ಸೀತಾರಾಮ ಸೀರಿಯಲ್​ನ ಸೀತಾಗೆ ರಾಮ ಸಿಕ್ಕಾಗಿದೆ. ಅಂದಹಾಗೆ ಇದು ಸೀರಿಯಲ್ ಕಥೆ ಅಲ್ಲ. ರಿಯಲ್ ಸ್ಟೋರಿ. ಹೌದು.. ಕಿರುತೆರೆಯ ಖ್ಯಾತ ನಟಿ, ಬಹುದೊಡ್ಡ ಅಭಿಮಾನಿ ಹಾಗೂ ಪ್ರೇಕ್ಷಕವರ್ಗ ಹೊಂದಿರೋ ವೃಷ್ಣವಿ ಗೌಡ ಅಫಿಶಿಯಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ಅವರ ಬಾಯಿಂದಲೇ ಕೇಳಬಹುದು.

ಕನಕಪುರ ರಸ್ತೆಯಲ್ಲಿರೋ ನೇಸರ ರೆಸಾರ್ಟ್​​ನಲ್ಲಿ ಏಪ್ರಿಲ್ 14ರಂದು ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅನುಕೂಲ್ ಮಿಶ್ರಾ ಅನ್ನೋ ಏರ್ಫೋರ್ಸ್ ಆಫೀಸರ್ ಜೊತೆ ಉಂಗುರ ಬದಲಿಸಿಕೊಂಡಿದ್ದಾರೆ ವೈಷ್ಣವಿ ಗೌಡ. ಕಳೆದ ಬಾರಿ ನಡೆದ ಏರ್ ಶೋನಲ್ಲಿ ಅನುಕೂಲ್ ಮಿಶ್ರಾನ ಪರಿಚಯ ಮಾಡಿಕೊಂಡಿದ್ದ ವೈಷ್ಣವಿ ನಡುವೆ ಉತ್ತಮ ಸ್ನೇಹವಿತ್ತು. ಇದೀಗ ಪ್ರೇಮಾಂಕುರಿಸಿ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ.

ಉತ್ತರ ಭಾರತ ಮೂಲದ ಅನುಕೂಲ್ ಮಿಶ್ರಾ ಮುಗಿಲೆತ್ತರ ಇದ್ದಾರೆ. ನೋಡೋಕೆ ಸಖತ್ ಹ್ಯಾಂಡ್ಸಮ್. ಏರ್ಫೋಸ್​ನಲ್ಲಿ ಕೆಲಸ ಮಾಡ್ತಿದ್ದು, ಎರಡು ವಿಭಿನ್ನ ಕ್ಷೇತ್ರಗಳ ಜೋಡಿ ಒಟ್ಟಿಗೆ ಸಹಬಾಳ್ವೆಗೆ ಮುಂದಾಗ್ತಿದೆ. ಮಗಳ ಎಂಗೇಜ್ಮೆಂಟ್ ಹಿನ್ನೆಲೆ ವೃಷ್ಣವಿ ತಂದೆ-ತಾಯಿ ಸಖತ್ ಖುಷಿಯಾಗಿದ್ದಾರೆ. ಸಹೋದರ ಕೂಡ ಫಸ್ಟ್ ಟೈಂ ಮುಕ್ತವಾಗಿ ಮಾತನಾಡಿದ್ದಾರೆ.

ಆಗಸ್ಟ್​ನಲ್ಲಿ ಬೆಂಗಳೂರಿನಲ್ಲೇ ಮದುವೆ ಮಹೋತ್ಸವ ನೆರವೇರಲಿದ್ದು, ಸದ್ಯದಲ್ಲೇ ವೈಷ್ಣವಿ ತಾಯಿ ಪ್ರೆಸ್ಮೀಟ್ ಮಾಡಿ ಅಧಿಕೃತ ಮಾಹಿತಿ ನೀಡಲಿದ್ದಾರಂತೆ. ಈ ಹಿಂದೆ ಒಮ್ಮೆ ವೈಷ್ಣವಿ ಗೌಡಗೆ ವಿದ್ಯಾಭರಣ ಅನ್ನೋರ ಜೊತೆ ಮದುವೆ ನಿಶ್ಚಯವಾಗಿತ್ತು. 2022ರ ನವೆಂಬರ್ 22ರಲ್ಲಿ ಹೂ ಮುಡಿಸುವ ಶಾಸ್ತ್ರ ಕೂಡ ಮುಗಿದಿತ್ತು. ಆದ್ರೆ ಆತನಿಗೆ ಬೇರೆ ಹುಡುಗಿಯರ ಜೊತೆ ಅಫೇರ್ ಇದೆ ಅನ್ನೋ ಕಾರಣಕ್ಕೆ ಆ ಸಂಬಂಧ ಮುರಿದು ಬಿದ್ದಿತ್ತು. ಹಾಗಾಗಿ ವೈಷ್ಣವಿ ತಾಯಿ ಈ ಬಾರಿಯ ಸುದ್ದಿ ಪಕ್ಕಾ ಇರಲಿದೆ. ಒಳ್ಳೆಯ ಅಳಿಯ ಸಿಕ್ಕಿದ್ದಾರೆ ಎಂದಿದ್ದಾರೆ.

ಬಾರ್ಬಿ ಡಾಲ್ ರೀತಿ ಚೆಂದವಾಗಿ ರೆಡಿಯಾಗಿ ಮಿಂಚಿದ ವೃಷ್ಣವಿ ಮುಖದಲ್ಲಿ ನಗು ಕಾಣ್ತಿದೆ. ಮನಸ್ಸಿನ ತುಂಬಾ ಪ್ರೀತಿ ಕಾಣ್ತಿದೆ. ಭವಿಷ್ಯದ ಬಗ್ಗೆ ಕನಸುಗಳು ಕಾಣ್ತಿವೆ. ಅನುಕೂಲ್ ಮಿಶ್ರಾ- ವೈಷ್ಣವಿ ಜೋಡಿ ಮೇಡ್ ಫಾರ್ ಈಚ್ ಅದರ್ ರೀತಿ ಕಾಣ್ತಿದ್ದು, ಇಡೀ ಚಿತ್ರರಂಗ ಹಾಗೂ ಕಿರುತೆರೆಲೋಕ ಶುಭ ಕೋರಿದೆ. ಒಂದಷ್ಟು ಆಪ್ತರು ಕೂಡ ಈ ನಿಶ್ಚಿತಾರ್ಥಕ್ಕೆ ಸಾಕ್ಷಿ ಆಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿಯಾಗಿ ಈಕೆ ಗಳಿಸಿದ ಕೀರ್ತಿ ಅಷ್ಟಿಷ್ಟಲ್ಲ. ಇದೀಗ ಸೀತೆಯಾಗಿದ್ದು, ನಿಜ ಜೀವನದಲ್ಲಿ ರಾಮನ ಕಂಡುಕೊಂಡಿದ್ದಾರೆ. ಇವರ ಬಾಳು ಬಂಗಾರವಾಗಲಿ ಅನ್ನೋದು ಎಲ್ಲರ ಆಶಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ