ಇದು ಒನ್‌ ಪೀಸ್‌ ಈವ್ನಿಂಗ್‌ ಗೌನ್‌ ಆಗಿದೆ. ಆದರೆ ನೋಡಲು ಡಬಲ್ ಪೀಸ್‌ ಎನಿಸುತ್ತದೆ. ಏಕೆಂದರೆ ಇದರ ಮೇಲ್ಭಾಗದ ಚೋಲಿ ಸೊಂಟದವರೆಗೂ ಫ್ಲೇರ್ಸ್ ನಲ್ಲಿ ಹರಡಿರುತ್ತದೆ, ಹಾಗಾಗಿ ಅದು ನೋಡಲು (ಚಿತ್ರ ಗಮನಿಸಿ) ಡಬಲ್ ಎನಿಸುತ್ತದೆ. ಆದರೆ ಅದು ಮುಖ್ಯ ಡ್ರೆಸ್‌ಗೇ ಹೊಂದಿಕೊಂಡಿರುತ್ತದೆ. ಈ ಡ್ರೆಸ್‌ ಶಾರ್ಟ್‌ ಆಗಿಯೂ ಬರುತ್ತದೆ. ಆದರೆ ಆಯಾ ಸಂದರ್ಭಕ್ಕೆ ಅನುಸಾರ, ಅದನ್ನು ಲಾಂಗ್‌ ಆಗಿ ಧರಿಸಿದರೇ ಚೆನ್ನ. ಸಾಮಾನ್ಯವಾಗಿ ಇದನ್ನು ಬ್ರಿಟಿಷ್‌ ನವ ವಧು ತನ್ನ ವೆಡ್ಡಿಂಗ್‌ ಗೌನ್‌ ಆಗಿ ನೈಟ್‌ನಲ್ಲಿ ಇದನ್ನು ಧರಿಸುತ್ತಾಳೆ. ನೀವು ಈವ್ನಿಂಗ್‌ ಪಾರ್ಟಿಗಳಿಗೆ ನಿಮ್ಮದೇ ಆಯ್ಕೆಯ ಬಣ್ಣ ಧರಿಸಬಹುದು. ಮುಖ್ಯವಾಗಿ ಯಾವ ಹುಡುಗಿಯರಿಗೆ, ಬೊಜ್ಜಿನ ಕಾರಣ ಹೊಟ್ಟೆ ಉಬ್ಬಿರುತ್ತದೋ, ಅದನ್ನು ನೀಟಾಗಿ ಕವರ್‌ ಮಾಡಿ ಡೀಸೆಂಟ್‌ ಆಗಿ ತೋರ್ಪಡಿಸಲು ಇದು ಉತ್ತಮ ಆಯ್ಕೆ. ಈ ಡ್ರೆಸ್‌ ಎಲ್ಲಾ ತರಹದ ಬಾಡಿ ಟೈಪ್‌ನವರಿಗೂ ಸೂಟ್‌ ಆಗುತ್ತದೆ.

Tags:
COMMENT