ನೀವು ಆಧುನಿಕ ಶೈಲಿಯಲ್ಲಿ ಸೀರೆಯುಟ್ಟು ಪಾರ್ಟಿಯ ಆಕರ್ಷಣೆಯ ಕೇಂದ್ರ ಬಿಂದು ಆಗುವುದು ಹೇಗೆಂದು ತಿಳಿಯೋಣ :

ಫ್ರೀ ಬಿಟ್ಟ ಸೆರಗಿನ ಸೀರೆ : ಬರ್ತ್‌ಡೇ ಯಾ ಕಿಟೀ ಪಾರ್ಟಿಗಾಗಿ ಈ ಸ್ಟೈಲ್ ‌ಬೊಂಬಾಟ್‌ ಆಗಿರುತ್ತದೆ. ಈ ಸ್ಟೈಲ್‌ನಲ್ಲಿ ಸೀದಾಸಾದಾ ವಿಧಾನದಲ್ಲಿ ಸೀರೆಯುಟ್ಟ ನಂತರ, ಉಲ್ಟಾ ಸೆರಗಿನ ಪ್ಲೀಟ್ಸ್ ಬದಲು, ಅದನ್ನು ಹೆಗಲಿನ ಮೇಲೆಯೇ ಪಿನ್‌ ಸಿಗಿಸಿ, ಫ್ರೀಯಾಗಿ ಬಿಟ್ಟುಬಿಡಿ.

ಉಲ್ಟಾ ಸೆರಗಿನ ಪಿನ್ಅಪ್ಸೀರೆ : ಈ ಸ್ಟೈಲ್‌ನಲ್ಲಿ ಪ್ಲೀಟ್ಸ್ ಹಿಡಿದ ನಂತರ, ಸೆರಗನ್ನು ಹೆಗಲಿನ ಬಳಿ ತಂದು ಅದರ ಪ್ಲೀಟ್ಸ್ ಹಿಡಿದು, ನಂತರ ಅಲ್ಲೇ ಪಿನ್‌ ಅಪ್‌ ಮಾಡಿ. ಇದು ಸರಳತೆಯ ಪ್ರತೀಕ.

ರಾಜರಾಣಿ ಸ್ಟೈಲ್ ‌: ಈ ಸ್ಟೈಲ್ ಹೆವಿ ಸಿಲ್ಕ್ ಭಾರಿ ನೆಟೆಡ್‌ ಸೀರೆಗಳಿಗೆ ಬಲು ಬ್ಯೂಟಿಫುಲ್ ಆಗಿ ಒಪ್ಪುತ್ತದೆ. ಇದು ಗುಜರಾತಿ ಸ್ಟೈಲ್‌ನದೇ ಮತ್ತೊಂದು ರೂಪ. ಆದರೆ ಈ ಸ್ಟೈಲ್‌ನಲ್ಲಿ ಸೀರೆ ಉಡುವಾಗ, ಸೆರಗು ಬಲಗಡೆಯಿಂದ ತೆಗೆದುಕೊಳ್ಳ ಬೇಕಾಗುತ್ತದೆ.

ಸ್ಕಾರ್ಫ್ಸ್ಟೈಲ್ ಸೀರೆ : ಮತ್ತೆ ಮತ್ತೆ ಕೆಳಗೆ ಸರಿಯುವ ಸೆರಗನ್ನು ಸಂಭಾಳಿಸುವ ಭರದಲ್ಲಿ ಕಿರಿಕಿರಿ ಎನಿಸುತ್ತದೆ. ಇದನ್ನು ತಪ್ಪಿಸಿ ಸ್ಟೈಲಿಶ್‌ ಲುಕ್‌ ನೀಡಲು, ಈ ರೀತಿಯ ಸ್ಟೈಲ್‌ನಲ್ಲಿ ಸೀರೆ ಉಡಬೇಕು. ಈ ಸ್ಟೈಲ್‌ನಲ್ಲಿ ಸೆರಗನ್ನು ಸ್ಕಾರ್ಫ್‌ ತರಹ ಕುತ್ತಿಗೆಯಿಂದ ಮುಂಭಾಗದ ಕಡೆ ಇಳಿಬಿಡಲಾಗುತ್ತದೆ. ಇದನ್ನು ವಿಶೇಷವಾಗಿ ಚಳಿಗಾಲದಲ್ಲಿ ಕೋಟ್‌ ಮೇಲುಗಡೆ ಬರುವಂತೆ ಟ್ರೈ ಮಾಡಿ, ಇದು ಪ್ರೊಫೆಶನಲ್ ಲುಕ್‌ ನೀಡುವುದರಿಂದ ಆಫೀಸ್‌ಗೂ ಒಪ್ಪುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ