ಹಲವು ಮಕ್ಕಳು ನೋಡಲಂತೂ ಆರೋಗ್ಯದಿಂದಿರುತ್ತಾರೆ. ಆದರೆ ಅವರ ಯೋಚನೆ ಹಾಗೂ ಅರ್ಥ ಮಾಡಿಕೊಳ್ಳುವ ಅಂದರೆ ಸ್ಮರಣ ಶಕ್ತಿ ಇತರೆ ಮಕ್ಕಳಿಗಿಂತ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇರುತ್ತದೆ. ಇಂತಹ ಮಕ್ಕಳನ್ನು ಸಾಮಾನ್ಯವಾಗಿ `ಮಂದಬುದ್ಧಿ'ಯವರೆಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಈ ಸಮಸ್ಯೆಗೆ ಮುಖ್ಯ ಕಾರಣ ಅವರ ದೇಹದಲ್ಲಿ ಡಿಎಚ್‌ಎಯ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಿರುತ್ತದೆ. ಈ ಕಾರಣದಿಂದ ಅವರ ಮಾನಸಿಕ ವಿಕಾಸ ಸರಿಯಾಗಿ ಆಗುವುದಿಲ್ಲ.

ಈ ಕುರಿತಂತೆ ಕ್ಲಿನಿಕ್‌ ಡಯಟೀಶಿಯನ್‌ ಹಾಗೂ ಇಂಡಿಯನ್‌ ಡಯಾಬಿಟಿಕ್‌ ಅಸೋಸಿಯೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಶ್ವೇತಾ ಅವರು ಹೀಗೆ ಹೇಳುತ್ತಾರೆ, ``ಡಿಎಚ್‌ಎ (ಡೊಕೊಸಾ ಹೆಕ್ಸಾನಿಕ್‌ ಆ್ಯಸಿಡ್‌) ಒಂದು ಬಗೆಯ ಒಮೇಗಾ-3 ಫ್ಯಾಟಿ ಆ್ಯಸಿಡ್‌ ಆಗಿದ್ದು, ಅದನ್ನು ಲಾಂಗ್‌ಚೇನ್‌ ಪಾಲಿ ಅನ್‌ಸ್ಯಾಚ್ಯುರೇಟೆಡ್‌ ಆ್ಯಸಿಡ್‌ ಎಂದು ಹೇಳಲಾಗುತ್ತದೆ. ಇದು ಮಾನವ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಅದನ್ನು ಆಹಾರದ ಮುಖಾಂತರವೇ ಪಡೆದುಕೊಳ್ಳಬೇಕಾಗುತ್ತದೆ. ಮಕ್ಕಳ ಹೊರತಾಗಿ ಗರ್ಭಿಣಿಯರು ಕೂಡ ಇದನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಮಕ್ಕಳ ಮಾನಸಿಕ ಬೆಳವಣಿಗೆ ಗರ್ಭಾವಸ್ಥೆಯಿಂದಲೇ ಆರಂಭವಾಗುತ್ತದೆ.

ಡಿಎಚ್‌ಎಯನ್ನು ಮುಖ್ಯವಾಗಿ ಮೆದುಳಿನ ರಚನೆ, ಕಣ್ಣಿನ ರೆಟಿನಾದ ರಚನೆ ಸಮರ್ಪಕವಾಗಿ ಇರಲು ಉಪಯೋಗಿಸಲಾಗುತ್ತದೆ.

ಇದು ಮೆದುಳಿನ ಬೆಳವಣಿಗೆ ಮತ್ತು ಕೇಂದ್ರ ನರಮಂಡಲದ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮಕ್ಕಳಿಗಾಗಿ 2 ರಿಂದ 6 ಎಂತಹ ವಯಸ್ಸೆಂದರೆ, ಈ ಅವಧಿಯಲ್ಲಿ ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಭಾರಿ ವೇಗದಲ್ಲಿ ಆಗುತ್ತಿರುತ್ತದೆ. ಈ ವಯಸ್ಸಿನಲ್ಲಿ ಅವರಿಗೆ ಡಿಎಚ್‌ಎ ಅಂದರೆ ಒಮೆಗಾ ಫ್ಯಾಟಿ ಆ್ಯಸಿಡ್‌ನ ಸಮರ್ಪಕ ಪ್ರಮಾಣ ದೊರೆಯದಿದ್ದರೆ ಅನರ ಬೆಳನಣಿಗೆಯಲ್ಲಿ ಬಾಧಕನಾಗಬಹುದು. ದೈಹಿಕ ವಿಕಾಸಕ್ಕೆ ಕ್ಯಾಲ್ಶಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ ಮತ್ತು ಪ್ರೋಟೀನ್ ಹೇಗೆ ಅತ್ಯವಶ್ಯಕವೋ, ಅದೇ ರೀತಿಯಲ್ಲಿ ಬೌದ್ಧಿಕ ಬೆಳವಣಿಗೆಗೆ ಡಿಎಚ್‌ಎಯ ಪ್ರಮಾಣ ಕೂಡ ಅತ್ಯವಶ್ಯಕ. ಮಕ್ಕಳ ಸಮಗ್ರ ವಿಕಾಸಕ್ಕೆ ಇದು ಅತ್ಯಂತ ಉಪಯುಕ್ತ ಪೋಷಕಾಂಶವಾಗಿದೆ. ಇದರಿಂದ ಅವರ ಸ್ಮರಣಶಕ್ತಿಯ ವಿಕಾಸವಾಗುತ್ತದೆ. ಯಾವ ಮಕ್ಕಳಲ್ಲಿ ಡಿಎಚ್‌ಎಯ ಕೊರತೆ ಇರುತ್ತೊ, ಅವರ ಕಲಿಯುವ ಹಾಗೂ ಯೋಚನೆ ಮಾಡುವ ಸಾಮರ್ಥ್ಯ ಉಳಿದ ಮಕ್ಕಳಿಗಿಂತ ಕಡಿಮೆ ಇರುತ್ತದೆ. ಇದು ಅವರ ಓದಿನ ಮೇಲೆ ಪರಿಣಾಮ ಬೀರುತ್ತದೆ. ಅವರು ಮಾನಸಿಕವಾಗಿಯೂ ಒತ್ತಡಗ್ರಸ್ಥರಾಗಬಹುದು.

ಗರ್ಭಿಣಿಯರಿಗೆ

ಗರ್ಭಿಣಿಯರು ಸೇವಿಸುವ ಆಹಾರ ಅವರ ಹೊಟ್ಟೆಯಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಕಂದನ ಬೆಳವಣಿಗೆ ಸಾಮಾನ್ಯವಾಗಿ ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಶಿಶುಗಳಲ್ಲಿ ಡಿಎಚ್‌ಎ ನಿರ್ಮಾಣ ಪ್ರಕ್ರಿಯೆ ಇರುವುದಿಲ್ಲ. ಹೀಗಾಗಿ ಈ ಪ್ರಮಾಣವನ್ನು ಅವು ತಾಯಿಯಿಂದ ಪಡೆದುಕೊಳ್ಳುತ್ತವೆ. ಡಿಎಚ್‌ಎ ನ್ಯೂರಾನ್‌ ಮತ್ತು ಜೀವಕೋಶಗಳ ಅತ್ಯಂತ ತೆಳುವಾದ ಪದರವನ್ನು ಸೃಷ್ಟಿ ಮಾಡುತ್ತದೆ. ಜನಿಸಿದ ಬಳಿಕ ಮಗುವಿಗೆ ಡಿಎಚ್‌ಎ ತಾಯಿಯ ಹಾಲಿನಿಂದ ದೊರೆಯುತ್ತದೆ. ಗರ್ಭಿಣಿಯರು 5ನೇ ತಿಂಗಳು ಅಥವಾ 20ನೇ ವಾರದಿಂದ 200 ರಿಂದ 300 ಮಿಲಿಗ್ರಾಂ ಡಿಎಚ್‌ಎಯ ಪ್ರಮಾಣವನ್ನು ಸೇವಿಸಬೇಕು.

ಡಿಎಚ್ಎಯ ಮೂಲ

ಡಿಎಚ್‌ಎ ಅತಿ ಹೆಚ್ಚು ಪ್ರಮಾಣದಲ್ಲಿ ತಂಪು ನೀರಿನಲ್ಲಿ ಬೆಳವಣಿಗೆ ಹೊಂದುವ ಸಾಲ್ಮನ್‌ ಮೀನು, ಟೂನಾ, ಹ್ಯಾರಿಂಗ್‌, ಕೌಡ್‌ಮತ್ತು ಸಾರ್ಡಾಡನ್‌ನಲ್ಲಿ ಕಂಡುಬರುತ್ತದೆ. ಪಾಚಿಯಿಂದ ಲಭ್ಯವಾಗುವ ಡಿಎಚ್‌ಎ ಸಸ್ಯಾಹಾರಿಗಳು ಸೇವಿಸಬಹುದಾಗಿದೆ. ಬಹಳಷ್ಟು ಸಸ್ಯಾಹಾರಿಗಳು ಡಿಎಚ್‌ಎ ದೊರಕಿಸಿಕೊಳ್ಳಲು ಒಣಹಣ್ಣುಗಳ ಸೇವನೆ ಮಾಡುತ್ತಾರೆ. ಆದರೆ ಈ ಒಣಹಣ್ಣುಗಳಲ್ಲಿ ಡಿಎಚ್‌ಎ ಲಭಿಸುವುದಿಲ್ಲ. ಅದರಿಂದ ದೊರೆಯುವುದು ಎಎಲ್ಎ. ಅದು ಒಂದು ಒಮೆಗಾ ಫ್ಯಾಟಿ ಆ್ಯಸಿಡ್‌ ಆಗಿದ್ದು, ಅದು ದೇಹದಲ್ಲಿ ಪ್ರವೇಶಿಸಿ ಡಿಎಚ್‌ಎಯ ರೂಪದಲ್ಲಿ ಪರಿರ್ತನೆಗೊಳ್ಳುತ್ತದೆ. ಆದರೆ ಈ ಪರಿವರ್ತನೆ ಪರಿಪೂರ್ಣವಾಗಿ ಆಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ