ಕೇಕ್‌ ಬಯಸದೆ ಇರುವವರಾರು? ಮನೆಯಲ್ಲಿ ಈ ತಿನಿಸು ಎಲ್ಲರಿಗೂ ಇಷ್ಟ, ಆದರೆ ಇದನ್ನು ಎಷ್ಟು ಕಷ್ಟಪಟ್ಟು ಮಾಡಿದರೂ ಒಂದಿಲ್ಲೊಂದು ಸಮಸ್ಯೆ ಎದುರಾಗಿ, ಉತ್ತಮ ಸ್ಪಾಂಜಿ ಕೇಕ್‌ ತಯಾರಾಗದು. ಈ ನಿರಾಸೆಗೆ ಕಾರಣ ನಮ್ಮ ಅರೆಕೊರೆ ಮಾಹಿತಿ. ಈಗ ನೀವು ನಿರಾಶರಾಗಬೇಕಿಲ್ಲ. ಈ ಮೂಲಕ ನಿಮಗೆ ಒಳ್ಳೆಯ ಟಿಪ್ಸ್ ನೀಡುತ್ತಿದ್ದೇವೆ. ಇದನ್ನು ಪಾಲಿಸಿ ನೀವು ಮನೆಯಲ್ಲೇ ಉತ್ತಮ ಕೇಕ್‌ ತಯಾರಿಸಬಹುದು :

ಉತ್ತಮ ಗುಣಮಟ್ಟದ, ಬೇಕಿಂಗ್‌ ಪೌಡರ್‌ ಮೈದಾಗಳನ್ನೇ ಆರಿಸಿ.

ಕೇಕ್‌ ತಯಾರಿಗೆ ಮೊದಲು ಎಲ್ಲಾ ತರಹ ರೆಡಿ ಮಾಡಿಟ್ಟುಕೊಳ್ಳಿ. ಮೊಟ್ಟೆ ಫ್ರಿಜ್‌ನಲ್ಲಿ ಇರಿಸಿದ್ದರೆ ಹೊರತೆಗೆದು ಮಾಮೂಲಿ ತಾಪಮಾನಕ್ಕೆ ತರಿಸಬೇಕು. ಸಕ್ಕರೆ ಪುಡಿ ಮಾಡಿಡಿ. ಬೆಣ್ಣೆ, ಹಾಲಿನ ಕೆನೆ, ಕ್ರೀಂ ಇತ್ಯಾದಿಗಳನ್ನು ಕೈಗೆಟುಕುವಂತೆ ಸಿದ್ಧಪಡಿಸಿಕೊಳ್ಳಿ.

ಯಾವ ಪಾತ್ರೆಯಲ್ಲಿ ಕೇಕ್‌ ಮಾಡಬೇಕಿದೋ, ಅದು ಚೆನ್ನಾಗಿ ಒಣಗಿರಬೇಕು. ಕೇಕ್‌ ಮಿಶ್ರಣವನ್ನು ಕಲಸಲು ಸದಾ ಹ್ಯಾಂಡ್ ಮಿಕ್ಸರ್‌ ಬಳಸಬೇಕು. ಕೇಕಿನ ಸಾಮಗ್ರಿ ಅಳೆಯಲು ಪ್ರತ್ಯೇಕ ಗ್ಲಾಸ್‌ ಬಳಸಿರಿ.

ಯಾವ ಕಂಟೇನರ್‌ನಲ್ಲಿ ಕೇಕ್‌ ಬೇಕ್‌ ಆಗಬೇಕೋ, ಅದನ್ನು ಚೆನ್ನಾಗಿ ಒರೆಸಿ, ಒಳಭಾಗವನ್ನು ಬೆಣ್ಣೆಯಿಂದ ಸವರಿಕೊಳ್ಳಿ.

ಓವನ್‌ ತಾಪಮಾನ ಎಂದಿನಂತಿರಬೇಕು. ಅಧಿಕ ಶಾಖ ಇದ್ದಷ್ಟೂ, ಕೇಕ್‌ ಹೊರಭಾಗದಿಂದ ರೋಸ್ಟ್ ಆಗುತ್ತದೆ, ಆದರೆ ಒಳಭಾಗ ಬೆಂದಿರುವುದಿಲ್ಲ.

ಪ್ರೆಶರ್‌ ಕುಕ್ಕರ್‌ನಲ್ಲಿ ಕೇಕ್‌ ಮಾಡುವಾಗ, ಕುಕ್ಕರ್‌ ಬಾಡಿಯನ್ನು ಬಿಸಿ ಮಾಡಿ. ನಂತರ ಯಾವ ಕಂಟೇರ್‌ನಲ್ಲಿ ಕೇಕ್‌ ಮಿಶ್ರಣ ಹಾಕಬೇಕೋ, ಅದರ ಒಳಭಾಗಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿಡಿ. ನಂತರ ಕಂಟೇನರ್‌ನ್ನು ಕುಕ್ಕರ್‌ನಲ್ಲಿರಿಸಿ, ಮುಚ್ಚಳ ಮುಚ್ಚಿರಿಸಿ, 40-45 ನಿಮಿಷ ಹದನಾಗಿ ಬೇಯಿಸಿ. ಆಗ ವೆಯ್ಟ್ ಹಾಕಬಾರದು.

ಕುಕ್ಕರ್‌ನಲ್ಲಿ ಕೇಕ್‌ ಮಾಡುವಾಗಲೂ ಗ್ಯಾಸ್‌ ಉರಿ ಹೆಚ್ಚಿರಬಾರದು, ಒಂದೇ ಸಮ ಮಂದ ಇರಲಿ.

ಕೇಕ್‌ ಸರಿಯಾಗಿ ಬೆಂದಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಅದನ್ನು ಸ್ಟೀಲ್ ‌ಕಡ್ಡಿಯಿಂದ ಚುಚ್ಚಿ ನೋಡಿ. ಸ್ಟೀಲ್ ‌ಕಡ್ಡಿ ಸ್ವಚ್ಛವಾಗಿ ಹೊರಬಂದರೆ, ಕೇಕ್‌ ಬೆಂದಿದೆ ಎಂದರ್ಥ, ಇಲ್ಲದಿದ್ದರೆ ಇನ್ನೂ ಸ್ವಲ್ಪ ಹೊತ್ತು ಬೇಕ್‌ ಆಗಬೇಕು.

ಕೇಕ್‌ ತಯಾರಿಸುವ ಸಂಪೂರ್ಣ ವಿಧಾನ ಖಾತ್ರಿಯಾಗಿರಲಿ. ಅದಕ್ಕೆ ಬೇಕಾದ ಸಾಮಗ್ರಿ, ತಯಾರಿಸುವ ವಿಧಾನ, ಅಗತ್ಯ ಶಾಖ, ಸಮಯ ಇತ್ಯಾದಿ ನೋಡಿಕೊಳ್ಳಿ.

ಸಣ್ಣ ಗಾತ್ರದ ಕೇಕ್‌ ಬೇಗ ಆಗುತ್ತದೆ, ದೊಡ್ಡದಾದಷ್ಟೂ ಹೆಚ್ಚು ಸಮಯ ಹಿಡಿಯುತ್ತದೆ.

ಕೇಕ್‌ ಮೇಲೆ ಐಸಿಂಗ್‌ ಮಾಡುವುದಕ್ಕಾಗಿ ಬೆಣ್ಣೆಯನ್ನು ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಪುಡಿಸಕ್ಕರೆ ಸೇರಿಸಿ ಮತ್ತೆ ಗೊಟಾಯಿಸಿ.

ಚಾಕುವನ್ನು ತುಸು ಬಿಸಿ ಮಾಡಿ ನಂತರ ಕೇಕ್‌ನ್ನು ಕತ್ತರಿಸಬೇಕು.

ಕೇಕ್‌ ತಯಾರಿಯ ವಿಧಾನ ಸಾಮಾನ್ಯವಾಗಿ ಆಂಗ್ಲ ಶಬ್ದಗಳಿಂದ ಹೆಚ್ಚು ತುಂಬಿರುತ್ತದೆ, ಬೇಕಿಂಗ್‌ನ ಇಂಥ ಪದಗಳ ಪರಿಚಯ ನಿಮಗಿರಲಿ :

ಬೀಟಿಂಗ್‌ : ಯಾವುದೇ ಸಾಮಗ್ರಿಯನ್ನು ಚೆನ್ನಾಗಿ ಗೊಟಾಯಿಸುವುದು.

ಫೋಲ್ಡಿಂಗ್‌ : ಚಮಚದಿಂದ ನಿಧಾನವಾಗಿ ಮಿಶ್ರಣ ಕಲಸುವುದು.

ಕೇಕಿನ ಸಂರಕ್ಷಣೆ : ಕೇಕ್‌ನ್ನು ಅಲ್ಯುಮಿನಿಯಂ ಫಾಯಿಲ್ ನಲ್ಲಿ ಸುತ್ತಿ, ತಣ್ಣಗಿನ ಜಾಗದಲ್ಲಿ 2 ವಾರ ಇರಿಸಿಕೊಂಡು ಬಳಸಬಹುದು. ಮತ್ತೇಕೆ ತಡ? ಮೇಲಿನ ವಿಧಾನ ಅನುಸರಿಸಿ ಮನೆಯಲ್ಲೇ ಅಚ್ಚುಕಟ್ಟಾಗಿ ಕೇಕ್‌ ತಯಾರಿಸಿ, ಮೆರ್ರಿ ಕ್ರಿಸ್‌ಮಸ್‌!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ