ಅತಿ ಸುಂದರವಾಗಿ ಕಂಗೊಳಿಸಬೇಕೆಂಬ ಬಯಕೆ ಪ್ರತಿಯೊಬ್ಬ ಹುಡುಗಿಗೂ ಇದ್ದೇ ಇರುತ್ತದೆ. ಈ ಮದುವೆಯ ಮುಹೂರ್ತದ ದಿನಕ್ಕಾಗಿ ಅವಳು ನಾನಾ ಬಗೆಯ ಕನಸುಗಳನ್ನು ಕಾಣುತ್ತಾಳೆ. ಅವಳು ತನ್ನನ್ನು ತಾನು ಅತಿ ಸುಂದರ ವಧುವನ್ನಾಗಿ ತೋರ್ಪಡಿಸಲು ಲೇಟೆಸ್ಟ್  ಮಾಡರ್ನ್‌ ಔಟ್‌ಫಿಟ್ಸ್ ಜೊತೆ ಮ್ಯಾಚಿಂಗ್‌ ದುಬಾರಿ ಒಡವೆ, ಮ್ಯಾಚಿಂಗ್‌ ಫುಟ್‌ವೇರ್‌ ಹಾಗೂ ಪಾರ್ಲರ್‌ನಲ್ಲಿ ಬುಕಿಂಗ್‌ ಇತ್ಯಾದಿ ಮಾಡಿಸಿಕೊಳ್ಳುತ್ತಾಳೆ. ಇದರಿಂದ ತನ್ನ ಅಲಂಕಾರದಲ್ಲಿ ಯಾವುದೇ ಕೊರತೆ ಇರದಂತೆ, ಮದುವೆಯ ಮನೆಯ ಗುಂಪಿನಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿರಲು ಬಯಸುತ್ತಾಳೆ.

ಈ ಅಲಂಕಾರದ ಓಡಾಟದಲ್ಲಿ ಅವಳು ತನ್ನ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾಳೆ. ಅದು ಅವಳ ಆರೋಗ್ಯದ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ ಮುಖದಲ್ಲೂ ಅದು ಸ್ಪಷ್ಟವಾಗಿ ಕಾಣಿಸುತ್ತದೆ. ಇಂಥ ಸಂದರ್ಭದಲ್ಲಿ ವಧು ಒಳಗೆ ಹಾಗೂ ಹೊರಗಿನಿಂದ ಎರಡೂ ವಿಧದಲ್ಲಿ ಪರ್ಫೆಕ್ಟ್ ಫಿಟ್‌ ಆಗಿ ಕಂಡುಬರಬೇಕು. ಆಗ ಮಾತ್ರ ಮದುವೆ ದಿನ ಅವಳು ಪೂರ್ತಿಯಾಗಿ ಎಂಜಾಯ್‌ ಮಾಡಲು ಸಾಧ್ಯ. ಏಕೆಂದರೆ ವಧು ಒಳಗಿನಿಂದ ಹೆಲ್ದಿ ಆಗಿರದಿದ್ದರೆ, ಹೊರಗಿನಿಂದ ಎಷ್ಟೇ ಮೇಕಪ್‌ ಮಾಡಿಕೊಂಡರೂ, ಅದು ಎದ್ದು ಕಾಣುವುದಿಲ್ಲ. ನಿಮ್ಮ ಕೆಟ್ಟಿರುವ ತ್ವಚೆ, ಕೆದರಿದ ಕೂದಲು, ಆಳಕ್ಕಿಳಿದ ಕಂಗಳು, ಸುಸ್ತು ಸಂಕಟದ ವರ್ತನೆ ನಿಮ್ಮ ಮದುವೆ ದಿನದ ಅಂದವನ್ನು ಹಾಳುಗೆಡಹುತ್ತದೆ.

ಈ ರೀತಿಯ ಅತಿಯಾದ ಓಡಾಟದ ಜೀವನಶೈಲಿ ಆರೋಗ್ಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮುಖ್ಯ ಪರಿಣಾಮ ತ್ವಚೆಯ ಮೇಲೆ ಕಾಣಿಸುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಜೊತೆಜೊತೆಗೆ ಸ್ವಸ್ಥ ತ್ವಚೆಗಾಗಿ ಎಲ್ಲಕ್ಕೂ ಮುಖ್ಯವಾದ ಐರನ್‌ ದೇಹದಲ್ಲಿ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಚರ್ಮ ಹಳದಿ ಆಗುತ್ತಾ ಹೋಗುತ್ತದೆ. ಹೀಗಾದಾಗ ವಧುವಿನ ಸೌಂದರ್ಯಕ್ಕೆ ಕಲೆ ತಗುಲಿದಂತಾಗುತ್ತದೆ.

Iron_04_EM

ಬನ್ನಿ, ಮದುವೆಯ ಬಿಝಿ ಶೆಡ್ಯೂಲ್‌ ನಿಭಾಯಿಸುತ್ತಲೇ, ಆಂತರಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ನೋಡೋಣ :ಗ್ಲೋಯಿಂಗ್‌ ಸ್ಕಿನ್‌ಗಾಗಿ ಮದುವೆಗೆ ಮೊದಲು ನೀವು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಎಷ್ಟೇ ಫೇಶಿಯಲ್ ಮಾಡಿಸಿರಲಿ, ನ್ಯಾಚುರಲ್ ಗ್ಲೋ ಎಂಬುದು ಮುಖದಲ್ಲಿ ಸಹಜವಾಗಿ ಮೂಡಿಬರಬೇಕು. ನೀವು ಇಂಥ ನ್ಯಾಚುರಲ್ ಗ್ಲೋ ಬಯಸಿದರೆ ಕ್ಯಾರೆಟ್‌, ಟೊಮೇಟೊ, ಹಸಿರು ತರಕಾರಿ ಇತ್ಯಾದಿ ಸೇವಿಸಲು ಮರೆಯದಿರಿ. ಇವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯವಾಗಿ ಬಳಸಿಕೊಳ್ಳಿ. ಆಗ ನೋಡಿ, ನಿಮ್ಮ ಚರ್ಮಕ್ಕೆ ಎಂಥ ಹೊಳಪು ಬರುತ್ತದೆಂದು ನಿಮಗೇ ತಿಳಿಯುತ್ತದೆ.

ಐರನ್‌ನಿಂದ ತುಂಬಿರಲಿ ಡಯೆಟ್‌

ಮದುವೆಯ ದಿನ ನಿಮ್ಮ ಚರ್ಮ ಡಲ್, ಕೂದಲು ನಿರ್ಜೀವ, ಉಗುರು ತುಸು ತಗುಲಿದರೆ ತುಂಡರಿಸುವುದು, ಅದರಲ್ಲಿ ಹಳದಿ ಬಣ್ಣ ಕಾಣಿಸುವುದು..... ಇತ್ಯಾದಿ ಆಗಬಾರದು ಎಂದು ಬಯಸಿದರೆ ನೀವು ಕಬ್ಬಿಣಾಂಶ ತುಂಬಿರುವ ಆಹಾರವನ್ನು ಎಂದೂ ನಿರ್ಲಕ್ಷಿಸಬೇಡಿ. ಏಕೆಂದರೆ ಐರನ್ನಿನ ಕೊರತೆ ನಿಮ್ಮ ಸೌಂದರ್ಯವನ್ನು ತಗ್ಗಿಸಬಹುದು. ಓವರ್‌ಆಲ್ ಬ್ಯೂಟಿಫುಲ್ ಬ್ರೈಡ್ ಆಗಿ ಕಂಗೊಳಿಸಲು ಐರನ್‌ ತುಂಬಿದ ಡಯೆಟ್‌ ಅಂದರೆ ಮೊಟ್ಟೆ, ಮೀನು, ಮಾಂಸ, ಟೋಫು, ಬೀನ್ಸ್, ಸೋಯಾ, ನಟ್ಸ್ ಇತ್ಯಾದಿ ಖಂಡಿತಾ ಸೇವಿಸಿ. ಏಕೆಂದರೆ ಉದ್ದದ ಕೂದಲಿಗಾಗಿ ವಿಟಮಿನ್ಸ್, ಮಿನರಲ್ಸ್, ಪ್ರೋಟೀನ್ಸ್ ಜೊತೆ ಐರನ್‌ ಸೇವನೆಯೂ ಅತ್ಯಗತ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ