2008ರಲ್ಲಿ `ಮಿಸ್‌ ಫ್ರೆಶ್‌' ಪ್ರಶಸ್ತಿ ಮುಡಿಗೇರಿಸಿಕೊಂಡ ನಟಿ ತಾಪಸಿ ಪನ್ನು ತನ್ನ ಕೆರಿಯರ್‌ ಆರಂಭಿಸಿದ್ದು ತೆಲುಗು ಚಿತ್ರಗಳಿಂದ. ಬಾಲ್ಯದಿಂದ ಆಕೆಗೇನೂ ಚಿತ್ರನಟಿ ಆಗಬೇಕು ಎಂಬ ಆಸೆ ಇರಲಿಲ್ಲ. ದೆಹಲಿಯ ನಿವಾಸಿ ತಾಪಸಿ ಸಾಫ್ಟ್ ವೇರ್‌ ಎಂಜಿನಿಯರ್‌. ಕಲಿಕೆಯ ದಿನಗಳಲ್ಲಿ ಹವ್ಯಾಸಕ್ಕಾಗಿ ಮಧ್ಯೆ ಮಧ್ಯೆ ಮಾಡೆಲಿಂಗ್‌ ಮಾಡುತ್ತಿದ್ದಳು. ಆರಂಭದಿಂದಲೂ ಏನಾದರೂ ಡಿಫರೆಂಟ್‌ಮಾಡಬೇಕೆಂಬ ಮನೋಭಾವದವಳು. ಆದರೆ ಏನು ಮಾಡುವುದೆಂದು ಗೊತ್ತಿರಲಿಲ್ಲ. ಮಾಡೆಲಿಂಗ್‌ ಮಾಡುವಾಗಲೇ ಅವಳಿಗೆ ಹಲವು ಚಿತ್ರಗಳ ಆಫರ್ಸ್‌ ಬರತೊಡಗಿದವು. ತೆಲುಗಿನ ನಂತರ ಹಿಂದಿಯಿಂದಲೂ ಕರೆ ಬಂದಿತು.

ಸಿನಿ ಪಯಣ

ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ಈಕೆಗೆ ಡೇವಿಡ್‌ ಧನ್‌ರ `ಚಶ್ಮೆ ಬದ್ದೂರ್‌' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಚಿತ್ರ ಸಾಧಾರಣ ಎಂದು ಹೆಸರು, ಹಣ ಗಳಿಸಿತು. ಹೀಗಾಗಿ ತಾಪಸಿಗೆ ವಿಶೇಷ ಆಫರ್‌ಗಳು ಬರಲಿಲ್ಲ. ಇದಾದ ಮೇಲೆ ಬಂದ `ಬೇಬಿ' ಚಿತ್ರದಲ್ಲಿ ತಾಪಸಿಗೆ ಸಣ್ಣ ಅವಕಾಶವಿದ್ದರೂ ಅದು ಆಕೆಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಇದರಿಂದ ಹಿಂದಿ ಇಂಡಸ್ಟ್ರಿಯಲ್ಲಿ ಆಕೆ ನೆಲೆಯೂರಲು ಸಾಧ್ಯವಾಯಿತು. ಹೀಗಾಗಿ ಇದರ ಪ್ರೀಕ್ವೆಲ್`ನಾಮ್ ಶಬಾನಾ' ಚಿತ್ರದಲ್ಲಿ ಪ್ರಧಾನ ಪಾತ್ರವೇ ಸಿಕ್ಕಿತು.

ಈ ಅವಕಾಶ ನನಗೆ ದೊಡ್ಡ ಖ್ಯಾತಿ ತಂದುಕೊಟ್ಟಿತು ಎಂದು ತಾಪಸಿ ಹೇಳುತ್ತಾಳೆ. ಸಾಮಾನ್ಯವಾಗಿ ಯಶಸ್ವೀ ಚಿತ್ರಕ್ಕೆ 2ನೇ ಭಾಗವಾಗಿ ಸೀಕ್ವೆಲ್ ‌ತಯಾರಾಗುತ್ತವೆ, ಆದರೆ ಈಗಾಗಲೇ ಬಂದ ಚಿತ್ರಕ್ಕೆ ಪ್ರೀಕ್ವೆಲ್ ‌(ಪೂರ್ವಾರ್ಧ) ತಯಾರಾದದ್ದು ಇದೇ ಮೊದಲು! ಅದಾದ ಮೇಲೆ ಆಕೆ ಹಿಂದಿರುಗಿ ನೋಡಬೇಕಾದ ಅಗತ್ಯವೇ ಬರಲಿಲ್ಲ. `ಪಿಂಕ್‌' ಚಿತ್ರದಲ್ಲಿ ಸೀರಿಯಸ್‌ ಪಾತ್ರ, `ಜುಡ್ವಾ-2'ನಲ್ಲಿ ಕಾಮಿಡಿ ಪಾತ್ರ ಇತ್ಯಾದಿ ನಿಭಾಯಿಸಿ ವೀಕ್ಷಕರಿಗೆ ತನ್ನ ಬಹುಮುಖಿ ಪ್ರತಿಭೆ ಪರಿಚಯಿಸಿದಳು.

ಪ್ರತಿನಿತ್ಯ ಕಲಿಯುವಿಕೆ

ತಾಪಸಿ ಪ್ರತಿ ಚಿತ್ರವನ್ನೂ ಬಹಳ ಯೋಚಿಸಿ, ವಿಚಾರ ವಿಮರ್ಶೆ ನಡೆಸಿ ಆರಿಸಿಕೊಳ್ಳುತ್ತಾಳೆ. ಚಿತ್ರದ ಮೂಲಕ ಏನಾದರೂ ಮೆಸೇಜ್‌ ಕೊಡಬಯಸುತ್ತಾಳೆ. ``ನಾನು  ಎದ್ದುಬಿದ್ದು ಕೆಲಸ ಮಾಡುವುದನ್ನು ಕಲಿತಿದ್ದೇನೆ. ಇದೇ ಕ್ರಮವನ್ನು ನನ್ನ ಕೆರಿಯರ್‌ಗೆ ಅವಳಡಿಸಿಕೊಂಡು ಅದರಲ್ಲಿ ಯಶಸ್ವಿ ಎನಿಸಿದ್ದೇನೆ. ನನಗಿಲ್ಲಿ ಯಾರೂ ಗಾಡ್‌ ಫಾದರ್‌ ಇಲ್ಲ. ಪರಭಾಷೆಯಿಂದ ಹಿಂದಿಗೆ ಕೆಲಸ ಹುಡುಕಿಕೊಂಡು ಬರುವವರಿಗೆ ತುಂಬಾ ಕಷ್ಟ ಆಗುತ್ತೆ ಅನ್ನುವುದು ನಿಜ. ಹಾಗೆಯೇ ಕೇವಲ 1 ಹಿಟ್‌ ಚಿತ್ರದಿಂದ ಯಾರೂ ಸ್ಟಾರ್ ಆಗಲು ಸಾಧ್ಯವಿಲ್ಲ. ಸತತವಾಗಿ ನಿಮ್ಮ ಚಿತ್ರಗಳು ತೆರೆ ಕಾಣುತ್ತಿದ್ದರೆ ಮಾತ್ರ ನಿಮಗೆ ಬೆಲೆ. ನಾನೂ  ಸಹ ಇದನ್ನೇ ಫಾಲೋ ಮಾಡಿದೆ. ಯಾವುದೇ  ತಪ್ಪು ಮಾಡಿದರೂ ನಟಿಯಾದವಳಿಗೆ ಮತ್ತೊಂದು ಅವಕಾಶ ಸಿಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಪ್ರತಿ ಹೆಜ್ಜೆಯನ್ನೂ ನೀವು ಅತಿ ಎಚ್ಚರಿಕೆಯಿಂದ ಇಡಬೇಕು.''

ತಾಪಸಿಯ ಈ ಪಯಣದಲ್ಲಿ ಆಕೆಯ ತಾಯಿತಂದೆ ತುಂಬಾ ಸಹಕರಿಸಿದ್ದಾರೆ, ``ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಿ ಒಬ್ಬಂಟಿಯಾಗಿ ಇರುವುದು, ಅಲ್ಲಿಂದಲೇ ಶೂಟಿಂಗ್‌ ಅಟೆಂಡ್‌ ಮಾಡುವುದು ಇದೆಲ್ಲ ಸುಲಭದ ಕೆಲಸವಾಗಿರಲಿಲ್ಲ. ನನ್ನ ತಾಯಿತಂದೆಗೆ ನನ್ನ ಮೇಲೆ ಬಹಳ ವಿಶ್ವಾಸ. ನಾನು ಯಾವ ಊರಿನಲ್ಲಿ ಏನು ಮಾಡುತ್ತಿದ್ದೇನೆ ಎಂದು ಅವರು ತನಿಖೆ ಮಾಡಲಿಲ್ಲ. ನಾನೇನೇ ಮಾಡಿದರೂ ಸರಿಯಾದ್ದನ್ನೇ ಮಾಡುತ್ತೇನೆ ಎಂಬ ವಿಶ್ವಾಸ ಅವರಿಗಿದೆ. ಅದೊಂದೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ