ಫ್ರೈಡ್ ಕಾರ್ನ್
ಸಾಮಗ್ರಿ : 250 ಗ್ರಾಂ ಮುಸುಕಿನ ಜೋಳದ ತಾಜಾ ಕಾಳು, ಅರ್ಧ ಕಪ್ ಕಾರ್ನ್ ಪೆ್ಲೕರ್, ರುಚಿಗೆ ತಕ್ಕಷ್ಟು ಅಕ್ಕಿಹಿಟ್ಟು, ಉಪ್ಪು, ಖಾರ, ಕಾಳುಮೆಣಸಿನಪುಡಿ, ಕರಿಯಲು ಎಣ್ಣೆ.
ವಿಧಾನ : ಮೊದಲು ಕಾಳನ್ನು ಬಿಸಿ ನೀರಿಗೆ ಹಾಕಿ 2-3 ನಿಮಿಷ ಬೇಯಿಸಿ. (ಬ್ಲಾಂಚ್ ಗೊಳಿಸಿ) ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಬೋಂಡ ಹಿಟ್ಟಿನ ಮಿಶ್ರಣದಂತೆ ಕಲಸಿಡಿ. ಇದರಲ್ಲಿ ಕಾಳು ಬೆರೆಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ.
ಫ್ರೂಟಿ ಐಸ್ ಕ್ರೀಂ
ಸಾಮಗ್ರಿ : 1 ಮಾಗಿದ ಮಾವಿನಹಣ್ಣು, 2 ಕಿವೀ ಫ್ರೂಟ್ಸ್, ಅರ್ಧ ಕಪ್ ಸೀಡ್ಲೆಸ್ ದಾಳಿಂಬೆ ಹರಳು, 1 ಸೇಬು, 2 ಮಾಗಿದ ಬಾಳೆಹಣ್ಣು, 2 ಸಪೋಟ, 1 ಕಪ್ ಪರಂಗಿ ಹಣ್ಣಿನ ಹೋಳು, 250 ಗ್ರಾಂ ವೆನಿಲಾ ಐಸ್ ಕ್ರೀಂ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ ಚೂರು.
ವಿಧಾನ : ಎಲ್ಲಾ ಹಣ್ಣುಗಳನ್ನೂ ಹೋಳು ಮಾಡಿ ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ನೀಟಾಗಿ ಬೀಟ್ ಮಾಡಿದ ಐಸ್ ಕ್ರಿಂ, ಚಿಟಕಿ ಉಪ್ಪು, ಮೆಣಸು, ಗೋಡಂಬಿ, ದ್ರಾಕ್ಷಿ ಚೂರು ಇತ್ಯಾದಿ ಬೆರೆಸಿ ಫ್ರೂಟ್ ಸಲಾಡ್ ಆಗಿ ಸರ್ವ ಮಾಡಿ.
ಎಳ್ಳು ಪನೀರ್ ಕ್ಯೂಬ್ಸ್
ಸಾಮಗ್ರಿ : 300 ಗ್ರಾಂ ಪನೀರ್ ತುಂಡು, ಅರ್ಧ ಕಪ್ ನೈಲಾನ್ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ರೆಡ್ ಚಿಲೀ ಸಾಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಎಣ್ಣೆ, ಅಲಂಕರಿಸಲು ಟೊಮೇಟೊ, ಚಟ್ನಿ.
ವಿಧಾನ : ಮೊದಲು ಒಂದು ಬಟ್ಟಲಿಗೆ ಟೊಮೇಟೊ, ಚಿಲೀ ಸಾಸ್, ಉಪ್ಪು, ಮೆಣಸು ಬೆರೆಸಿಕೊಂಡು ಅದನ್ನು ಪನೀರ್ ತುಂಡುಗಳಿಗೆ ಸವರಿಕೊಳ್ಳಿ. ನಂತರ ಅದನ್ನು ಎಳ್ಳಿನಲ್ಲಿ ಚೆನ್ನಾಗಿ ಹೊರಳಿಸಿ. ಆಮೇಲೆ ಒಂದು ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಇದಕ್ಕೆ ಪನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಶ್ಯಾಲೋ ಫ್ರೈ ಮಾಡಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಚಟ್ನಿ ಜೊತೆ ಸವಿಯಲು ಕೊಡಿ.
ಬಿಸ್ಕತ್ತಿನ ಲಡ್ಡು
ಸಾಮಗ್ರಿ : 12-15 ಡೈಜೆಸ್ಟಿವ್ ಬಿಸ್ಕೆಟ್ಸ್, 150 ಗ್ರಾಂ ಮಿಲ್ಕ್ ಮೆಯ್ಡ್, 1 ಗಿಟುಕು ಕೊಬ್ಬರಿ ತುರಿ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ ಚೂರು 4 ಚಮಚ ಟೂಟಿ ಫ್ರೂಟಿ, ತುಸು ಏಲಕ್ಕಿ ಪುಡಿ.
ವಿಧಾನ : ಡ್ರೈ ಮಿಕ್ಸಿಗೆ ಬಿಸ್ಕತ್ತು ಮುರಿದು ಹಾಕಿ ತರಿ ತರಿ ಆಗಿಸಿ. ಒಂದು ಬಟ್ಟಲಿಗೆ ಮಿಲ್ಕ್ ಮೆಯ್ಡ್ ಮತ್ತು ಇತರ ಎಲ್ಲಾ ಸಾಮಗ್ರಿ ಬೆರೆಸಿ, ತುಪ್ಪದ ಕೈ ಮಾಡಿಕೊಳ್ಳುತ್ತಾ, ಬೇಗ ಬೇಗ ಉಂಡೆ ಕಟ್ಟಿ. ಇದೀಗ ಬಿಸ್ಕತ್ತಿನ ಲಡ್ಡು ರೆಡಿ!
ಬ್ರೋಕನ್ ವೀಟ್ ಹುಗ್ಗಿ