ಕಾಶ್ಮೀರಿ ದಮ್ ಆಲೂ
ಸಾಮಗ್ರಿ : 500 ಗ್ರಾಂ ಸಣ್ಣ ಗಾತ್ರದ ಆಲೂಗಡ್ಡೆ, 1 ಬಟ್ಟಲು ಹುಳಿ ಮೊಸರು, 2-2 ಚಮಚ ಸಾಸುವೆ/ಎಳ್ಳಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಖಾರ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಗರಂಮಸಾಲ, ಏಲಕ್ಕಿ, ಕಾಶ್ಮೀರಿ ರೆಡ್ ಚಿಲೀ ಪೌಡರ್, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪ್ಯೂರಿ, ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಹಸಿಮೆಣಸು, 2-3 ಹೆಚ್ಚಿದ ಈರುಳ್ಳಿ.
ವಿಧಾನ : ಆಲೂ ತೊಳೆದು ಕುಕ್ಕರ್‌ನಲ್ಲಿ ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ಬೇರ್ಪಡಿಸಿ ಇಡಿಯಾಗಿ ಹಾಗೇ ಇಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆಯ ಒಗ್ಗರಣೆ ಕೊಡಿ. ನಂತರ ಇದಕ್ಕೆ ಕರಿಬೇವು, ಹಸಿಮೆಣಸು, ಶುಂಠಿ/ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೆದಕಬೇಕು. ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಮೊಸರು ಬೆರೆಸಿ ಲಘುವಾಗಿ ಕುದಿಸಬೇಕು. ನಂತರ ಇದಕ್ಕೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಸೇರಿಸಿ ನಿಧಾನವಾಗಿ ಕೆದಕಬೇಕು. 5 ನಿಮಿಷ ಕುದಿಸಿ ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಚಪಾತಿ, ಬಿಸಿ ಅನ್ನದ ಜೊತೆ ಸವಿಯಿರಿ.
ಶುಂಠಿ ಸ್ಪೆಷಲ್
ಸಾಮಗ್ರಿ : 100 ಗ್ರಾಂ ಹಸಿ ಶುಂಠಿ, 5-6 ಎಸಳು ಬೆಳ್ಳುಳ್ಳಿ. 1 ಈರುಳ್ಳಿ, 1 ಟೊಮೇಟೊ, ತುಸು ಹಾಲುತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಸೋಂಪು, ಅಲಂಕರಿಸಲು ಒಂದಿಷ್ಟು ತುರಿದ ಶುಂಠಿ, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಟೊಮೇಟೊ ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ತುಸು ರೀಫೈಂಡ್ ಎಣ್ಣೆ ಬಿಸಿ ಮಾಡಿ ಜೀರಿಗೆ, ಸೋಂಪು ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಸಿಪ್ಪೆ ಹೆರೆದು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಈರುಳ್ಳಿ, ಟೊಮೇಟೊ ಸೇರಿಸಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ ಹಾಕಿ ಕೆದಕಬೇಕು. ಆಮೇಲೆ ತುಸು ನೀರು ಬೆರೆಸಿ, ಎಲ್ಲ ಚೆನ್ನಾಗಿ ಕುದಿಯುವಂತೆ ಮಾಡಿ. ಇದಕ್ಕೆ ಹಾಲು ಬೆರೆಸಿ ಇನ್ನಷ್ಟು ಕುದಿಸಿ. ಕೆಳಗಿಳಿಸಿದ ಮೇಲೆ ಚಿತ್ರದಲ್ಲಿರುವಂತೆ ಕೊ.ಸೊಪ್ಪು, ತುರಿದ ಶುಂಠಿ ಉದುರಿಸಿ ಅಲಂಕರಿಸಿ ಬಿಸಿ ಬಿಸಿಯಾಗಿ ಇಡ್ಲಿ, ದೋಸೆ ಜೊತೆ ಸವಿಯಲು ಕೊಡಿ.
ಮೂಲಂಗಿ ಮಲಾಯಿ ಕೋಫ್ತಾ
ಮೂಲ ಸಾಮಗ್ರಿ : 500 ಗ್ರಾಂ ಮೂಲಂಗಿ, 200 ಗ್ರಾಂ ಬೇಯಿಸಿ ಮಸೆದ ಆಲೂ, 2-3 ಈರುಳ್ಳಿ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಓಮ, ಅರ್ಧ ಕಪ್ ಗೋದಿಹಿಟ್ಟು, ತುಸು ಮೈದಾ, ಕರಿಯಲು ಎಣ್ಣೆ.
ಗ್ರೇವಿಯ ಸಾಮಗ್ರಿ : 2-3 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, 2-3 ಈರುಳ್ಳಿ, 50 ಗ್ರಾಂ ಟೊಮೇಟೊ ಪ್ಯೂರಿ, 2 ಅಖರೋಟ್, 5-6 ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಏಲಕ್ಕಿಪುಡಿ, ಜೀರಿಗೆ ಪುಡಿ, ಅರ್ಧ ಸೌಟು ಎಣ್ಣೆ, ತುಸು ಹಾಲಿನ ಕೆನೆ, 2 ಲವಂಗದೆಲೆ, ಒಂದಿಷ್ಟು ಮೊಸರು, ಹೆಚ್ಚಿದ ಕೊ.ಸೊಪ್ಪು, 2 ಚಿಟಕಿ ಗಸಗಸೆ.