ಹಬ್ಬದ ದಿನಗಳಲ್ಲಿ ತಯಾರಾಗುವ ಸಿಹಿ ತಿಂಡಿಗಳ ರುಚಿ ಹೇಗಿರುತ್ತದೆಂದರೆ, ಅವನ್ನು ತಿನ್ನಲು ನಮ್ಮನ್ನು ನಾವು ನಿಯಂತ್ರಣ ಮಾಡಿಕೊಳ್ಳುವುದು ಕಷ್ಟವೇ ಸರಿ. ಅವುಗಳಲ್ಲಿ ಹೆಚ್ಚಿನ ತಿಂಡಿಗಳು ಎಣ್ಣೆಯಲ್ಲಿ ಕರಿಯಲ್ಪಟ್ಟಿರುತ್ತವೆ. ಇಲ್ಲಿ ಅತಿಯಾಗಿ ಸಿಹಿಯಾಗಿರುತ್ತವೆ. ಅಂತಹ ಪದಾರ್ಥಗಳ ಅತಿಯಾದ ಸೇವನೆ ಗ್ಯಾಸ್ ಹಾಗೂ ಅಜೀರ್ಣದ ಸಮಸ್ಯೆಗೆ ಆಮಂತ್ರಣ ಕೊಟ್ಟಂತೆ.
ಗ್ಯಾಸ್ ಹಾಗೂ ಅಜೀರ್ಣ ಸಮಸ್ಯೆಯಿಂದ ಹೊರಬರುವ ಕೆಲವು ಉಪಾಯಗಳು ಹೀಗಿವೆ :
ಅಜೀರ್ಣಕ್ಕೆ ಏನು ಕಾರಣ?
ದೈನಂದಿನ ಜೀವನದಲ್ಲಿ ಅಜೀರ್ಣ ಹಾಗೂ ಗ್ಯಾಸ್ ಸಮಸ್ಯೆ ಉಂಟಾಗಲು ಕೆಳಕಂಡ ಕಾರಣಗಳಿರಬಹುದು.
ಅನಿಯಮಿತ ನಿದ್ದೆ.
ಆಹಾರದಲ್ಲಿ ಮಸಾಲೆ ಹಾಗೂ ಎಣ್ಣೆಯನ್ನು ಅಧಿಕವಾಗಿ ಬಳಸಿರುವುದು.
ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು.
ಎರಡು ಆಹಾರಗಳ ನಡುವೆ ಹೆಚ್ಚು ಅಂತರವಿರುವುದು.
ಆಹಾರವನ್ನು ಬೇಗ ಬೇಗ ಅಗಿದು ತಿನ್ನುವುದು.
ಹೊಗೆಸೊಪ್ಪು, ಮದ್ಯ ಸೇವನೆ.
ಇವುಗಳ ಸೇವನೆ ಮಾಡಿ
ಆಹಾರ ಸೇವನೆಯ ಬಳಿಕ ಬೆಲ್ಲ ಸೇವಿಸಿ, ಅದರಿಂದ ಆಹಾರ ಪಚನ ಸುಲಭವಾಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ಸಾಧಾರಣ ಬೆಚ್ಚಗಿನ ನೀರಿನ ಸೇವನೆಯಿಂದ ಅಸಿಡಿಟಿ ಕಡಿಮೆಯಾಗುತ್ತದೆ.
ಆಹಾರ ಸೇವನೆಯ ಬಳಿಕ ಲವಂಗ ಚೀಪುದರಿಂದ ತಕ್ಷಣ ಪರಿಹಾರ ಸಿಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಸೇವನೆಯಿಂದ ಅಸಿಡಿಟಿಯ ಸಮಸ್ಯೆ ನಿವಾರಣೆಯಾಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಆ ನೀರನ್ನು ಕೂಡ ಕುಡಿಯಬಹುದು.
ಆಹಾರ ಸೇವನೆಯ ಬಳಿಕ ಸೋಂಪು ಸೇವನೆಯಿಂದ ಅಸಿಡಿಟಿಯಿಂದ ನಿರಾಳತೆ ದೊರಕುತ್ತದೆ.
ಅಸಿಡಿಟಿ ಉಂಟಾದಾಗ ಆಲೂಗಡ್ಡೆಯನ್ನು ಬೇಯಿಸಿ, ಅದರ ಸಿಪ್ಪೆ ತೆಗೆದು ಅದರಲ್ಲಿ ಉಪ್ಪು ಹಾಗೂ ಸ್ವಲ್ಪ ಖಾರ ಲೇಪಿಸಿ ತಿನ್ನುವುದರಿಂದಲೂ ತಕ್ಷಣವೇ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಅಸಿಡಿಟಿ ಉಂಟಾದಾಗ ಒಂದು ಚಿಟಕಿಯಷ್ಟು ಸೋಡಾ ಹಾಗೂ ಅರ್ಧ ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಹಾಗೂ 8 ಹನಿ ನಿಂಬೆರಸ ಮತ್ತು ಸ್ವಲ್ಪ ಉಪ್ಪನ್ನು ಅರ್ಧ ಗ್ಲಾಸ್ ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.
ಒಣದ್ರಾಕ್ಷಿಯನ್ನು ಹಾಲಿನಲ್ಲಿ ಬೇಯಿಸಿ ಹಾಗೂ ತಂಪುಗೊಳಿಸಿದ ಬಳಿಕ ಕುಡಿಯಿರಿ. ಇದು ಕೂಡ ಒಳ್ಳೆಯ ಉಪಾಯ.
ಹಸಿಶುಂಠಿ ರಸದಲ್ಲಿ ಇಂಗು, ಸೈಂಧವ ಲವಣ ಮಿಶ್ರಣ ಮಾಡಿ ಕುಡಿಯುವುದರಿಂದಲೂ ಗ್ಯಾಸ್ ಸಮಸ್ಯೆಯಿಂದ ಸಾಕಷ್ಟು ನಿರಾಳತೆ ದೊರಕುತ್ತದೆ.
ಪ್ರತಿದಿನ ಬಾಳೆಹಣ್ಣು ಸೇವನೆಯಿಂದಲೂ ಅಸಿಡಿಟಿ ಸಮಸ್ಯೆ ಕ್ರಮೇಣ ನಿವಾರಣೆಯಾಗುತ್ತದೆ.
ಬೆಳಗಿನ ನೀರಿನ ಜೊತೆಗೆ ಜೀರಿಗೆ ಅಗಿದು ತಿನ್ನುವುದರಿಂದಲೂ ಗ್ಯಾಸ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
1 ಚಮಚ ಮೆಂತ್ಯಕಾಳು ಹಾಗೂ 1 ಚಿಟಕಿ ಇಂಗು ಬೆರೆಸಿ ಪುಡಿ ಮಾಡಿಕೊಂಡು, ಸಾಧಾರಣ ಬೆಚ್ಚಗಿನ ನೀರಿನ ಜೊತೆ ಸೇವಿಸಿದರೆ ಗ್ಯಾಸ್ ಸಮಸ್ಯೆ ಸಾಕಷ್ಟ ಕಡಿಮೆಯಾಗುತ್ತದೆ.
ಏನನ್ನು ತಿನ್ನಬಾರದು?
ಪ್ರೋಜನ್ ಪೌಲ್ಟ್ರಿ ಅಥವಾ ಡೇರಿ ಉತ್ಪನ್ನಗಳಲ್ಲಿ ಪ್ರೋಟೀನ್ ಹಾಗೂ ಫ್ಯಾಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವನ್ನು ಪಚನ ಮಾಡಿಕೊಳ್ಳುವುದು ಕಷ್ಟಕರ.
ಬಿಳಿ ಸಕ್ಕರೆ ಅಥವಾ ಅದರಿಂದ ತಯಾರಾದ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಿ.
ನಿಂಬೆ, ದ್ರಾಕ್ಷಿ, ದಾಳಿಂಬೆ ಹಾಗೂ ಸೇಬುಹಣ್ಣನ್ನು ಸಮತೋಲನ ಪ್ರಮಾಣದಲ್ಲಿ ಸೇವಿಸಿ. ಇವುಗಳ ಅಗತ್ಯಕ್ಕಿಂತ ಹೆಚ್ಚು ಸೇವನೆ ಲಾಭಕ್ಕಿಂತ ಹಾನಿ ಮಾಡುವುದೇ ಹೆಚ್ಚು.