ತಲೆನೋವು ಹಾಗೂ ಸೊಂಟನೋವು ಈಗ ಸಾಮಾನ್ಯ ಸಮಸ್ಯೆ ಆಗುತ್ತ ಹೊರಟಿವೆ. ಶೇ.90ರಷ್ಟು ಜನರು ಜೀವನದ ಒಂದಿಲ್ಲೊಂದು ಹಂತದಲ್ಲಿ ಸೊಂಟನೋವಿನಿಂದ ಬಳಲಿರುತ್ತಾರೆ.
ಡಾ. ಅನಿರುದ್ಧರ ಪ್ರಕಾರ, ಬೆನ್ನುಮೂಳೆ ಅಥವಾ ಬೆನ್ನಿನ ಮಾಂಸಖಂಡಗಳಲ್ಲಿ ಉಂಟಾದ ಸಮಸ್ಯೆಯಿಂದಷ್ಟೇ ಸೊಂಟನೋವು ಬರುವುದಿಲ್ಲ. ಬೆನ್ನು ಮೂಳೆಯಲ್ಲಿ ಫ್ರ್ಯಾಕ್ಚರ್ ಆದರೂ ಕೂಡ ಸೊಂಟನೋವಿನ ಸಮಸ್ಯೆ ಉಂಟಾಗಬಹುದು. ಬೆನ್ನುಮೂಳೆಯಲ್ಲಿ ಫ್ರ್ಯಾಕ್ಚರ್ ಪೆಟ್ಟು ತಗುಲಿರುವುದರ ಹೊರತಾಗಿ ಆಸ್ಟ್ರೋಪೊರೊಸಿಸ್ ಟ್ಯೂಮರ್ ಅಥವಾ ಬೇರೆ ಆರೋಗ್ಯ ಸಮಸ್ಯೆಯ ಕಾರಣದಿಂದಲೂ ಉಂಟಾಗಬಹುದು. ಅದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ.
ಎಷ್ಟೋ ಸಲ ಫ್ರ್ಯಾಕ್ಚರ್ ಆಗಿರುವ ಬಗ್ಗೆ ಗೊತ್ತೇ ಆಗುವುದಿಲ್ಲ. ಸೊಂಟನೋವು ತೀರಾ ಜಾಸ್ತಿಯಾದಾಗ ವೈದ್ಯಕೀಯ ತಪಾಸಣೆ ಮಾಡಿದಾಗಲೇ ಅದು ಗೊತ್ತಾಗುತ್ತದೆ.
ಸೊಂಟನೋವು : `ಜರ್ನಲ್ ಆಫ್ ಬೋನ್ ಅಂಡ್ ಮಿನಿಮಮ್ ರಿಸರ್ಚ್' ಹೆಸರಿನ ಪತ್ರಿಕೆಯ ಪ್ರಕಾರ, ಆಸ್ಟ್ರೋಪೊರೋಸಿಸ್ (ಮೂಳೆ ಸವೆತ) ಕಾರಣದಿಂದ ಉಂಟಾಗುವ ಚಿಕ್ಕ ಸ್ಪೈನಲ್ ಫ್ರ್ಯಾಕ್ಚರ್ ಕೂಡ ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಕಂಡುಬರುವುದಿಲ್ಲ, ಆದರೆ ತೊಂದರೆ ಮಾತ್ರ ಕೊಡುತ್ತಿರುತ್ತದೆ. 4400 ವೃದ್ಧರ ಮೇಲೆ 4 ವರ್ಷಗಳ ಕಾಲ ಸಂಶೋಧನೆ ನಡೆಸಲಾಯಿತು. ಈ ಅವಧಿಯಲ್ಲಿ 24 ಜನರ ಬೆನ್ನುಮೂಳೆಯಲ್ಲಿ ಫ್ರ್ಯಾಕ್ಟರ್ ಆಗಿರುವುದು ಕಂಡುಬಂತು.
ಎಕ್ಸ್-ರೇಯಿಂದ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಉಳಿದ 169 ಜನರ ಬೆನ್ನುಮೂಳೆಯಲ್ಲಿ ಬ್ರೇಕ್ ಇದ್ದವು. ಆದರೆ ಅವುಗಳನ್ನು ಪತ್ತೆಹಚ್ಚಲು ಆಗಲಿಲ್ಲ. ಯಾರ ಬೆನ್ನುಮೂಳೆಯಲ್ಲಿ ಫ್ರ್ಯಾಕ್ಚರ್ ಇತ್ತೋ ಅವರು ಸೊಂಟನೋವಿನ ಸಮಸ್ಯೆಯನ್ನು ಹೇಳಿಕೊಂಡರು. ಹಿಂದಿನ ಅಧ್ಯಯನಗಳ ಪ್ರಕಾರ ವಯಸ್ಸಾದ ಮಹಿಳೆಯರಲ್ಲಿ ಸ್ಪೈನಲ್ ಫ್ರ್ಯಾಕ್ಚರ್‌ನ ಸಮಸ್ಯೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂತು.
ಹೆಚ್ಚಿನ ಸೊಂಟನೋವು ಮಸ್ಕ್ಯುಲರ್ ಆಗಿರುತ್ತವೆ ಮತ್ತು 6 ವಾರಗಳೊಳಗೆ ಅವು ತಂತಾನೇ ಸರಿಹೋಗುತ್ತವೆ. ಆದರೆ ಈ ನೋವು ಹೆಚ್ಚು ದಿನಗಳ ಕಾಲ ಹಾಗೆಯೇ ಮುಂದುವರಿದರೆ ಪರಿಪೂರ್ಣ ಪರೀಕ್ಷೆ ನಡೆಸಬೇಕು.
ನೋವಿನಿಂದ ರಕ್ಷಣೆ ಹೇಗೆ?
ಡಾ. ಸಂಜಯ್‌ರ ಪ್ರಕಾರ, ಸೊಂಟನೋವಿನಿಂದ ದೂರ ಇರಲು ಈ ಸಂಗತಿಗಳ ಬಗ್ಗೆ ಗಮನಹರಿಸಬೇಕು.
ಜೀವನ ಶೈಲಿಯಲ್ಲಿ ಹೆಲ್ದಿ ಡಯೆಟ್ ಸೇವಿಸಿ. ಅಂದರೆ ಅದರಲ್ಲಿ ಕ್ಯಾಲ್ಶಿಯಂ ಹಾಗೂ ವಿಟಮಿನ್ `ಡಿ' ಅಂಶ ಸಮೃದ್ಧವಾಗಿರಬೇಕು.
ಕಾಲ್ನಡಿಗೆಯ ಅಭ್ಯಾಸ ರೂಢಿ ಮಾಡಿ. ನಡಿಗೆಯು ಬೋನ್ ಮಾಸ್ ಹೆಚ್ಚಿಸಲು ಸಹಾಯಕವಾಗಿದೆ.
ದೈಹಿಕವಾಗಿ ಸಕ್ರಿಯವಾಗಿರಿ. ದಿನ ವ್ಯಾಯಾಮ ಮಾಡಿ.
ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ. ಕುಳಿತುಕೊಳ್ಳುವ ತಪ್ಪು ವಿಧಾನ ಸೊಂಟನೋವಿಗೆ ಮುಖ್ಯ ಕಾರಣವಾಗಿದೆ.
ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸೊಂಟದ ಸುತ್ತ ಕೊಬ್ಬು ಹೆಚ್ಚದಂತೆ ಎಚ್ಚರವಹಿಸಿ.
ಎತ್ತರದ ಹಿಮ್ಮಡಿಯ ಶೂ ಚಪ್ಪಲಿ ಧರಿಸುವ ಬದಲು ಆರಾಮದಾಯಕ ಚಪ್ಪಲಿ ಧರಿಸಿ.
ಮೊಣಕಾಲನ್ನು ಮಡಚಿ ಭಾರವಾದ ವಸ್ತುಗಳನ್ನು ಎಚ್ಚರಿಕೆಯಿಂದ ಎತ್ತಿ, ಒಮ್ಮೆಲೆ ಎತ್ತಲು ಹೋಗಬೇಡಿ.
ನೀವು ಮಲಗುವ ಹಾಸಿಗೆ ಹೆಚ್ಚು ಮೃದುವಾಗಿಯೂ ಇರಬಾರದು, ಹೆಚ್ಚು ಕಠಿಣವಾಗಿಯೂ ಇರಬಾರದು
ಮೈಗ್ರೇನ್ : ದೀರ್ಘಾವಧಿಯ ತನಕ ಇರುವ ತಲೆನೋವು ಕ್ರಮೇಣ ಮೈಗ್ರೇನ್‌ನ ರೂಪ ಪಡೆದುಕೊಳ್ಳುತ್ತದೆ. ಮೈಗ್ರೇನ್‌ನ ನೋವು ಹಲವು ಗಂಟೆಗಳಿಂದ ದಿನಗಳೂ ಇರಬಹುದು.
ಹೇಗೆ ಪಾರಾಗುವುದು?
ಡಾ. ಸಂಜಯ್‌ರ ಪ್ರಕಾರ, ಮೈಗ್ರೇನ್‌ನಿಂದ ರಕ್ಷಿಸಿಕೊಳ್ಳಲು ಕೆಳಕಂಡ ಉಪಾಯಗಳನ್ನು ಅನುಸರಿಸಿ.