ಬೆಂಗಾಲಿ ಸ್ಟ್ಯೂ

ಸಾಮಗ್ರಿ : 2 ಉದ್ದಿನ ವಡೆ, ಅರ್ಧ ಕಪ್‌ ಬದನೆ ಹೋಳು, 1 ಸಣ್ಣ ಆಲೂಗಡ್ಡೆ, ಒಂದಿಷ್ಟು ಹೆಚ್ಚಿದ ಬೀನ್ಸ್, ಮೂಲಂಗಿ ತುರಿ, 1 ಕಪ್

ಸುವರ್ಣಗೆಡ್ಡೆ ಹೋಳು, 2 ಹಾಗಲಕಾಯಿ, 1-2 ನುಗ್ಗೇಕಾಯಿ, 1 ಬಾಳೇಕಾಯಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಸಕ್ಕರೆ, ಬೆಂಗಾಲಿ ಪಂಚ್‌ ಮಸಾಲ (ರೆಡಿಮೇಡ್‌ ಲಭ್ಯ), ತುಸು ಶುಂಠಿಯ ಪೇಸ್ಟ್, 1-2 ಪಲಾವ್ ‌ಎಲೆ,

ಒಗ್ಗರಣೆಗೆ ಸಾಮಗ್ರಿ :  ಎಣ್ಣೆ, ಅರ್ಧ ಚಮಚ ಸಾಸುವೆಯ ಪೇಸ್ಟ್.

ವಿಧಾನ : ಮೊದಲು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಇದಕ್ಕೆ ಮೊದಲು ಹೆಚ್ಚಿದ ಹಾಗಲ, ನುಗ್ಗೆಕಾಯಿ.... ಹೀಗೆ ಒಂದೊಂದಾಗಿ ಎಲ್ಲಾ ತರಕಾರಿ ಹಾಕಿ. ಚೆನ್ನಾಗಿ ಬಾಡಿಸಿ, ನೀರು ಚಿಮುಕಿಸಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಾ, ನೀರು ಚಿಮುಕಿಸುತ್ತಾ ಚೆನ್ನಾಗಿ ಬೇಯಿಸಿ. ನಂತರ ಅರಿಶಿನ, ಉಪ್ಪು, ಖಾರ, ಸಕ್ಕರೆ, ಶುಂಠಿ ಪೇಸ್ಟ್, ಎಲ್ಲಾ ಬೆರೆಸಿ. ಅರ್ಧ ಲೋಟ ನೀರು ಹಾಕಿ ಕೆದಕಿ ಕುದಿಯಲು ಬಿಡಿ. ಇನ್ನೊಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸುವೆ ಪೇಸ್ಟ್, ಪಂಚ್‌ ಮಸಾಲ ಹಾಕಿ ಕೆದಕಿ ಈ ಸ್ಟ್ಯೂಗೆ ಬೆರೆಸಿಕೊಳ್ಳಿ. ಎಲ್ಲ ಕುದ್ದು ಗ್ರೇವಿಯಂತೆ ಆದಾಗ ಕೆಳಗಿಳಿಸಿ, ಬಿಸಿಬಿಸಿಯಾಗಿ ಅನ್ನದ ಜೊತೆ ಸವಿಯಲು ಕೊಡಿ.

ತೊಂಡೆ ಮಸಾಲೆ

ಸಾಮಗ್ರಿ : 500 ಗ್ರಾಂ ತೊಂಡೆಕಾಯಿ, 100 ಗ್ರಾಂ ಪನೀರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಂಚ್‌ ಮಸಾಲ, ಸಕ್ಕರೆ, ಶುಂಠಿಯ ಪೇಸ್ಟ್, ತುಸು ಅರಿಶಿನ, 1-2 ಇಡಿಯಾದ ಒಣಮೆಣಸು, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ.

ವಿಧಾನ : ತೊಂಡೆಗಳ ಮೇಲ್ಭಾಗ ಕತ್ತರಿಸಿ, ಅದರ ಒಳಭಾಗ ಟೊಳ್ಳಾಗುವಂತೆ ಬೀಜ, ತಿರುಳು ತೆಗೆದುಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಶುಂಠಿ ಪೇಸ್ಟ್, ಉಪ್ಪು ಖಾರ, ಅರಿಶಿನ, ತುರಿದ ಪನೀರ್‌, ತೊಂಡೆಯ ತಿರುಳು ಬೀಜ ಇತ್ಯಾದಿ ಎಲ್ಲಾ ಹಾಕಿ ಬಾಡಿಸಿ. ಈ ಮಿಶ್ರಣವನ್ನು ಕೆಳಗಿಳಿಸಿ ಆರಲು ಬಿಡಿ. ಟೊಳ್ಳು ತೊಂಡೆಗೆ ಇದನ್ನು ತುಂಬಿಸಿ. ಮತ್ತೆ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ತೊಂಡೆಗಳನ್ನು ಇಡಿಯಾಗಿ ಫ್ರೈ ಮಾಡಬೇಕು. ಮತ್ತಷ್ಟು ಉಪ್ಪು, ಪಂಚ್

ಮಸಾಲ, ಒಣ ಮೆಣಸಿನಕಾಯಿ ಹಾಕಿ ಎಲ್ಲವನ್ನೂ ಒಟ್ಟಾಗಿ ಬಾಡಿಸಿ ಕೆಳಗಿಳಿಸಿ. ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.

ಬಟಾಣಿ ಉಸುಲಿ

ಸಾಮಗ್ರಿ : 1 ಕಪ್‌ ಹಸಿ ಬಟಾಣಿ, ಅರ್ಧರ್ಧ ಕಪ್‌ ಹೆಚ್ಚಿದ ಈರುಳ್ಳಿ, ಟೊಮೇಟೊ, ತೆಂಗಿನ ತುರಿ, ಒಗ್ಗರಣೆ ಸಾಮಗ್ರಿ, ಎಣ್ಣೆ, ಉಪ್ಪು, ಖಾರ, ಅರಿಶಿನ.

ವಿಧಾನ : ಮೊದಲು ಬಟಾಣಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಶುಂಠಿ ಪೇಸ್ಟ್, ಉಪ್ಪು ಖಾರ, ಅರಿಶಿನ ಎಲ್ಲಾ ಹಾಕಿ ಕೆದಕಬೇಕು. ಕೊನೆಗೆ ಬೆಂದ ಬಟಾಣಿ, ತೆಂಗಿನ ತುರಿ ಸೇರಿಸಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ