ತಾಯಿ ತಂದೆಯರ ಶ್ರೀರಕ್ಷೆ

ಕೋಲ್ಕತಾದಲ್ಲಿ 1967ರಲ್ಲಿ ಹುಟ್ಟಿದ ನಂದನಾ ಸೇನ್‌ ಬೆಳೆದಿದ್ದು ಮಾತ್ರ ಯೂರೋಪ್‌, ಅಮೆರಿಕಾಗಳಲ್ಲಿ. ಈಕೆ ನೊಬೆಲ್ ‌ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ ಹಾಗೂ ಪದ್ಮಶ್ರೀ ನಬನೀತಾ ದೇವಸೇನ್‌ರ ಮಗಳು. ನಟಿ ಮಾತ್ರವಲ್ಲದೆ ನಂದನಾ ಲೇಖಕಿ ಹಾಗೂ ಚೈಲ್ಡ್ ರೈಟ್‌ ಆ್ಯಕ್ಟಿವಿಸ್ಟ್ ಕೂಡ. ವರ್ಷಗಳಿಂದ ಡಬ್ಬದಲ್ಲೇ ಕೊಳೆಯುತ್ತಿದ್ದ `ರಂಗ್‌ ರಸಿಯಾ’ ಚಿತ್ರದಲ್ಲಿ ಈಕೆ ಸುಗಂಧಾಳ ಪಾತ್ರ ವಹಿಸಿದ್ದಳು, ಚಿತ್ರ ಓ.ಕೆ. ಆಯ್ತು. ನಟನೆಯ ಕೆರಿಯರ್‌ಗೆ ತಾಯಿ ತಂದೆಯರ ಆಶೀರ್ವಾದ, ಬೆಂಬಲವಿದೆ. ಅವರ ನೇತೃತ್ವದಲ್ಲಿ ಇಷ್ಟು ಮುಂದುವರಿದಿದ್ದಾಳೆ. ಈ ಚಿತ್ರದ ಹಾಟ್‌ಬೋಲ್ಡ್ ಸೀನ್ಸ್ ಕುರಿತು, ಹಾಗೆ ಮಾಡುವುದು ತನಗೆ ಸುಲಭ ಆಗಿರಲಿಲ್ಲ ಎನ್ನುತ್ತಾಳೆ. ಇಂಥ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬ ಸಂಕಷ್ಟದಲ್ಲಿದ್ದಳು. ಏಕೆಂದರೆ ವೈಯಕ್ತಿಕವಾಗಿ ಆಕೆ ಬಲು ಅಂತರ್ಮುಖಿ. ಆಕೆ ಹಿರಿಯರ ಬಳಿ ಚರ್ಚಿಸಿದಾಗ, ಮೌಲಿಕತೆ ಇಲ್ಲದೆ ಯಾವ ನಟನೆಯೂ ಸಹಜವೇ ಎನಿಸುವುದಿಲ್ಲ. ಧೈರ್ಯವಾಗಿ ಮುಂದುವರಿ ಎಂದರಂತೆ. ಆಕೆಯ ಪತಿ ಜಾನ್‌ ಮ್ಯಾಕ್ಸಿನ್‌ ಸಹ ಚಿತ್ರಿನ್ನು ಮೆಚ್ಚಿಕೊಂಡರು.

ಅಂತರ…. ಇನ್ನೇಕೆ?

ಆರ್‌. ಬಾಲ್ಕಿಯವರ `ಷಮಿತಾಲ್‌’ ಚಿತ್ರದಿಂದ ಎವರ್‌ ಗ್ರೀನ್‌, ರೇಖಾ ಹಾಗೂ ಬಿಗ್‌ಬಿ ಫ್ಯಾನ್ಸ್, ದಶಕಗಳ ಹಿಂದೆ `ಸಿಲ್‌

ಸಿಲಾ’ದಿಂದ ಒಂದಾಗಿದ್ದ ಜೋಡಿ ಮತ್ತೆ ಒಟ್ಟಿಗೆ ಕಾಣಸಿಗುತ್ತದೆ ಎಂದು ಸಂತೋಷಗೊಂಡಿದ್ದರು. ಆದರೆ ವಾಸ್ತವ ಎಂದರೆ ಈ ಚಿತ್ರದಲ್ಲಿ ಇಬ್ಬರೂ ನಟಿಸಿದ್ದಾರೆ ಎನ್ನುವುದು ನಿಜವಾದರೂ, ಇಬ್ಬರೂ ಒಂದೇ ಬಾರಿಗ ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ. ಚಿತ್ರ ನೋಡಿದವರಿಗೆ ಇದು ಸ್ಪಷ್ಟ ಅರ್ಥವಾಗುವುದಂತೆ. ಆದರೆ ಯಾವ ಚಿತ್ರವೇ ಇರಲಿ, ಇಂಥ ಸ್ಟಾರ್‌ಗಳಿಬ್ಬರೂ ಒಟ್ಟಿಗೇ ಕಾಣಲಿ ಎಂಬುದು ಎಲ್ಲರ ಬಯಕೆ. ಬಿಗ್‌ ಬಿ ಆಕೆಯಿಂದ ಎಷ್ಟೇ ಅಂತರ ಕಾಯ್ದುಕೊಳ್ಳಲಿ, ರೇಖಾ ಇತ್ತೀಚೆಗೆ ಕಪಿಲ್‌‌ನ ಕಾಮಿಡಿ ಶೋನಲ್ಲಿ ಕಾಣಿಸಿದಾಗ, ಹಿಂದಿನ ಪ್ರೇಮಾಲಾಪನೆಯನ್ನು ಗುನುಗುನಿಸದೆ ಬಿಡಲಿಲ್ಲ.

ಪ್ರಿಯಾಂಕಾಗೆ ಬಿಕಿನಿ ಅಪ್ರಿಯ

ಪ್ರಿಯಾಂಕಾಗೆ ಎಕ್ಸ್ ಪೋಷರ್‌ ಇಷ್ಟವಿಲ್ಲ ಅಂತಲ್ಲ, ಆದರೆ ಮಿಸ್‌ ವರ್ಡ್ ಆಗಿದ್ದ ಈಕೆಗೆ ವೇದಿಕೆ ಮೇಲೆ ಬಿಕಿನಿಯಲ್ಲಿ ಬರಲು ಇಷ್ಟವಿಲ್ಲವಂತೆ. ಹಿಂದೆ ತಾನು ವಿಶ್ವ ಸುಂದರಿಯಾಗಲು ಹೊರಟಾಗ, ಈಗಿನಂತೆ ಆಗ, ಬಿಕಿನಿ ಧರಿಸಿ ವೇದಿಕೆ ಹತ್ತಬೇಕಾದ ಅನಿವಾರ್ಯತೆ ಇಲ್ಲದ್ದು ಬಹಳ ನೆಮ್ಮದಿ ಎನಿಸಿತಂತೆ. ಈಗ ಈಕೆ ಬಿಸ್‌ನೆಸ್‌ನಲ್ಲೂ ಕೈಯಾಡಿಸುತ್ತಿದ್ದಾಳೆ. ಇತ್ತೀಚೆಗಷ್ಟೆ ಈಕೆ ಅಮೆರಿಕಾದ ಎಬಿಸಿ ಟೆಲಿವಿಷನ್‌ ಸ್ಟುಡಿಯೋಸ್‌ ಜೊತೆ ಟ್ಯಾಲೆಂಟ್‌ ಡೆವಲಪ್‌ಮೆಂಟ್‌ ಡೀಲ್‌‌ಗೆ ಸೈನ್‌ ಮಾಡಿದ್ದಾಳೆ. ತನ್ನ ಮುಂದಿನ `ಮೇಡಂ ಜೀ’ ಚಿತ್ರಕ್ಕೆ ನಾಯಕಿ ಮಾತ್ರವಲ್ಲದೆ ಈಕೆ ನಿರ್ಮಾಪಕಿಯೂ ಹೌದು. ಆಲ್ ದಿ ಬೆಸ್ಟ್ ಪ್ರಿಯಾಂಕಾ!

ಶಿಖರ ಏರುತ್ತಿರುವ ಆಲಿಯಾ

ನಿರ್ದೇಶಕರಾದ ವಿಕಾಸ್‌ ಬೆಹ್‌್ಲ ಅನುರಾಗ್‌ ಕಶ್ಯಪ್‌ರ ಮುಂಬರಲಿರುನ `ಶಾನ್‌ ದಾರ್‌’ ಚಿತ್ರದಲ್ಲಿ ಶಾಹಿದ್‌ ಜೊತೆ ಆಲಿಯಾ ರೊಮಾನ್ಸ್ ನಡೆಸಲಿದ್ದಾಳೆ. ಇವರಿಬ್ಬರ ಜೊತೆ ಪಂಕಜ್‌ ಕಪೂರ್‌, ಸಂಜಯ್‌ ಕಪೂರ್‌, ಅಂಜನಾ ಇರುತ್ತಾರೆ. ಮತ್ತೊಂದು ಮುಖ್ಯ ಸುದ್ದಿ, ಹೋಮಿ ಅದ್‌ ಜನಿಯಾರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಆಲಿಯಾ ಸುಶಾಂತ್‌ ರಾಜ್‌ಪೂತ್ ಜೊತೆ ನಟಿಸಲಿದ್ದಾಳೆ. 2 ದಶಕಗಳ ನಡುವಣ ಕಥೆಯಂತೆ ಇದು. ಹೆಚ್ಚುತ್ತಿರುವ ಮಗಳ ಜನಪ್ರಿಯತೆಯಿಂದ ಇವಳ ತಾಯಿ ಸೋನಿ ರಜದಾನ್‌ ಭಾರಿ ಖುಷಿಯಲ್ಲಿದ್ದಾರೆ. ಮಗಳ ಹೆಸರಿನ ಅರ್ಥವೇ ಶಿಖರ ಮುಟ್ಟಿದಳು ಎಂದಿರುವಾಗ, ದಿನೇದಿನೇ ಹೆಚ್ಚುತ್ತಿರುವ ಅವಳ ಸ್ಟಾರ್‌ ಗಿರಿ ಹಾಗೂ ಹಿಟ್‌ ಚಿತ್ರಗಳ ಸರಣಿ ನೋಡಿದರೆ ಅದೀಗ ಅನ್ವರ್ಥಕ ಆಗಿದೆ, ಎನ್ನುತ್ತಾರೆ.

ವರ್ಷ ನನ್ನದೇ!

ವರ್ಷಾಂತ್ಯದ ಹೊತ್ತಿಗೆ ಯಾರು ನಂ.1 ಪಟ್ಟದಲ್ಲಿ ಮಿಂಚಿದರು ಎಂದು ತಾರ್ಕಿಕವಾಗಿ ಹೇಳಬಹುದು, ಆದರೆ ಹೊಸ ವರ್ಷದ ಆರಂಭದಲ್ಲೇ ಶ್ರೀಲಂಕಾದ ಸುಂದರಿ ಜ್ಯಾಕ್ಲೀನ್‌ ಇಡೀ ವರ್ಷ ನನ್ನದೇ ರಾಜ್ಯಭಾರ ಎನ್ನುತ್ತಿದ್ದಾಳೆ. ಕಳೆದ ವರ್ಷದ ಚಿತ್ರಗಳಿಂದ ಅವಳು ತೃಪ್ತಿಹೊಂದಿಲ್ಲ. ಈ ವರ್ಷದ 2 ಹೊಸ ಚಿತ್ರಗಳು ಬಹುಶಃ ಅದನ್ನು ಪೂರೈಸಬಹುದು. `ಕಿಕ್‌’ ಚಿತ್ರದ ನಂತರ ಈಕೆಗೆ ಅನೇಕ ಚಿತ್ರಗಳು ಅರಸಿ ಬಂದಿದ್ದರೂ, ಬಲು ಚೂಸಿಯಾದ ಇವಳು ಎಲ್ಲವನ್ನೂ ಒಪ್ಪಲಿಲ್ಲವಂತೆ. ಈ ವರ್ಷ ಮೊದಲು ಈಕೆಯ `ರಾಯ್‌’ ರಿಲೀಸ್‌ ಆಗುತ್ತಿದೆ, ನಂತರ `ಬ್ರದರ್ಸ್‌.’ `ರಾಯ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಂಪಾಲ್ ‌ಇಬ್ಬರೂ ಇದ್ದರೆ, `ಬ್ರದರ್ಸ್‌’ನಲ್ಲಿ ಅಕ್ಷಯ್ ಕುಮಾರ್‌ ಸಿದ್ಧಾರ್ಥ್‌ ಮಲ್ಹೋತ್ರಾ ಇರ್ತಾರಂತೆ.? `ರಾಯ್‌’ ಚಿತ್ರದಲ್ಲಿ ಅಭಿಮಾನಿಗಳು ತನ್ನನ್ನು ಹೊಸ ಗೆಟಪ್‌ನಲ್ಲಿ ನೋಡಬಹುದೆನ್ನುವ ಜ್ಯಾಕ್ಲೀನ್‌, `ಬ್ರದರ್ಸ್‌’ನಲ್ಲಿ ಸಖತ್‌ ಗ್ಲಾಮರಸ್‌ ಆಗಿ ಮಿಂಚಿದ್ದಾಳಂತೆ. 2015 ಈಕೆಗೆ ಸಂತಸ ತರಲಿ ಎಂದು ಹಾರೈಸೋಣ.

ಐಶ್ವರ್ಯಾಳನ್ನೇ ಧಿಕ್ಕರಿಸಿದ ಭೂಪ

ಐಶ್ವರ್ಯಾಳೊಂದಿಗೆ ಚಿತ್ರ ಬೇಡ ಎಂದದ್ದು ಸಲ್ಮಾನ್‌ ಖಾನ್‌ ಅಲ್ಲ, ಅಮೀರ್‌ ಖಾನ್‌!  ಐಶ್ವರ್ಯಾ ಅಮೀರ್‌ ಇಬ್ಬರನ್ನೂ ಒಟ್ಟಿಗೆ ತೋರಿಸೋಣವೆಂದು ಕರಣ್‌ ಜೋಹರ್‌ ಅಮೀರ್‌ನನ್ನು ಒಪ್ಪಿಸಲು ಯತ್ನಿಸಿದರೆ ಅವನು ಬಿಲ್‌‌ಕುಲ್ ‌ಬೇಡ ಎಂದು ತಿರಸ್ಕರಿಸಿದನಂತೆ! ಇದಕ್ಕಾಗಿ ಕರಣ್‌ ಮರಳಿ ಯತ್ನ ಮಾಡು ಎಂದು ಅಮೀರ್‌ ಅಫೀಸಿಗೆ ಅಲೆದದ್ದೇ ಬಂತು, ಆದರೆ ಜಪ್ಪಯ್ಯ ಎಂದರೂ ಅಮೀರ್‌ ಒಪ್ಪಲಿಲ್ಲ. ಹಾಗೇಂತ ಐಶ್ವರ್ಯಾ ಫ್ರೀಯಾಗೇನೂ ಕೂತಿಲ್ಲ. ಸಂಜಯ್‌ ಗುಪ್ತಾರ `ಜಜ್ಬಾ,’ ಸುಜಯ್‌ ಘೋಷ್‌ರ `ದುರ್ಗಾ ರಾಣಿ ಸಿಂಗ್‌,’ ಪ್ರಕಾಶ್‌ರವರ `ಗಂಗಾಜಲ್’ ಮಾತ್ರವಲ್ಲದೆ, ಮಣಿರತ್ನಂರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಮತ್ತೆ ಪತಿ ಅಭಿಷೇಕ್‌ ಜೊತೆ ನಟಿಸುತ್ತಿದ್ದಾಳೆ. ಮಾಜಿ ವಿಶ್ವ ಸುಂದರಿಯನ್ನೇ ಬೇಡ ಎಂದವನಿಗೆ ಹಾಲಿ ಇನ್ನೆಂಥ ಸುಂದರಿ ಸಿಕ್ಕಾಳೋ?

ರಿಸ್ಟ್ಗೆ ಕಾದಿರುವ ವಿದ್ಯಾರ್ಥಿ

ಇತ್ತೀಚೆಗೆ ಅರ್ಜುನ್‌ ರಾಂಪಾಲ್‌‌ಗೆ ನಿದ್ದೆಯೇ ಇಲ್ಲವಂತೆ. ಕಾರಣ? ಅವನ ಹೊಸ ಚಿತ್ರ `ರಾಯ್‌’ ರಿಲೀಸಿಂಗ್‌ ಡೇಟ್‌ ಹತ್ತಿರ ಬರ್ತಿದೆ. ಇದೇ ತಿಂಗಳು ಚಿತ್ರ ರಿಲೀಸ್‌, ಹೀಗಾಗಿ ಟೆನ್ಶನ್‌ ಜಾಸ್ತಿಯಂತೆ. ಅರ್ಜುನ್‌ ಹೇಳುವುದೆಂದರೆ, ನಾನು ಕಂಪ್ಲೀಟ್‌ ಆದ ಚಿತ್ರ ನೋಡಿದ್ದೀನಿ…. ಚೆನ್ನಾಗಿದೆ. ಆದರೆ ಕಳೆದ 2 ವರ್ಷಗಳಿಂದ ನನ್ನ ಚಿತ್ರಗಳಾವುದೂ ಬಿಡುಗಡೆ ಆಗದ ಕಾರಣ ಜನ ಈಗ ಹೇಗೆ ತೆಗೆದುಕೊಳ್ಳುತ್ತಾರೋ ಏನೋ ಅನಿಸ್ತಿದೆ. ನಾನು ಒಬ್ಬ ಹೊಚ್ಚ ಹೊಸ ಕಲಾವಿದನಾಗಿ ಇದರಲ್ಲಿ ನಟಿಸಿದ್ದೀನಿ, ಎನ್ನುತ್ತಾನೆ. ವಿಕ್ರಂಜೀತ್‌ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್‌ ಲೇಖಕನಾಗಿ ಕಾಣಿಸಿದ್ದಾನೆ.

ಮಾತು ತಪ್ಪದ ಮಗ

ಸಲ್ಮಾನ್‌ ಖಾನ್‌ ಶ್ರೀಲಂಕಾದ ಪ್ರಧಾನಮಂತ್ರಿಯವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಅಲ್ಲಿಗೆ ಹೋಗಿದ್ದನ್ನು ಖಂಡಿಸಿದ ಭಾರತದ ತಮಿಳು ಸಂಘಟನೆಗಳು, ಮದ್ರಾಸಿನಲ್ಲಿ ಅವನ ಚಿತ್ರ ಮಣ್ಣು ಮುಕ್ಕುವಂತೆ ಮಾಡಿದ. ಆದರೆ `ಕಿಕ್‌’ ಚಿತ್ರ ಅಲ್ಲಿ ಶೂಟ್‌ಮಾಡುವಾಗ, ಅಲ್ಲಿನ ಸ್ಥಳೀಯರು ಹಾಗೂ ನಾಯಕಿ ಜ್ಯಾಕ್ಲೀನ್‌ಗೆ ಈತ ಮುಂದಿನ ಸಲ ಅಲ್ಲಿಗೆ ಬಂದಾಗ ಐ ಕ್ಯಾಂಪ್‌ಏರ್ಪಡಿಸುವುದಾಗಿ ಮಾತುಕೊಟ್ಟಿದ್ದ. ಈ ಬಾರಿ ಆತ ಚುನಾವಣಾ ಪ್ರಚಾರಕ್ಕಾಗಿ ಅಲ್ಲಿಗೆ ಹೋದಾಗ ಕೊಟ್ಟ ಮಾತಿನಂತೆ ನೇತ್ರ ತಪಾಸಣಾ ಶಿಬಿರ ಏರ್ಪಡಿಸಿದ. ಜ್ಯಾಕ್ಲೀನ್‌ ಸಹ ಹಿಂದೆ ನೀಡಿದ ವಚನದಂತೆ, ಈ ಬಾರಿ ಅವನನ್ನು ತನ್ನದೇ ರೆಸ್ಟೋರೆಂಟ್‌ಗೆ ಕರೆದೊಯ್ದು, ಕೈಯಾರೆ ಬಡಿಸಿದಳಂತೆ!

ಬಿಪಾಶಾ ಏನಂದಳಂತೆ?

ಸಲ್ಮಾನ್‌ಖಾನ್‌ ಯಾರನ್ನು ವಧುವಾಗಿ ಆರಿಸುತ್ತಾನೋ ಎಂದು ಎಲ್ಲರೂ ಕಾಯುತ್ತಿರುವಾಗ, `ಅಲೋನ್‌’ನಂಥ ಹಾರರ್‌ ಚಿತ್ರದ ನಾಯಕಿ ಬಿಪಾಶಾ, ಸಲ್ಮಾನ್‌ ಜೀವನವಿಡೀ ಮದುವೆಯಾಗದೇ ಒಂಟಿಯಾಗಿರುವುದೇ ಚೆಂದ ಎಂದುಬಿಟ್ಟಳಂತೆ! ಅಯ್ಯೋ…. ಹೀಗೇಕೆಂದಳು? ನಾನು ಹೇಳಿದ್ದು, ಅವರನ್ನು ಮದುವೆಯಾಗಲು ಯಾರೂ ಮುಂದೆ ಬರೋದಿಲ್ಲ ಅಂತಲ್ಲ, ಮದುವೆಯಾಗಿ ಜಂಜಾಟಗಳಲ್ಲಿ ಸಿಲುಕುವುದಕ್ಕಿಂತ ಸಲ್ಮಾನ್‌ ಒಂಟಿ ಬ್ಯಾಚುಲರ್‌ ಆಗಿದ್ದರೇನೇ ಚೆಂದ, ಎಂದಳಂತೆ ಈ ಚೆಲುವೆ. ಯಾರನ್ನು ನೋಡಿದಾಗ, ಇವರಿಲ್ಲದೆ ನನ್ನ ಜೀವನ ಅಪೂರ್ಣ ಎನಿಸಿದೋ ಅಂಥವರು ಸಿಗುವವರೆಗೂ ಈ ಮದುವೆಯ ಬಂಧನಕ್ಕೆ ಒಪ್ಪಬಾರದು ಎನ್ನುತ್ತಾಳೆ. ಸಲ್ಮಾನ್‌ಗಿಂತ ಈ ಮಾತು ಏಕೋ ಬಿಪಾಶಾಳಿಗೇ ಹೆಚ್ಚು ಅನ್ವಯಿಸುವಂತಿದೆ. ಜಾನ್‌ನಿಂದ ಹರ್ಮನ್‌ವರೆಗೂ ಎಲ್ಲರಿಗೂ ಟಾಟಾ ಹೇಳಿದ ಬಿಪಾಶಾ, ಒಂಟಿಯಾಗಿ ಉಳಿಯುವ ಸಲಹೆಯನ್ನು ತನಗೇ ಕೊಟ್ಟುಕೊಂಡಿದ್ದರೆ ಚೆನ್ನಾಗಿತ್ತು.

ನಾನು ಅಂಗ್ರೇಜ್ಕಾಲದ ಜೇಲರ್‌!

1975ರ ಸೂಪರ್‌ ಡೂಪರ್‌ ಬ್ಲಾಕ್‌ ಬಸ್ಟರ್‌ `ಶೋಲೆ’ ಚಿತ್ರದ ಡೈಲಾಗ್‌ `ಹಂ ಅಂಗ್ರೇಜೋಂಕೆ ಜಮಾನೆ ಕೆ ಜೇಲರ್‌ ಹೈ!’ ಎಂಥ ಬೇಸರದ ಮುಖದಲ್ಲೂ ಈಗಲೂ ನಗು ಚಿಮ್ಮಿಸುತ್ತದೆ. ಈ ಡೈಲಾಗ್‌ ಬಾಲಿವುಡ್‌ನ ಎವರ್‌ ಗ್ರೀನ್‌ ಕಮೆಡಿಯನ್‌ ಅಸ್ರಾನಿಯವರ ಹೆಗ್ಗುರುತಾಯಿತು. ರಮೇಶ್‌ ಸಿಪ್ಪಿಯವರ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇವರ ಕೆರಿಯರ್‌ಗೂ ದೊಡ್ಡ ಮೈಲಿಗಲ್ಲಾಯಿತು. `ಶೋಲೆ’ ಚಿತ್ರದಲ್ಲಿ ಇವರದು ಜೇಲರ್‌ ಪಾತ್ರ, ಯಾರೂ ಅದನ್ನು ಮರೆಯಲಾಗದು. 1941ರಲ್ಲಿ ಜೈಪುರ್‌ನಲ್ಲಿ ಜನಿಸಿದ ಅಸ್ರಾನಿ, ಮೊದಲಿನಿಂದ ಸಿನಿಮಾರಂಗದ ಕನಸು ಕಂಡವರು. 1963ರಲ್ಲಿ ಮುಂಬೈಗೆ ಧಾವಿಸಿದ ಇವರು ಕಿಶೋರ್‌ ಸಾಹು, ಹೃಷಿಕೇಶ್‌ ಮುಖರ್ಜಿಯಂಥವರನ್ನು ಭೇಟಿಯಾಗಿ, ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಟ್ರೇನಿಂಗ್‌ ಪಡೆದು, 1967ರಲ್ಲಿ `ಹರೆ ಕಾಂಚ್‌ ಕೀ ಚೂಡಿಯಾ’ ಚಿತ್ರದಿಂದ ತಮ್ಮ ಕೆರಿಯರ್‌ ಆರಂಭಿಸಿದರು. 1971ರ `ಮೇರೆ ಅಪ್ನೆ’ ಇವರಿಗೊಂದು ಐಡೆಂಟಿಟಿ ನೀಡಿತು. 1973ರ `ಅಭಿಮಾನ್‌’ ಚಿತ್ರದ ಗೆಳೆಯನ ಪಾತ್ರ, ಹಿಂದಿ ಚಿತ್ರರಂಗಕ್ಕೆ ಅಸ್ರಾನಿಯರ ಅನಿವಾರ್ಯತೆಯನ್ನು ದೃಢಪಡಿಸಿತು. ಈ ಪಾತ್ರಕ್ಕಾಗಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯೂ ಬಂತು. ಮುಂದೆ ನಿರ್ದೇಶನಕ್ಕೂ ಪ್ರಯತ್ನಿಸಿ ಕೈಸುಟ್ಟುಕೊಂಡರು. ಸೂಪರ್‌ ಸ್ಟಾರ್‌ ರಾಜೇಶ್‌ ಖನ್ನಾ, ಅಮಿತಾ‌ರ ಜೊತೆ ಇವರು 45ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹನಟರಾಗಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಚಿತ್ರಗಳನ್ನು ಪೂರೈಸಿದ ಅಸ್ರಾನಿ, ಡಿ.ಡಿ.ಯಲ್ಲೂ ಬೇಕಾದಷ್ಟು ಮಿಂಚಿದ್ದಾರೆ….. ಅದೇ ಉತ್ಸಾಹದಲ್ಲಿ ಹಿರಿ ಕಿರಿ ತೆರೆಗಳಲ್ಲಿ ಮುನ್ನಡೆಯುತ್ತಿದ್ದಾರೆ.

ದೀಪಿಕಾಳ ಸ್ಪೆಷಲ್ ಬರ್ತ್ಡೇ

ಬರ್ತ್‌ ಡೇ ಪಾರ್ಟಿಗಳಲ್ಲಿ ಕುಟುಂಬದವರ ಜೊತೆ ಬಾಯ್‌ಫ್ರೆಂಡ್‌ ಕೂಡ ಸೇರಿಕೊಂಡರೆ ಗಮ್ಮತ್ತನ್ನು ಕೇಳಬೇಕೇ? ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ ತನ್ನ ತವರೂರಾದ ಬೆಂಗಳೂರಿನಲ್ಲಿ, ಕುಟುಂಬದವರು ಹಾಗೂ ರಣವೀರ್‌ ಸಿಂಗ್‌ ಜೊತೆ ಇತ್ತೀಚೆಗೆ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಕೊಂಡಳು. ಇದಕ್ಕೆ ಮುಂಚೆ ಆತನ ಜೊತೆ ಮಾಲ್ಡೀವ್ಸ್ ದ್ವೀಪದಲ್ಲಿ ನ್ಯೂ ಇಯರ್‌ಪಾರ್ಟಿ ಮಾಡಿದ್ದಳು. ಉಪೇಂದ್ರ ಜೊತೆ ಕನ್ನಡದ `ಐಶ್ವರ್ಯಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ದೀಪಿಕಾ, `ಓಂ ಶಾಂತಿ ಓಂ’ ಚಿತ್ರದಲ್ಲಿ ಶಾರೂಖ್‌ ಜೊತೆ ಬಾವುಲಿಡ್‌ಗೆ ಎಂಟ್ರಿ ಪಡೆದಳು. ಈಕೆ ತನ್ನ ಸೌಂದರ್ಯದಿಂದ ಮಾತ್ರವಲ್ಲದೆ, ನಟನೆ, ಗ್ಲಾಮರ್‌, ಗಾಸಿಪ್‌ಗಳಿಂದ ರಸಿಕರಲ್ಲಿ ಹುಚ್ಚೆಬ್ಬಿಸಿದ್ದಾಳೆ. ಹೀಗಾಗಿ ಚಿತ್ರ ವಿಮರ್ಶಕರಿಗೂ ಈಕೆ ಅಚ್ಚುಮೆಚ್ಚು. ರಣಬೀರ್‌ ಕಪೂರ್‌, ಯುವರಾಜ್‌ ಸಿಂಗ್‌, ಸಿದ್ಧಾರ್ಥ್‌ ಮಲ್ಯರ  ಕೈಬಿಟ್ಟ ನಂತರ ಪ್ರಸ್ತುತ ರಣವೀರ್‌ನ ಕುಟುಂಬದ ಜೊತೆ ವಿಶ್ವಾಸದಿಂದಿರುವುದನ್ನು ಕಂಡರೆ ಎರಡೂ ಕುಟುಂಬಗಳಿಂದ ಈ ಸಂಬಂಧಕ್ಕೆ ಹಸಿರು ನಿಶಾನೆ ಸಿಕ್ಕವಂತಿದೆ.

ಸನಿಯ ಡಬಲ್ ಮಸ್ತಿ

ಪ್ರೀತೀಶ್‌ ನಂದಿಯವರ `ಮಸ್ತಿಝಾದೆ’ ಚಿತ್ರದಲ್ಲಿ ಪ್ರೇಕ್ಷಕರಿಗೆ ಡಬಲ್ ಮಸ್ತಿ ಗ್ಯಾರಂಟಿಯಂತೆ. ಯಾಕೇಂತೀರಾ? ಇದರಲ್ಲಿ ಪೋರ್ನ್‌ ಸ್ಟಾರ್‌ ಸನಿ ಲಿಯೋನ್‌ಳ ಡಬ್ಬಲ್ ರೋಲ್ ‌ಇದೆಯಂತೆ! ಇವಳ ಸಿಂಗಲ್ ರೋಲ್‌‌ನಿಂದಲೇ ಪಡ್ಡೆಗಳ ಹೃದಯ ಬಾಯಿಗೆ ಬರುತ್ತಿತ್ತು, ಇನ್ನು ಡಬಲ್ ಧಮಾಕಾದಲ್ಲಿ ಕೇಳಬೇಕೇ? ಈಕೆ ಪ್ರಧಾನಮಂತ್ರಿಯವರಿಂದಲೇ ಹೊಸ ವರ್ಷಕ್ಕಾಗಿ ಒಂದು ಸಂಕಲ್ಪ ಕೇಳಿದ್ದಾಳೆ. ಅಂದರೆ ಎಲ್ಲಾ ಎನ್‌ಆರ್‌ಐಗಳಿಗೂ ಭಾರತದಲ್ಲಿ  ಬಿಸ್‌ನೆಸ್‌ ಆರಂಭಿಸಲು ಸುಲಭಾವಕಾಶ ಮಾಡಿಕೊಡಬೇಕೆಂಬುದು, ಈ ಮೂಲಕ  ತನ್ನ ಗಂಡ ಡೇನಿಯಲ್ ಜೊತೆ ಭಾರತದಲ್ಲೇ ನೆಲೆಸಬೇಕೆಂಬಾಸೆ ಇವಳದು.

ಐಟಂ ಸಾಂಗ್ಗೆ ಆಕ್ಷೇಪಣೆ ಏಕೆ?

ಗ್ಲಾಮರಸ್‌ ಡ್ಯಾನ್ಸ್ ಸ್ಟೆಪ್ಸ್ ಕ್ವೀನ್‌ ಎಂದೇ ಖ್ಯಾತಳಾದ ಮಲೈಕಾ ಅರೋರಾ ಖಾನ್‌ ಹೇಳುವುದೆಂದರೆ, ಅಲ್ರೀ…. ಐಟಂ ಸಾಂಗ್ ಎಂದರೆ ಮಡಿವಂತರು ಸದಾ ಮೂಗು ಮುರಿಯುವುದೇಕೆ? ಅದೂ ಒಂದು ಕಲೆಯ ಪ್ರಕಾರ. ನನ್ನನ್ನು ಕೇಳಿದರೆ ಅದನ್ನು ಧಿಕ್ಕರಿಸುವುದೆಂದರೆ ಖಂಡಿತಾ ತಪ್ಪು! ಇದೂ ಒಂದು ನೃತ್ಯ, ಇದನ್ನು ಮನರಂಜನೆಯ ದೃಷ್ಟಿಯಲ್ಲಿ ಏಕೆ ನೋಡಬಾರದು? ಭಾರತೀಯ ಚಿತ್ರಗಳೆಂದರೆ ಹಾಡು ಡ್ಯಾನ್ಸ್ ತಾನೇ….? ಇಷ್ಟೆಲ್ಲ ಮಲೈಕಾಳ ಪೀಠಿಕೆ ಯಾಕೇಂತೀರಾ? ಮುಂದೆ ಬರಲಿರುವ ಅವಳ `ಡಾಲಿ ಕೀ ಡೋಲಿ’ ಚಿತ್ರದಲ್ಲಿನ ಐಟಂ ಸಾಂಗಿಗೆ ಸೆನ್ಸಾರ್‌ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತಂತೆ!

ಅಗ್ಲಿಯ ಬ್ಯೂಟಿಫುಲ್ ಫೇಸ್

ಪಿಕೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟೇ ಹಿಟ್‌ ಎನಿಸಿದರೂ ವಿವಾದಗಳ ಬಿರುಗಾಳಿ ಎದುರಿಸಬೇಕಾಯ್ತು. ಇಂಥದೇ ಮತ್ತೊಂದು ವಿವಾದಾತ್ಮಕ ಚಿತ್ರ ಅನುರಾಗ್‌ ಕಶ್ಯಪ್‌ರ `ಅಗ್ಲಿ.’ ಇದು ನಗರ ಜೀವನದ ಕರಾಳ ಮುಖ ಪರಿಚಯಿಸುತ್ತದೆ. ಇಲ್ಲಿನ ಯಾಂತ್ರಿಕತೆ, ಅಮಾನವೀಯತೆ, ಕ್ರೌರ್ಯ, ಸ್ವಾರ್ಥ, ಕಪಟ, ದ್ವೇಷ ಇತ್ಯಾದಿಗಳ ಅಭಿವ್ಯಕ್ತಿಯಾಗಿದ್ದು ಚಿತ್ರ ಪ್ರೇಕ್ಷಕರನ್ನು ಬಹಳ ಆಳಾಗಿ ಚಿಂತನೆಗೆ ತೊಡಗಿಸುತ್ತದೆ. ಇಲ್ಲಿನ ಕಲಾವಿದರ ಆಯ್ಕೆಯೂ ಅದ್ಭುತ. ಸುರವೀನ್‌ ಚಾವ್ಲಾ, ರಾಹುಲ್ ‌ಭಟ್‌, ತೇಜಸ್ವಿನಿ, ರೋನಿತ್‌ ರಾಯ್‌ ಮುಂತಾದವರು ಒತ್ತಡ, ಖಿನ್ನತೆಗಳನ್ನು ಉತ್ತಮವಾಗಿ ಬಿಂಬಿಸಿದ್ದಾರೆ. ಸಣ್ಣ ಪಾತ್ರದಲ್ಲಿದ್ದರೂ ಸಿದ್ಧಾಂತ್‌ಕಪೂರ್‌ ಗಮನಸೆಳೆಯುತ್ತಾರೆ. ವಿನೀತ್‌ ಕುಮಾರ್‌, ಗಿರೀಶ್‌ ಕುಲಕರ್ಣಿ ಸಹ. ಇಲ್ಲಿನ ಸಂಭಾಶಣೆ ಬಲು ಚುರುಕು ಹಾಗೂ ಸ್ವಾರಸ್ಯಕರ. ಅನುರಾಗ್‌ ಮುಂಬೈನ ಒಳ್ಳೊಳ್ಳೆಯ ಲೊಕೇಶನ್ ಆರಿಸಿದ್ದಾರೆ. ಹಳೆಯ, ಪಾಳುಬಿದ್ದ ಕಟ್ಟಡಗಳು ಇಲ್ಲಿ ಮೈತಾಳಿ ನಿಂತಿವೆ. ಇಡೀ ಸಿನಿಮಾ ಒಂದು ಕ್ಯಾನ್‌ವಾಸ್‌ ತರಹ ಇದೆ. ಇದರಲ್ಲಿ ಮಾನವೀಯ ಸಂವೇದನೆ, ತಿರಸ್ಕಾರ, ಅತಿಯಾಸೆಗಳನ್ನು ಸಹಜವಾಗಿ ತೋರಿಸಲಾಗಿದೆ.

ಏಲಿಯ ಹೊಸ ಟೀಚರ್

ಕಳೆದ `ಬಿಗ್‌ಬಾಸ್‌’ ಸೀಸನ್‌ ನೆನಪಿರುವವರಿಗೆ ಸಲ್ಮಾನ್‌ ನೆಚ್ಚಿನ ಸ್ವೀಡಿಶ್‌ ಗರ್ಲ್ ಏಲಿ ಅಬ್ರಹಾಂಳನ್ನು ಮರೆಯಲಾಗದು. ಈಕೆ ಕಪಿಲ್ ‌ಶರ್ಮ ಜೊತೆ 2ನೇ ಚಿತ್ರವಾದ `ಕಿಸ್‌ ಕಿಸ್‌ಸೇ ಪ್ಯಾರ್‌ಕರೂ’ದಲ್ಲಿ ನಟಿಸಿದ್ದಾಳೆ. 2013ರ `ಮಿಕ್ಕಿ ವೈರಸ್‌’ ಚಿತ್ರದಲ್ಲಿ ಎಂಟ್ರಿ ಪಡೆದ ಏಲಿ, ಕಿರುತೆರೆಯ ಕಾಮಿಡಿ ಕಿಂಗ್‌ ಕಪಿಲ್ ‌ಜೊತೆ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗಿದ್ದಾಳೆ. ಇವರಿಬ್ಬರ ಮಧ್ಯೆ ಈಗ ಒಂದು ಒಪ್ಪಂದವಂತೆ. ಆ ಪ್ರಕಾರ ಇಬ್ಬರೂ ಪರಸ್ಪರರಿಗೆ ಗುರುಗಳೇ! ಕಪಿಲ್ ‌ತಮ್ಮ ಆಂಗ್ಲ ಭಾಷೆ ಸುಧಾರಿಸ ಬಯಸಿದರೆ, ಏಲಿ ತನ್ನ ಹಿಂದಿ ಸುಧಾರಿಸುತ್ತಿದ್ದಾಳೆ. ತಮಗೆ ತಿಳಿಯದ ಭಾಷೆಯನ್ನು ಪರಸ್ಪರ ಹೇಳಿಸಿಕೊಂಡು ಮುನ್ನಡೆದಿದ್ದಾರೆ. ಇವರಿಬ್ಬರ ಕಾರಣ ಶೂಟಿಂಗ್‌ ಸ್ಪಾಟ್‌ ಸದಾ ತಮಾಷೆಯಾಗಿರುತ್ತಂತೆ. ಇಬ್ಬರ ಇಂಗ್ಲಿಷ್‌, ಹಿಂದಿ ಎಲ್ಲರ ಮನರಂಜನೆಗೆ ಮೂಲವಾಗಿದೆ.

ಆದರ್ಶ ಸೊಸೆ ಪಾತ್ರ ಸಾಕಾಯ್ತು

ಜನಪ್ರಿಯ ಧಾರಾವಾಹಿ `ದಿಯಾ ಔರ್‌ಬಾತಿ ಹಂ’ನ ನಾಯಕಿ ದೀಪಿಕಾ, ಸದಾ ಮೈ ತುಂಬಾ ಸೆರಗು ಹೊದ್ದು, ತಗ್ಗಿಬಗ್ಗಿ ನಡೆಯುವ ಆದರ್ಶ ಸೊಸೆಯ ಪಾತ್ರದಿಂದ ರೋಸಿ ಹೋಗಿದ್ದಾಳೆ. ಸಂಧ್ಯಾಳ ಪಾತ್ರಧಾರಿಯಾದ ಈಕೆ ಸೀರೆ, ಸಿಂಧೂರಗಳ ಗೊಡವೆ ಬಿಟ್ಟು ಗ್ಲಾಮರಸ್‌ ಆಗಿ ಮಿಂಚಲು ನಿರ್ಧರಿಸಿದ್ದಾಳೆ. ಒಂದು ಹೊಸ ಶೋನಲ್ಲಿ ಕಾಣಿಸಿಕೊಳ್ಳಲಿರುವ ಈ ಹುಡುಗಿ, ಅದಕ್ಕಾಗಿ ಹೊಸ ಗೆಟಪ್‌ನಲ್ಲಿ ಹೀಗೆ ಮಿಂಚಲಿದ್ದಾಳೆ. ಅದು ಅವಳ ಪಾತ್ರಕ್ಕೆ ಅತ್ಯಗತ್ಯವಂತೆ. ಬದಲಾವಣೆ ಯಾರಿಗೆ ಬೇಡ ಹೇಳಿ? ಪ್ರೇಕ್ಷಕರೂ ಇವಳಿಂದ ಬೋರ್‌ ಆಗದಿದ್ದರೆ ಸರಿ.

ಸಮಯ ಸಹನೆ ಎರಡೂ ಇಲ್ಲ

ಹಲವಾರು ಟಿ.ವಿ. ಶೋಗಳಿಗೆ ಆ್ಯಂಕರ್‌ ಆಗಿದ್ದ ಅರುಣಾ ಇರಾನಿ, ಬಹಳ ದಿನಗಳಿಂದ ಮೌನವಾಗಿದ್ದುಬಿಟ್ಟಿದ್ದಾರೆ. 8 ತಿಂಗಳ ಹಿಂದೆ ಆಕೆ `ಸಂಸ್ಕಾರ್‌: ಧರೋಹರ್‌ ಅಪ್ನೋಂಕಾ’ ಧಾರಾವಾಹಿಯಲ್ಲಿ ನಟಿಸಿದ್ದೇ ಕೊನೆಯಾಯ್ತು. ಈಗ ಯಾವುದರಲ್ಲೂ ಆಸಕ್ತಿ ತೋರಿಸುತ್ತಿಲ್ಲ. ಇದಕ್ಕಾಗಿ ಬೇಕಾಗಿರುವಂಥ ಸಹನೆ, ಸಮಯ ಎರಡೂ ಈಗಿಲ್ಲ ಎನ್ನುತ್ತಿದ್ದಾರೆ. ನನ್ನ ಆರೋಗ್ಯ ಸರಿಯಿರದ ಕಾರಣ ಧಾರಾವಾಹಿಗಳಿಗೆ ಹಿಂದಿನಷ್ಟು ಸಮಯ. ಸಹನೆ ನೀಡಲಾಗುತ್ತಿಲ್ಲ. ಈಗ ವಿಶ್ರಾಂತಿಯ ಕಾಲ ಎನ್ನುತ್ತಾರೆ.

ಗೌತಮನಿಗೆ ಸಿಕ್ಕ ಅವಕಾಶ

`ಬಿಗ್‌ಬಾಸ್‌ ಸೀಸನ್‌ 8’ರ ಹಾಟ್‌ ಕಪಲ್ಸ್ ಎನಿಸಿದ್ದ ಡ್ಯಾಂಡ್ರಾ ಗೌತಮ್ ಜೋಡಿಗೆ ಹೊಸ ಜೋಶ್‌ ಬಂದಿದೆ. ಡ್ಯಾಂಡ್ರಾಳಿಗೆ ಪೂಜಾ ಭಟ್‌ಳ ಕ್ಯಾಂಪ್‌ನಲ್ಲಿ ಅವಕಾಶ ಸಿಕ್ಕಿದರೆ, ಗೌತಮನಿಗೂ ಹೊಸ ಅವಕಾಶ ಸಿಕ್ಕಿದೆ. ಸುಶಾಂತ್‌ ಸಿಂಗ್‌ ರಜಪೂತ್‌`ಧೋನಿ’ಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ, ಆತ ಭಾರತದ ಖ್ಯಾತ ಬೋಲರ್‌ ಜಹೀರ್‌ಖಾನ್‌ನ ಪಾತ್ರದಲ್ಲಿದ್ದಾನೆ. ಇಬ್ಬರಲ್ಲಿ ಯಾರು ಮಿಂಚುತ್ತಾರೋ….. ಕಾಲವೇ ನಿರ್ಣಯಿಸಬೇಕು.

ನಾಜೂಕು ರಾಣಿಯ ಕರ್ತವ್ಯಪ್ರಜ್ಞೆ

ಯಾವನೋ ಚುಡಾಯಿಸಿದನೆಂದು ಅವನ ಕಾಲರ್‌ ಪಟ್ಟಿ ಹಿಡಿದು ಬಾರಿಸಿದ್ದ ಐರಿಸ್‌ ಮೈತ್ರಿ ಈಗ ತಾನೇ ಗಾಯಗೊಂಡಿದ್ದಾಳೆ. ಒಂದು ಸ್ಪೆಷಲ್ ಆ್ಯಕ್ಷನ್‌ ಸೀಕ್ವೆನ್ಸ್ ಗಾಗಿ ಈಕೆ ಕೇಬಲ್‌ನಿಂದ ಬಂಧಿಸಲ್ಪಟ್ಟು, ಎಳೆದೊಯ್ಯುವ ಟ್ರಕ್‌ನಿಂದ ಪಾರಾಗುವ ದೃಶ್ಯವಿತ್ತು. ಸುರಕ್ಷತೆಯ ಎಲ್ಲಾ ಕ್ರಮ ಕೈಗೊಂಡಿದ್ದರೂ ಕೇಬಲ್ ವೈರ್‌ ಕತ್ತರಿಸಿಹೋಯಿತು. ಈ ಕಾರಣ ಟ್ರಕ್‌ನಿಂದ ಈ ನಾಜೂಕು ರಾಣಿ 20 ಅಡಿಗಳವರೆಗೂ ದರದರನೆ ಎಳೆದೊಯ್ಯಲ್ಪಟ್ಟಳು. ಹಾಗಾಗಿ ಅವಳ ಸೊಂಟ ಬಿದ್ದುಹೋಯ್ತು. ಇಷ್ಟಾದರೂ 20 ನಿಮಿಷಗಳಲ್ಲೇ ಸುಧಾರಿಸಿಕೊಂಡ ಈ ಕೋಮಲಾಂಗಿ, ತನ್ನ ಕರ್ತವ್ಯಪ್ರಜ್ಞೆ ಮೆರೆದು, ಆ ದಿನದ ಶೂಟಿಂಗ್‌ಪೂರೈಸಿಕೊಟ್ಟಳಂತೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ