ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಶಿಲಾಜಿತವನ್ನು ಆಯುರ್ವೇದದ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಇದಂತೂ ನೈಸರ್ಗಿಕವಾಗಿ ಲಭ್ಯವಿರುವ ಅತಿ ದುರ್ಲಭ ಪದಾರ್ಥ. ಇದು ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಸ್ಮರಣಶಕ್ತಿ, ಸಂಧಿವಾತ, ರಕ್ತದೊತ್ತಡ ಇತ್ಯಾದಿ ರೋಗ ನಿಯಂತ್ರಣದಲ್ಲೂ ಹೆಚ್ಚು ಲಾಭಕಾರಿ. ಶಿಲಾಜಿತದಿಂದ ತಯಾರಿಸಲಾದ ಔಷಧೀಯ ಸೇವನೆಯಿಂದ ಗಂಡಸರು ಮಾತ್ರವಲ್ಲದೆ ಹೆಂಗಸರಿಗೂ ಲಾಭಕಾರಿ ಎಂದು ಸಾಬೀತಾಗಿದೆ. ಈಗ ಇದಕ್ಕೆ ಸ್ವರ್ಣ, ಮಕರಧ್ವಜದಂಥ ಗಿಡಮೂಲಿಕೆಗಳ ಸಾರವನ್ನೂ ಬೆರೆಸಲಾಗಿದೆ ಎಂದರೆ ಇದರ ಲಾಭ ಇನ್ನಷ್ಟು ಹೆಚ್ಚುತ್ತದೆ. ಈ ಎಲ್ಲಾ ಅಂಶಗಳ ಆರೋಗ್ಯಕಾರಿ ಲಾಭದ ಬಗ್ಗೆ ತಿಳಿಯೋಣವೇ?

ಶಿಲಾಜಿತ : ಇದನ್ನು ಆಸ್ಛರಾಗಸ್ ಯಾ ಮಿನರಲ್ ಚಿಪ್‌ ಹೆಸರಿನಿಂದಲೂ ಕರೆಯುತ್ತಾರೆ. ಖನಿಜ ಪದಾರ್ಥಗಳಲ್ಲಿ ಔಷಧೀಯ ಗುಣಗಳುಳ್ಳ ಇದು, ನಮ್ಮ ದೇಶದಲ್ಲಿ ಕೇವಲ ಕೆಲವೇ ಆಯ್ದ ಪರ್ವತಗಳ ಬಂಡೆಗಳ ಮೇಲೆ ಮಾತ್ರ ಲಭ್ಯ. ಸಾಮಾನ್ಯವಾಗಿ ಇದನ್ನು ಲೈಂಗಿಕ ಶಕ್ತಿ ಹೆಚ್ಚಿಸಲು ಸೇವಿಸಲಾಗುತ್ತದೆ, ಆದರೆ ನಮ್ಮ ಆರೋಗ್ಯದ ಮೇಲೆ ಇದರ ಸಂಪೂರ್ಣ ಗುಣಗಳ ಪ್ರಭಾವ ಇನ್ನೂ ಅಧಿಕ. ಇದರಿಂದ ತಯಾರಾದ ಔಷಧಿ ಸಂಧಿವಾತ, ಅನೀಮಿಯಾದ ಸಮಸ್ಯೆಗಳಿಂದಲೂ ಮುಕ್ತಿ ಕೊಡಿಸುತ್ತದೆ. ಮೂತ್ರ ಸೋಂಕು, ಅಧಿಕ ರಕ್ತದೊತ್ತಡದಂಥ ಸಮಸ್ಯೆಗಳುಳ್ಳ ರೋಗಿಗಳಿಗೆ ಇದು ಹೆಚ್ಚು ಲಾಭಕಾರಿ.

ಇದು ನಮ್ಮ ಬುದ್ಧಿಶಕ್ತಿಯನ್ನು ಚುರುಕಾಗಿಸುವ ಗುಣ ಹೊಂದಿದೆ. ಇದರ ಸೇವನೆಯಿಂದ ಮೆದುಳಿಗೆ ಹೆಚ್ಚಿನ ಪೋಷಣೆ ದೊರೆತು, ಟೆನ್ಶನ್ಸ್ ತಂತಾನೇ ತಗ್ಗುತ್ತದೆ, ನಿಧಾನವಾಗಿ ವಿಷಯ ಗ್ರಹಿಕೆಯಲ್ಲಿ ಏಕಾಗ್ರತೆ ಹೆಚ್ಚತೊಡಗುತ್ತದೆ. ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಂಟ್ರೋಲ್ ‌ಮಾಡುವಲ್ಲಿ ಇದರ ಪಾತ್ರ ಹಿರಿದು. ಇದನ್ನು ಹೊರತುಪಡಿಸಿ ಶಿಲಾಜಿತ ದುರ್ಬಲಗೊಂಡಿರುವ ರೋಗಿಯ ದೇಹದ ಜೀವಕೋಶಗಳನ್ನು ಸಶಕ್ತಗೊಳಿಸುವ ಮಹತ್ವಪೂರ್ಣ ಕಾರ್ಯ ಮಾಡುತ್ತದೆ, ಹಾಗಾಗಿ ಸಶಕ್ತಗೊಂಡ ಜೀವಕೋಶಗಳು ನಾವು ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡುತ್ತವೆ.

ಶಿಲಾಜಿತದಿಂದ ತಯಾರಾದ ಯಾವುದೇ ಉತ್ಪನ್ನವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಲು ಮರೆಯದಿರಿ. ಇದರ ಸೇವನೆಯಿಂದ ನಿಮ್ಮ ದೇಹ ಪ್ರಕೃತಿ ಮೇಲೆ ಆಗಬಹುದಾದ ಸೈಡ್‌ ಎಫೆಕ್ಟ್ಸ್ ನ್ನು ನಿಮ್ಮ ಕುಟುಂಬ ವೈದ್ಯರು ಮಾತ್ರ ನಿಮಗೆ ತಿಳಿಸಬಲ್ಲರು.

ಸ್ವರ್ಣ : ದೇಹದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸುವ ಸ್ಮರ್ಣ ಭಸ್ಮ ಎಲ್ಲಕ್ಕಿಂತಲೂ ಉತ್ಕೃಷ್ಟ ಔಷಧ ಪದಾರ್ಥವೆಂದು ಪರಿಗಣಿಸಲಾಗಿದೆ. ಇದರ ಬಳಕೆಯು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಹಲವು ರೀತಿಯಲ್ಲಿದೆ. ಸ್ವರ್ಣ ಭಸ್ಮ ಲೈಂಗಿಕ ಶಕ್ತಿಯನ್ನು ಚುರುಕಾಗಿಸುವುದಲ್ಲದೆ, ಮಾನಸಿಕ ಆರೋಗ್ಯವನ್ನು ದುರಸ್ತಿ ಮಾಡುತ್ತದೆ ಹಾಗೂ ಮಧುಮೇಹದ ನಿಯಂತ್ರಣಕ್ಕೂ ಹೆಸರುವಾಸಿ. ಇದರ ಬಳಕೆಯ ಔಷಧಿಗಳ ಸೇವನೆಗೆ ಮೊದಲೇ ಅಗತ್ಯವಾಗಿ ನಿಮ್ಮ ವೈದ್ಯರ ಸಲಹೆ ಪಡೆದು, ಉತ್ತಮ ಬ್ರಾಂಡ್‌ನ ಉತ್ಪನ್ನವನ್ನೇ ಬಳಸಿರಿ.

ಮಕರ ಧ್ವಜ : ಇದರ ಬಳಕೆ ಹೆಚ್ಚಾಗಿ ಕಫ, ಪಿತ್ತಗಳ ಚಿಕಿತ್ಸೆ ಜೊತೆ ಪೌರುಷ ಶಕ್ತಿ ಹೆಚ್ಚಿಸುವುದಕ್ಕೂ ಆಗುತ್ತದೆ. ಇದಲ್ಲದೆ ವೀರ್ಯಾಣುಗಳ ವಿಕಾರದ ಚಿಕಿತ್ಸೆಗೂ ಇದು ಪೂರಕ ಹಾಗೂ ಲಾಭಕಾರಿ. ಮಧುಮೇಹ ಪೀಡಿತರು ಇದರ ಸೇವನೆಯಿಂದ ಹೆಚ್ಚಿನ ಲಾಭ ಪಡೆಯಬಹುದು. ಇಂದಿನ ಮಾರುಕಟ್ಟೆಯಲ್ಲಿ ಇದರಿಂದ ತಯಾರಾದ ಅನೇಕ ಔಷಧೀಯ ಉತ್ಪನ್ನಗಳು ಲಭ್ಯ, ಆದರೆ ನಿಮ್ಮ ವೈದ್ಯರ ಸಲಹೆ ಇಲ್ಲದೆ, ಯಾವುದೋ ಬ್ರಾಂಡ್‌ ಕೊಳ್ಳಬೇಡಿ. ಉತ್ಕೃಷ್ಟ ಕಂಪನಿಯದ್ದನ್ನೇ ಆರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ