ಬೇಸಿಗೆಯಲ್ಲಂತೂ ನಿಮ್ಮ ವಾರ್ಡ್‌ರೋಬ್‌ನಲ್ಲಿ ನೀವು ಫ್ಲೋರಲ್ ಪ್ರಿಂಟ್‌ರಹಿತ ಉಡುಗೆಗಳನ್ನು ಕಲ್ಪಿಸಿಕೊಳ್ಳಲಾಗದು. ಈ ಬೇಸಿಗೆಯ ಅತಿ ಉಷ್ಣತೆ ಮಧ್ಯೆ ಎಲ್ಲ ನೀರಸ ಅನಿಸುವಾಗ, ನಿಮ್ಮ ಉಡುಗೆಗಳಲ್ಲಿ ಅರಳಿರುವ ಹೂ ನಿಮಗೆ ಹೊಸ ಉತ್ಸಾಹ ತುಂಬುತ್ತದೆ. ಅದರಿಂದ ನಿಮ್ಮ ಬೇಸರದ ಮೂಡ್‌ ಹೋಗಿ ತಾಜಾತನ ತುಂಬಿಕೊಳ್ಳುತ್ತದೆ.

ಆದರೆ ಹೆಚ್ಚಿನ ಮಹಿಳೆಯರಿಗೆ ಫ್ಲೋರಲ್ ಪ್ರಿಂಟ್‌ನ ಸ್ಟೈಲ್‌ ಕುರಿತು ಗೈಡೆನ್ಸ್ ನ ಅಗತ್ಯವಿದೆ. ಸಾಮಾನ್ಯವಾಗಿ ಮಹಿಳೆಯರು ಇದರ ಜೊತೆ ರಾಂಗ್‌ ಮ್ಯಾಚಿಂಗ್‌ ಡ್ರೆಸ್‌ ಆರಿಸಿ ಈ ಆಕರ್ಷಕ ಪ್ಯಾಟರ್ನ್‌ ಜೊತೆ ಅನಗತ್ಯವಾದದ್ದನ್ನು ಧರಿಸುತ್ತಾರೆ. ಇದರಿಂದ ಅವರ ಲುಕ್ಸ್ ಕೆಟ್ಟದಾಗಿ ಕಾಣುತ್ತದೆ. ಈ ಕುರಿತಾಗಿ ಇಲ್ಲಿದೆ ಕೆಲವು ಸಲಹೆಗಳು :

ಬೋಲ್ಡ್ &  ಬ್ಯೂಟಿಫುಲ್

ಹಲವು ವರ್ಷಗಳಿಂದ ವಾರ್ಡ್‌ರೋಬ್‌ನಲ್ಲಿ ತುಂಬಿರುವ ಫ್ಲೋರಲ್ ಡಿಸೈನ್ಸ್ ನಿಂದ ನೀವು ಬೋರ್‌ ಆಗಿದ್ದರೆ, ಈಗ ಇದಕ್ಕೆ ಇನ್ನಷ್ಟು ಆಕರ್ಷಕ ಹೊಸ ಹೊಸ ಬಣ್ಣಗಳನ್ನು ಸೇರಿಸಿಕೊಳ್ಳಿ. ಹೂವುಗಳ ಸಣ್ಣ ಸಣ್ಣ ಪ್ರಿಂಟ್‌ವುಳ್ಳ ಉಡುಗೆಗಳ ಜೊತೆ ಆಕರ್ಷಕ ದೊಡ್ಡ ಆಕಾರದ ಪ್ರಿಂಟ್ಸ್ ಹಾಗೂ ಡಾರ್ಕ್‌ ಬಣ್ಣಗಳನ್ನು ಬೆರೆಸಿಕೊಳ್ಳಿ. ಇದರಿಂದ ನಿಮ್ಮ ಹಳೆಯ ವಾರ್ಡ್‌ರೋಬ್‌ಗೆ ಹೊಸ ತಾಜಾತನ ಮೂಡುತ್ತದೆ. ಆಗ ನಿಮ್ಮ ಆಕರ್ಷಕ ಲುಕ್ಸ್ ಎಲ್ಲರಿಗೂ ಎದ್ದು ಕಾಣಲಿದೆ.

ಫ್ಲೋರಲ್ ಶೂಸ್‌ ಬಳಸಿ ನೋಡಿ ಹೌದು, ಇತ್ತೀಚೆಗೆ ಫ್ಲೋರಲ್ ಶೂಸ್‌ ಚಾಲ್ತಿಯಲ್ಲಿದೆ. ಸ್ಮಾರ್ಟ್‌ ಲೇಡೀಸ್‌ ಇವನ್ನು ತಮ್ಮ ಶೂ ಕ್ಯಾಬಿನೆಟ್‌ಗೆ ಸೇರಿಸುತ್ತಿದ್ದಾರೆ. ನೀವು ಇಂಥ ಶೂಸ್‌ ಬಳಸಲು ಬಯಸಿದರೆ 3ಡಿ ಫ್ಲೋರಲ್ ಪ್ಯಾಟರ್ನ್‌ ಆರಿಸಿಕೊಳ್ಳಿ. ಫ್ಲೋರಲ್ ಶೂಸ್‌ಗೆ ಇಂಥದೇ ಉಡುಗೆ ಧರಿಸಿರಿ. ಇವು ಈಗ ಎಲ್ಲೆಡೆ ಮಾಲ್‌ಗಳಲ್ಲಿ ಲಭ್ಯ. ಇವನ್ನು ಧರಿಸಿ ಹೊರಡಿ, ಬೋಲ್ಡ್ ಫ್ಯಾಷನ್‌ಗೆ ನಾಂದಿ ಹಾಡಿ.

ಫ್ಲೋರಲ್ ಫಾರ್ಮಲ್ ಟೀ ಶರ್ಟ್

ಸ್ಟೈಲಿಶ್‌ ಲುಕ್ಸ್ ಗಾಗಿ ಫ್ಲೋರಲ್ ಪ್ರಿಂಟೆಡ್‌ ಟೀ ಶರ್ಟ್‌ ಒಂದು ಉತ್ತಮ ಆಯ್ಕೆ. ಇದರ ಜೊತೆ ಸಾಲಿಡ್‌ ಕಲರ್‌ನ ಟ್ರೌಸರ್ಸ್ ಧರಿಸಿ ಅಥವಾ ನಿಮ್ಮ ಮೆಚ್ಚಿನ ಡೆನಿಮ್ ಆರಿಸಿ. ಸಾಮಾನ್ಯವಾಗಿ ನಾವು ಫ್ಲೋರಲ್ ಟೀ ಶರ್ಟ್‌ನ್ನು ಫಾರ್ಮಲ್ ಡ್ರೆಸ್‌ ಎಂದು ಭಾವಿಸುವುದಿಲ್ಲ. ಆದರೆ ಇದನ್ನೇ ಸಾಲಿಡ್‌ ಕಲರ್ಡ್‌ ಸಮ್ಮರ್‌ ಬ್ಲೇಝರ್‌, ಫಾರ್ಮಲ್ ಟ್ರೌಸರ್‌ ಹಾಗೂ ಕ್ಲೋಸ್ಡ್ ಶೂಸ್‌ ಜೊತೆ ಧರಿಸಿದಾಗ, ನಿಮಗೆ ಆಕರ್ಷಕ ಫಾರ್ಮಲ್ ಲುಕ್ಸ್ ಸಿಗುತ್ತದೆ.

ಫ್ಲೋರಲ್ ಮ್ಯಾಕ್ಸಿ ಡ್ರೆಸ್

ನಿಜಕ್ಕೂ ಈ ಡ್ರೆಸ್‌ ಒಂದು ಜಬರ್ದಸ್ತ್ ಸ್ಟೈಲ್ ಸ್ಟೇಟ್‌ಮೆಂಟ್‌ ಎನ್ನಬಹುದು. ಎತ್ತರ ಅಥವಾ ಕುಳ್ಳಗಿನ ಯಾವ ಹೆಂಗಸಾದರೂ ಇದನ್ನು ಧರಿಸಬಹುದು. ಇದು ಕ್ಯಾಶ್ಯುಯೆಲ್‌ಸೆಮಿ ಫಾರ್ಮಲ್ ಸಂದರ್ಭಗಳೆರಡಕ್ಕೂ ಅನುಕೂಲಕರ. ಭಾನುವಾರದ ಬ್ರಂಚ್‌ ಪಾರ್ಟಿ ಅಥವಾ ಸಿನಿಮಾ ನೋಡಲು ಹೊರಟಾಗ, ಫ್ಲೋರಲ್ ಮ್ಯಾಕ್ಸಿ ಡ್ರೆಸ್‌ ಧರಿಸಿ. ಜನರ ನೋಟವೆಲ್ಲ ನಿಮ್ಮತ್ತಲೇ ಇರುತ್ತದೆ.

ಮಿಕ್ಸ್ ಮ್ಯಾಚ್

ನೀವು ಈ ಹೂಗಳ ಪ್ರಿಂಟ್‌ ಫ್ಯಾಷನ್‌ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ ಎಂದರೆ, ನಿಮ್ಮ ಬಳಿಯ ಎಲ್ಲಾ ಫ್ಲೋರಲ್ ಪ್ರಿಂಟ್‌ಗಳನ್ನೂ ಮಿಕ್ಸ್ ಮಾಡಿ ಬಳಸಿರಿ. ಹೆಚ್ಚಿನ ಆಕರ್ಷಣೆ ಗಳಿಸಲು, ಔಟ್‌ ಆಫ್‌ ಫ್ಯಾಷನ್ನಿನ ಪ್ರಿಂಟ್‌ ಜೊತೆಗೆ ಚಾಲ್ತಿಯಲ್ಲಿರುವ ಪ್ರಿಂಟ್ಸ್ ಮಿಕ್ಸ್  ಮ್ಯಾಚ್‌ ಮಾಡಿ. ನಿಮ್ಮ ಫ್ಲೋರಲ್ ಪ್ಯಾಂಟ್‌ ಟಾಪ್‌ನಿಂದ ಒಂದು ವಿಭಿನ್ನ ಲುಕ್‌ ಸಿಗುತ್ತದೆ, ಇದು ನಿಮಗೆ ಪ್ರತ್ಯೇಕ ಆಕರ್ಷಣೆ ನೀಡುತ್ತದೆ. ಸಣ್ಣ ಮತ್ತು ಸೂಕ್ಷ್ಮ ಫ್ಲೋರಲ್ ಪ್ರಿಂಟ್‌ ಜೊತೆ ಅಂಥದೇ ಆಕಾರದ ಪ್ರಿಂಟ್‌ನ್ನು ಮ್ಯಾಚ್‌ ಮಾಡಿ. ದೊಡ್ಡ ಹಾಗೂ ಬೋಲ್ಡ್ ಪ್ಯಾಟರ್ನ್‌ ಜೊತೆ, ದೊಡ್ಡದಾದ ಬೋಲ್ಡ್ ಪ್ರಿಂಟ್ಸ್ ನ್ನೇ ಮ್ಯಾಚ್‌ ಮಾಡಿ. ಪ್ರಿಂಟ್‌ಗಳ ಆಕಾರ ಅದಕ್ಕೆ ಅನುರೂಪವಾಗಿರಬೇಕು ಎಂಬುದನ್ನು ಗಮನಿಸಿ.

ಫ್ಲೋರಲ್ ಹ್ಯಾರಮ್ ಪ್ಯಾಂಟ್ಸ್ ನ ಮೋಡಿ

ಈ ಬಗೆಯ ಪ್ಯಾಂಟ್ಸ್ ಈಗ ಹೆಚ್ಚು ಚಾಲ್ತಿಯಲ್ಲಿವೆ. ಬೇಸಿಗೆಗಂತೂ ಈ ಪ್ಯಾಂಟ್‌ ಕೂಲ್ ಕಂಫರ್ಟೆಬಲ್ ಆಗಿದೆ. ಇದಕ್ಕೆ ಫ್ಲೋರಲ್ ಪ್ರಿಂಟ್‌ ಬೆರೆಸಿದಾಗ ಆಕರ್ಷಣೆ ಇನ್ನೂ ಹೆಚ್ಚುತ್ತದೆ. ಸ್ಲಿಮ್ ಟ್ರಿಮ್ ಆಗಿರುವವರಿಗಂತೂ ಇದು ವರದಾನವೇ ಸರಿ. ಪ್ರಿಂಟೆಡ್

ಹ್ಯಾರಮ್ ಜೊತೆ ಯಾವುದೇ ಸಾಲಿಡ್‌ ಕಲರ್‌ ಟಾಪ್‌ ಧರಿಸಿರಿ, ಆಗ ಅಟ್ರಾಕ್ಟಿವ್‌ ಲುಕ್ಸ್ ನಿಮ್ಮದಾಗುತ್ತದೆ.

ಫ್ಲೋರಲ್ ಪ್ಯಾಂಟ್‌ನಿಂದ ಫ್ಯಾನ್ಸಿ

ನೀವು ಕಂಪ್ಲೀಟ್‌ ಲುಕ್‌ಗಾಗಿ ಸಮರ್ಪಕ ಬಣ್ಣ, ಪ್ಯಾಟರ್ನ್‌ ಆರಿಸಿದ್ದರೆ, ಆಗ ಫ್ಲೋರಲ್ ಪ್ಯಾಂಟ್‌ ಬಹಳ ಆಕರ್ಷಕ ಎನಿಸುತ್ತದೆ. ತೆಳು ಸೌಮ್ಯ ಶೇಡ್‌ನ ಯಾವುದೇ ಫ್ಲೋರಲ್ ಪ್ಯಾಂಟ್‌ ಆರಿಸಿ, ಇದರ ಜೊತೆ ಉದ್ದನೇ ಟಾಪ್‌ ಧರಿಸಿ. ಇದರ ಜೊತೆ ಪೀಪ್

ಟೋ ಯಾ ಸಾಫ್ಟ್ ಮೆಟ್ಯಾಲಿಕ್‌ ಕಲರ್‌ ಸಹ ಧರಿಸಬಹುದು. ಇದರಿಂದ ಪ್ಯಾಂಟ್‌ ಮತ್ತಷ್ಟು ಬ್ಯೂಟಿಫುಲ್ ಆಗುತ್ತದೆ.

ನಿಮ್ಮ ಫ್ಲೋರಲ್ ಲುಕ್ಸ್ ನ್ನು ಕಂಪ್ಲೀಟ್‌ ಮಾಡಲು ಡ್ರೆಸ್‌ಗೆ ಹೊಂದುವ ಹೂಗಳ ಪ್ರಿಂಟ್‌ವುಳ್ಳ ಹೇರ್‌ ಬ್ಯಾಂಡ್‌ ಬಳಸಿರಿ. ಹೇರ್‌ಆ್ಯಕ್ಸೆಸರೀಸ್‌, ಪ್ರಿಂಟೆಡ್‌ ಟರ್ಬನ್‌ ನಾಟ್‌ಗಳ ಹೆಡ್‌ ಬ್ಯಾಂಡ್‌ ಕಾಲೇಜು ಕಿಶೋರಿಯರಿಗೆ ಹೆಚ್ಚು ಸೂಕ್ತ.

– ಮೋನಿಕಾ

और कहानियां पढ़ने के लिए क्लिक करें...