ರಜನಿಯ ಹೊಸ ಹೀರೋಯಿನ್ಆ್ಯಮಿ : ತಮಿಳಿನ `ಐ' ಚಿತ್ರ ಹಿಟ್‌ ಆದ ನಂತರ ಸ್ಟಾರ್‌ ಆಗಿ ಬದಲಾದ ಆ್ಯಮಿ ಜಾಕ್ಸನ್‌, ಬಾಲಿವುಡ್‌ನಲ್ಲಿ `ಸಿಂಗ್‌ ಈಸ್‌ ಬ್ಲಿಂಗ್‌` ಸಕ್ಸಸ್‌ ಆದಮೇಲೆ ಹಿಂದಿರುಗಿ ನೋಡಲೇ ಇಲ್ಲ. ಹೀಗಾಗಿ 24ರ ಹರೆಯದ ಈ ವಿದೇಶೀ ಬಾಲೆ ಈಗ ಸೂಪರ್‌ ಸ್ಟಾರ್‌ ರಜನೀಕಾಂತ್‌ರ `ರೋಬೋ 2.0' ಹೊಸ ಚಿತ್ರದಲ್ಲಿ ನಾಯಕಿಯಾಗುವ ಅದೃಷ್ಟ ಗಿಟ್ಟಿಸಿದ್ದಾಳೆ! ದಕ್ಷಿಣದ ಖ್ಯಾತ ನಿರ್ದೇಶಕ ಎಸ್‌. ಶಂಕರ್‌ರ ಮುಂದಿನ ಮೆಗಾ ಪ್ರಾಜೆಕ್ಟ್ ಆದ ಈ ಚಿತ್ರದಲ್ಲಿ ಅಕ್ಷಯಕುಮಾರ್‌ ಖಳನಾಯಕ.  ರಜನಿಯರ ಸೂಪರ್‌ ಡೂಪರ್‌ ಹಿಟ್‌`ರೋಬೋ' ಚಿತ್ರದ ಮುಂದಿನ ಭಾಗವಿದು. ರಜನಿ ಜೊತೆ ಅಭಿನಯಿಸದ ನವ ನಟಿಯರೇ ಇಲ್ಲ ಎನ್ನಬಹುದು. `ರೋಬೋ' ಚಿತ್ರದಲ್ಲಿ  ಐಶ್ವರ್ಯಾ ಇದ್ದರೆ, ಈಗ `ರೋಬೊ 2.0' ಚಿತ್ರದಲ್ಲಿ ಆ್ಯಮಿ ಇದ್ದಾಳೆ. ರಜನಿಯಂಥ ವರ್ಚಸ್ವೀ ನಾಯಕರೊಂದಿಗೆ ನಟಿಸುತ್ತಿರುವುದಕ್ಕೆ ಆಕೆ ಬಹು ರೋಮಾಂಚಿತಗೊಂಡಿದ್ದಾಳೆ.

ಮುನಿಸು.... ಓಲೈಸು

ಬಾಲಿವುಡ್‌ನಲ್ಲಿ ಈಗ ಮುನಿಸಿಕೊಳ್ಳುವುದು, ನಂತರ ಸಂಗಾತಿಯನ್ನು ಹೇಗಾದರೂ ಓಲೈಸುವುದು ಇತ್ಯಾದಿ ನಡೆಯುತ್ತಿದೆ. ದೂರವಾಗಿದ್ದ ಆಫ್‌ಸ್ಕ್ರೀನ್‌ ಪ್ರೇಮಿಗಳು ಮತ್ತೆ ಒಂದಾಗುತ್ತಿದ್ದಾರೆ. ತಾಜಾ ಸುದ್ದಿ ಆಲಿಯಾ ಸಿದ್ದಾರ್ಥ್‌ರದು. ಆಲಿಯಾ ಬಗ್ಗೆ ಅವಳ ಬಾಯ್‌ಫ್ರೆಂಡ್‌ ಸಿದ್ದಾರ್ಥ್‌ ಕೋಪಗೊಂಡು ದೂರವಾಗಿದ್ದು ಹಳೆಯ ಸಂಗತಿ. ಅದಕ್ಕೆ ಕಾರಣ.... ಅವರಿಬ್ಬರೂ ಒಂದು ಪಾರ್ಟಿಗೆ ಹೋಗಿದ್ದರಂತೆ. ಅಲ್ಲಿ ಆಲಿಯಾ ತನ್ನ ಮಾಜಿ ಬಾಯ್‌ಫ್ರೆಂಡ್‌ ಅಲಿ ದಾದರ್‌ಕರ್‌ನನ್ನು ಕಂಡು ಹಾಯ್‌ ಹಲೋ ಹೇಳುತ್ತಿದ್ದಾಗ, ಸಿದ್ದಾರ್ಥನಿಗೆ ಮಹಾ ಸಿಟ್ಟು ಬಂದು ಮಧ್ಯದಲ್ಲೇ ಪಾರ್ಟಿ ಬಿಟ್ಟು ಹೊರಟುಹೋದನಂತೆ.

ಹ್ಯೂಮನ್ಟ್ರಾಫಿಕಿಂಗ್ಚಿತ್ರದಲ್ಲಿ ಫ್ರೀಡಾ

`ಸ್ಲಂ ಡಾಗ್‌ ಮಿಲೇನಿಯರ್‌' ಚಿತ್ರದಿಂದ ಆಸ್ಕರ್‌ ಮಟ್ಟ ತಲುಪಿದ ಫ್ರೀಡಾ ಪಿಂಟೋ ಮತ್ತೆ ತನ್ನ ಹಳೆಯ ತಂಡದೊಂದಿಗೆ ಮುಂಬೈನಲ್ಲಿ ಶೂಟಿಂಗ್‌ ನಡೆಸಿದ್ದಾಳೆ. ಹ್ಯೂಮನ್‌ ಟ್ರಾಫಿಕಿಂಗ್‌ ವಿಷಯದ ಕುರಿತಾಗಿ ತಯಾರಾಗುತ್ತಿರುವ `ಲವ್ ಸೋನಿಯಾ' ಚಿತ್ರಕ್ಕೆ ನಾಯಕಿಯಾಗಿರು ಫ್ರೀಡಾ, ಮುಂಬೈನ ಲೋಕೇಶನ್‌ನಲ್ಲಿ ಚಿತ್ರೀಕರಣದಲ್ಲಿದ್ದಾಳೆ. ಈ ಚಿತ್ರವನ್ನೂ ಸಹ ಈಕೆಯ ಮೊದಲ ಚಿತ್ರದ ನಿರ್ದೇಶಕ ತಬರೇಜ್‌ ಇರಾನಿಯೇ ನಿರ್ದೇಶಿಸುತ್ತಿದ್ದಾರೆ. ದೊಡ್ಡ ಸಾಲದಲ್ಲಿ ಸಿಲುಕಿದ ಕುಡುಕ ತಂದೆ ಹೇಗೆ ತನ್ನ ಮಗಳು ಸೋನಿಯಾಳನ್ನು ವೇಶ್ಯಾವಾಟಿಕೆಯ ಕೊಚ್ಚೆಗೆ ನೂಕುತ್ತಾನೆ ಎಂಬುದೇ ಚಿತ್ರ. ಮುಂದೆ ಹಾಂಕಾಂಗ್‌, ಲಾಸ್‌ಏಂಜಲೀಸ್‌ನಲ್ಲೂ ಚಿತ್ರದ ಶೂಟಿಂಗ್‌ ನಡೆಯಲಿದೆ. ಫ್ರೀಡಾ ಜೊತೆ ಮನೋಜ್‌ ಬಾಜ್‌ಪೈ, ರಿಜಾ ಚಡ್ಡಾ, ಅನುಪಮ್ ಖೇರ್‌ಮುಂತಾದವರಿರುತ್ತಾರೆ.

ಸಂಗಾತಿಯ ತಲಾಷೆಯಲ್ಲಿ  ಎಲೀ

ತನ್ನ ಸರಳತೆ, ಸೌಂದರ್ಯದ ಮೋಡಿಯಿಂದ ಸಾವಿರಾರು ಯುವಕರ ಹೃದಯಕ್ಕೆ ಲಗ್ಗೆ ಹಾಕಿರುವ ಸ್ವೀಡಿಶ್‌ ಗ್ರೀಕ್‌ ಸುಂದರಿ ಎಲೀ ಆವ್ರಾಮ್, ತನ್ನ ಇತ್ತೀಚಿನ ಗ್ಲಾಮರಸ್‌ ಫೋಟೋ ಶೂಟ್‌ನಿಂದ ಮತ್ತೆ ಚರ್ಚೆಯಲ್ಲಿದ್ದಾಳೆ. ಬೀಯಿಂಗ್‌ ಹ್ಯೂಮನ್‌ನ ಸ್ಪ್ರಿಂಗ್‌ಸಮ್ಮರ್‌ ಕಲೆಕ್ಷನ್‌ಗಾಗಿ ನಡೆಯುತ್ತಿರುವ ಫೋಟೋ ಶೂಟ್‌ನಲ್ಲಿ ಬಾಲಿವುಡ್‌ನ ಮೋಸ್ಟ್ ವಾಂಟೆಡ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ ಸಹ ಕಾಣಿಸಿಕೊಂಡಿರುವುದೇ ಇಲ್ಲಿನ ಪ್ಲಸ್‌ ಪಾಯಿಂಟ್‌. ನಂಬಲರ್ಹ ಸುದ್ದಿಗಳ ಪ್ರಕಾರ, ಸಲ್ಮಾನ್‌ ಹಾಗೂ ಎಲೀಯ ಆತ್ಮೀಯತೆ ಮತ್ತೊಮ್ಮೆ ಗಾಢಗೊಳ್ಳುತ್ತಿದೆಯಂತೆ, ಏಕೆಂದರೆ ಹಿಂದೆಯೂ ಅಂಥ ಸುದ್ದಿ ಹರಡಿತ್ತು. ಬಿಗ್‌ಬಾಸ್‌ ಸೀಸನ್‌ನಲ್ಲಿ ಸಲ್ಮಾನ್‌ ಎಲೀಗೆ ಬಹಳ ಸಪೋರ್ಟ್‌ ಮಾಡಿದ್ದ. ಈಗ ಸತ್ಯ ಸಂಗತಿ ಏನೆಂಬುದನ್ನು ತಿಳಿಯಲು ಇನ್ನಷ್ಟು ಕಾಯಬೇಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ