ರವೆ ಗೋಧಿಹಿಟ್ಟಿನ ಶಿರಾ

ಸಾಮಗ್ರಿ : ಅರ್ಧ ಕಪ್‌ ತುಪ್ಪ, ಅರ್ಧರ್ಧ ಕಪ್‌ ರವೆ, ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್‌), 2-2 ಚಿಟಕಿ ಏಲಕ್ಕಿ ಪುಡಿ, ಅರಿಶಿನ ಅಥವಾ ಹಾಲಲ್ಲಿ ನೆನೆದ 5-6 ಎಸಳು ಕೇಸರಿ, 1 ಕಪ್‌ ಹಾಲು.

ವಿಧಾನ : ಮೊದಲು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಇದರಲ್ಲಿ ದ್ರಾಕ್ಷಿ ಗೋಡಂಬಿ ಇತ್ಯಾದಿ ಹಾಕಿ ಹುರಿದು ತೆಗೆಯಿರಿ. ಇದರಲ್ಲಿ ರವೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಗೋಧಿ ಹಿಟ್ಟು ಹಾಕಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಾ ಗಂಟಾಗದಂತೆ ಹುರಿಯಿರಿ. ಆಮೇಲೆ ಸಕ್ಕರೆ, ಅರಿಶಿನ ಅಥವಾ ಕೇಸರಿ, ಅಗತ್ಯವಿದ್ದಷ್ಟು ಹಾಲು, ಬಿಸಿ ನೀರು ಬೆರೆಸುತ್ತಾ ಕೇಸರಿ ಭಾತ್‌ಗೆ ಮಾಡುವಂತೆ ಕೈಯಾಡಿಸಿ, ತಳ ಹಿಡಿಯದಂತೆ ಆಗಾಗ ತುಪ್ಪ ಬೆರೆಸುತ್ತಿರಿ. ಕೊನೆಯಲ್ಲಿ ಏಲಕ್ಕಿ, ದ್ರಾಕ್ಷಿ ಗೋಡಂಬಿ ಸಹ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿರಿ. ಕೆಳಗಿಳಿಸಿ, ಮೇಲೆ ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ ಬಿಸಿ ಬಿಸಿಯಾಗಿ ತುಪ್ಪ ಹಾಕಿ ಸವಿಯಲು ಕೊಡಿ.

ಬ್ರೆಡ್‌ ಮೊಸರುವಡೆ

Kaju-ki-namkeen - Copy

ಸಾಮಗ್ರಿ : 10-12 ಬ್ರೆಡ್‌ ಸ್ಲೈಸ್‌, ಬ್ರೆಡ್‌ ನೆನೆಯಲು ಹಾಲು, 4-5 ಚಮಚ ಹುಳಿಸಿಹಿ ಚಟ್ನಿ, ಪುದೀನಾ ಚಟ್ನಿ, 2 ಕಪ್‌ ಮೊಸರು, ಒಂದಿಷ್ಟು ಸೀಡ್ಲೆಸ್‌ ದಾಳಿಂಬೆ, ಹುರಿದ ಜೀರಿಗೆ, ಉಪ್ಪು, ಖಾರ, ದ್ರಾಕ್ಷಿ-ಗೋಡಂಬಿ ಚೂರು, ಸೀಡ್ಲೆಸ್‌ ಬಿಳಿ, ಕಪ್ಪು ದ್ರಾಕ್ಷಿ (ಉದ್ದಕ್ಕೆ ಹೆಚ್ಚಿದ್ದು).

ವಿಧಾನ : ಬ್ರೆಡ್‌ ಅಂಚು ಕತ್ತರಿಸಿ, ಇವನ್ನು ಹಾಲಿನಲ್ಲಿ ನೆನೆಹಾಕಿಡಿ. ನಂತರ ಇನ್ನು ಹೊರತೆಗೆದು ಲಘು ಒತ್ತಿಕೊಂಡು, ಅದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು ತುಂಬಿಸಿ, ವಡೆ ಆಕಾರ ಕೊಡಿ. ಇನ್ನು ಸರ್ವಿಂಗ್‌ ಬೌಲ್‌ನಲ್ಲಿ ಜೋಡಿಸಿಕೊಂಡು ಸೀಲ್ ಮಾಡಿ. ಈಗ ಇದರ ಮೇಲೆ ಮೊಸರು, 2 ಬಗೆ ಚಟ್ನಿ, ಜೀರಿಗೆ ಪುಡಿ, ಉಪ್ಪು, ಖಾರ, ಉಳಿದ ಎಲ್ಲಾ ಸಾಮಗ್ರಿ ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.

ಡಲ್ಗೋನಾ ಕೋಲ್ಡ್ ಕಾಫಿ

Khatta-Meetha-Samosa-with-Kairi-onion-Chutney

ಸಾಮಗ್ರಿ : 2 ಚಮಚ ಇನ್‌ಸ್ಟೆಂಟ್‌ ಕಾಫಿ ಪುಡಿ, 3 ಚಮಚ ಸಕ್ಕರೆ, 1 ಗ್ಲಾಸ್‌ (ಫ್ರಿಜ್‌ನಲ್ಲಿರಿಸಿದ್ದ) ಕೋಲ್ಡ್ ಮಿಲ್ಕ್, ತುಸು ಐಸ್‌ ಕ್ಯೂಬ್ಸ್, ಚಾಕೋ ಚಿಪ್ಸ್.

ವಿಧಾನ : ಒಂದು ಬಟ್ಟಲಿಗೆ ಕಾಫಿ ಪುಡಿ, ಸಕ್ಕರೆ, ತುಸು ಬಿಸಿ ನೀರು ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಸರ್ವಿಂಗ್‌ ಕಪ್ಸ್ ಗೆ ಇದನ್ನು ಬಗ್ಗಿಸಿ ಕೋಲ್ಡ್ ಮಿಲ್ಕ್, ಚಾಕೊ ಚಿಪ್ಸ್ ನಿಂದ ತುಂಬಿಸಿ. ಮೇಲೆ ಐಸ್‌ ಕ್ಯೂಬ್ಸ್ ಹಾಕಿ ಸವಿಯಲು ಕೊಡಿ.

ಚಾಕಲೇಟ್‌ ಓರಿಯೋ ಕಾಫಿ

Makai-Kairi-Dhokla

ಸಾಮಗ್ರಿ : ಅಗತ್ಯವಿದ್ದಷ್ಟು ಚಾಕಲೇಟ್‌, ಸಕ್ಕರೆ, ಚಾಕಲೇಟ್‌ ಸಿರಪ್‌, ಐಸ್‌ ಕ್ಯೂಬ್ಸ್, 4-5 ಓರಿಯೋ ಬಿಸ್ಕತ್ತು, ಅರ್ಧ ಚಮಚ ಇನ್‌ಸ್ಟೆಂಟ್‌ ಕಾಫಿ ಪುಡಿ, ವೆನಿಲಾ ಐಸ್‌ ಕ್ರೀಂ, 1 ಕಪ್‌ ಹಾಲು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ