ಭಾರತೀಯ ನಾರಿಗೆ ಸೀರೆಗೆ ಮಿಗಿಲಾದ ಉಡುಗೆಯುಂಟೆ? ಆದರೆ ಅದನ್ನು ಉಡುವ ಪರಿ ಎಷ್ಟು ನಾಜೂಕಾಗಿದ್ದರೂ ಸಾಲದು. ಅದನ್ನೇ ಫ್ಯಾಷನ್‌ ಭಾಷೆಯಲ್ಲಿ ಡ್ರೇಪಿಂಗ್‌ ಎನ್ನುತ್ತಾರೆ. ಫೆಸ್ಟಿವ್‌ ಸೀಸನ್‌ನಲ್ಲಿ ಸೀರೆಯ ಆಧುನಿಕ ಡ್ರೇಪಿಂಗ್‌ ಹೇಗಿದ್ದರೆ ಚೆನ್ನ?

ಇಗೊಳ್ಳಿ….. ಹಬ್ಬಗಳ ಸೀಸನ್‌ ಬಂದೇಬಿಟ್ಟಿದೆ! ಈ ಸಂದರ್ಭದಲ್ಲಿ ಆಧುನಿಕ ಉಡುಗೆಗಳಿಗಿಂತ ಸೀರೆಯ ಫ್ಯಾಷನ್‌ದೇ ಮೇಲುಗೈ. ಸೀರೆ ನಿಜಕ್ಕೂ ಸ್ಟೇಟಸ್‌ ಸಿಂಬಲ್, ಏಕೆಂದರೆ ಇದರ ಸಾದಾ ಹಾಗೂ ಸರಳ ಲುಕ್ಸ್ ಬಲು ಆಕರ್ಷಕ. ಹಬ್ಬದ ಸೀಸನ್‌ಗಾಗಿ ಹೊಸ ಹೊಸ ಡ್ರೇಪಿಂಗ್ಸ್ ಬಗ್ಗೆ ತಿಳಿಯೋಣವೇ?

ಲಹಂಗಾ ಸೀರೆ

ಈ ಸ್ಟೈಲ್‌ ಇತ್ತೀಚೆಗೆ ಮಾಮೂಲಿ ಎನಿಸಿದೆ. ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಈ ಸ್ಟೈಲ್‌ನಲ್ಲಿ ಸೀರೆ ಉಡುತ್ತಾರೆ. ಇತ್ತೀಚೆಗೆ ಮದುವೆಗಳಲ್ಲಿ ವಧು ಇದೇ ಸ್ಟೈಲ್‌ನಲ್ಲಿ ಸೀರೆ ಉಡಲು ಬಯಸುತ್ತಾಳೆ. ಲಹಂಗಾ ಸೀರೆಯನ್ನು ರೆಡ್‌ ಕಾರ್ಪೆಟ್‌ ಈವೆಂಟ್‌ನಲ್ಲೂ ಗಮನಿಸಬಹುದು. ಅರ್ಧ ಸೀರೆಯ ಈ ಪ್ಯಾಟರ್ನ್‌, ಸೀರೆ ಉಡುವ ಕ್ರಮದಲ್ಲಿ ಹೆಚ್ಚು ಟ್ರೆಂಡಿಂಗ್‌ ಆಗಿದೆ. ಈ ಸ್ಟೈಲ್‌ಗಾಗಿ ನೀವು ಕಾಂಟ್ರಾಸ್ಟ್ ಕಲರ್‌ನಲ್ಲಿ ಲಹಂಗಾ ಚೋಲಿ ಮತ್ತು ಸೀರೆ ಆರಿಸಬೇಕು. ಇದರಿಂದ ಅರ್ಧ ಸೀರೆಯ ಲುಕ್‌ ಎದ್ದು ತೋರುತ್ತದೆ.

ಧೋತಿ ಶೈಲಿಯ ಸೀರೆ

ಈ ರೀತಿಯ ಸ್ಟೈಲಿಂಗ್‌ ಇಂದಿನ ತರುಣಿಯರಲ್ಲಿ ಜನಪ್ರಿಯ. ಏಕೆಂದರೆ ಇದು ಉಡಲಿಕ್ಕೂ ಸುಲಭ, ಆರಾಮದಾಯಕ. ಈ ತರಹದ ಸ್ಟೈಲಲ್ಲಿ ಸೀರೆಯುಟ್ಟು ಸಿನಿ ತಾರೆಯರು ಬೇಕಾದಷ್ಟು ಚಿತ್ರಗಳಲ್ಲಿ ಮಿಂಚಿದ್ದಾರೆ. ಈ ಟ್ರೆಂಡ್‌ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಲೆವೆಲ್‌ನ್ನು ಇನ್ನೂ ಹೆಚ್ಚಿಸಲಿದೆ. ಇದನ್ನು ಕಟ್‌ ಬ್ಲೌಸ್‌ ಯಾ ಕ್ರಾಪ್‌ ಟಾಪ್‌, ಟೀ ಶರ್ಟ್‌ ಜೊತೆಯಲ್ಲೂ ಉಡಬಹುದು. ಚಳಿಗಾಲ ಸಮೀಪಿಸುತ್ತಿರುವಾಗ ನೀವು ಇದನ್ನು ಜಾಕೆಟ್‌ ಮತ್ತು ಬ್ಲೇಸರ್‌ ಜೊತೆ ಧರಿಸಿ ಆನಂದಿಸಬಹುದು.

ಮುಮ್ತಾಜ್‌ ಸ್ಟೈಲ್ ಸೀರೆ

ನಟಿ ಮುಮ್ತಾಜ್‌ ಫಂಕಿ ಸ್ಟೈಲ್‌ ಸ್ಟೇಟ್‌ಮೆಂಟ್ಸ್ ಗೆ ಪ್ರಸಿದ್ಧರು. `ಆಜ್‌ ಕಲ್ ತೇರೆ ಮೇರೆ ಪ್ಯಾರ್‌ ಕೆ ಚರ್ಚೆ……’ ಹಾಡಿಗೆ ಆಕೆ ಉಟ್ಟಿದ್ದ ಸೀರೆ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹೊಳೆ ಹೊಳೆಯುವ ಬಾರ್ಡರ್‌ ಹಾಗೂ ಕೂಲ್‌ ಡ್ರೇಪಿಂಗ್‌ ಸ್ಟೈಲ್ ಇಂದೂ ಸಹ ಯುವತಿಯರನ್ನು ಆಕರ್ಷಿಸುತ್ತದೆ.

ದೀಪಿಕಾ ಹಾಗೂ ಪ್ರಿಯಾಂಕಾ ಸಹಿತ ಹಲವು ತಾರೆಯರು ಈ ತರಹದ ಲುಕ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಶಿಫಾನ್‌ ಸೀರೆಯಲ್ಲಿ ಹೆವಿ ಮತ್ತು ಅಗಲದ ಬಾರ್ಡರ್‌ನಲ್ಲಿ ಶಿಮರ್‌ ಮತ್ತು ಹೆವಿ ವರ್ಕ್‌ವುಳ್ಳ ಸೀರೆ ಎಲ್ಲಾ ಬಗೆಯ ಹಬ್ಬಗಳಿಗೂ ಪರ್ಫೆಕ್ಟ್ ಆಯ್ಕೆ ಆಗಿರುತ್ತದೆ.

ಬಟರ್‌ಫ್ಲೈ ಸೀರೆ ಡ್ರೇಪಿಂಗ್‌

ಯಾರು ತೆಳು ಕಾಯದ ಬಳುಕುವ ಬಳ್ಳಿ ದೇಹ ಹೊಂದಿರುತ್ತಾರೋ ಅಂಥವರಿಗೆ ಇಂಥ ಸೀರೆ ಡ್ರೇಪಿಂಗ್‌ ಹೆಚ್ಚು ಸೂಕ್ತ. ಡ್ರೇಪಿಂಗ್‌ನ ಬಟರ್‌ಫ್ಲೈ ಸ್ಟೈಲ್‌ ಯಾವುದೇ ಸೀರೆಯ ಜೊತೆಗೂ ಹೊಂದಿಕೊಳ್ಳುತ್ತದೆ.

ಆದರೆ ನೀವು ಕೋಟಾ ಯಾ ಶಿಫಾನ್‌ನಂತಹ ಲೈಟ್‌ ಸೀರೆ ಆರಿಸಿದರೆ, ಅದರಲ್ಲಿ ಚಿಟ್ಟೆಗಳ ವಿನ್ಯಾಸ ರೆಕ್ಕೆ ಹರಡಿದಂತಿರಲಿ. ಇಂಥ ಸೀರೆಗಳಲ್ಲಿ ಧಾರಾಳ ಕಸೂತಿ ಇರುವಂತೆ ಗಮನಿಸಿಕೊಳ್ಳಿ. ಈ ಸ್ಟೈಲ್‌ ಫ್ರಂಟ್‌ ಸೆರಗನ್ನು ಹೊಂದಿರಬೇಕು. ಹಿಂದಿ ನಟಿಯರಂತೂ ಇದಕ್ಕೇ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಪರ್ಫೆಕ್ಟ್ ಲುಕ್ಸ್ ಪಡೆಯಲು ಇಂಥ ಲೈಟ್‌ ಸೀರೆಗಳ ಜೊತೆ ಭಾರಿ ಪೇಪ್ಲವ್‌ ಬ್ಲೌಸ್‌ ಕ್ಯಾರಿ ಮಾಡಿದರೆ ಉತ್ತಮ.

ಸ್ಕಾರ್ಫ್‌ ತರಹದ ಸೆರಗಿನ ಸೀರೆ

ಇದಂತೂ ಬಹಳ ಅಪರೂಪದ ಸ್ಟೈಲ್ ಆಗಿದ್ದು, 90ರ ದಶಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿತ್ತು. ಈ ಸ್ಟೈಲ್‌ ಇದೀಗ ಫ್ಯಾಷನ್‌ಗೆ ಮರಳಿ ಬಂದಿದೆ. ಎಷ್ಟೋ ಯುವತಿಯರು ಈ ಸ್ಟೈಲ್‌ನ್ನು ಸ್ಕಾರ್ಫ್‌ ತರಹ ಆಭರಣದ ಜೊತೆ ಧರಿಸಲು ಬಯಸುತ್ತಾರೆ. ಇದು ರೆಟ್ರೋ ಯುಗದ ಒಂದು ಬೊಂಬಾಟ್‌ ಸ್ಮರಣೀಯ ಸಂಗ್ರಹವಾಗಿದೆ. ಥೀಮ್ ಪಾರ್ಟಿಗಳಿಗೆ ಸುಲಭವಾಗಿ ಕ್ಯಾರಿ ಮಾಡಬಹುದು. ನೀವು ಮಾಡಬೇಕಾದುದಿಷ್ಟೆ, ಕುತ್ತಿಗೆ ಸುತ್ತ ಬರುವಂತೆ ಸೆರಗನ್ನು ಸ್ಕಾರ್ಫ್‌ ತರಹ ಸುತ್ತಿಕೊಳ್ಳಬೇಕು. ಈ ಸ್ಟೈಲ್‌ಗಾಗಿ ನೀವು ನಿಮ್ಮ ಸೆರಗಿನ ಉದ್ದಳತೆ ದೊಡ್ಡದಾಗಿ ಇರಿಸಿಕೊಳ್ಳಬೇಕು. ನೀವು ಈ ಸ್ಕಾರ್ಫ್‌ ಸ್ಟೈಲ್ ಜೊತೆ ಇನ್ನಷ್ಟು ಹೊಸ ಪ್ರಯೋಗ ಸಹ ಮಾಡಿ ನೋಡಬಹುದು.

ಗುಜರಾತಿ ಸ್ಟೈಲ್ ಸೀರೆ

ಈ ಶೈಲಿಯಲ್ಲಿ ಸೀರೆಯ ಸೆರಗು ಮುಂಭಾಗದಲ್ಲಿ ಇಳಿದಿರುತ್ತದೆ. ಇದನ್ನು ಸಾಮಾನ್ಯವಾಗಿ ಮದುವೆಯ ಆರತಕ್ಷತೆ, ಗರ್ಬಾ ಡ್ಯಾನ್ಸ್ ಗಳಲ್ಲಿ ಹೆಚ್ಚಾಗಿ ಉಡಲಾಗುತ್ತದೆ. ಏಕೆಂದರೆ ಗುಜರಾತಿ ಶೈಲಿಯ ಸೀರೆ ಹೆಚ್ಚು ಸಾಂಪ್ರದಾಯಿಕ ಎನಿಸುತ್ತದೆ. ಈ ಶೈಲಿಗಾಗಿ ಶಿಫಾನ್‌ ಜಾರ್ಜೆಟ್‌ ಸೀರೆಗಳನ್ನು ಬಳಸುವುದು ಹೆಚ್ಚು ಸೂಕ್ತ.

– ಆಶಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ