- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ರೂಪಿಕಾ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಸದ್ಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿಂಚನಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರೂಪಿಕಾ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
ಕನ್ನಡದ ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿರುವ ರೂಪಿಕಾ ಅವರ ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಲಗ್ನಪತ್ರಿಕೆ ಶಾಸ್ತ್ರವೂ ನೆರವೇರಿದೆ. ಈ ಕುರಿತು ಸ್ವತಃ ರೂಪಿಕಾ ಸಂತಸ ಹಂಚಿಕೊಂಡಿದ್ದು, “ಹೆಣ್ಣುಮಕ್ಕಳ ಜೀವನದಲ್ಲಿ ಮದುವೆ ತುಂಬಾ ವಿಶೇಷವಾದ ಕ್ಷಣ. ನನ್ನ ಜೀವನದಲ್ಲೂ ಆ ಸಮಯ ಬಂದಿದೆ. ಮದುವೆ ಶಾಸ್ತ್ರಗಳು ಆರಂಭವಾಗಿವೆ” ಎಂದು ಹೇಳಿದ್ದಾರೆ.
ಆದರೆ, ರೂಪಿಕಾ ವರ ಯಾರು? ಅವರು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ? ಇದು ಪ್ರೇಮ ವಿವಾಹವೇ ಅಥವಾ ಕುಟುಂಬದವರ ಆಯ್ಕೆಯ ಮದುವೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಕುರಿತು ನಟಿ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ