ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಪ್ರಾಂತ್ಯದ ಜನರಿಗೆ ಬೇರೆ ಬೇರೆ ರೀತಿಯ ಆಹಾರಗಳು ಇಷ್ಟಾಗುತ್ತವೆ. ಆದರೆ ಭಾರತದಾದ್ಯಂತ  ಸ್ನ್ಯಾಕ್ಸ್ ಇಷ್ಟಪಡಲಾಗುತ್ತದೆ. ಸ್ನ್ಯಾಕ್ಸ್ ತಯಾರಿಸುವಾಗ ರುಚಿ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಲಾಗುತ್ತದೆ. ಆದರೆ ಜನರು ಹೇಳುವುದೇನೆಂದರೆ, ಹುರಿದ ಕರಿದ ಪದಾರ್ಥಗಳೇ ರುಚಿಕರವಾಗಿರುತ್ತವೆ ಅಥವಾ ಅವು ಮಸಾಲೆಯುಕ್ತ ಆಗಿರುವುದು ಅತ್ಯವಶ್ಯ. ಈಗ ಎಂತಹ ಕೆಲವು ಪದಾರ್ಥಗಳಿವೆ ಎಂದರೆ, ಅವುಗಳಿಂದ ನೀವು ತ್ವರಿತವಾಗಿ ಸ್ನ್ಯಾಕ್ಸ್ ತಯಾರಿಸಬಹುದು. ಅವು ಯಾವುದೇ ಸ್ನ್ಯಾಕ್ಸ್ ನ ರುಚಿಗಿಂತ ಕಡಿಮೆ ಏನಿರುವುದಿಲ್ಲ.

ಆದರೆ ಈ ಸ್ನ್ಯಾಕ್ಸ್ ನಲ್ಲಿ ಆರೋಗ್ಯಭರಿತ ಪದಾರ್ಥಗಳನ್ನು ಹಾಕಬೇಕು. ಬಟರ್‌, ಮೆಯೋನೀಸ್‌ ಹಾಗೂ ರೀಫೈಂಡ್‌ ಆಯಿಲ್‌ನ ಹಾಗೆ ಆಲಿವ್ ‌ಆಯಿಲ್‌, ಸಂಪೂರ್ಣ ಗೋಧಿಯಿಂದ ತಯಾರಿಸಿದ ನೂಡಲ್ಸ್ ಮತ್ತು ಪಾಸ್ತಾದಂತಹ ಬಗೆಬಗೆಯ ಪದಾರ್ಥಗಳನ್ನು ಬಳಸಬಹುದು. ಸಕ್ಕರೆಯ ಬದಲು ಬ್ರೌನ್‌ ಶುಗರ್‌, ಮೇಲೆ ಗೋಡಂಬಿ, ಒಣದ್ರಾಕ್ಷಿ ಹಾಕಬಹುದು. ಸಲಾಡ್‌ನ ಹೆವಿ ಡ್ರೆಸಿಂಗ್‌ನ ಬದಲು ಎಕ್ಸ್ ಟ್ರಾ ವರ್ಜಿನ್‌ ಆಲಿವ್‌, ಒಣ ಹಣ್ಣುಗಳನ್ನು ಸೇರಿಸಿ.

ನೀವು ಇಷ್ಟಪಟ್ಟರೆ ಪಾಸ್ತಾ ಮತ್ತು ಆಯ್ದ ಡ್ರೈ ಫ್ರೂಟ್ಸ್ ನಿಂದ ಕೆಲವು ರುಚಿಕರ ಸ್ನ್ಯಾಕ್ಸ್ ಸಿದ್ಧಪಡಿಸಬಹುದು. ಚೆನ್ನಾಗಿ ಕುದಿಸಿದರೆ ಸ್ವಾದಿಷ್ಟಕರ ರುಚಿ ಮತ್ತು ಸುವಾಸನೆಯ ಜೊತೆ ಜೊತೆಗೆ ಆರೋಗ್ಯಕರ ಲಾಭ ಪಡೆದುಕೊಳ್ಳಬಹುದು. ಕೆಲವು ಆರೋಗ್ಯಕರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಿ.

ಪಾಪ್‌ ಕಾರ್ನ್‌ : ಇದರಲ್ಲಿ ನಾರಿನಂಶದ ಜೊತೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಕೂಡ ಇರುತ್ತದೆ. ಇದೊಂದು ಸಾಮಾನ್ಯ ಕುರುಕಲು ತಿಂಡಿ ಅನ್ನಿಸಬಹುದು. ಆದರೆ ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಇವೆ. ಇತ್ತೀಚಿನ ದಿನಗಳಲ್ಲಿ ಪಾಪ್‌ ಕಾರ್ನ್‌ ಬಟರ್‌ ಮತ್ತು ಕರಿಮೆಣಸಿನ ಜೊತೆಗೆ ತಯಾರಿಸುವ ಪದ್ಧತಿ ಶುರುವಾಗಿದೆ. ಆದರೆ ಇದರಲ್ಲಿರುವ ಹೆಚ್ಚುವರಿ ಬೆಣ್ಣೆ ಆರೋಗ್ಯ ಸಂಬಂಧಿ ಲಾಭಗಳನ್ನು ಕಡಿಮೆ ಮಾಡುತ್ತದೆ. ಬೆಣ್ಣೆಯ ಬದಲಿಗೆ ಆಲಿವ್ ‌ಆಯಿಲ್‌ನ್ನು ಉಪಯೋಗಿಸಬಹುದು.

ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿಕೊಳ್ಳಿ. ವಿಶಿಷ್ಟ ಮೈಕ್ರೋವೇವ್‌ನಲ್ಲಿ ಸಿದ್ಧಪಡಿಸುವ ಪಾಪ್‌ ಕಾರ್ನ್‌ಗೆ ಕೊಬ್ಬಿನಂಶ ಸೇರ್ಪಡೆ ಮಾಡಲಾಗುತ್ತದೆ. ಅಂದಹಾಗೆ ಕೊಬ್ಬಿನ ಜೊತೆ ಜೊತೆಗೆ ಕ್ಯಾಲೋರಿ ಹೆಚ್ಚು ಅಪಾಯವಿರುತ್ತದೆ.

ಪಾಪ್‌ ಕಾರ್ನ್‌ನ ಮುಖ್ಯ ಪೋಷಕಾಂಶಗಳು ಅದರ ಹೊರಭಾಗದ ಕವಚದಲ್ಲಿ ಇರುತ್ತವೆ. ನಿಮ್ಮ ಮನಸ್ಸು ಮಸಾಲೆಯುಕ್ತ ಪಾಪ್‌ಕಾರ್ನ್‌ನ್ನು ಸವಿಯಬೇಕೆಂದಿದ್ದಲ್ಲಿ ಬ್ರೌನ್‌ ಶುಗರ್‌ ಜೊತೆಗೆ ಅದರ ಸಾಸ್‌ ತಯಾರಿಸಿಕೊಳ್ಳಿ ಮತ್ತು ಚಿಲಿ ಫ್ಲೇಕ್ಸ್ ಹಾಕಿ ಅದರ ಸುವಾಸನೆಯನ್ನು ಹೆಚ್ಚಿಸಿಕೊಳ್ಳಿ. ಈ ಪಾಪ್‌ ಕಾರ್ನ್‌ ನಿಮಗೆ ಏಕಕಾಲಕ್ಕೆ ಸಿಹಿ ಮತ್ತು ಉಪ್ಪಿನ ರುಚಿ ಕೊಡುತ್ತವೆ. ರುಚಿಗಾಗಿ ಬಿಳಿ ಸಕ್ಕರೆ ಬದಲು ಬ್ರೌನ್‌ ಶುಗರ್‌ ಉಪಯುಕ್ತ ಎನಿಸುತ್ತದೆ.

1 ಕಪ್‌ ಪಾಪ್‌ ಕಾರ್ನ್‌ನಲ್ಲಿ ಸುಮಾರು 30-35 ಕ್ಯಾಲೋರಿ ಶಕ್ತಿ ಇರುತ್ತದೆ. ನೀವು ಇಷ್ಟಪಟ್ಟರೆ ಸ್ವಲ್ಪ ಆಲಿವ್ ಆಯಿಲ್‌ನ್ನು ಮೇಲೆ ಸಿಂಪಡಿಸಿಕೊಂಡು ಮೆಡಿಟರೇನಿಯನ್‌ ರುಚಿಯನ್ನು ಪಡೆಯಬಹುದು.

ನೀವು ಅಡುಗೆಮನೆಗೆ ಹೆಜ್ಜೆ ಇಟ್ಟಾಗ ನಿಮ್ಮ ಎದುರಿಗಿನ ಶೆಲ್ಫಿನಲ್ಲಿ ಈ ಎಲ್ಲ ಸಲಕರಣೆಗಳು ಇದ್ದರೆ ನೀವು ಆರೋಗ್ಯಕರ ಸ್ನ್ಯಾಕ್ಸ್ ನ್ನು ಅವಶ್ಯವಾಗಿ ತಯಾರಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ