ಮಗುವಿಗೆ ಜನ್ಮ ನೀಡಿದ ನಂತರ ಸಾಮಾನ್ಯವಾಗಿ ಮಹಿಳೆಯರು ಅಪೌಷ್ಟಿಕತೆಗೆ ಒಳಗಾಗುತ್ತಾರೆ. ಈ ಸಮಸ್ಯೆ ಎದುರಿಸುವುದು ಕಷ್ಟವೆನಿಸುತ್ತದೆ. ಮಗು ಹುಟ್ಟಿದ  ತಕ್ಷಣ ಅಪೌಷ್ಟಿಕತೆಯ ಕೆಟ್ಟ ಪರಿಣಾಮ ತಾಯಿ ಮಗುವಿನ ಮೇಲೆ ನೇರ ಆಗುತ್ತದೆ. ಗರ್ಭಾವಸ್ಥೆ ಮತ್ತು ಅದರ ನಂತರ ಆಗುವ ಅಪೌಷ್ಟಿಕತೆ ಮಗುವಿಗಂತೂ ಘಾತಕವೇ ಆಗಬಹುದು. ಗರ್ಭಾವಸ್ಥೆಯ ನಂತರ ಅಪೌಷ್ಟಿಕತೆಗೆ ಕಾರಣ  ಸ್ತನ್ಯಪಾನ. ಇದರ ಮೊದಲ ಮತ್ತು ಮುಖ್ಯ ಕಾರಣವಾಗಿದೆ. ಮಗುವಿಗೆ ಮೊಲೆಯೂಡಿಸುವ ಬಾಣಂತಿಗೆ ಪ್ರತಿ ದಿನ ಕನಿಷ್ಠ 1000 ಕ್ಯಾಲೋರಿಯಷ್ಟು ಶಕ್ತಿ ಒದಗಿಸಬೇಕಾಗುತ್ತದೆ. ಹೆಚ್ಚಿನ ಪಾಲು ಮಹಿಳೆಯರಿಗೆ ಸರಿಯಾದ ಡಯೆಟ್‌ ಚಾರ್ಟ್‌ ಬಗ್ಗೆ ಗೊತ್ತಿರುವುದಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ. ಈ ಕಾರಣ ಅವರು ಡೀಹೈಡ್ರೇಶನ್‌, ವಿಟಮಿನ್‌ ಯಾ ಮಿನರಲ್ ಅಥವಾ ರಕ್ತದ ಕೊರತೆಯ ಕಾರಣ ಅಪೌಷ್ಟಿಕತೆಯ ಸಮಸ್ಯೆಗೆ ಸಿಲುಕುತ್ತಾರೆ. ಇದನ್ನೇ ಪೋಸ್ಟ್ ನೇಟ್‌ ಮಾಲ್‌ನ್ಯೂಟ್ರಿಶನ್‌ (ಮಗುವಿನ ಜನನದ ನಂತರ ಆಗುವ ಅಪೌಷ್ಟಿಕತೆ) ಎನ್ನುತ್ತಾರೆ.

ಸ್ತನ್ಯಪಾನ ಮಾಡಿಸುವ ತಾಯಿಗೆ ಹೆಚ್ಚು ಹಸಿವಾಗುವುದು ಸಹಜ. ಹೀಗಾಗಿ ಅವಳು ಕೈಗೆ ಸಿಕ್ಕಿದ ಆಹಾರ ಪದಾರ್ಥ ತಿನ್ನುತ್ತಾಳೆ, ಅದು ಪೌಷ್ಟಿಕ ಅಥವಾ ಆರೋಗ್ಯಕರ ಆಗಿರುವುದಿಲ್ಲ. ರುಚಿಯಲ್ಲಿ ಉತ್ತಮ ಎನಿಸುವ ಆಹಾರದಲ್ಲಿ ವಿಟಮಿನ್ಸ್, ಮಿನರಲ್ಸ್ ಕೊರತೆ ಇರುತ್ತದೆ. ಈ ಕಾರಣ ತಾಯಿ ಅಪೌಷ್ಟಿಕತೆಗೆ ತುತ್ತಾಗುತ್ತಾಳೆ.

ಮಗು ಹುಟ್ಟುವ ಮೊದಲು ಮತ್ತು ನಂತರ ಪ್ರೀನೇಟ್‌ ವಿಟಮಿನ್ಸ್ ಸೇವಿಸುವುದು ಅತ್ಯಗತ್ಯ. ಪ್ರೀನೇಟ್‌ ವಿಟಮಿನ್‌ ಅಂದ್ರೆ ಫಾಲಿಕ್‌ ಆ್ಯಸಿಡ್‌ ನೀರಿನಲ್ಲಿ ವಿಲೀನಗೊಂಡು ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಈ ಕಾರಣ ಮಗುವಿನ ಜನನದ ನಂತರ ಮಹಿಳೆಯರು ಫಾಲಿಕ್‌ ಆ್ಯಸಿಡ್‌ನ ಕೊರತೆ ಕಾರಣ ಅನೀಮಿಯಾ (ರಕ್ತಹೀನತೆ)ಗೆ ತುತ್ತಾಗುತ್ತಾರೆ.

ಮಗುವಿನ ಜನನದ ನಂತರ, ಅಪೌಷ್ಟಿಕತೆಯ ಕಾರಣ ಸಾಮಾನ್ಯವಾಗಿ ಮಹಿಳೆಯರು ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ಗೂ ತುತ್ತಾಗುತ್ತಾರೆ. ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯರಲ್ಲಿ ಭಾವನಾತ್ಮಕ ಬದಲಾವಣೆ  ಉಂಟಾಗುತ್ತದೆ, ಆ ಕಾರಣ ಡಿಪ್ರೆಶನ್‌ ಸಮಸ್ಯೆ ತಲೆದೋರಬಹುದು. ಈ ಕಾರಣದಿಂದಾಗಿ ಎಷ್ಟೋ ಸಲ ಮಹಿಳೆಯರು ಸರಿಯಾಗಿ ಆಹಾರ ಸೇವಿಸುವುದಿಲ್ಲ ಹಾಗೂ ಅಪೌಷ್ಟಿಕತೆಗೆ ತುತ್ತಾಗುತ್ತಾರೆ.

ಗರ್ಭಾವಸ್ಥೆಯ ಕಾರಣ ಸುಮಾರು ಎಲ್ಲಾ ಮಹಿಳೆಯರ ದೇಹತೂಕ ಹೆಚ್ಚುತ್ತದೆ. ಎಷ್ಟೋ ಸಲ ಮಹಿಳೆಯರು ತೂಕ ಕರಗಿಸಲು ಹೋಗಿ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುವುದೇ ಇಲ್ಲ. ಈ ಕಾರಣ ಇವರು ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಹೀಗಾಗಿ ಗರ್ಭಾವಸ್ಥೆಯ ನಂತರ ತೂಕ ತಗ್ಗಿಸಬೇಕೆಂದರೆ ಅದನ್ನು ನಿಧಾನವಾಗಿ ಮಾಡಬೇಕು. ಆಗ ಮಾತ್ರ ಅಪೌಷ್ಟಿಕತೆಯಿಂದ ಪಾರಾಗಬಹುದು.

ಮಗು ಹುಟ್ಟಿದ ನಂತರ ಸಾಮಾನ್ಯವಾಗಿ ತಾಯಿ ನಿದ್ದೆಗೆಡುವುದು ಗೊತ್ತಿರುವ ಸಂಗತಿ. ಹೀಗಾಗಿ ನಿದ್ದೆ ಪೂರ್ತಿ ಆಗದ ಕಾರಣ ದೇಹದಲ್ಲಿ ಪೋಷಕ ಪದಾರ್ಥಗಳು ಸಹಜವಾಗಿ ವಿಲೀನಗೊಳ್ಳುದಿಲ್ಲ. ಹೀಗಾಗಿ ಅವರು ಅಪೌಷ್ಟಿಕತೆಗೆ ಒಳಗಾಗುತ್ತಾರೆ.

ಗರ್ಭಸ್ಥ ಮತ್ತು ನವಜಾತ ಶಿಶುವಿಗೂ ಮಾರಕ

ಗರ್ಭವತಿಯರಿಗೆ ಅಪೌಷ್ಟಿಕತೆಯ ದುಷ್ಪರಿಣಾಮ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೂ ಆಗುತ್ತದೆ. ಮಗುವಿನ ವಿಕಾಸ ಸರಿಯಾಗಿ ಆಗದು ಹಾಗೂ ಪ್ರಸವದ ಸಮಯದಲ್ಲಿ ಅದರ ತೂಕ ಸಾಮಾನ್ಯಕ್ಕಿಂತ ಕಡಿಮೆ ಆಗಿಹೋಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಅಪೌಷ್ಟಿಕತೆಗೆ ತುತ್ತಾಗಿ ಪ್ರಸವದ ಸಮಯದಲ್ಲಿ ಕಡಿಮೆ ತೂಕದ ದುಷ್ಪರಿಣಾಮ ಮಗುವಿನ ಮೇಲಾಗುತ್ತದೆ, ಇದರಿಂದ ಅನೇಕ ದುಷ್ಪರಿಣಾಮಗಳೂ ಆಗಬಹುದು.

ಹುಟ್ಟಿನಿಂದ ಆಗುವ ದೋಷ, ಬ್ರೇನ್‌ ಡ್ಯಾಮೇಜ್‌ ಅಂದ್ರೆ  ಬುದ್ಧಿಗೆ ಹಾನಿ, ಸಮಯ ಪೂರ್ವ ಪ್ರಸವ, ಕೆಲವು ಅಂಗಗಳ ಅವಿಕಾಸ, ಹುಟ್ಟಿದಾಕ್ಷಣ ಅಳದ ಮಕ್ಕಳು ಇತ್ಯಾದಿಗಳೆಲ್ಲದಕ್ಕೂ ಅಪೌಷ್ಟಿಕತೆಯೇ ಮೂಲ. ಇವೆಲ್ಲದರಲ್ಲಿ 50%ಗೂ ಹೆಚ್ಚಿನ ಪ್ರಕರಣಗಳಿಗೆ ಕಾರಣ ಆಗಿರುತ್ತದೆ, ಕ್ರೀಟನಿಸಂ ಒಂದು ಜನ್ಮಜಾತ ರೋಗವಾಗಿದ್ದು, ಅದರ ಪರಿಣಾಮ ಗ್ಲಾಂಡ್ಸ್ ಮೇಲೆ ಆಗುತ್ತದೆ.

ಮಗುವಿನ ಮುಂದಿನ ಜೀವನದ ಮೇಲೆ ಪರಿಣಾಮ

ಒಂದು ಪಕ್ಷ ಗರ್ಭಾವಸ್ಥೆ ಕಾರಣ ತಾಯಿಯ ಪೋಷಣೆಯಲ್ಲಿ ಏನಾದರೂ ಕೊರತೆ ಇದ್ದರೆ ಮುಂದೆ ಮಗು ತನ್ನ ಜೀವನದಲ್ಲಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆಸ್ಟ್ರೋಪೊರೋಸಿಸ್‌, ಕ್ರಾನಿಕ್‌ ಕಿಡ್ನಿ ಫೇಲ್ಯೂರ್‌, ಹೃದ್ರೋಗಗಳು, ಟೈಪ್‌ 2 ಡಯಾಬಿಟೀಸ್‌, ಲಂಗ್ಸ್ ಡಿಸೀಸ್‌, ರಕ್ತದಲ್ಲಿ ಅಸಮರ್ಪಕ ಲಿಪಿಡ್ಸ್ ಪ್ರಮಾಣ, ಗ್ಲೂಕೋಸ್‌ ಇನ್‌ಟಾಲರೆನ್ಸ್ (ಇದೊಂದು ಪ್ರಿಡಯಾಬೆಟಿಕ್‌ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಗ್ಲೂಕೋಸ್‌ ಮೆಟಬಾಲಿಸಂ ಅಸಾಮಾನ್ಯ ಆಗುತ್ತದೆ).

ತಾಯಿ ಎದುರಿಸುವ ಸಮಸ್ಯೆಗಳು

ಒಂದು ಪಕ್ಷ ಗರ್ಭಾವಸ್ಥೆಯಲ್ಲಿ ತಾಯಿಯ ಪೋಷಣೆಯಲ್ಲಿ ಕೊರತೆಯಿದ್ದರೆ, ಅವಳು ಸಾವಿಗೀಡಾಗುವ ಚಾನ್ಸೆಸ್‌ ಹೆಚ್ಚು. ಇದರ ಹೊರತಾಗಿ ಅಸಮಯ ಪ್ರಸವ, ಗರ್ಭಪಾತದಂತಹ ಸಮಸ್ಯೆಗಳೂ ಆಗಬಹುದು. ಕೆಲವು ಮಹಿಳೆಯರಿಗೆ ಇನ್ನೂ ಅನೇಕ ಸಮಸ್ಯೆಗಳು ಕಾಡಬಹುದು :

ಸೋಂಕು, ಅನೀಮಿಯಾ, ರಕ್ತದ ಉತ್ಪನ್ನದಲ್ಲಿ ಕೊರತೆ, ಸುಸ್ತುಸಂಕಟ, ಆಸ್ಟ್ರೋಪೊರೋಸಿಸ್‌.

ಅಪೌಷ್ಟಿಕತೆ ತಡೆಯುವುದು ಹೇಗೆ?

ಅಪೌಷ್ಟಿಕತೆಯನ್ನು ಸಮತೋಲಿತ ಆಹಾರ ಸೇವನೆಯಿಂದ ತಡೆಯಬಹುದು. ಮಹಿಳೆಯರು ಗರ್ಭಾವಸ್ಥೆಯಲ್ಲಿ ಸೂಕ್ತ ಪ್ರಮಾಣದಲ್ಲಿ ಹಣ್ಣು, ತರಕಾರಿ, ನೀರು, ಫೈಬರ್‌, ಪ್ರೋಟೀನ್‌, ಕೊಬ್ಬು, ಕಾರ್ಬೋಹೈಡ್ರೇಟ್‌ ಇತ್ಯಾದಿಗಳನ್ನು ಸೇವಿಸಬೇಕು. ಪೋಷಣೆಗೆ ಸಂಬಂಧಿಸಿದಂತೆ ಅವಶ್ಯಕತೆಗಳು

ಐರನ್‌ : ದೇಹದಲ್ಲಿ ಹಿಮೋಗ್ಲೋಬಿನ್‌ ತಯಾರಾಗಲು ಐರನ್‌ ಅತಿ ಅಗತ್ಯ. ಹಿಮೋಗ್ಲೋಬಿನ್‌ ಕೆಂಪು ರಕ್ತ ಕಣಗಳಲ್ಲಿ ಕಂಡುಬರುತ್ತದೆ, ಇದು ಇಡೀ ದೇಹಕ್ಕೆ ಆಮ್ಲಜನಕ ಪೂರೈಸಲು ನೆರವಾಗುತ್ತದೆ. ಒಂದು ಪಕ್ಷ ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಾದರೆ, ಆಗ ದೇಹದ ಎಲ್ಲಾ ಭಾಗಕ್ಕೂ ಸಕಾಲದಲ್ಲಿ ಸೂಕ್ತ ಪ್ರಮಾಣದ ಆಮ್ಲಜನಕ ಸಿಗುವುದಿಲ್ಲ. ನೀವು ಆಹಾರದಲ್ಲಿ ಸರಿಯಾಗಿ ಐರನ್‌ ಪ್ರಮಾಣ ಸೇವಿಸದಿದ್ದರೆ, ನಿಧಾನವಾಗಿ ದೇಹದಲ್ಲಿ ಹಿಮೋಗ್ಲೋಬಿನ್‌ನ ಕೊರತೆ ಉಂಟಾಗುತ್ತದೆ. ಆಗ ನೀವು ಅನೀಮಿಕ್‌ ಆಗುತ್ತೀರಿ. ಆಗ ನಿಮ್ಮ ದೇಹದಲ್ಲಿ ಶಕ್ತಿಯ ಕೊರತೆ ಕಂಡುಬರುತ್ತದೆ. ನಿಮ್ಮ ದೇಹದಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯೇ ಇರುವುದಿಲ್ಲ.

ಮಗುವಿಗೆ ಜನ್ಮ ನೀಡಿದ ನಂತರ, ಸಾಮಾನ್ಯವಾಗಿ ಮಹಿಳೆಯರಿಗೆ ಸುಸ್ತು, ಸಂಕಟ ಹೆಚ್ಚುತ್ತದೆ. ಹೀಗಾದಾಗ ಅವರು ಐರನ್ ಅಂಶವುಳ್ಳ ಆಹಾರ ಹೆಚ್ಚು ಸೇವಿಸಬೇಕು. ಪ್ರಸವದ ಸಮಯದಲ್ಲಂತೂ ಎಷ್ಟೋ ಸಲ ಹೆಚ್ಚು ಪ್ರಮಾಣದ ರಕ್ತ ಹೋಗಿಬಿಡುವುದರಿಂದಲೂ ಅನೀಮಿಯಾ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಐರನ್‌ ಪ್ರಮಾಣ ಧಾರಾಳವಾಗಿರಲಿ.

ಪ್ರೀನೇಟ್‌ ವಿಟಮಿನ್‌ : ಗರ್ಭವತಿಯರಿಗೆ  ಪ್ರೀನೇಟ್‌ ವಿಟಮಿನ್‌ ಸೇವಿಸಲು ಸಲಹೆ ನೀಡುತ್ತಾರೆ. ಆಗ ಮಾತ್ರ ಗರ್ಭಸ್ಥ ಶಿಶುವಿಗೆ ವಿಟಮಿನ್ಸ್, ಮಿನರಲ್ಸ್ ದೊರಕುತ್ತದೆ. ಕೆಲವು ಕೇಸುಗಳಲ್ಲಿ ಪ್ರಸವದ ನಂತರ ಪ್ರೀನೇಟ್‌ ವಿಟಮಿನ್‌ನ ಅವಶ್ಯಕತೆ ಉಂಟಾಗದು.  ಹೀಗಾಗಿ ನಿಮ್ಮ ವೈದ್ಯರ ಸಲಹೆಯ ಪ್ರಕಾರ ಎಷ್ಟು ತಿಂಗಳು ನೀವು ವಿಟಮಿನ್ಸ್ ತೆಗೆದುಕೊಳ್ಳಬೇಕೆಂದು ಕೇಳಿ.

ಒಮೇಗಾ 3 ಫ್ಯಾಟಿ ಆ್ಯಸಿಡ್‌ : ಪ್ರಸವದ ನಂತರ ವಿಶೇಷವಾಗಿ ಸ್ತನ್ಯಪಾನ ಮಾಡಿಸುವ ಮಹಿಳೆಯರು ತಮ್ಮ ಆಹಾರದಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್‌ನ್ನು ವಿಶೇಷ ರೂಪದಲ್ಲಿ ಡೋಕೋಸಹೇಕ್ಸಾನಾಯಿಕ್‌ ಆ್ಯಸಿಡ್‌(ಸಿ)ನ್ನು ಅಗತ್ಯ ಸೇವಿಸಬೇಕು. ಮಾಂಸಾಹಾರಿಗಳಿಗಾದರೆ ಸಾಲ್ಮಾನ್‌ ಟ್ರಾಟ್‌ ಫಿಶ್‌ಗಳಲ್ಲಿ ಸಿ ಧಾರಾಳ ದೊರಕುತ್ತದೆ. ಸಸ್ಯಾಹಾರಿಗಳು ಇದನ್ನೇ ಅಗಸೇಬೀಜ (ಫ್ಲಾಕ್ಸ್ ಸೀಡ್ಸ್), ಸೋಯಾ, ಅಖರೋಟ್‌, ಕುಂಬಳಬೀಜ ಸೇವಿಸಿ ಪಡೆಯಬಹುದು. ಇವೆಲ್ಲದರಲ್ಲೂ ಒಮೇಗಾ 3 ಸೂಕ್ತ ಪ್ರಮಾಣದಲ್ಲಿ ದೊರಕುತ್ತದೆ.

ಕ್ಯಾಲ್ಶಿಯಂ : ಮಹಿಳೆಯರಿಗೆ ಜೀವನದ ಪ್ರತಿಘಟ್ಟದಲ್ಲೂ ಕ್ಯಾಲ್ಶಿಯಂನ ಅಗತ್ಯ ಬೀಳುತ್ತದೆ. ಇದಕ್ಕಾಗಿ ಡೇರಿ ಉತ್ಪನ್ನಗಳು, ಹಸಿರು ಸೊಪ್ಪು ತರಕಾರಿ, ಬ್ರೋಕ್ಲಿ, ಕ್ಯಾಲ್ಶಿಯಂ ಪೋರ್ಟಿಫೈಡ್‌ ಆಹಾರ ಪದಾರ್ಥಗಳನ್ನು ಸೇವಿಸಿ ಮಗುವಿಗೆ ಜನ್ಮ ನೀಡಿದ ನಂತರ ಕೇವಲ ಕ್ಯಾಲೋರಿ ತುಂಬಿಸಿಕೊಳ್ಳುವುದನ್ನು ತಪ್ಪಿಸಿ :

ಮಗು ಹುಟ್ಟಿದ ನಂತರ, ಆರಂಭದ ದಿನಗಳಲ್ಲಿ ಮಹಿಳೆಯರು ಮಕ್ಕಳ ಮೇಲ್ವಿಚಾರಣೆಯಲ್ಲಿ ಬಹಳ ವ್ಯಸ್ತರಾಗುತ್ತಾರೆ. ಹಾಗಾದಾಗ ಅವರು ತಮ್ಮ ಆಹಾರದ ಕಡೆ ಗಮನ ಕೊಡುವುದೇ ಅಲ್ಲ. ಗೊತ್ತಿದ್ದೋ ಇಲ್ಲದೆಯೋ ಕೇವಲ ಹೈ ಕ್ಯಾಲೋರಿ ಆಹಾರವನ್ನೇ ಸೇವಿಸುತ್ತಾರೆ. ಬದಲಿಗೆ ತಾಯಿ ಆರೋಗ್ಯಕರ ಪೌಷ್ಟಿಕ ಆಹಾರವನ್ನೇ ಸೇವಿಸಬೇಕು. ಇದಕ್ಕಾಗಿ ಕ್ಯಾರೆಟ್‌, ಹಣ್ಣು, ತರಕಾರಿ, ಲೋ ಫ್ಯಾಟ್‌ ಯೋಗರ್ಟ್‌/ಚೀಸ್‌, ಬೆಂದ ಮೊಟ್ಟೆ, ಕಾಬೂಲ್ ‌ದ್ರಾಕ್ಷಿ, ಬಾಳೆಹಣ್ಣು, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಸೇವಿಸಬೇಕು.

ಪ್ರತಿ ಸಲ ಸ್ವಲ್ಪ ಸ್ವಲ್ಪವೇ ಸೇವಿಸಿ : ಒಂದೇ ಸಲ ಹೊಟ್ಟೆ ತುಂಬಿ ಹೋಗುವಷ್ಟು ಆಹಾರ ಸೇವಿಸುವ ಬದಲು ಸ್ವಲ್ಪ ಸ್ವಲ್ಪ ಹೊತ್ತಿನ ನಂತರ, ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ. ಇದರಿಂದ ದಿನವಿಡೀ ನಿಮ್ಮ ದೇಹದಲ್ಲಿ ಶಕ್ತಿ ತುಂಬಿರುತ್ತದೆ. ಭಾರಿ ಭೋಜನದ ನಂತರ ಅದನ್ನು ಜೀರ್ಣಿಸಿಕೊಳ್ಳಲು ಸಹ ಹೆಚ್ಚು ಶಕ್ತಿ ಬೇಕು. ಆದರೆ ಈ ಸಮಯದಲ್ಲಿ ತಾಯಿಗೆ ಸಾಕಷ್ಟು ನಿದ್ದೆ ಇರುವುದಿಲ್ಲ. ಆದ್ದರಿಂದ ಭಾರಿ ಭೋಜನ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಲೈಟ್‌ ಫುಡ್‌ ಸೇವಿಸಿ. ಆಗ ನಿಮ್ಮ ದೇಹದಲ್ಲಿ ಶಕ್ತಿಯ ಪ್ರಮಾಣ ಸರಿಯಾಗಿರುತ್ತದೆ ಹಾಗೂ ನಿಮಗೆ ದಿನವಿಡೀ ಸುಸ್ತು, ಸಂಕಟ ಇರುವುದಿಲ್ಲ.

ಕೆಫೀನ್‌ ಸೇವನೆ : ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡಾಗ ಕೆಫೀನ್‌ ಹಾನಿಕಾರಕವಲ್ಲ. ಆದರೆ ದೇಹದ ಶಕ್ತಿ ಕಾಪಾಡಿಕೊಳ್ಳಲು, ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್‌ (ಕಾಫಿ ರೂಪದಲ್ಲಿ) ಸೇವನೆ ಹಾನಿಕರ. ಇದರ ಬದಲಿಗೆ ಕಾರ್ಬೊಹೈಡ್ರೇಟ್‌ ಪ್ರೋಟೀನ್‌ನಿಂದ ತುಂಬಿದ ಸಮತೋಲಿತ ಆಹಾರ ಸೇವಿಸಿ, ಈಗ ದಿನವಿಡೀ ನಿಮ್ಮ ದೇಹದಲ್ಲಿ ಶಕ್ತಿ ತುಂಬಿರುತ್ತದೆ. ಸ್ತನ್ಯಪಾನ ಮಾಡಿಸುವ ತಾಯಂದಿರು, ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಕೆಫೀನ್‌ ಸೇವಿಸಬೇಕು, ಏಕೆಂದರೆ ತಾಯಿ ಹಾಲಿನ ಮುಖಾಂತರ ಅದು ಮಗು ಹೊಟ್ಟೆ ಸೇರುವಂತಾಗಬಾರದು.

ಡೀಹೈಡ್ರೇಶನ್‌ನಿಂದ ದೂರವಿರಿ : ಪ್ರಸವದ ನಂತರ ತಾಯಿಯ ದೇಹದಿಂದ ಸುಮಾರು ದ್ರವ ಪದಾರ್ಥ ಅತಿ ಹೆಚ್ಚು ಪ್ರಮಾಣದಲ್ಲಿ ಹೋಗಿಬಿಡುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಹೈಡ್ರೇಶನ್‌ ಕಡೆ ವಿಶೇಷ ಗಮನವಿರಲಿ. ಡೀಹೈಡ್ರೇಶನ್‌ನಿಂದ ತಾಯಿಗೆ ಸುಸ್ತು, ಸಂಕಟ ತಪ್ಪಿದ್ದಲ್ಲ. ಪ್ರತಿದಿನ ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯಿರಿ. ನೀರಿನ ಕೊರತೆ ತಾಯಿ ಹಾಲಿನ  ಕೊರತೆಗೆ ಮೂಲ ಆಗಬಾರದು.

ಮಗು ಹುಟ್ಟಿದ ನಂತರ ಪೋಷಣೆ ಮತ್ತು ತೂಕದಲ್ಲಿ ಕೊರತೆ : ಮಗು ಹುಟ್ಟಿದ ನಂತರ ಮಹಿಳೆಯರು ದಿಢೀರ್‌ ತಮ್ಮ ಮೈ ತೂಕ ಕರಗಿಸಲು ಪ್ರಯತ್ನಿಸುತ್ತಾರೆ. ಆ ಕಾರಣ ಅಗತ್ಯ ಆಹಾರ ಸೇವನೆ ಮಾಡುವುದೇ ಇಲ್ಲ. ಇದಂತೂ ಹಾನಿಕಾರಕ ಆಗುತ್ತದೆ. ಮೊಲೆಯುಣಿಸುವುದರಿಂದ ತೂಕ ತಂತಾನೇ ಕಡಿಮೆ ಆಗುತ್ತದೆ. ಆದರೆ ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಪ್ರತಿದಿನ ಹೆಚ್ಚುವರಿಯಾಗಿ 300 ಕ್ಯಾಲೋರಿಯಷ್ಟು ಅಗತ್ಯ ಬೀಳುತ್ತದೆ. ಹೀಗಾಗಿ ಸಮತೋಲಿತ ಆಹಾರದ ಜೊತೆಯಲ್ಲೇ ವ್ಯಾಯಾಮ ಸಹ ಮಾಡಿ ಹಾಗೂ ಹೆಚ್ಚುವರಿ ಕ್ಯಾಲೋರಿ ಸೇವಿಸುವುದನ್ನು ತಪ್ಪಿಸಿ. ನಿಮ್ಮದು ನಾರ್ಮಲ್ ವಜೈನಲ್ ಡೆಲಿವರಿ ಆಗಿದ್ದರೆ, ಮಗುವಿಗೆ ಜನ್ಮ ನೀಡಿದ ಕೆಲವು ವಾರಗಳ ನಂತರ ಲಘು ವ್ಯಾಯಾಮ ಆರಂಭಿಸಿ. ಅದೇ ಸೀ ಸೆಕ್ಷನ್‌ ಆಗಿದ್ದರೆ, 6 ವಾರಗಳವರೆಗೂ ವ್ಯಾಯಾಮ ಮಾಡಬಾರದು.

– ಡಾ. ಶೃತಿ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ