ಖರ್ಜೂರ ಸ್ವಾದಿಷ್ಟ ಆಗಿರುವುದರ ಜೊತೆಯಲ್ಲೇ ಬಹಳ ಆರೋಗ್ಯಕರ ಹೌದು. ಇದು ರುಚಿಯಲ್ಲಿ ಬಲು ಸಿಹಿ, ಹೀಗಾಗಿ ಸಕ್ಕರೆ ಬದಲು ಇದನ್ನು ಸುಲಭವಾಗಿ ಸಿಹಿ ತಿನಿಸು ತಯಾರಿಸಲು ಬಳಸಬಹುದು. ಖರ್ಜೂರ ಒಣ/ಹಸಿ ರೂಪದಲ್ಲಿ, ಬೀಜಸಹಿತ/ರಹಿತ ಆಗಿಯೂ ದೊರಕುತ್ತದೆ.

ಖರ್ಜೂರದಲ್ಲಿ ಅಧಿಕ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಲಭ್ಯವಿದ್ದು, ಇದು ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್ ನಿಂದ ರಕ್ಷಿಸಲು ಸಹಕಾರಿ.

ಖರ್ಜೂರದಲ್ಲಿ ಮೆಗ್ನೀಶಿಯಂ ಅಡಗಿದ್ದು, ಇದು ನಮ್ಮ ಬಿ.ಪಿ.ಯನ್ನು ಸಮತೋಲನದಲ್ಲಿಟ್ಟು, ಆರ್ಥ್‌ ರೈಟಿಸ್‌, ಆಲ್ಝೈಮರ್‌ ನಂತ ರೋಗಗಳಿಂದಲೂ ದೂರವಿಡುತ್ತದೆ.

ಇದರಲ್ಲಿ ಧಾರಾಳವಾಗಿ ನಾರಿನಂಶವಿದ್ದು, ನಮ್ಮ ಪಚನ ತಂತ್ರವನ್ನು ಸ್ಥಿರವಾಗಿಡುವಲ್ಲಿ ಸಹಕಾರಿ. ಇದರಿಂದ ಮಲಬದ್ಧತೆ ನಮ್ಮನ್ನೆಂದೂ ಕಾಡದು.

ಇದರಲ್ಲಿ ಧಾರಾಳ ಕಬ್ಬಿಣಾಂಶ ಅಡಗಿದ್ದು, ಅದು ಅನೀಮಿಯಾ ಓಡಿಸಿ, ದೇಹದಲ್ಲಿ ಹಿಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚಿಸುತ್ತದೆ.

ಇದು ನಮ್ಮ ಮಾಂಸಖಂಡಗಳನ್ನು ಸಶಕ್ತಗೊಳಿಸಿ, ಚರ್ಮ ಕೂದಲಿಗೆ ಹೊಳಪನ್ನು ತುಂಬುತ್ತದೆ.

ಹೇಗೆ ಸೇವಿಸಬೇಕು?

Nariyal-Khajur

ಖರ್ಜೂರವನ್ನು ನೇರವಾಗಿ ಸಿಹಿಯ ರೂಪದಲ್ಲಿಯೇ ಸೇವಿಸಬಹುದು, ಆದರೆ ಪ್ರತಿದಿನ ಇದನ್ನು ಒಂದೇ ರೀತಿಯಲ್ಲಿ ಸೇವಿಸುವುದು ಬೋರ್‌ ಎನಿಸುತ್ತದೆ.  ಹಾಗಿದ್ದರೆ ಇದನ್ನು ನಮ್ಮ ದೈನಂದಿನ ಆಹಾರ ಆಗಿಸಿಕೊಳ್ಳಲು ಏನು ಮಾಡಬೇಕೆಂದು ನೋಡೋಣವೇ?

ಹಸಿ ಖರ್ಜೂರವನ್ನು ಹಾಲಲ್ಲಿ ನೆನೆಸಿ, ಮಿಕ್ಸಿಯಲ್ಲಿ ತಿರುವಿಕೊಂಡು, ಮಿಲ್ಕ್ ಶೇಕ್‌ ಆಗಿ ಸೇವಿಸಿ.

ಇದನ್ನು ಸಣ್ಣದಾಗಿ ಹೆಚ್ಚಿ ಮೊಸರಿನಲ್ಲಿ ಬೆರೆಸಿಕೊಂಡು, 1 ಗಂಟೆ ಕಾಲ ನೆನೆಯಲು ಬಿಟ್ಟು, ರಾಯ್ತಾ, ಸಲಾಡ್‌ ಗೆ ಬಳಸಿಕೊಳ್ಳಿ. ಖರ್ಜೂರದ ಉತ್ತಮ ಅಂಶಗಳೆಲ್ಲ ಮೊಸರಿಗೆ ಬಂದಿರುತ್ತದೆ.

ಸಕ್ಕರೆ ಬಳಸಬೇಕಾದ ಕಡೆಯೆಲ್ಲ ಖರ್ಜೂರ ಬಳಸಿಕೊಳ್ಳಿ. ಆಗ ನೀವು ಸ್ವಾದಿಷ್ಟ ಬರ್ಫಿ, ರೋಲ್ಸ್, ಲಡ್ಡು ತಯಾರಿಸಬಹುದು.

250 ಗ್ರಾಂ ಹಸಿ ಖರ್ಜೂರವನ್ನು ಸಣ್ಣದಾಗಿ ಹೆಚ್ಚಿ 4 ನಿಂಬೆಹಣ್ಣುಗಳ ರಸದಲ್ಲಿ ನೆನೆಹಾಕಿಡಿ. ಇದಕ್ಕೆ ರುಚಿಗೆ ತಕ್ಕಷ್ಟು ಬ್ಲ್ಯಾಕ್‌ ಸಾಲ್ಟ್, ಪುಡಿಮೆಣಸು, ಹುರಿದು ಪುಡಿ ಮಾಡಿದ ಜೀರಿಗೆ ಬೆರೆಸಿಕೊಳ್ಳಿ.

ಸಮ ಪ್ರಮಾಣದಲ್ಲಿ ಹುಣಿಸೆ ಕಿವುಚಿದ ರಸಕ್ಕೆ ಹಸಿ ಖರ್ಜೂರದ ಪೇಸ್ಟ್ ಬೆರೆಸಿಕೊಳ್ಳಿ. ಇದಕ್ಕೆ ಉಪ್ಪು, ಖಾರ ಬೆರೆಸಿ ಟೇಸ್ಟಿ ಚಟ್ನಿ ರೆಡಿ ಮಾಡಿ.

ಖರ್ಜೂರದ ಲಡ್ಡು!

Khajoor-Laddu

ಸಾಮಗ್ರಿ : ಒಂದಿಷ್ಟು ಬೀಜರಹಿತ ಹಸಿ ಖರ್ಜೂರ, ತುಪ್ಪ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಚೂರು, 1 ಗಿಟುಕು ಕೊಬ್ಬರಿ ತುರಿ, 3-4 ಚಮಚ ಗಸಗಸೆ, 1 ಕಪ್‌ ಗಟ್ಟಿ ಹಾಲು.

ವಿಧಾನ : ಕಾದಾರಿದ ಹಾಲಿನಲ್ಲಿ ಖರ್ಜೂರವನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಈ ಖರ್ಜೂರದ ಪೇಸ್ಟ್ ಬೆರೆಸಿ ಗಟ್ಟಿ ಆಗುವವರೆಗೂ ಹದವಾಗಿ ಬಾಡಿಸಿ. ಪಕ್ಕದ ಒಲೆಯಲ್ಲಿ ಸಣ್ಣ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಡ್ರೈಫ್ರೂಟ್ಸ್, ಗಸಗಸೆ, ಕೊಬ್ಬರಿ ತುರಿ ಹಾಕಿ ಹುರಿಯಿರಿ. ಖರ್ಜೂರದ ಮಿಶ್ರಣ ಜಿಡ್ಡು ಬಿಟ್ಟುಕೊಂಡಾಗ ಅದಕ್ಕೆ ಈ ಕೊಬ್ಬರಿ ಮಿಶ್ರಣ ಸೇರಿಸಿ. 2 ನಿಮಿಷ ಕೆದಕಿ ಕೆಳಗಿಳಿಸಿ. ಆರಿದ ನಂತರ ತುಪ್ಪ ಸವರಿದ ಕೈಗಳಿಂದ ಉಂಡೆ ಕಟ್ಟಿ, ಲಡ್ಡು ಮಾಡಿ, ಇನ್ನಷ್ಟು ಗಸಗಸೆಯಲ್ಲಿ ಹೊರಳಿಸಿ. ಏರ್‌ ಟೈಟ್‌ ಡಬ್ಬದಲ್ಲಿ ತುಂಬಿರಿಸಿ, ಮಕ್ಕಳು ಬಯಸಿದಾಗ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ