ಇತ್ತೀಚೆಗೆ ಬಾಲಿವುಡ್‌ನಲ್ಲಷ್ಟೇ ಅಲ್ಲ ಭಾರತದಲ್ಲಿನ ಯಾವುದೇ ಸಿನಿಮಾರಂಗ ತೆಗೆದುಕೊಳ್ಳಿ. ಸನ್ನಿಲಿಯೋನ್‌ ಅಂದ್ರೆ ಸಾಕು ಎಲ್ಲರಿಗೂ ಚಿರಪರಿಚಿತ. ಸನ್ನಿ ತನ್ನ ಮಾದಕ ಚೆಲುವಿನಿಂದ ಪ್ರೇಕ್ಷಕರ ಮನಗೆದ್ದಂಥ ತಾರೆ. ಬಾರ್ಬಿ ಡಾಲ್‌ ಹಾಡಿನ ನಂತರ ಪುಟ್ಟ ಮಕ್ಕಳು ಸಹ ಸನ್ನಿ ಕಂಡಕೂಡಲೇ ಹೆಜ್ಜೆ ಹಾಕುತ್ತವೆ. ಸನ್ನಿಗೆ ಇಂಥದ್ದೇ ಅಂತ ಪಾತ್ರ ಫಿಕ್ಸ್ ಆಗುವುದು ಬೇಕಿಲ್ಲ. ಒಂದು ಐಟಂ ಸಾಂಗ್‌ ಸಿಕ್ಕರೆ ಸಾಕು ಇಡೀ ಚಿತ್ರವನ್ನೇ ನುಂಗಿಬಿಡುತ್ತಾಳೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲೂ ಸನ್ನಿ ಹವಾ ಜೋರಾಗಿಯೇ ಇದೆ.

ಕನ್ನಡದಲ್ಲೂ ಕುಣಿದು ಹೋಗಿರುವ ಸನ್ನಿಗೆ ಬೆಂಗಳೂರೆಂದರೆ ಇಷ್ಟವಂತೆ. ಇತ್ತೀಚೆಗೆ ತನ್ನ ಹಿಂದಿ ಚಿತ್ರವೊಂದರ ಪ್ರಚಾರಕ್ಕೆ ಬಂದಿದ್ದ ಸನ್ನಿ ಮೀಡಿಯಾ ಜೊತೆ ಸಾಕಷ್ಟು ಹರಟಿದ್ದಾಳೆ. ಅವುಗಳ ಬಿಟ್ಸ್ ಇಲ್ಲಿದೆ. ಸಖತ್‌ ಹಾಟ್‌ ಮಗಾ ಎನ್ನುವಂತೆ ಕಂಗೊಳಿಸುವ ಸನ್ನಿ ಕಂಡರೆ ಪಡ್ಡೆ ಹುಡುಗರು `ಬ್ಲೂ ಹೇ ಪಾನಿ ಪಾನಿ….. ಸನ್ನಿ ಸನ್ನಿ,’ ಎಂದು ಹಾಡುತ್ತಾರೆ, ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಇದ್ಯಾವುದೂ ಸನ್ನಿಗೆ ಅಷ್ಟಾಗಿ ಇಷ್ಟವಾಗುವುದಿಲ್ಲ. ಏಕೆಂದರೆ ಐಟಂ ಅನ್ನೋ ಪದವೇ ಆಕೆಗೆ ಇಷ್ಟವಿಲ್ಲವಂತೆ.

ಹೌದು ನನಗೆ ಬೆಂಗಳೂರು ಇಷ್ಟ. ಇಲ್ಲಿಯ ವಾತಾವರಣ ತುಂಬಾ ಹಿಡಿಸುತ್ತೆ. ಬಹಳ ಸಲ ಬಂದು ಹೋಗಿದ್ದೇನೆ. ಇದೇನು ಹೊಸದಲ್ಲ. ಕನ್ನಡ ಚಿತ್ರಗಳಲ್ಲೂ ನಟಿಸಿದ್ದೇನೆ. ನನಗಿಷ್ಟವಾದಂಥ ಪ್ರಾಜೆಕ್ಟ್ ಸಿಕ್ಕರೆ ಖಂಡಿತ ಬರುತ್ತೇನೆ. ಹಾಗಂತ ಬೆಂಗಳೂರಿನಲ್ಲೇ ನೆಲೆಸುವ ಆಸೆ ಇಲ್ಲ.

ಪೋರ್ನ್‌ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಜನಪ್ರಿಯತೆ ಪಡೆದಿರುವ ಸನ್ನಿ ಸಿನಿಮಾಗಳಲ್ಲೂ ಅಂಥದ್ದೇ ಪಾತ್ರಗಳನ್ನು ಮಾಡುವುದಕ್ಕೆ ಮನಸ್ಸಾದರೂ ಹೇಗೆ ಬರುತ್ತೆ? ಬೇರೆ ರೀತಿಯ ಪಾತ್ರಗಳತ್ತ ಟ್ರೈ ಮಾಡಬಹುದಲ್ಲ ಅಂತ ಸಾಕಷ್ಟು ಜನ ಪ್ರಶ್ನಿಸಿದರೂ ಸನ್ನಿ ಮಾತ್ರ ತಾನು ತೆರೆ ಮೇಲೆ ಏನೇ ಮಾಡಲಿ, ಹೇಗೆಯೇ ಕಾಣಿಸಿಕೊಳ್ಳಲಿ, ಅದರ ಬಗ್ಗೆ ರಿಗ್ರೆಟ್ಸ್ ಇಲ್ಲ ಎನ್ನುವಂಥ ನೇರ ಮಾತಿನ ಗಟ್ಟಿಗಿತ್ತಿ.

ಅಡಲ್ಟ್ ಚಿತ್ರ ಎಂದು ಕರೆಯಲ್ಪಡುವ `ಮಸ್ತಿರದೆ’ ಚಿತ್ರ ರಿಲೀಸ್‌ ಆಗಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ಎಲ್ಲರೂ ಅಂದುಕೊಂಡಂತೆ ಇದು ಪೋರ್ನ್‌ ಸಿನಿಮಾ ತರಹ ಅಲ್ಲ, ತುಂಬಾನೆ ವ್ಯತ್ಯಾಸವಿರುತ್ತದೆ. ನನಗೂ ವಿಭಿನ್ನ ರೀತಿಯ ಪಾತ್ರ ಮಾಡುವಾಸೆ. ಅಂಥ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕಲ್ವಾ….. ನನಗೆ ತುಂಬಾನೆ ತಾಳ್ಮೆ ಇರೋದ್ರಿಂದ ಒಂದಲ್ಲ ಒಂದು ದಿನ ವಿಭಿನ್ನ ಪಾತ್ರ ಮಾಡುತ್ತೇನೆಂಬ ನಂಬಿಕೆ ಇದೆ. ನಟಿ ಆಗಿ ಅದನ್ನು ಪ್ರೂವ್ ಮಾಡ್ತೀನಿ, ಎನ್ನುತ್ತಾಳೆ.

ನನಗ್ಯಾಕೆ ದಕ್ಷಿಣ ಭಾರತದ ಚಿತ್ರಗಳು ಇಷ್ಟವಾಗುತ್ತೆ ಅಂದ್ರೆ ಸಿನಿಮಾವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ತಾರೆ.

ಮೇಕಿಂಗ್‌ ಸೂಪರ್‌! ಇಲ್ಲಿ ಆರಿಸಿಕೊಳ್ಳುವ ಕಥೆಗಳಲ್ಲಿ ಹೊಸತನವಿರುತ್ತೆ. ಹಾಗಾಗಿ ನನಗೆ ಸೌತ್‌ ಫಿಲಂಸ್‌ ತುಂಬಾ ಇಷ್ಟವಾಗುತ್ತೆ. ನಾನೂ ಕೂಡ ಅನೇಕ ಸೌತ್‌ ಫಿಲಂಸ್‌ನಲ್ಲಿ ನಟಿಸಿರೋದ್ರಿಂದ ಅನುಭವ ಚೆನ್ನಾಗಿಯೇ ಆಗಿದೆ. ಐಟಂ ಡ್ಯಾನ್ಸರ್‌ಅಂತ ಬ್ರ್ಯಾಂಡಾಗಲು ನನಗೂ ಇಷ್ಟವಿಲ್ಲ. ಕೆಲವು ಸಲ ನನಗಾಗಿ ಹಾಡು ರೆಡಿ ಮಾಡಿರುತ್ತಾರೆ. ಇನ್ನು ಕೆಲವರು ನನಗಾಗಿ ಪಾತ್ರ ಸೃಷ್ಟಿಸಿ ಹಾಡನ್ನು ಇಟ್ಟಿರುತ್ತಾರೆ. ನಾನು ಎಂಜಾಯ್‌ ಮಾಡಿಕೊಂಡೇ ಅಂಥ ಪಾತ್ರ ಮಾಡ್ತೀನಿ. ಒಟ್ಟಿನಲ್ಲಿ ನನಗೆ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸೋದೆ ಖುಷಿಯ ಸಂಗತಿ.

ಉಳಿದ ತಾರೆಯರ ಕಣ್ಣು ಕುಕ್ಕುವಂತೆ ಮಾಡುವ ಸನ್ನಿ ಸೌಂದರ್ಯದ ಬಗ್ಗೆ ಅನೇಕ ತಾರೆಯರಿಗೆ ಹೊಟ್ಟೆಕಿಚ್ಚಾಗೋದು ಸಹಜ. ಏಕೆಂದರೆ ಸನ್ನಿ ಹಾಡು ಬಂದರೆ ಜನ ಹುಚ್ಚೆದ್ದು ಕುಣೀತಾರೆ. ಆದರೆ ನಾಯಕಿಯರತ್ತ, ಅವರ ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಸದಾ ಲವಲವಿಕೆಯಿಂದ ಚುರುಕಾಗಿರುವ ಸನ್ನಿ ಅಂದ್ರೆ ಎಲ್ಲರಿಗೂ ಪ್ರಿಯ.

ತನ್ನ ಅಂದದ ಬಗ್ಗೆ ತಾನೇ ಖುಷಿಪಡುವ ಸನ್ನಿ ಸದಾ ಬಿಝಿ. ತನಗಾಗಿ ಅಂತ ಸಮಯ ಕೂಡಾ ಇರುವುದಿಲ್ಲವಂತೆ. ಕೈತುಂಬಾ ಕೆಲಸ, ಸಾಲು ಸಾಲಾಗಿ ಚಿತ್ರಗಳು, ಟೈಮ್ ನೋಡೋಕು ಟೈಮ್ ಇಲ್ಲ. ನಾನು ತುಂಬಾನೆ ಹಾರ್ಡ್‌ ವರ್ಕರ್ ಹಾಗಾಗಿ ಅದೇ ನನ್ನ ಪಾಲಿಗೆ ವರದಾನ. ನಾನು ಯಾವುದೇ ಪಾತ್ರ ಮಾಡಲಿ, ಡ್ಯಾನ್ಸ್ ಮಾಡಲಿ ಇಷ್ಟಪಟ್ಟು ಆ ಕೆಲಸವನ್ನು ಪ್ರೀತಿಯಿಂದ ಮಾಡೋದ್ರಿಂದ ತೆರೆ ಮೇಲೆ ಚೆನ್ನಾಗಿ ಕಾಣುತ್ತೆ. ನಾನು ಫಿಟ್‌ ಅಂಡ್‌ ಟ್ರಿಮ್ ಆಗಿರಲು ಡಯೆಟ್‌ ಮಾಡುತ್ತೇನೆ. ಜಿಮ್ ಗೆ ತಪ್ಪದೇ ಹೋಗ್ತೀನಿ ಎಂದು ಹೇಳುವ ಸನ್ನಿ ಲಿಯೋನ್‌ ಬಾಲಿವುಡ್‌ನಲ್ಲೀಗ ಚಾಲ್ತಿಯಲ್ಲಿರುವ ಬಿಝಿ ಹಾಟ್‌ ಬೆಡಗಿ. ಸ್ಟಾರ್‌, ಡ್ಯಾನ್ಸರ್‌ ಎಲ್ಲ ಆಗಿದ್ದಾಳೆ. ಈಕೆ ಕುರಿತು ಡಾಕ್ಯುಮೆಂಟರಿ ಕೂಡ ತಯಾರಾಗುತ್ತಿದೆ. ಐಟಂ ಡ್ಯಾನ್ಸ್ ನಿಂದ ಒಬ್ಬ ನಟಿಯಾಗಿ ಬಡ್ತಿ ಪಡೆದು ತನ್ನಲ್ಲಿ ಅಡಗಿರುವ ಪ್ರತಿಭೆ ಎಲ್ಲರಿಗೂ ತೋರಿಸಬೇಕೆಂದು ಆಸೆ ಪಡುವ ಸನ್ನಿಗೆ ಆ ದಿನ ಬೇಗ ಬರಲಿ ಎಂದು ಹಾರೈಸೋಣ.

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ