸಂಜೆಯೊಂದಿಗೆ ತಾರಾ ಸಮೂಹದ ನಡುವೆ ಹುಟ್ಟುಹಬ್ಬದ ಆಚರಣೆ. ಉಪ್ಪಿ, ಪ್ರಿಯಾಂಕಾ, ಶಿವಣ್ಣ ಮತ್ತು ರವಿಚಂದ್ರನ್‌ ಎಲ್ಲರೂ ವೇದಿಕೆ ಮೇಲೆ ಕುಳಿತಿದ್ದು ವಿಶೇಷವಾಗಿತ್ತು.

ಅಗ್ರಜನ.... ಹಿರಿಮೆ

ಜಗ್ಗೇಶ್‌ ನಟಿಸುತ್ತಿರುವ `ನೀರ್‌ ದೋಸೆ' ಪ್ರೇಕ್ಷಕರ ಪ್ಲೇಟಿಗೆ ಬರುವುದಕ್ಕೆ ಮೊದಲು ಅವರ ಇನ್ನಷ್ಟು ಹೊಸ ಚಿತ್ರಗಳು ಶುರುವಾಗುತ್ತಿವೆ, ತೆರೆಗೆ ಬರುತ್ತಿವೆ. `ಕೂಲ್ ಗಣೇಶ' ತೆರೆಗೆ ಬರಬೇಕಿದೆ. `ಅಗ್ರಜ' ಸಿನಿಮಾ ಕೂಡ ಸುದ್ದಿಯಲ್ಲಿದೆ. ಈ ಚಿತ್ರದ ಕುರಿತು ಜಗ್ಗೇಶ್‌ ಹೇಳುವುದು ಹೀಗೆ. `ಅಗ್ರಜ' ಅದ್ಧೂರಿ ಸಿನಿಮಾ. ನನ್ನ ಎಲ್ಲ ಚಿತ್ರಗಳಿಗಿಂತ ಕೊಂಚ ವಿಭಿನ್ನವಾದ ಸಿನಿಮಾ. ನನ್ನ ಪಾತ್ರ ಡಿಫರೆಂಟಾಗಿದೆ ಎನ್ನುತ್ತಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯಿಸಿರುವುದು ಮತ್ತೊಂದು ಪ್ಲಸ್‌ ಪಾಯಿಂಟ್‌. ನಿರ್ಮಾಣ ಹಂತದಲ್ಲಿರುವಾಗಲೇ ಸಿನಿಮಾದ ಟಿ.ವಿ. ಹಕ್ಕು  ಮೂರು ಕೋಟಿ ರೂಪಾಯಿಗೆ ಮಾರಾಟವಾಗಿರುವುದು `ಅಗ್ರಜ' ಚಿತ್ರದ ಹಿರಿಮೆಗೆ ಸಾಕ್ಷಿಯಾಗಿದೆ. ಜಗ್ಗೇಶ್‌ ತಮ್ಮ ಇಮೇಜಿನ ಚಿಂತೆ ಇಲ್ಲದೇ ನಟಿಸಿದ್ದಾರಂತೆ. ಮುಂಬೈ ಬೆಡಗಿ ಕಾಮನಾ ಜೇಠ್ಮಲಾನಿ ಸೇರಿದಂತೆ ಮೂವರು ನಾಯಕಿಯರು ಈ ಚಿತ್ರದಲ್ಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ