ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಸೌಂದರ್ಯ ಪ್ರಸಾಧನಗಳಿಂದ ನಮ್ಮ ಸೌಂದರ್ಯ ಹೊಳೆಯುತ್ತದೆ. ಆದರೆ ಈ ಹೊಳಪು ಕ್ಷಣಿಕ. ಹೆಸರಾಂತ ಡಯೆಟೀಶಿಯನ್ ಹಾಗೂ ಹೆಲ್ತ್ ರಿಪೋರ್ಟರ್ ಲಿಜಾ ಡ್ರೈಯರ್ ಹೀಗೆ ಹೇಳುತ್ತಾರೆ. ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ನಮ್ಮ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಂಡು ಹೊಳೆಯುವ ಚರ್ಮ, ಆಕರ್ಷಕ ರೇಷ್ಮೆಯಂತಹ ಕೂದಲು ಮತ್ತು ಸ್ವಸ್ಥ ಉಗುರುಗಳು ಇತ್ಯಾದಿ ಪ್ರಾಕೃತಿಕ ಸೌಂದರ್ಯ ಪಡೆಯಬಹುದು.
ಅಂತಹ ಆಹಾರ ಪದಾರ್ಥಗಳನ್ನು ಬ್ಯೂಟಿ ಫುಡ್ ಎಂದು ಕರೆಯುತ್ತಾರೆ. ಇವನ್ನು ನಿರಂತರವಾಗಿ ಸೇವಿಸುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ತ್ವಚೆಯ ಟಿಶ್ಶೂಗಳನ್ನು ರಿಪೇರಿ ಮಾಡಿ ಅವನ್ನು ಬಾಗುವಂತೆ ಮಾಡಿ ಸೌಂದರ್ಯ ಕೊಡುತ್ತವೆ. ಅದರಿಂದ ನೀವು ಬಹಳ ಕಾಲ ಯೌವನ ಉಳಿಸಿಕೊಂಡು ಆರೋಗ್ಯವಾಗಿಯೂ ಇರಬಹುದು.
ಸ್ಟ್ರಾಬೆರಿ ಮತ್ತು ಪಾಲಕ್ ಸೊಪ್ಪು : ಕಾಸ್ಮೆಟಿಕ್ ಸರ್ಜನ್ ಡಾ. ಮೀನಾಕ್ಷಿಯವರ ಪ್ರಕಾರ ಆ್ಯಂಟಿ ಆಕ್ಸಿಡೆಂಟ್ ಅಂಶಗಳಿಂದ ತುಂಬಿರುವ ಸ್ಟ್ರಾಬೆರಿ ಮತ್ತು ಪಾಲಕ್ ತ್ವಚೆಯ ಪೋಷಣೆಯಲ್ಲಿ ವಿಶೇಷ ಸಹಾಯ ಮಾಡುತ್ತದೆ. ಜೊತೆಗೆ ಆ್ಯಂಟಿ ಏಜಿಂಗ್ ಕೆಲಸವನ್ನೂ ಮಾಡುತ್ತದೆ. ಸುಕ್ಕುಗಳನ್ನು ದೂರ ಮಾಡಿ ತ್ವಚೆಯನ್ನು ಸ್ಪಾಂಜಿಯಾಗಿಸುತ್ತದೆ. ಆದ್ದರಿಂದ ಇವೆರಡನ್ನೂ ನಿಮ್ಮ ಆಹಾರದಲ್ಲಿ ಯಾವುದಾದರೂ ರೂಪದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಿ. ಇಷ್ಟೇ ಅಲ್ಲ, 2-3 ಸ್ಟ್ರಾಬೆರಿಯನ್ನು ಪ್ಯೂರಿ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಕೆಲವು ಹನಿ ನಿಂಬೆರಸ ಹಾಕಿ. ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ತೊಳೆಯಿರಿ. ಮುಖ ಹೊಳೆಯುತ್ತದೆ.
ಲೋ ಫ್ಯಾಟ್ ಮೊಸರು : ಕ್ಯಾಲ್ಶಿಯಂ ಮತ್ತು ಫಾಸ್ಪರಸ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮೊಸರು ಹಲ್ಲುಗಳ ಎನಾಮೆಲ್‌ಗೆ ಶಕ್ತಿ ಕೊಡುತ್ತದೆ, ಕ್ಯಾವಿಟಿ ಉಂಟಾಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಮೊಸರು ಉಪಯೋಗಿಸುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಬಳುಕುತ್ತದೆ. ಜೊತೆಗೆ ಆಸ್ಟೂವೋ ಪೋರೋಸಿಸ್‌ನ್ನು ತಡೆಯುವಲ್ಲೂ ಸಹಾಯ ಮಾಡುತ್ತದೆ.
ಮೊಸರನ್ನು ಮಾಸ್ಕ್ ನಂತೆಯೂ ಉಪಯೋಗಿಸಬಹುದು. ಸ್ವಚ್ಛವಾದ ಮುಖಕ್ಕೆ ಮೊಸರನ್ನು ಮೆತ್ತಿ. 10 ನಿಮಿಷ ಬಿಟ್ಟು ತೊಳೆಯಿರಿ.
ಅರ್ಧ ಕಪ್ ಪೂರ್ತಿ ಫ್ಯಾಟ್ ಇರುವ ಮೊಸರಿನಲ್ಲಿ 3 ದೊಡ್ಡ ಚಮಚ ಜೇನುತುಪ್ಪ ಮತ್ತು 1 ಮೊಟ್ಟೆಯ ಹಳದಿ ಭಾಗ ಹಚ್ಚಿ ಮಿಶ್ರಣ ತಯಾರಿಸಿ. ಇದನ್ನು ಕೂದಲಿನ ಮೇಲೆ ಹಚ್ಚಿ 15 ನಿಮಿಷ ಬಿಡಿ. ನಂತರ ತೊಳೆಯಿರಿ. ಇದು ಪ್ರೋಟೀನ್ ರಿಚ್ ಹೇರ್ ಮಾಸ್ಕ್ ನ ಕೆಲಸ ನಿರ್ವಹಿಸುತ್ತದೆ.
ಆ್ಯಪಲ್ ಸೈಡರ್ ವಿನಿಗರ್ : ಇದರಲ್ಲಿ ಬಹಳಷ್ಟು ಗುಣಗಳಿದ್ದು ಸ್ಕಿನ್ ಟಿಶ್ಶೂಸ್ ಹೀಲಿಂಗ್ ಮಾಡುತ್ತವೆ. ಅಲ್ಲದೆ, ತ್ವಚೆಗೆ ಕೋಮಲತೆ ಹಾಗೂ ಹೊಳಪನ್ನು ಕೊಡುತ್ತದೆ. ಇದರಲ್ಲಿರುವ ಎನ್‌ಝೈಮ್ ಗಳು ಮೃತ ತ್ವಚೆಯ ಪದರವನ್ನು ದೂರ ಮಾಡಿ ಅದಕ್ಕೆ ಹೊಸ ರೂಪ ಕೊಡುತ್ತದೆ, ಫ್ಯಾಟ್ ಕಡಿಮೆ ಮಾಡುತ್ತದೆ ಹಾಗೂ ಪಚನಕ್ರಿಯೆಯನ್ನು ಸುಧಾರಿಸುತ್ತದೆ.
ಕ್ಯಾರೆಟ್ ಮತ್ತು ಬೀಟ್ ರೂಟ್ : ಇವು ಮಹತ್ವಪೂರ್ಣ ವಿಟಮಿನ್‌ಗಳು ಮತ್ತು ಖನಿಜ ಪದಾರ್ಥಗಳಿಂದ ತುಂಬಿರುವುದರಿಂದ ಆ್ಯಂಟಿ ಏಜಿಂಗ್‌ನ್ನು ತಡೆಯುತ್ತದೆ ಮತ್ತು ತ್ವಚೆಯ ಹೊರಗಿನ ಪದರವನ್ನು ಸರಿಯಾಗಿಡುತ್ತದೆ. 2 ವಾರಗಳು ಕ್ಯಾರೆಟ್ ಹಾಗೂ ಬೀಟ್ ರೂಟ್ ರಸವನ್ನು ನಿಯಮಿತವಾಗಿ ಕುಡಿದರೆ ಅದ್ಭುತ ಸೌಂದರ್ಯ ನಿಮ್ಮದಾಗುತ್ತದೆ.